Published on: September 19, 2022
QRSAM ಕ್ಷಿಪಣಿ ವ್ಯವಸ್ಥೆ
QRSAM ಕ್ಷಿಪಣಿ ವ್ಯವಸ್ಥೆ
![](https://nammakpsc.com/wp-content/uploads/2022/09/QRSAM.jpg)
ಸುದ್ದಿಯಲ್ಲಿ ಏಕಿದೆ?
ಮೇಲ್ಮೈನಿಂದ ಆಗಸಕ್ಕೆ ಚಿಮ್ಮುವ ತ್ವರಿತ ಪ್ರತಿಕ್ರಿಯೆಯ ಕ್ಷಿಪಣಿ ವ್ಯವಸ್ಥೆಯನ್ನು ಭಾರತ ಯಶಸ್ವಿಯಾಗಿ ಉಡಾಯಿಸಿದೆ. ಒಡಿಶಾದ ಕಡಲ ತೀರದಿಂದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಲ್ಲಿ ಉಡಾವಣೆ ಮಾಡಲಾಗಿದ್ದು, ಸೇನೆ ಹಾಗೂ ಡಿಆರ್ ಡಿಒ ಮೌಲ್ಯಮಾಪನ ಪ್ರಯೋಗಗಳ ಭಾಗವಾಗಿ ಈ ಪ್ರಯೋಗ ನಡೆದಿದೆ.
ಮುಖ್ಯಾಂಶಗಳು
- ಗರಿಷ್ಠ ಮಟ್ಟದ ವೇಗದ ವೈಮಾನಿಕ ಟಾರ್ಗೆಟ್ ಗಳ ವಿರುದ್ಧ ಈ ಪ್ರಯೋಗ ನಡೆಸಲಾಗಿದ್ದು, ಹಲವು ವಿಧದ ಅಪಾಯಗಳನ್ನು ಕೃತಕವಾಗಿ ಸೃಷ್ಟಿಸಿ ಕ್ಷಿಪಣಿ ವ್ಯವಸ್ಥೆಯನ್ನು ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ. ಕ್ಷಿಪಣಿ ವ್ಯವಸ್ಥೆ ನಿರೀಕ್ಷಿತ ಫಲಿತಾಂಶವನ್ನು ನೀಡಿದೆ.
- ನಿಖರವಾಗಿ ಗುರಿ ನಾಶ ಮಾಡಬಲ್ಲ ಕ್ಷಿಪಣಿ ಇದಾಗಿದೆ.
ಕ್ಷಿಪಣಿಯ ವೈಶಿಷ್ಟ್ಯತೆ
- ಸರ್ಚ್-ಟ್ರ್ಯಾಕ್ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವುದು ಈ QRSAM ಶಸ್ತ್ರಾಸ್ತ್ರ ವ್ಯವಸ್ಥೆಯ ವೈಶಿಷ್ಟ್ಯವಾಗಿದೆ.
- ಈ ಉಡಾವಣೆಯಲ್ಲಿ ಒಟ್ಟು ಆರು ಪರೀಕ್ಷೆಗಳನ್ನು ನೆರವೇರಿಸಲಾಗಿದ್ದು,ವಾಯು ಪ್ರದೇಶದ ಮೂಲಕ ಎದುರಾಗಬಹುದಾದ ಅನೇಕ ಅಪಾಯಕಾರಿ ಗುರಿಗಳನ್ನು ಹೊಡೆದುರುಳಿಸುವ ಈ ಕ್ಷಿಪಣಿ ವ್ಯವಸ್ಥೆಯ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಯಿತು.
-
ಚಲನೆಯ ಸಮಯದಲ್ಲಿಯೂ ಈ ಕ್ಷಿಪಣಿ ವ್ಯವಸ್ಥೆಯಯ ಕಾರ್ಯಾಚರಣೆ ಸಾಧ್ಯವಾಗಿಸುವುದು ಮತ್ತು ಅಪಾಯಗಳನ್ನು ಪತ್ತೆ ಹಚ್ಚಿ ಅವುಗಳ ನಿಗಾ ಇಡುವ ವೈಶಿಷ್ಟ್ಯವನ್ನು ಹೊಂದಿದೆ.