Published on: July 1, 2024

ICC ಪುರುಷರ T20 ವಿಶ್ವಕಪ್

ICC ಪುರುಷರ T20 ವಿಶ್ವಕಪ್

ಸುದ್ದಿಯಲ್ಲಿ ಏಕಿದೆ? ಕಿಂಗ್‌ಸ್ಟನ್ ಓವಲ್, ಬ್ರಿಡ್ಜ್‌ಸ್ಟೋನ್ ವೆಸ್ಟ್ ಇಂಡೀಸ್‌ನ ಪ್ರಸಿದ್ಧ ಕ್ರಿಕೆಟ್ ಮೈದಾನದಲ್ಲಿ ನಡೆದ ಅಂತರರಾಷ್ಟ್ರೀಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ ಭಾರತ(176 ರನ್) ವು 7 ರನ್ನಗಳಿಂದ ಜಯ ಸಾಧಿಸಿದೆ. ಆ ಮೂಲಕ ಇದು ಭಾರತದ  ಎರಡನೇ ಪ್ರಶಸ್ತಿಯಾಗಿದೆ. ಭಾರತ ಯಾವುದೇ ಪಂದ್ಯವನ್ನು ಸೋಲದೆ ಪಂದ್ಯಾವಳಿಯನ್ನು ಗೆದ್ದ ಮೊದಲ ದೇಶವಾಗಿದೆ.

ಮುಖ್ಯಾಂಶಗಳು

  • ಈ ಗೆಲುವಿನ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತ ತಂಡಕ್ಕೆ 125 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.
  • ಅಂತರರಾಷ್ಟ್ರೀಯ ಟಿ20 ಕ್ರಿಕೆಟಿಗೆ ರೋಹಿತ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರು ನಿವೃತ್ತಿ ಘೋಷಿಸಿದ್ದಾರೆ
  • ಟಿ–20 ವಿಶ್ವಕಪ್ ಗೆದ್ದ ಬಳಿಕ ಭಾರತ ಕ್ರಿಕೆಟ್ ತಂಡದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಇನ್ಸ್ಟಾಗ್ರಾಮ್ನಲ್ಲಿ ಹಾಕಿದ ಪೋಸ್ಟ್ ದಾಖಲೆ ಸೃಷ್ಟಿಸಿದೆ. ಭಾರತದಲ್ಲಿ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಎನ್ನುವ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ.

ಅಂತರರಾಷ್ಟ್ರೀಯ ಟಿ20 ವಿಶ್ವಕಪ್ ಟೂರ್ನಿ 2024

  • ಪ್ಲೇಯರ್ ಆಫ್ ದಿ ಟೂರ್ನಮೆಂಟ್: ಜಸ್ಪ್ರೀತ್ ಬುಮ್ರಾ
  • ಪ್ಲೇಯರ್ ಆಫ್ ದಿ ಮ್ಯಾಚ್: ವಿರಾಟ್ ಕೊಹ್ಲಿ
  • ಬಹುಮಾನದ ಮೊತ್ತ
  • ಚಾಂಪಿಯನ್ ಟೀಮ್: ICC ನಿಂದ $2.45 ಮಿಲಿಯನ್ (INR 20.42 ಕೋಟಿ ಅಂದಾಜು) ಮೊತ್ತವನ್ನು ಸ್ವೀಕರಿಸಿದೆ.
  • ರನ್ನರ್-ಅಪ್ ಟೀಮ್: $ 1.28 ಮಿಲಿಯನ್ (INR 10.67 ಕೋಟಿ ಅಂದಾಜು) ಮೊತ್ತವನ್ನು ಪಡೆದುಕೊಂಡಿದೆ
  • ಆವೃತ್ತಿ: 9
  • ನಡೆದ ಸ್ಥಳ : ಅಮೇರಿಕ ಮತ್ತು ವೆಸ್ಟ್ ಇಂಡೀಸ್
  • ತಂಡಗಳ ಸಂಖ್ಯೆ : ೨೦
  • ಭಾರತ ತಂಡದ ನಾಯಕ: ರೋಹಿತ್ ಶರ್ಮ
  • ಕೋಚ್: ರಾಹುಲ್ ದ್ರಾವಿಡ್
  • ಸೌತ್ ಆಫ್ರಿಕಾ ತಂಡದ ನಾಯಕ: ಎಡೆನ್ ಮಾರ್ಕ್ರಮ್
  • ರಾಬ್ ವಾಲ್ಟರ್ ದಕ್ಷಿಣ ಆಫ್ರಿಕಾದ ಕೋಚ್ ಆಗಿದ್ದಾರೆ.

ನಿಮಗಿದು ತಿಳಿದಿರಲಿ

ಭಾರತ ತಂಡವು ಎರಡು ಬಾರಿ (1983, 2011) ಏಕದಿನ ವಿಶ್ವಕಪ್ ಪ್ರಶಸ್ತಿ ಗೆದ್ದಿತ್ತು. ಇನ್ನು (2007, 2024) T20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದೆ. ತಂಡವು ಕೊನೆಯ ಬಾರಿಗೆ 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದಿದ್ದು ಈಗ 13 ವರ್ಷಗಳ ನಂತರ ಭಾರತ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದೆ.

ಟಿ–20 ವಿಶ್ವಕಪ್

  • ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ಇದನ್ನು 2007 ರಿಂದ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸುತ್ತಿದೆ.
  • ಈವೆಂಟ್ ಅನ್ನು ಸಾಮಾನ್ಯವಾಗಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ.
  • ಮುಂದಿನ ಆವೃತ್ತಿ 2026 ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ
  • 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ T20 ವಿಶ್ವಕಪ್ ನಲ್ಲಿ ಭಾರತವು, ಪಾಕಿಸ್ತಾನದ ವಿರುದ್ಧ ಗೆದ್ದಿತು, MS ಧೋನಿ ನಾಯಕರಾಗಿದ್ದರು.