Published on: September 16, 2021
ವಿಶ್ವ ಓಝೋನ್ ದಿನಾಚರಣೆ
ವಿಶ್ವ ಓಝೋನ್ ದಿನಾಚರಣೆ
ಪ್ರತಿವರ್ಷ ಸೆಪ್ಟೆಂಬರ್ 16 ಅನ್ನು ವರ್ಲ್ಡ್ ಓಜೋನ್ ಡೇ ಎಂದು ಆಚರಿಸಲಾಗುತ್ತದೆ. ಓಜೋನ್ ಪದರ ಉಳಿಸಿ ಅಭಿಯಾನದ ಒಂದು ಭಾಗವೇ ವಿಶ್ವ ಓಜೋನ್ ದಿನಾಚರಣೆಯಾಗಿದೆ.
- ಈ ಮೊದಲು ಅಂದರೆ 1987, ಸೆಪ್ಟೆಂಬರ್ 16 ರಂದು ಕೆನಡಾದ ಮಾಂಟ್ರಿಯಲ್ ನಗರದಲ್ಲಿ ಓಜೋನ್ ಪದರ ಉಳಿಸುವುದಕ್ಕೆ ಸಂಬಂಧಿಸಿದಂತೆ ಕೆಲವು ದೇಶಗಳ ನಡುವೆ ಒಪ್ಪಂದವೊಂದು ನಡೆದಿತ್ತು. ಈ ಐತಿಹಾಸಿಕ ಒಪ್ಪಂದದ ನೆನಪಿಗಾಗಿ ವಿಶ್ವಸಂಸ್ಥೆಯು 1994 ರಿಂದ ಈ ದಿನವನ್ನು ಪ್ರತಿವರ್ಷ ಆಚರಿಸಲು ನಿರ್ಧರಿಸಿತು.
ಈ ದಿನದ ಉದ್ದೇಶ
- ಓಜೋನ್ ಪದರ ಕ್ಷೀಣಿಸುತ್ತಿದೆ ಮತ್ತು ಇದನ್ನು ಉಳಿಸಿಕೊಳ್ಳಲು ಮಾಡಬೇಕಾದ ಪ್ರಯತ್ನಗಳ ಕುರಿತಂತೆ ಜನರಿಗೆ ಅರಿವು ಮೂಡಿಸುವ ಉದ್ದೇಶವನ್ನು ಈ ದಿನ ಹೊಂದಿದೆ.
ಧ್ಯೇಯವಾಕ್ಯ
- ಈ ಸಲದ ವಿಶ್ವ ಓಝೋನ್ ದಿನಾಚರಣೆಯನ್ನು ‘ಕೀಪಿಂಗ್ ಅಸ್, ಅವರ್ ಫುಡ್ ಆ್ಯಂಡ್ ವ್ಯಾಕ್ಸಿನ್ಸ್ ಕೂಲ್’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸ ಲಾಗುತ್ತಿದೆ. ಅಂದರೆ ಶಾಖವರ್ಧಕ ಅನಿಲಗಳ ಹೊಮ್ಮುವಿಕೆಯನ್ನು ಕಡಿತ ಮಾಡಿ ನಮ್ಮ ಆಹಾರ, ಆರೋಗ್ಯ ಮತ್ತು ಲಸಿಕೆಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂಬುದು ಅದರ ಸಂದೇಶ.
ಓಜೋನ್ ಎಂದರೇನು ?
- ಭೂಮಂಡಲವನ್ನು ಆವರಿಸಿರುವ ಪದರ ಭೂಮಿಯನ್ನು ಮತ್ತು ಅಲ್ಲಿರುವ ಜೀವ ಸಂಕುಲಗಳನ್ನು ಸೂರ್ಯನ ಹಾನಿಕಾರಕ ವಿಕಿರಣಗಳಿಂದ ರಕ್ಷಿಸುತ್ತದೆ. ಈ ಪದರದ ಕಾರಣದಿಂದಲೇ ಭೂಮಿ ಮತ್ತು ಅದರಲ್ಲಿರುವ ಜೀವಿಗಳು ಅನಾದಿ ಕಾಲದಿಂದಲೂ ಸುರಕ್ಷಿತವಾಗಿವೆ. ಈ ಪದರವನ್ನು ಓಜೋನ್ ಎನ್ನುತ್ತೇವೆ
- ಅದು ಆಮ್ಲಜನಕದ ಒಂದು ರೂಪ. ಅದರ ರಾಸಾಯನಿಕ ಸಂಕೇತ “ಓ3’.
1839 ರಲ್ಲಿ ಶೋಧ?
- 1839ರಲ್ಲಿ ಶೋಧ ಮಾಡುವ ಮೂಲಕ ಓಜೋನ್ ಪದರವನ್ನು ವಾತಾವರಣದ ನೈಸರ್ಗಿಕ ಅನಿಲವೆಂದು ಕಂಡುಕೊಂಡಿದ್ದರು.
ಸಾಮಾನ್ಯ ಆಮ್ಲಜನಕಕ್ಕಿಂ ತ ಅದು ಹೇಗೆ ಭಿನ್ನ ?
- ಸಾಮಾನ್ಯ ಆಮ್ಲಜನಕವು ಎರಡು ಪರಮಾಣುಗಳನ್ನು ಒಳಗೊಂಡಿರುತ್ತದೆ. ಓಜೋನ್ನಲ್ಲಿ ಮೂರು ಪರಮಾಣುಗಳಿರುತ್ತವೆ.
ಓಜೋನ್ ಎಲ್ಲಿ ಹೇರಳವಾಗಿದೆ ?
- ವಾಯುಮಂಡಲದ “ಸ್ಟ್ರಾಟೋಸಿ#ಯರ್’ನಲ್ಲಿ 15 ರಿಂದ 50 ಕಿ.ಮೀ ಮೇಲ್ಮಟ್ಟದ ಪ್ರದೇಶದಲ್ಲಿ ಅದು ಯಥೇತ್ಛವಾಗಿ ಇರುತ್ತದೆ.ಭೂಮಂಡಲದ ಜೀವಿಗಳಿಗೆ ಓಜೋನ್ ತುಂಬಾ ಮುಖ್ಯ.
ಯಾಕೆ ?
- ಸೂರ್ಯನಿಂದ ಹೊಮ್ಮು ವ ಅಪಾಯಕಾರಿಯಾದ ಅತಿನೇರಳೆ ವಿಕಿರಣಗಳ ಬಹುಪಾಲನ್ನು ಓಜೋನ್ ಹೀರಿಕೊಳ್ಳುತ್ತದೆ. ಒಂದು ವೇಳೆ ಓಜೋನ್ನ ಈ ಫಿಲ್ಟರ್ ಇರದೇ ಇದ್ದರೆ ಇಷ್ಟು ಹೊತ್ತಿಗೆ ಭೂಮಿಯ ಜೀವಿಗಳೆಲ್ಲಾ ನಾಶವಾಗಿರುತ್ತಿದ್ದವು.
ದಿನದಿಂದ ದಿನಕ್ಕೆ ಹೆಚ್ಚಾದ ಓಜೋನ್ ಕುರಿತ ಚರ್ಚೆಗಳು ?
- ಭೂಮಿಯ ಮೇಲೆ 20 ಕಿ.ಮೀ. ಎತ್ತರದಲ್ಲಿ ಶುರು ವಾಗಿ 50 ಕಿ.ಮೀ.ವರೆಗೂ ವ್ಯಾಪಿಸಿರುವ ಓಝೋನ್ ಪದರ ಛಿದ್ರವಾಗುವುದನ್ನು ತಡೆಯಲು ಸಿಎಫ್ಸಿ (ಕ್ಲೋರೊಫ್ಲೋರೊ ಕಾರ್ಬನ್) ಮತ್ತು ಬಿಎಫ್ಸಿ (ಬ್ರೋಮೊಫ್ಲೋರೊ ಕಾರ್ಬನ್) ನಿಷೇಧಿಸಿ ಈಗ ಎಚ್ಸಿಎಫ್ಸಿಗಳನ್ನು (ಹೈಡ್ರೊ ಕ್ಲೋರೊ ಫ್ಲೋರೊ ಕಾರ್ಬನ್) ಬಳಸಲು ಪ್ರಾರಂಭಿಸಿದ್ದೇವೆ. ಮೊದಲಿನ ಎರಡರಿಂದ ಓಝೋನ್ ಪದರ ಬಚಾವಾಗಿದೆ. ಆದರೆ ಕೊನೆಯದರಿಂದ ಭೂಮಿಯ ಬಿಸಿ ಹೆಚ್ಚುತ್ತಿದೆ.
17% ರಷ್ಟು ವಿನಾಶ
- 2020 ಅಂತ್ಯವಾಗುವ ವೇಳೆಗೆ ಸುಮಾರು 17 % ರಷ್ಟು ಓಜೋನ್ ಪದರ ತೆಳುವಾಗುತ್ತದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಓಜೋನ್ ಪದರ ಕರಗಲು ಮುಖ್ಯ ಕಾರಣ?
- ಬೆಳೆಯುತ್ತಿರುವ ಕೈಗಾರಿಕ ಘಟಕಗಳು.
- ಕಾರ್ಖಾನೆಗಳಿಂದ ಹೊರಹುಮ್ಮುವ ವಿಷಕಾರಕ ಅನಿಗಳು.
- ವಾಹನಗಳಿಂದ ಹೊರಬರುವ ಹೊಗೆ ಹಾಗೂ ಶೀಥಲೀಕರಣ ಯಂತ್ರದಿಂದ ಬರುವ ಅನಿಲ.
- ಮಿಥೇನ್, ಕಾರ್ಬನ್ ಮೋನೋಕ್ಸೆ„ಡ್, ಕ್ಲೋ ರೋಪ್ಲೋ ರೋ ಕಾರ್ಬನ್, ಕ್ಲೋ ರಿನ್, ಬ್ರೋ ಮಿನ್, ಮೀಥೈ ಲ್ ಬ್ರೋ ಮೈಡ್, ಹೈಡ್ರೋ ಫ್ಲೋ ರೋ ಕಾರ್ಬನ್ ಮುಂತಾದ ಅನಿಗಳಿಂದಲ್ಲೂ ಮಾರಕ.
ಓಜೋನ್ ಪದರ ತೆಳುವಾದರೇ ಏನಾಗುತ್ತದೆ ?
- ಪರಿಸರದ ಸಮತೋಲನ ಕಳೆದುಹೋಗಿ, ಭೂಮಿ ಬರಡಾಗುತ್ತದೆ.
- ಜೀವ ವೈವಿಧ್ಯಗಳು ನಾಶಗೊಂಡು ಭೂಮಿ ಬದುಕಲು ಯೋಗ್ಯವಲ್ಲದ ಬಂಜರು ಭೂಮಿಯಾಗುತ್ತದೆ.
- ಪರಿಣಾಮ ಮನುಷ್ಯ ಆರೋಗ್ಯದಲ್ಲಿ ಏರುಪೇರಾಗಿ ಚರ್ಮದ ಕ್ಯಾನ್ಸರ್ ಬರಬಹುದು.
- ನೀರಿನ ಕೊರತೆ ಕಾಡಬಹುದು.
ಚೀನಾಕ್ಕೆ ಮೊದಲ ಸ್ಥಾನ
- ವಿಶ್ವ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಅತೀ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ.
ಭಾರತಕ್ಕೆ ನಾಲ್ಕನೇ ಸ್ಥಾನ
- ವಿಶ್ವದಲ್ಲಿ ಅತೀ ಹೆಚ್ಚು ಇಂಗಾಲವನ್ನು ಹೊರಸೂಸುವ ಟಾಪ್ ಟೆನ್ ದೇಶಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.
ಅತೀ ಹೆಚ್ಚು ಇಂಗಾಲವನ್ನು ಹೊರಸೂಸುವ ಟಾಪ್ ಟೆನ್ ದೇಶಗಳು
- ಚೀನಾ.
- ಅಮೆರಿಕಾ.
- ಯರೋಪಿಯನ್.
- ಭಾರತ .
- ರಷ್ಯಾ.
- ಜಪಾನ್.
- ಜರ್ಮನಿ.
- ಇರಾನ್.
- ಸೌದಿ ಅರೇಬಿಯಾ.
- ದಕ್ಷಿಣ ಕೊರಿಯಾ.
ಓಜೋನ್ ರಕ್ಷಣೆಯ ಹಿನ್ನೆಲೆ
- 1985 ರ ಓಜೋನ್ ಪದರದ ರಕ್ಷಣೆಗಾಗಿ ವಿಯೆನ್ನಾ ಒಪ್ಪಂದವು ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದು, ಇದರಲ್ಲಿ ವಿಶ್ವಸಂಸ್ಥೆಯ ಸದಸ್ಯರು ವಾಯುಮಂಡಲದ ಓಜೋನ್ ಪದರಕ್ಕೆ ಹಾನಿಯಾಗುವುದನ್ನು ತಡೆಯುವ ಮೂಲಭೂತ ಪ್ರಾಮುಖ್ಯತೆಯನ್ನು ಗುರುತಿಸಿದರು.
- 1987 ರ ಮಾಂಟ್ರಿಯಲ್ ಪ್ರೋಟೋಕಾಲ್ ಆನ್ ಓಜೋನ್ ಲೇಯರ್ ಮತ್ತು ಅದರ ನಂತರದ ತಿದ್ದುಪಡಿಗಳನ್ನು ತರುವಾಯ ಮಾನವಜನ್ಯ ಓಜೋನ್-ಸವಕಳಿ ವಸ್ತುಗಳ (ODS) ಮತ್ತು ಕೆಲವು ಹೈಡ್ರೋಫ್ಲೋರೋಕಾರ್ಬನ್ (HFC) ಗಳ ಬಳಕೆ ಮತ್ತು ಉತ್ಪಾದನೆಯನ್ನು ನಿಯಂತ್ರಿಸಲು ಮಾತುಕತೆ ನಡೆಸಲಾಯಿತು.
- ಓಜೋನ್ ಸವಕಳಿಯು ಮಾನವ ಸಂಬಂಧಿತ ODS ಗಳ ಹೊರಸೂಸುವಿಕೆ ಮತ್ತು ನಂತರದ ಪ್ರತಿಕ್ರಿಯಾತ್ಮಕ ಹ್ಯಾಲೊಜೆನ್ ಅನಿಲಗಳು, ವಿಶೇಷವಾಗಿ ಕ್ಲೋರಿನ್ ಮತ್ತು ಬ್ರೋಮಿನ್ ವಾಯುಮಂಡಲದಲ್ಲಿ ಬಿಡುಗಡೆಯಾಗುವುದರಿಂದ ಉಂಟಾಗುತ್ತದೆ.
- ಮಾಂಟ್ರಿಯಲ್ ಪ್ರೋಟೋಕಾಲ್ನ ಓಜೋನ್-ಸವಕಳಿ ವಸ್ತು ಗಳ ನಿಯಂತ್ರಣವು ಬದಲಿ ಪದಾರ್ಥಗಳ ಬೆಳವಣಿಗೆಯನ್ನು ಉತ್ತೇಜಿಸಿತು, ಮೊದಲು ಹೈಡ್ರೋಕ್ಲೋರೋಫ್ಲೋರೋಕಾರ್ಬನ್ಗಳು (HCFC ಗಳು) ಮತ್ತು ನಂತರ HFC ಗಳು, ಹಲವಾರು ಕೈಗಾರಿಕಾ ವಲಯಗಳಲ್ಲಿ. HFC ಗಳು ವಾಯುಮಂಡಲದ ಓzೋನ್ ಮೇಲೆ ಕೇವಲ ಒಂದು ಸಣ್ಣ ಪರಿಣಾಮವನ್ನು ಮಾತ್ರ ಹೊಂದಿದ್ದರೆ, ಕೆಲವು HFC ಗಳು ಶಕ್ತಿಯುತ ಹಸಿರುಮನೆ ಅನಿಲಗಳಾಗಿವೆ (GHGs).
- ಓಜೋನ್-ಸವಕಳಿ ವಸ್ತುಗಳಲ್ಲಿ ಕ್ಲೋರೋಫ್ಲೋರೋಕಾರ್ಬನ್ಸ್ (CFC ಗಳು), ಹಾಲೋನ್ ಮತ್ತು ಮೀಥೈಲ್ ಬ್ರೋಮೈಡ್, ಹೈಡ್ರೋಕ್ಲೋರೋಫ್ಲೋರೋಕಾರ್ಬನ್ಗಳು, ಕಾರ್ಬನ್ ಟೆಟ್ರಾಕ್ಲೋರೈಡ್ (CCl4), ಮತ್ತು ಮೀಥೈಲ್ ಕ್ಲೋರೋಫಾರ್ಮ್ ಹೊಂದಿರುವ ಬ್ರೋಮಿನ್ ಸೇರಿವೆ.
- ಈ ODS ಗಳು ದೀರ್ಘಾವಧಿಯವು (ಉದಾ. CFC-12 100 ವರ್ಷಗಳಿಗಿಂತ ಹೆಚ್ಚಿನ ಜೀವಿತಾವಧಿಯನ್ನು ಹೊಂದಿದೆ) ಮತ್ತು ಶಕ್ತಿಯುತ ಹಸಿರುಮನೆ ಅನಿಲಗಳಾಗಿವೆ.
- ಮಾಂಟ್ರಿಯಲ್ ಪ್ರೋಟೋಕಾಲ್ಗೆ 2016 ಕಿಗಾಲಿ ತಿದ್ದುಪಡಿಯನ್ನು ಅಳವಡಿಸಿಕೊಳ್ಳಲಾಯಿತು ,ಇದು ಕೆಲವು HFC ಗಳ ಉತ್ಪಾದನೆ ಮತ್ತು ಬಳಕೆಯನ್ನು ಸ್ಥಗಿತಗೊಳಿಸುತ್ತದೆ ಮತ್ತು ಯೋಜಿತ ಜಾಗತಿಕ ಹೆಚ್ಚಳ ಮತ್ತು ಸಂಬಂಧಿತ ಹವಾಮಾನ ಬದಲಾವಣೆಯನ್ನು ತಡೆಯುತ್ತದೆ.
lot of usefull sir this website