Published on: June 29, 2022
VL-SASRM ಕ್ಷಿಪಣಿ
VL-SASRM ಕ್ಷಿಪಣಿ
ಸುದ್ದಿಯಲ್ಲಿ ಏಕಿದೆ?
ಭಾರತ ಜೂ.24 ರಂದು ಮೇಲ್ಮೈ ನಿಂದ ಆಗಸಕ್ಕೆ ಚಿಮ್ಮುವ ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ (ವಿಎಲ್-ಎಸ್ ಆರ್ಎಸ್ಎಎಂ) ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾದಿಂದ ಯಶಸ್ವಿಯಾಗಿ ನಡೆಸಿದೆ.
ಮುಖ್ಯಾಂಶಗಳು
- ಭಾರತೀಯ ನೌಕಾಪಡೆ ಹಡಗು (ಐಎನ್ಎಸ್) ಮೂಲಕ ಚಂಡೀಪುರದಲ್ಲಿ ಈ ಪರೀಕ್ಷೆ ನಡೆದಿದೆ.
- ಭಾರತೀಯ ನೌಕಾಪಡೆ ಹಾಗೂ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ (ವಿಎಲ್-ಎಸ್ ಆರ್ಎಸ್ಎಎಂ) ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿವೆ.
- ವಿಎಲ್-ಎಸ್ ಆರ್ ಎಸ್ಎಎಂ ಹಡಗಿನ ಮೂಲಕ ಕಾರ್ಯನಿರ್ವಹಿಸುವ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದ್ದು, ಸೀ ಸ್ಕಿಮ್ಮಿಂಗ್ ಟಾರ್ಗೆಟ್ ಸೇರಿದಂತೆ ವಾಯುಪಡೆಯ ಮೂಲಕ ಎದುರಾಗುವ ಹಲವು ಅಪಾಯಗಳನ್ನು ನಿಗ್ರಹಿಸಲು ಬಳಸುವುದಾಗಿದೆ.
- ಇಂದು ಈ ವ್ಯವಸ್ಥೆಯ ಉಡಾವಣೆಯನ್ನು ವಾಯುಪಡೆಯ ಮಾದರಿಯ ಅತಿ ವೇಗದ ಟಾರ್ಗೆಟ್ ನ ವಿರುದ್ಧ ಪ್ರಯೋಗಿಸುವ ಮೂಲಕ ಪರೀಕ್ಷೆ ನಡೆಸಲಾಗಿದ್ದು ಯಶಸ್ವಿಯಾಗಿದೆ.
- ವಿಎಲ್–ಎಸ್‌ಆರ್‌ಎಸ್‌ಎಎಂ (ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ ಕ್ಷಿಪಣಿ) ಹಡಗಿನಿಂದ ಉಡಾಯಿಸುವ ಕ್ಷಿಪಣಿ ವ್ಯವಸ್ಥೆಯಾಗಿದೆ. ಇದು ಸಾಗರದೊಳಗೆ ಎದುರಾಗುವ ದಾಳಿಗಳನ್ನು ಮತ್ತು ವಾಯು ಪ್ರದೇಶದಲ್ಲಿ ತೀರಾ ಸನಿಹದಲ್ಲಿ ಎದುರಾಗುವ ವೈಮಾನಿಕ ದಾಳಿಯ ಗುರಿಗಳನ್ನು ನಾಶಪಡಿಸುತ್ತದೆ.
VL-SRSAM ಎಂದರೇನು?
- VL-SRSAM ಅನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆಗಳ ನಿಯೋಜನೆಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮೂರು ಸೌಲಭ್ಯಗಳಿಂದ ಜಂಟಿಯಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ.
- ಈ ಕ್ಷಿಪಣಿಯು ಸಮುದ್ರದ ಸ್ಕಿಮ್ಮಿಂಗ್ ಗುರಿಗಳನ್ನು ಒಳಗೊಂಡಂತೆ ಹತ್ತಿರದ ವ್ಯಾಪ್ತಿಯಲ್ಲಿ ವಿವಿಧ ವೈಮಾನಿಕ ಬೆದರಿಕೆಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.
-
ಕ್ಷಿಪಣಿಯನ್ನು 40 ರಿಂದ 50 ಕಿ.ಮೀ ವ್ಯಾಪ್ತಿಯಲ್ಲಿ ಮತ್ತು ಸುಮಾರು 15 ಕಿ.ಮೀ ಎತ್ತರದಲ್ಲಿ ಹೆಚ್ಚಿನ ವೇಗದ ವಾಯುಗಾಮಿ ಗುರಿಗಳನ್ನು ಹೊಡೆಯಲು ವಿನ್ಯಾಸಗೊಳಿಸಲಾಗಿದೆ.