Published on: January 25, 2024

NIPL ಜೊತೆ ಗೂಗಲ್ ಪೇ ಒಪ್ಪಂದ

NIPL ಜೊತೆ ಗೂಗಲ್ ಪೇ ಒಪ್ಪಂದ

ಸುದ್ದಿಯಲ್ಲಿ ಏಕಿದೆ? ವಿದೇಶಗಳಲ್ಲಿ ಭಾರತೀಯರಿಗೆ ಹಾಗೂ ಭಾರತೀಯ ಪ್ರವಾಸಿಗರಿಗೆ/ಪ್ರಯಾಣಿಕರಿಗೆ ಡಿಜಿಟಲ್ ಪಾವತಿಗೆ ಅನುಕೂಲ ಕಲ್ಪಿಸಲು National Payment Corporation Of India(NPCI)ದ NIPL ಜೊತೆ ಗೂಗಲ್ ಪೇ ಒಪ್ಪಂದ ಮಾಡಿಕೊಂಡಿದೆ. ಎಂದು ಗೂಗಲ್ ಇಂಡಿಯಾ ಡಿಜಿಟಲ್ ಸರ್ವಿಸಸ್ ತಿಳಿಸಿದೆ.

ಮುಖ್ಯಾಂಶಗಳು

ಯುಪಿಐ ಆಧಾರಿತ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಗತ್ತಿನ ಆರ್ಥಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಇದನ್ನು ವಿಸ್ತರಿಸಲು NIPL ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಈ ಒಪ್ಪಂದ ಪ್ರಮುಖವಾಗಿ ಮೂರು ಉದ್ದೇಶಗಳನ್ನು ಹೊಂದಿದೆ’

1) ಹೊರದೇಶಗಳಿಗೆ ಪ್ರಯಾಣಿಸುವ ಭಾರತೀಯರಿಗೆ UPI ಸೇವೆಗಳನ್ನು ವ್ಯಾಪಕವಾಗಿ ಒದಗಿಸುವುದು,

2) ವಿವಿಧ ದೇಶಗಳಲ್ಲಿಯೂ ಯುಪಿಐ ಬಳಕೆ ಹಾಗೂ ವಹಿವಾಟು ವಿಸ್ತರಿಸುವುದು

3) ಗಡಿಯಾಚೆಗಿನ ಹಣಕಾಸು ವಿನಿಮಯಗಳನ್ನು ಸರಳೀಕರಣಗೊಳಿಸುವುದನ್ನು ಹೊಂದಿದೆ.

ಉದ್ದೇಶ

‘ಈ ಪಾಲುದಾರಿಕೆಯು, ಭಾರತೀಯ ಪ್ರಯಾಣಿಕರಿಗೆ ವಿದೇಶಿ ವಹಿವಾಟುಗಳನ್ನು ಸರಳಗೊಳಿಸುವುದಲ್ಲದೆ, ಯಶಸ್ವಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ನಿರ್ವಹಿಸುವ ನಮ್ಮ ಜ್ಞಾನ ಮತ್ತು ಪರಿಣತಿಯನ್ನು ಇತರ ದೇಶಗಳಿಗೂ ವಿಸ್ತರಿಸಲು ಅನುವು ಮಾಡಿಕೊಡುತ್ತದೆ‘.

NIPL

NPCI International Payments Limited (NIPL), ಎಂಬುದು NPCIನ ಒಂದು ಅಂಗ ಸಂಸ್ಥೆಯಾಗಿದ್ದು, ಇದು ಹೊರದೇ ಗಳಲ್ಲಿ ಭಾರತಕ್ಕೆ ಸಂಬಂಧಿಸಿದ ಡಿಜಿಟಲ್ ಪೇಮೆಂಟ್ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ.

 Google Pay

Google Pay ಎನ್ನುವುದು ಮೊಬೈಲ್ ಸಾಧನಗಳಲ್ಲಿ ಅಪ್ಲಿಕೇಶನ್‌ನಲ್ಲಿ, ಆನ್‌ಲೈನ್‌ನಲ್ಲಿ ಮತ್ತು ವೈಯಕ್ತಿಕವಾಗಿ ಸಂಪರ್ಕರಹಿತ ಖರೀದಿಗಳನ್ನು ಸಕ್ರಿಯಗೊಳಿಸಲು  ಮೊಬೈಲ್ ಪಾವತಿ ಸೇವೆಯಾಗಿದೆ, ಇದು ಬಳಕೆದಾರರಿಗೆ Android ಫೋನ್‌ಗಳು, ಟ್ಯಾಬ್ಲೆಟ್‌ಗಳು ಅಥವಾ ಗಡಿಯಾರಗಳೊಂದಿಗೆ ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.

ಪ್ರಾರಂಭ: 19 ಸೆಪ್ಟೆಂಬರ್ 2011

ಅಭಿವೃದ್ಧಿಪಡಿಸಿದವರು: ಗೂಗಲ್

UPI

UPI(ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) 2016 ರಲ್ಲಿ ಮೊಬೈಲ್ ಫೋನ್‌ಗಳ ಮೂಲಕ ಅಂತರ-ಬ್ಯಾಂಕ್ ವಹಿವಾಟುಗಳನ್ನು ಸುಲಭಗೊಳಿಸಲು NPCI ಅಭಿವೃದ್ಧಿಪಡಿಸಿದ ತ್ವರಿತ ನೈಜ-ಸಮಯದ ಪಾವತಿ ವ್ಯವಸ್ಥೆಯಾಗಿದೆ.

ಪ್ರಾರಂಭ:11 ಏಪ್ರಿಲ್ 2016