ಸುದ್ದಿ - ಭಾರತೀಯ ದತ್ತಾಂಶ ಭದ್ರತಾ ಮಂಡಳಿಯಿಂದ (DSCI) C-SAFE ಮಾನ್ಯತೆ ಪಡೆದ ಭಾರತದ 1 ನೇ ಗುಪ್ತ ಲಿಪಿಶಾಸ್ತ್ರದ (cryptographic) ಕ್ರಮಾವಳಿಯಾಗಿ (algorithm) ಫಾರ್ಟಿಟೂ ಲ್ಯಾಬ್ಸ್‌ನ (Fortytwo Labs) Ci2 ಹೊರಹೊಮ್ಮಿದೆ. ಫಾರ್ಟಿಟೂ ಲ್ಯಾಬ್ಸ್ ಪುಣೆ ಮೂಲದ ಅತ್ಯಾಧುನಿಕ ತಂತ್ರಜ್ಞಾನದ ಸೈಬರ್-ಭದ್ರತಾ ಕಂಪನಿಯಾಗಿದ್ದು, ಇದು ಭಾರತದ 1 ನೇ ಮತ್ತು ಏಕೈಕ C-SAFE ಮಾನ್ಯತೆ ಪಡೆದ ಸಂಸ್ಥೆಯಾಗಿದೆ.
C-SAFE ಎಂದರೇನು?
- C-SAFE (Cryptographic Security Assessment and Functional Evaluation) ಎಂಬುದು ಭಾರತದ 1 ನೇ ಸ್ವತಂತ್ರ ಗುಪ್ತ ಲಿಪಿಶಾಸ್ತ್ರದ ಮೌಲ್ಯಮಾಪನ ಮತ್ತು ಪ್ರಮಾಣೀಕರಣ ಚೌಕಟ್ಟಾಗಿದೆ. ಗುಪ್ತ ಲಿಪಿಶಾಸ್ತ್ರದ ಕ್ರಮಾವಳಿಗಳ ಗಣಿತದ ನಿಖರತೆ, ಭದ್ರತಾ ಸಾಮರ್ಥ್ಯ, ಕ್ವಾಂಟಮ್ ಪ್ರತಿರೋಧ ಮತ್ತು ಕ್ರಿಯಾತ್ಮಕ ಅನುಷ್ಠಾನವನ್ನು ನಿರ್ಣಯಿಸಲು DSCI ಇದನ್ನು ಪ್ರದಾನ ಮಾಡುತ್ತದೆ.
ಮಹತ್ವ:
- ಇದು ಗುಪ್ತ ಲಿಪಿಶಾಸ್ತ್ರದ ವ್ಯವಸ್ಥೆಗಳ ಸ್ವತಂತ್ರ ಪರಿಣಿತ ಪ್ರಮಾಣೀಕರಣವನ್ನು ಒದಗಿಸುತ್ತದೆ. ಅಲ್ಲದೆ ಬ್ಯಾಂಕಿಂಗ್, ಡಿಜಿಟಲ್ ಗುರುತು, ಸುರಕ್ಷಿತ ಸಂವಹನಗಳು ಮತ್ತು ದತ್ತಾಂಶ ಸಂರಕ್ಷಣಾ ಮೂಲಸೌಕರ್ಯದಲ್ಲಿ ನಂಬಿಕೆ ಹಾಗೂ ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
ಭಾರತೀಯ ದತ್ತಾಂಶ ಭದ್ರತಾ ಮಂಡಳಿ (DSCI):
- ಇದು ಭಾರತದಲ್ಲಿ ದತ್ತಾಂಶ ರಕ್ಷಣೆ ಮತ್ತು ಸೈಬರ್-ಭದ್ರತೆಯ ಕುರಿತಾಗಿ ಕಾರ್ಯಾಚರಿಸುವ ಲಾಭರಹಿತ ಉದ್ಯಮ ಸಂಸ್ಥೆಯಾಗಿದೆ. ಇದನ್ನು NASSCOM ಸ್ಥಾಪಿಸಿದೆ.
- ಉತ್ತಮ ಆಚರಣೆಗಳು, ಸೈಬರ್-ಭದ್ರತಾ ಮಾನದಂಡಗಳು, ಗೌಪ್ಯತೆ ಚೌಕಟ್ಟುಗಳು ಮತ್ತು ಭದ್ರತಾ ಉಪಕ್ರಮಗಳನ್ನು ಉತ್ತೇಜಿಸುವ ಮೂಲಕ ಸೈಬರ್-ವ್ಯವಸ್ಥೆಯನ್ನು ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿಸುವ ಗುರಿಯನ್ನು ಇದು ಹೊಂದಿದೆ.