Published on: April 9, 2024
NUMBEO ವರದಿ
NUMBEO ವರದಿ
ಸುದ್ದಿಯಲ್ಲಿ ಏಕಿದೆ? Numbeo ಎಂಬ ಆನ್ಲೈನ್ ಡಾಟಾ ಬೇಸ್ ಸಂಸ್ಥೆ, ಜಗತ್ತಿನಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ಪ್ರಮುಖ ನಗರಗಳು ಯಾವುವು ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ವೆನಿಜುವೆಲಾದ ಕ್ಯಾರ್ಕಸ್ ನಗರ ಅತಿ ಹೆಚ್ಚು ಅಪರಾಧ ಪ್ರಕರಣಗಳು ನಡೆಯುವ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ಎರಡನೇ ಸ್ಥಾನ ಪಡೆದಿದೆ.
ಮುಖ್ಯಾಂಶಗಳು
- Numbeo ಜಗತ್ತಿನಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ 200ನಗರಗಳ ಪಟ್ಟಿಯನ್ನು ಬಿಡುಗಡೆಮಾಡಿದ್ದು ಅದರಲ್ಲಿ ಭಾರತದ ಹಲವು ನಗರಗಳೂ ಹೆಸರು ಪಡೆದಿವೆ.
- ಟಾಪ್ 20ರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಐದು ನಗರಗಳು ಸ್ಥಾನ ಪಡೆದಿವೆ. ಡರ್ಬಾನ್ ಮೂರನೇ ಸ್ಥಾನ, ಜೋಹಾನ್ಸ್ಬರ್ಗ್ ನಾಲ್ಕನೇ ಸ್ಥಾನ, ಪೋರ್ಟ್ ಎಲಿಜೆಬೆತ್ 8 ನೇ ಸ್ಥಾನ ಹಾಗೂ ಕೇಪ ಟೌನ್ 18 ನೇ ಸ್ಥಾನ ಪಡೆದಿವೆ.
- ದಕ್ಷಿಣ ಆಫ್ರಿಕಾದಲ್ಲಿ ಸಂಘಟಿತ ಅಪರಾಧಗಳು ಹೆಚ್ಚುತ್ತಿದ್ದು 2023ರಲ್ಲಿ 7,700 ಕೊಲೆಗಳು ನಡೆದಿವೆ
ವರದಿ ಪ್ರಕಾರ ಭಾರತದ ಸ್ಥಿತಿ
- ಜಾಗತಿಕವಾಗಿ ದೆಹಲಿ 70 ನೇ ಸ್ಥಾನ ಪಡೆಯುವ ಮೂಲಕ ಭಾರತದಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ನಗರ ಎಂದು ಗುರುತಾಗಿದೆ. ನೋಯ್ಡಾ 87ನೇ ಸ್ಥಾನ, ಗುರುಗ್ರಾಮ 95ನೇ ಸ್ಥಾನ ಪಡೆದಿವೆ.
- ವರದಿ ಪ್ರಕಾರ ಬೆಂಗಳೂರು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ನಂಬರ್ 1 ನಗರವಾಗಿ ಗುರುತಾಗಿದ್ದು ಜಾಗತಿಕವಾಗಿ 102ನೇ ಸ್ಥಾನ ಪಡೆದಿದೆ.
- ಇಂದೋರ್ (136), ಕೋಲ್ಕತ್ತ (159), ಮುಂಬೈ (169), ಹೈದರಾಬಾದ್ (174), ಚಂಡೀಗರ್ (177), ಪುಣೆ (184) ನಗರಗಳೂ ಸಹ ಟಾಪ್ 200ರ ಪಟ್ಟಿಯಲ್ಲಿ ಬಂದಿವೆ.
Numbeo
Numbeo ಸರ್ಬಿಯಾ ಮೂಲದ ಆನ್ಲೈನ್ ಡಾಟಾ ಬೇಸ್ ಸಂಸ್ಥೆಯಾಗಿದೆ.
ಸ್ಥಾಪನೆ: ಏಪ್ರಿಲ್ 2009
ವಾಸಯೋಗ್ಯ ಪ್ರಮುಖ ನಗರಗಳು, ದೇಶಗಳು, ಹೆಚ್ಚು ಅಪರಾಧ ನಡೆಯುವ ನಗರಗಳು ಎಂಬ ಜನಪಯೋಗಿ ಮಾಹಿತಿ ಸೇರಿದಂತೆ ಅನೇಕ ಬಗೆಯ ಸಂಶೋಧನಾತ್ಮಕ ವರದಿಗಳನ್ನು ಬಿಡುಗಡೆ ಮಾಡುತ್ತದೆ.