ಆಯವ್ಯಯ 2023-24 ರ ಮುಖ್ಯಾಂಶಗಳು
ಆಯವ್ಯಯ 2023-24 ರ ಮುಖ್ಯಾಂಶಗಳು
ಆಯವ್ಯಯ ಪಕ್ಷಿನೋಟ
- ಆಯವ್ಯಯ ಗಾತ್ರ (ಸಂಚಿತ ನಿಧಿ): 3, 09,182 ಕೋಟಿ ರೂ.
- ಒಟ್ಟು ಸ್ವೀಕೃತಿ- 3, 03,911 ಕೋಟಿ ರೂ.;
- ರಾಜಸ್ವ ಸ್ವೀಕೃಷಿ 2, 25,910 ಕೋಟಿ ರೂ.
- ಸಾರ್ವಜನಿಕ ಋಣ- 77,750 ಕೋಟಿ ರೂ. ಸೇರಿದಂತೆ ಬಂಡವಾಳ ಸ್ವೀಕೃತಿ 78,000 ಕೋಟಿ ರೂ.
- ಒಟ್ಟು ವೆಚ್ಚ- 3, 03,000 ಕೋಟಿ ರೂ.,
- ರಾಜಸ್ವ ವೆಚ್ಚ- 2, 25,507 ಕೋಟಿ ರೂ.
- ಬಂಡವಾಳ ವೆಚ್ಚ- 61.234 ಕೋಟಿ ರೂ.
- ಸಾಲ ಮರುಪಾವತಿ- 22,441 ಕೋಟಿ ರೂ.
ವಿವಿಧ ವಲಯಗಳಿಗೆ ಒದಗಿಸಲಾದ ಆಯವ್ಯಯ
- ಕೃಷಿ ಮತ್ತು ಪೂರಕ ಚಟುವಟಿಕೆಗಳು- 39,031 ಕೋಟಿ ರೂ.
- ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ- 80,318 ಕೋಟಿ ರೂ.
- ಆರ್ಥಿಕ ಅಭಿವೃದ್ಧಿಗೆ ಉತ್ತೇಜನ- 61,488 ಕೋಟಿ ರೂ.
- ಬೆಂಗಳೂರು ಸಮಗ್ರ ಅಭಿವೃದ್ಧಿ- 9,698 ಕೋಟಿ ರೂ.
- ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ- 3.458 ಕೋಟಿ ರೂ.
- ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ- 68,585 ಕೋಟಿ
- ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ ಮಹಿಳಾ ಉದ್ದೇಶಿತ ಆಯವ್ಯಯದಲ್ಲಿ ಒದಗಿಸಿದ ಅನುದಾನ 46,278 ಕೋಟಿ ರೂ.
- ಮಕ್ಕಳ ಅಭ್ಯುದಯಕ್ಕೆ ಆಯವ್ಯಯದಲ್ಲಿ ಒದಗಿಸಿದ ಅನುದಾನ 47.256 ಕೋಟಿ
- ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ. ಯಡಿ ಆಯವ್ಯಯದಲ್ಲಿ ಒದಗಿಸಿದ ಅನುದಾನ 30,215 ಕೋಟಿ ರೂ.: ಎಸ್.ಸಿ.ಎಸ್.ಪಿ.ಯಡಿ 21,343 ಕೋಟಿ ರೂ. ಹಾಗೂ ಟಿ.ಎಸ್.ಪಿ. ಯಡಿ 8,872 ಕೋಟಿ ರೂ.
2023-24ನೇ ಸಾಲಿನ ಹೊಸ ಘೋಷಣೆಗಳು:
ಕೃಷಿ ಮತ್ತು ಪೂರಕ ಚಟುವಟಿಕೆಗಳು:
- ರೈತರಿಗೆ ನೀಡಲಾಗುವ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿ 3 ಲಕ್ಷ ರೂ. ಗಳಿಂದ 5 ಲಕ್ಷ ರೂ. ಗಳಿಗೆ ಹೆಚ್ಚಳ. 30 ಲಕ್ಷ ರೈತರಿಗೆ 25,000 ಕೋಟಿ ರೂ. ಸಾಲ ವಿತರಣೆ ಗುರಿ.
- ‘ಭೂ ಸಿರಿ’ ಯೋಜನೆಯಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ 10 ಸಾವಿರ ರೂ. ಗಳ ಹೆಚ್ಚುವರಿ ಸಹಾಯಧನ; 50 ಲಕ್ಷ ರೈತರಿಗೆ ಅನುಕೂಲ.
- 56 ಲಕ್ಷ ಸಣ್ಣಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಟುಗಳಿಗೆ 8 ಕೋಟಿ ರೂ. ವೆಚ್ಚದಲ್ಲಿ ಜೀವನ ಜ್ಯೋತಿ ವಿಮಾ ಯೋಜನೆ ಜಾರಿ.
- ಕಿರುಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ರೈತ ಸಿರಿ ಯೋಜನೆಯಡಿ 10 ಸಾವಿರ ರೂ. ಪ್ರೋತ್ಸಾಹಧನ.
- ಮುಖ್ಯಮಂತ್ರಿ ರೈತ ಉನ್ನತಿ ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರೋತ್ಸಾಹಿಸಲು 10 ಲಕ್ಷ ರೂ. ವರೆಗಿನ ಬಂಡವಾಳಕ್ಕೆ ಬಡ್ಡಿ ಸಹಾಯಧನ ಸೌಲಭ್ಯ.
- ಸಿರಿಧಾನ್ಯ ಸಂಸ್ಕರಿಸುವ FPO ಗಳಿಗೆ ಪ್ರಾಶಸ್ತ್ರ
- ರೈತ ಸ೦ಪದ ಯೋಜನೆಯಡಿ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಉತ್ತೇಜನಕ್ಕೆ 100 ಕೋಟಿ ರೂ.;
- ಕೃಷಿ ಯಂತ್ರಧಾರೆ ಕೇಂದ್ರಗಳಿಗೆ ಹೈ-ಟೆಕ್ ಹಾರ್ವೆಸ್ಟರ್ ಗಳನ್ನು ಒದಗಿಸಲು 50 ಕೋಟಿ ರೂ.
- ಅಡಿಕೆ ಬೆಳೆಯ ರೋಗ ನಿರ್ವಹಣೆ ಮತ್ತು ಉತ್ಪಾದಕತೆ ಹೆಚ್ಚಿಸುವ ಕುರಿತು ಸಂಶೋಧನೆಗೆ ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ ನೆರವು.
- ತಿಪಟೂರಿನಲ್ಲಿ ತೋಟಗಾರಿಕ ಮಹಾವಿದ್ಯಾಲಯ ಸ್ಥಾಪನೆ
- ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿಯ ಮೂಲಕ ವಿಶೇಷ ಯೋಜನೆ.
- ಸಹಸ್ರ ಸರೋವರ ಹಾಗೂ ಸಹ್ಯಾದ್ರಿ ಸಿರಿ ಯೋಜನೆಗಳಿಗೆ ಅನುದಾನ.
- ರೈತರ ಜಮೀನುಗಳಲ್ಲಿ ಜಲಹೊಂಡ ನಿರ್ಮಿಸುವ ಜಲನಿಧಿ ಯೋಜನೆ ಜಾರಿ,
- ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ.
ಪಶುಸಂಗೋಪನೆ:
- 32 ಸ್ವಯಂ ಚಾಲಿತ ರೀಲಿಂಗ್ ಘಟಕಗಳ ಸ್ಥಾಪನೆಗೆ ನೆರವು: ಸಾವಿರ ರೇಷ್ಮೆ ಬೆಳೆಗಾರರಿಗೆ ಶೆಡ್ಡರ್ಸ್ ಒದಗಿಸಲು 12 ಕೋಟಿ ರೂ. ಅನುದಾನ: ರಾಜ್ಯದಲ್ಲಿ 10 ಸ್ಥಳಗಳಲ್ಲಿ ಹಾಟ್ ಏರ್ ಕನ್ವೇಯರ್ ಡ್ರೈಯರ್ ಅಳವಡಿಕೆಗೆ 5 ಕೋಟಿ ರೂ. ಅನುದಾನ.
- ಮೈಸೂರು ಬಿತ್ತನೆ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗೆ 8 ಕೋಟಿ
- ಬಳ್ಳಾರಿ ಜಿಲ್ಲೆಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 2 ಲಕ್ಷ ಲೀ. ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾಡೈರಿ ಸ್ಥಾಪನೆ.
- ಬೆಂಗಳೂರಿನಲ್ಲಿ ನಿರ್ಲಕ್ಷಿತ ಪ್ರಾಣಿಗಳ ಚಿಕಿತ್ಸೆಗೆ ಸಂಚಾರಿ ಚಿಕಿತ್ಸಾಲಯಗಳ ಸ್ಥಾಪನೆ
- ಬೀದಿನಾಯಿಗಳನ್ನು ದತ್ತುಪಡೆಯಲು ಆನ್ ಲೈನ್ ವೇದಿಕೆ ಸೃಜನೆ:
- ಮುಧೋಳ ಹೌಂಡ್ ಶ್ವಾನ ತಳಿ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ
ಮೀನುಗಾರಿಕೆ
- ಸೀಮೆ ಎಣ್ಣೆ ಆಧಾರಿತ ದೋಣಿಗಳಲ್ಲಿ ಪೆಟ್ರೋಲ್ ಆಧಾರಿತ ಮೋಟರ್ ಎಂಜಿನ್ ಅಳವಡಿಕೆಗೆ ಮುಂದಿನ ಎರಡು ವರ್ಷಗಳಲ್ಲಿ 50 ಸಾವಿರ ರೂ. ಸಹಾಯಧನ. ಮುಂದಿನ ಎರಡು ವರ್ಷಗಳಿಗೆ ಸೀಮೆಎಣ್ಣೆ ಸಹಾಯಧನ ಮುಂದುವರಿಕೆ. ಡಿಬಿಟಿ ಮೂಲಕ ವರ್ಗಾವಣೆ, ಮೀನುಗಾರರಿಗೆ ನೀಡುವ ಡೀಸಲ್ ಸಬ್ಸಿಡಿ 2 ಲಕ್ಷ ಕಿಲೋ ಲೀಟರ್ ಗೆ ಏರಿಕೆ.
- ಮತ್ಸ್ಯ ಸಂಪದ ಯೋಜನೆಯಡಿ ಕರಾವಳಿ ಜಿಲ್ಲೆಗಳಲ್ಲಿ ಕೃತಕ ಬಂಡೆ ಸಾಲುಗಳ ಸ್ಥಾಪನೆ, 20 ಕೋಟಿ ರೂ. ಅನುದಾನದಲ್ಲಿ ಉತ್ತಮ ತಳಿಯ ಬಲಿತ ಬಿತ್ತನೆ ಮೀನು ಮರಿಗಳ ದಾಸ್ತಾನು ಪ್ರೋತ್ಸಾಹ.
- ಹಾವೇರಿಯಲ್ಲಿ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರ ಸ್ಥಾಪನೆ.
- 10 ಸಾವಿರ ಮೀನುಗಾರರಿಗೆ ವಸತಿ ಸೌಲಭ್ಯ
- ಮೀನುಗಾರರ ದೋಣಿಗಳ ಸುರಕ್ಷತೆಗೆ ಜಿಪಿಎಸ್ ಟ್ರಾಕಿಂಗ್ ವ್ಯವಸ್ಥೆಗೆ ಅನುದಾನ.
- ಕಲ್ಯಾಣ ಕರ್ನಾಟಕದ ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸಿಗಡಿ ಕೃಷಿ ಕ್ಲಸ್ಟರ್ ಸ್ಥಾಪನೆ, ಬೈಂದೂರು ತಾಲ್ಲೂಕು ಕಂಬದಕೋಣೆಯಲ್ಲಿ ಸೀ ಫುಡ್ ಪಾರ್ಕ್ ಸ್ಥಾಪನೆ-
- ಮೀನು ಉತ್ಪನ್ನಗಳ ಪೂರೈಕೆಗೆ ಪರಿಸರ ಸ್ನೇಹಿ ತ್ರಿಚಕ್ರ ಮೀನು ಮಾರಾಟ ವಾಹನಗಳ ವಿತರಣೆ ಯೋಜನೆ.
ಸಹಕಾರಿ ಕ್ಷೇತ್ರದ ಸಬಲೀಕರಣ
- ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಆಹಾರ ಧಾನ್ಯ ಖರೀದಿಗೆ ಸ್ಥಾಪಿಸಿರುವ ಆವರ್ತ ನಿಧಿ 3,500 ಕೋಟಿ ರೂ. ಗಳಿಗೆ ಹೆಚ್ಚಳ. ಇದಕ್ಕಾಗಿ 1500 ಕೋಟಿ ರೂ. ಅನುದಾನ, ರಾಜ್ಯದ ಇತಿಹಾಸದಲ್ಲಿಯೇ ಹೆಚ್ಚಿನ ಗಾತ್ರದ ಆವರ್ತ ನಿಧಿ.
- ಚಿಕ್ಕಬಳ್ಳಾಪುರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆ, ಬೆಂಗಳೂರು ಮತ್ತು ಹಾವೇರಿಯಲ್ಲಿ ಹೂವಿನ ಅತ್ಯಾಧುನಿಕ ಚಿಲ್ಲರೆ ಮಾರುಕಟ್ಟೆ ನಿರ್ಮಾಣ
ನೀರಾವರಿಗೆ ಆದ್ಯತೆ
- ಯಾದಗಿರಿ ಮತ್ತು ಕಲಬುರಗಿಯಲ್ಲಿ 138 ಮೇಲೆ ಸಣ್ಣ ನೀರಾವರಿ ಕಾಮಗಾರಿ ಕೈಗೊಳ್ಳಲು ಕ್ರಮ.
- ಪಶ್ಚಿಮ ವಾಹಿನಿ 2 ಹಂತದ ಯೋಜನೆಯ ಕಾಮಗಾರಿಗಳ ಅನುಷ್ಠಾನ.
- ಕೃಷ್ಣಾ ಮೇಲ್ದಂಡೆ ಹಂತ 3ರ ಯೋಜನೆಗೆ 5,000 ಕೋಟಿ ರೂ. ಅನುದಾನ.
- 11,236 ಕೋಟಿ ರೂ. ಅಂದಾಜು ವೆಚ್ಚದ 38 ಯೋಜನೆಗಳ ಅನುಷ್ಠಾನ; 1.5 ಲಕ್ಷ ಎಕರೆ ನೀರಾವು ಸಾಮರ್ಥ್ಯ ಸೃಜನೆಯ ಗುರಿ,
- ಪ್ರಗತಿಯಲ್ಲಿರುವ ತುಂಬಿಸುವ ಯೋಜನೆಗಳು, ಸಸಾಲಟ್ಟಿ ಶಿವಲಿಂಗೇಶ್ವರ, ಮಂಟೂರು ಮಹಾಲಕ್ಷ್ಮೀ ಮತ್ತು ಶ್ರೀ ವೆಂಕಟೇಶ್ವರ ಏತ ನೀರಾವರಿ ಯೋಜನೆಗಳು ಮತ್ತು ಮಳವಳ್ಳಿ ಪೂರಿಗಾಲಿ ಸೂಕ್ತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ.
- ಕಳಸಾ ಮತ್ತು ಬಂಡೂರಾ ನಾಲಾ ತಿರುವು ಯೋಜನೆಗೆ 1,000 ಕೋಟಿ ರೂ. ಅನುದಾನ.
- ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ 5,300 ಕೋಟಿ ರೂ.ಅನುದಾನ.
- ರಾಜ್ಯದ ನೀರಾವರಿ ಕ್ಷೇತ್ರಕ್ಕೆ ಒಟ್ಟಾರೆ 25,000 ಕೋಟಿ ರೂ. ಅನುದಾನ
ವಲಯ 2 – ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ
ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳು
- ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಗುಣಮಟ್ಟ ಸುಧಾರಣೆಗೆ 892 ಕೋಟಿ ರೂ. ಅನುದಾನ: ಆರೋಗ್ಯ ಕ್ಷೇತ್ರದ ಸುಧಾರಣೆಗೆ 720 ಕೋಟಿ ರೂ. ಹಾಗೂ ಪೌಷ್ಟಿಕತೆ ವಲಯದಲ್ಲಿ ಸುಧಾರಣೆಗೆ 140 ಕೋಟಿ ರೂ. ಅನುದಾನ. ವಸತಿಗಾಗಿ 500 ಕೋಟಿ ರೂ. ಅನುದಾನ.
ಗುಣಮಟ್ಟದ ಶಿಕ್ಷಣ
- ಸರ್ಕಾರಿ ಪದವಿ ಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ. 8 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ.
- ವಿವೇಕ ಯೋಜನೆಯಡಿ ಅನುಮೋದನೆಯಾದ 7,601 ಶಾಲಾ ಕೊಠಡಿಗಳು ಸೇರಿದಂತೆ ಒಟ್ಟು 9556 ಶಾಲಾ ಕೊಠಡಿಗಳ ನಿರ್ಮಾಣ ಪ್ರಸಕ್ತ ವರ್ಷ ಪೂರ್ಣಗೊಳಿಸಲು ಕ್ರಮ.
- ಸಿಂಪಿಗರ ಮಕ್ಕಳಿಗೆ ವಿದ್ಯಾನಿಧಿ ಸೌಲಭ, ವಿಷ್ಕರಣೆ,
- PM SHRI ಯೋಜನೆಯಡಿ ಉತ್ತಮ ಮೂಲಭೂತ ಸೌಕರ್ಯ ಹಾಗೂ ಕಲಿಕಾ ಸಂಪನ್ಮೂಲ ಒದಗಿಸಲು 100 ಕೋಟಿ ರೂ. ಅನುದಾನ.
- ”ಹಳ್ಳಿ ಮುತ್ತು’ ಯೋಜನೆಯಡಿ ಗ್ರಾಮೀಣ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿ CET ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾಗುವ 500 ಅತ್ಯುತ್ತಮ ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕ ಭರಿಸಲು ಕ್ರಮ.
- ‘ವೃದ್ಧಿ’ ಯೋಜನೆಯಡಿ ಅತಿ ಹೆಚ್ಚು ದಾಖಲಾತಿ ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಗಳಿಗೆ ಅಗತ್ಯ ಸೌಲಭ್ಯಕ್ಕಾಗಿ ಅನುದಾನ.
- 100 ಆಯ್ದ ಪದವಿ ಕಾಲೇಜುಗಳಲ್ಲಿ ಪ್ರೊ. ಸಿ.ಎನ್.ಆರ್. ರಾವ್ ವಿಜ್ಞಾನ ವಿಭಾಗ ಪ್ರಾರಂಭ.
- ಏಳು ಎಂಜಿನಿಯರಿಂಗ್ ಕಾಲೇಜುಗಳನ್ನು KIT ಗಳಾಗಿ ಪರಿವರ್ತಿಸಲು 50 ಕೋಟಿ ರೂ ಅನುದಾನ.
- ಚಿಕ್ಕಮಗಳೂರಿನಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ.
- ಬಂಕಾಪುರದ ಸರ್ಕಾರಿ ಪಾಲಿಟೆಕ್ನಿಕ್ ಅನ್ನು ಇಂಜಿನಿಯರಿಂಗ್ ಕಾಲೇಜಾಗಿ ಪರಿವರ್ತಿಸಲಾಗುವುದು
- ಚಿಕ್ಕನಾಯಕನಹಳ್ಳಿಯಲ್ಲಿ ಹೊಸ ಪಾಲಿಟೆಕ್ನಿಕ್ ಪ್ರಾರಂಭ,
- ಎಲ್ಲಾ ವಿಶ್ವವಿದ್ಯಾನಿಲಯಗಳ ಪಠ್ಯಕ್ರಮ ಮತ್ತು ಉಲ್ಲೇಖ ಪುಸ್ತಕಗಳ ಕನ್ನಡ ಅನುವಾದವನ್ನು ಕೈಗೊಳ್ಳಲು ಕ್ರಮ.
ಆರೋಗ್ಯ ಸೇವೆಗೆ ಆದ್ಯತೆ
- ರಕ್ತ ಹೀನತೆ ನಿವಾರಣೆಗೆ ಆರೋಗ್ಯ ಪುಷ್ಟಿ’ ಯೋಜನೆ ಜಾರಿ,
- ಆರೋಗ್ಯ ಇಲಾಖೆಯಡಿ 100 ಕೋಟಿ ರೂ. ಅನುದಾನ.
- ‘ಮನೆ ಮನೆಗೆ ಆರೋಗ್ಯ ಕಾರ್ಯಕ್ರಮದಡಿ ಗ್ರಾಮೀಣ ಜನತೆಯ ಸಮಗ್ರ ಆರೋಗ್ಯ ತಪಾಸಣೆಗೆ 2023-24ರಲ್ಲಿ ಎರಡು ಬಾರಿ ಆರೋಗ್ಯ ಶಿಬಿರ ಆಯೋಜನೆ,
- ಕ್ಷಯ ರೋಗಿಗಳ ಆರಂಭಿಕ ತಪಾಸಣೆಗೆ 12.50 ಕೋಟಿ ರೂ.;
- ಮೆದುಳು ಆರೋಗ್ಯ ಯೋಜನೆ ರಾಜ್ಯಾದ್ಯಂತ ವಿಸ್ತರಣೆ.
- ಜೀವಸುಧೆ’ ಯೋಜನೆಯಡಿ ಕ್ಯಾನ್ಸರ್ ತಪಾಸಣೆ ಶಿಬಿರ ಹಮ್ಮಿಕೊಳ್ಳಲು 12 ಕೋಟಿ ರೂ.,
- ‘ವಾತ್ಸಲ್ಯ’ ಯೋಜನೆಯಡಿ ಆರು ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ,
- ಉಚಿತ ಡಯಾಲಿಸಿಸ್ ಸೇವೆ 1 ಲಕ್ಷ ಸೈಕಲ್ ಗಳಿಗೆ ವಿಸ್ತರಣೆ.
- ಏಳು ತಾಲ್ಲೂಕು ಕೇಂದ್ರಗಳ ಸಮುದಾಯ ಆರೋಗ್ಯ ಕೇಂದ್ರಗಳನ್ನು 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯಾಗಿ ಉನ್ನತೀಕರಣ,
- PM-ABHIM ಅಡಿಯಲ್ಲಿ 50 ಹಾಸಿಗೆಗಳ 8 ಕ್ರಿಟಿಕಲ್ ಕೇರ್ ಬ್ಲಾಕ್ ಹಾಗೂ 100 ಹಾಸಿಗೆಗಳ 2 ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ.
- ನಗು ಮಗು’ ಯೋಜನೆಯಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಹೆರಿಗೆಯಾದ ತಾಯಿ ಮತ್ತು ನವಜಾತ ಶಿಶುಗಳಿಗೆ ಉಚಿತ ಸಾರಿಗೆ ಸೌಲಭ್ಯ,.
- ಸ್ಥಳೀಯವಾಗಿ ಪ್ರಯೋಗಾಲಯ ಸೇವೆಗಳನ್ನು ಒದಗಿಸಲು 129 ತಾಲೂಕು ಪ್ರಯೋಗಾಲಯಗಳು, ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಪ್ರಯೋಗಾಲಯಗಳು ಮತ್ತು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ರೆಫರಲ್ ಪ್ರಯೋಗಾಲಯಗಳ ಸ್ಥಾಪನೆ.
- ಆರೋಗ್ಯ ಸೇವೆಗಳ ಡಿಜಿಟಲೀಕರಣ, ರೋಗಿಗಳ ಆರೋಗ್ಯ ದಾಖಲೆಗಳ ಸುರಕ್ಷಿತ ಕ್ರೋಢೀಕರಣಕ್ಕೆ ಕ್ರಮ,
- ಸವಣೂರಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆ.
- ರಾಯಚೂರಿನಲ್ಲಿ AIIMS ಮಾದರಿಯ ಆಸ್ಪತ್ರೆ ಹಾಗೂ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ.
- ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಕಲ್ಬುರ್ಗಿ 4 ವೈದ್ಯಯ ವಿಜ್ಞಾನ ಸಂಸ್ಥೆಗಳಲ್ಲಿ 6 ಕೋಟಿ ರೂ. ವೆಚ್ಚದಲ್ಲಿ IVF ಕ್ಲಿನಿಕ್ ಪ್ರಾರಂಭ;
- ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಸ್ವಯಂ ಚಾಲಿತ ಮತ್ತು ಕೇಂದ್ರೀಕೃತ ರಕ್ತನಿಧಿ ನಿರ್ವಹಣಾ ವ್ಯವಸ್ಥೆ ಸ್ಥಾಪನೆ.
- NIMIIANS ಸಂಸ್ಥೆಯ ಆವರಣದಲ್ಲಿ 146 ಕೋಟಿ ರೂ. ವೆಚ್ಚದಲ್ಲಿ ಅಂಗಾಂಗ ಜೋಡಣೆಗೆ ಮೀಸಲಾದ ದೇಶದ ಪ್ರಥಮ ಸಾರ್ವಜನಿಕ ಆಸ್ಪತ್ರೆ ಸ್ಥಾಪಿಸಲು ಕ್ರಮ.
ದುರ್ಬಲ ವರ್ಗಗಳ ಕ್ಷೇಮಾಭಿವೃದ್ಧಿ: ಮಹಿಳೆಯರು, ಮಕ್ಕಳು ಹಾಗೂ ವಿಶೇಷ ಚೇತನರು
- ಮಹಿಳೆಯರ ಸಬಲೀಕರಣಕ್ಕೆ ಗೃಹಿಣಿ ಶಕ್ತಿ’ ಯೋಜನೆಯಡಿ
- ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಮಾಸಿಕ 500 ರೂ. ಗಳ ಸಹಾಯಧನ;
- 1 ಲಕ್ಷ ಮಹಿಳೆಯರಿಗೆ ಮನೆಯಲ್ಲಿಯೇ ಲಾಭದಾಯಕ ಉದ್ಯಮ ಪ್ರಾರಂಭಿಸಲು ಕೌಶಲ್ಯಾಭಿವೃದ್ಧಿ ತರಬೇತಿ;
- ಸಂಘಟಿತ ವಲಯದಲ್ಲಿ ದುಡಿಯುವ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ಒದಗಿಸಲು 1,000 ಕೋಟಿ
- “ಆರೋಗ್ಯ ಪುಷ್ಟಿ” ಕಾರ್ಯಕ್ರಮದಡಿಯಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ತಡೆಗಟ್ಟಲು ಅಂಗನವಾಡಿಗಳಲ್ಲಿ ಅರ್ಹ ವಿವಾಹಿತ ಮಹಿಳೆಯರಿಗೆ ಬೇಯಿಸಿದ ಊಟವನ್ನು ಒದಗಿಸಲು ಕ್ರಮ.
- “ವಿದ್ಯಾವಾಹಿನಿ” ಯೋಜನೆಯಡಿಯಲ್ಲಿ ಶಾಲಾ ಕಾಲೇಜುಗಳ 8 ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್:
- ಸಹಕಾರ ವಲಯದಲ್ಲಿ 45,000 ಮಹಿಳಾ ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ 1,800 ಕೋಟಿ ರೂ. ಸಾಲ ವಿತರಣೆ ಗುರಿ.
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಮಕ್ಕಳ ಪೌಷ್ಟಿಕತೆ ಇಲಾಖೆ ಮತ್ತು ಮಹಿಳಾ ಸಬಲೀಕರಣ ಇಲಾಖೆ ಯಾಗಿ ವಿಭಜನೆ.
- ನಗರ ಪ್ರದೇಶದ ಕಟ್ಟಡ ನಿರ್ಮಾಣ ಮಹಿಳಾ ಕಾರ್ಮಿಕರಿಗೆ ನೆರವಾಗಲು ನಗರ ಪ್ರದೇಶದಲ್ಲಿ 4,000 ಶಿಶುವಿಹಾರ ಹಾಗೂ ನರೇಗಾ ಯೋಜನೆಯ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಹೆಚ್ಚಿಸಲು 500 ಶಿಶುವಿಹಾರ ಪ್ರಾರಂಭ.
- ಸ್ವಚೇತನ’ ಯೋಜನೆಯಡಿ 5000 ವಿಶೇಷ ಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಣೆಗೆ 50 ಕೋಟಿ ರೂ. ಅನುದಾನ.
- ಆಸಿಡ್ ದಾಳಿ ಸಂತ್ರಸ್ತರಿಗೆ ವಸತಿ ಸೌಲಭ್ಯ ಹಾಗೂ ಸ್ವಯಂ ಉದ್ಯೋಗಕ್ಕಾಗಿ ಸಾಲಸೌಲಭ್ಯ ನೀಡಲು ಕ್ರಮ: ಉತ್ಕೃಷ್ಟ ಚಿಕಿತ್ಸೆಗೆ ಮತ್ತು ಕಾನೂನು ನೆರವು ನೀಡಲು ಮಹಿಳಾ ಅಭಿವೃದ್ಧಿ ನಿಗಮದಲ್ಲಿ ವಿಶೇಷ ನಿಧಿ ಸ್ಥಾಪನೆ.
- ಮಕ್ಕಳ ಪಾಲನಾ ಸಂಸ್ಥೆಗಳಿಂದ ಹೊರಬಂದ 18 ರಿಂದ 21 ವರ್ಷ ವಯೋಮಾನದ ಗಂಡುಮಕ್ಕಳಿಗೆ 4 ಅನುಪಾಲನಾ ಗೃಹ ಪ್ರಾರಂಭಿಸಲು 2 ಕೋಟಿ ರೂ. ಅನುದಾನ.
- ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನಿವೃತ್ತಿ ಉಪಧನ ನೀಡಲು ತೀರ್ಮಾನ: ಅರ್ಹರಿಗೆ ಸ್ವಯಂ ನಿವೃತ್ತಿಗೂ ಅವಕಾಶ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭ್ಯುದಯ
- ಕರ್ನಾಟಕ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆ 2013ರಲ್ಲಿ ಸೆಕ್ಷನ್ 7(ಡಿ) ಸೇರಿದಂತೆ ವಿವಿಧ ಅಂಶಗಳ ಕುರಿತು ಪರಿಶೀಲನೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜಮೀನು ಸಂರಕ್ಷಣೆಗೆ ಟಿಸಿಎಚ್ ಕಾಯ್ದೆಗೆ ತಿದ್ದುಪಡಿ ಗೆ ಕ್ರಮ.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿವಿಧ ನಿಗಮಗಳಿಗೆ ಒಟ್ಟು ರೂ.795 ಕೋಟಿ ಅನುದಾನ; ವಿವಿಧ ಯೋಜನೆಗಳ ಅನುಷ್ಠಾನ.
- 100 KRIES ವಸತಿ ಶಾಲೆಗಳಲ್ಲಿ ಪ್ರಿ-ಯೂನಿವರ್ಸಿಟಿ ಕೋರ್ಸ್ ಪ್ರಾರಂಭ; 10 ವಸತಿ ಶಾಲೆಗಳಲ್ಲಿ ಕ್ರೀಡಾ ಸೌಲಭ್ಯ ಕಲ್ಪಿಸಲು ಅನುದಾನ.
- 14 ಜಿಲ್ಲಾ ಕೇಂದ್ರಗಳಲ್ಲಿ 14 ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಹಾಸ್ಟೆಲ್ಗಳನ್ನು ಆರಂಭಿಸಲು ಅನುದಾನ.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ನಿರುದ್ಯೋಗಿಗಳಿಗೆ ಶೇ.4ರ ಬಡ್ಡಿದರದಲ್ಲಿ ರೂ.10 ಲಕ್ಷದವರೆಗೆ ಸಾಲ ನೀಡಲು ಬಡ್ಡಿ ರಿಯಾಯಿತಿ.
- ‘ಬಾಬು ಜಗಜೀವನರಾಮ್ ಸ್ವಯಂ ಉದ್ಯೋಗ ಯೋಜನೆ’ ಅಡಿಯಲ್ಲಿ ಎಲೆಕ್ಟ್ರಿಕ್ ತ್ರಿ ವೀಲರ್ ಅಥವಾ ಫೋರ್ ವೀಲರ್ ಸರಕುಗಳ ವಾಹನ ಖರೀದಿಗೆ 50% ಸಬ್ಸಿಡಿ.
- ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ವಸತಿ ಸೌಲಭ್ಯ.
ಹಿಂದುಳಿದ ವರ್ಗಗಳ ಕಲ್ಯಾಣ
- ಬಿಲ್ಡ್ ಟು ಸೂಟ್’ ಮಾದರಿಯಲ್ಲಿ 20 ಹೊಸ ಮೆಟ್ರಿಕ್ ನಂತರದ ಹಾಸ್ಟೆಲ್ಗಳ ನಿರ್ಮಾಣ ಮತ್ತು ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ 160 ಹಾಸ್ಟೆಲ್ಗಳನ್ನು ಹಿಂದುಳಿದ ವರ್ಗಗಳ ಇಲಾಖೆಗೆ ಹಸ್ತಾಂತರಿಸುವುದು.
- ಹಿಂದುಳಿದ ವರ್ಗಗಳ ಹಾಸ್ಟೆಲ್ಗಳಿಗೆ ಮೂಲ ಸೌಕರ್ಯ ಮತ್ತು ದುರಸ್ತಿಗಾಗಿ ವಿಶೇಷ ಪ್ಯಾಕೇಜ್.
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಸ್ಟೆಲ್ಗಳಲ್ಲಿ 8 ರಿಂದ 10 ನೇ ತರಗತಿಯ 10,000 ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಫೌಂಡೇಶನ್ ಕೋರ್ಸ್ಗೆ ಅನುದಾನ.
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ವಿವಿಧ ನಿಗಮಗಳಿಗೆ ಅನುದಾನ; ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ವಿವಿಧ ಯೋಜನೆಗಳ ಅನುಷ್ಠಾನ.
ಅಲ್ಪಸಂಖ್ಯಾತರ ಕಲ್ಯಾಣ
- ವಿದೇಶಿ ಶಿಕ್ಷಣ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ರೂ.20 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಪಡೆಯಲು ಬಡ್ಡಿ ಸಹಾಯಧನ.
- 300 ಅಲ್ಪಸಂಖ್ಯಾತ ಮಹಿಳಾ ಪದವೀಧರರಿಗೆ ಐಐಎಂಬಿಯಲ್ಲಿ ಉದ್ಯಮಶೀಲತೆ ತರಬೇತಿ.
- ವಕ್ಫ್ ಆಸ್ತಿ ಸಂರಕ್ಷಣೆ ಮತ್ತು ಖಬರಸ್ತಾನಗಳ ಅಭಿವೃದ್ಧಿಗೆ ಒಟ್ಟು ರೂ.20 ಕೋಟಿ ಅನುದಾನ.
- ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಅನುದಾನ.
- ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ವಿವಿಧ ಯೋಜನೆಗಳ ಅನುಷ್ಠಾನ.
ವಸತಿ
- ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಮನೆ ನಿರ್ಮಾಣದ ಗುರಿ, ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ವಸತಿ ಸೌಲಭ್ಯಕ್ಕೆ ಆದ್ಯತೆ.
- ಗೃಹಮಂಡಳಿ ವತಿಯಿಂದ 30 ಸಾವಿರ ಸ್ವತ್ತುಗಳನ್ನು ಅಭಿವೃದ್ಧಿ ಪಡಿಸಿ, ಹಂಚಿಕೆ ಮಾಡಲು ಕ್ರಮ. ನಮ್ಮ ನೆಲೆ ಯೋಜನೆಯಡಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಇದರಲ್ಲಿ 10 ಸಾವಿರ ನಿವೇಶನ ಹಂಚಿಕೆ.
ಕಾರ್ಮಿಕರ ಅಭ್ಯುದಯ
- ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ‘ಕರ್ನಾಟಕ ಅಸಂಘಟಿತ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪನೆ. 75 ಲಕ್ಷ ಕ್ಕೂ ಹೆಚ್ಚು ಜನರಿಗೆ ಅನುಕೂಲ.
- 75 ಲಕ್ಷಕ್ಕೂ ಹೆಚ್ಚು ಜನರಿಗೆ ಲಾಭ.
- ಗೌರವಧನ ಹೆಚ್ಚಳ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಡುಗೆಯವರು ಮತ್ತು ಮಧ್ಯಾಹ್ನ ಉಪಾಹಾರ ಯೋಜನೆಯಡಿ ಸಹಾಯಕರು, ಗ್ರಾಮ ಸಹಾಯಕರು, ಗೃಹರಕ್ಷಕರು ಮತ್ತು ಗ್ರಂಥಪಾಲಕರಿಗೆ ಮಾಸಿಕ ಗೌರವಧನವನ್ನು ರೂ.1,000 ಹೆಚ್ಚಿಸಲಾಗಿದೆ.
ಎಲ್ಲರನ್ನೊಳಗೊಂಡ ಅಭಿವೃದ್ಧಿಗೆ ಕೌಶಲ್ಯಾಭಿವೃದ್ಧಿ
- ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ, ಅಮೃತ ಕೌಶಲ್ಯ ತರಬೇತಿ, ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಮತ್ತು ಇತರ ಕಾರ್ಯಕ್ರಮಗಳಡಿ 5 ಲಕ್ಷ ಅಭ್ಯರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಯ ಗುರಿ,
- ಸಾಂಪ್ರದಾಯಿಕ ಕೌಶಲ್ಯಗಳ ಪುನರುಜ್ಜೀವನಕ್ಕಾಗಿ ಬಿದಿರಿನ ಉತ್ಪನ್ನಗಳು, ಚನ್ನಪಟ್ಟಣದ ಆಟಿಕೆಗಳು, ಕಿನ್ಹಾಳ ಕಲೆ, ಕುಂಬಾರಿಕೆ, ಬಿದರಿ ಕಲೆ, ಕಸೂತಿ ಮತ್ತು ಇತರವುಗಳ ಉತ್ಪಾದನೆಯಲ್ಲಿ ಉನ್ನತ ಮಟ್ಟದ ಕೌಶಲ್ಯ ತರಬೇತಿ.
- ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ 50 ವರ್ಷಗಳನ್ನು ಪೂರೈಸಿದ ಸರ್ಕಾರಿ ಐಟಿಐಗಳನ್ನು ಪಾರಂಪರಿಕ ಸಂಸ್ಥೆಗಳಾಗಿ ಅಭಿವೃದ್ಧಿಪಡಿಸುವುದು.
- “ಕಲಿಕೆ ಜೊತೆ ಕೌಶಲ್ಯ” ಕಾರ್ಯಕ್ರಮದ ಅಡಿಯಲ್ಲಿ ಪದವಿ, ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಮತ್ತು ITI ವಿದ್ಯಾರ್ಥಿಗಳಿಗೆ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ತರಬೇತಿ; ಕೌಶಲ್ಯ ಅಭಿವೃದ್ಧಿಗೆ ಕ್ರಮ
- KREIS ಅಡಿಯಲ್ಲಿ ವಸತಿ ಶಾಲೆಗಳಲ್ಲಿ ಮತ್ತು ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗೆ ಬೆಂಗಳೂರಿನಲ್ಲಿ ತರಬೇತಿ.
ವಲಯ 3- ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ
ಗ್ರಾಮೀಣಾಭಿವೃದ್ಧಿಗೆ ಮಹತ್ವ
- ಗ್ರಾಮೀಣ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲು ಜಲ ಜೀವನ್ ಮಿಷನ್ ಯೋಜನೆಗೆ ರೂ.6,231 ಕೋಟಿ ಹಂಚಿಕೆ.
- ಮಹಾತ್ಮಾ ಗಾಂಧಿ ಎನ್ಆರ್ಇಜಿಎ ಅಡಿಯಲ್ಲಿ 88 ಲಕ್ಷ ಕುಟುಂಬಗಳಿಗೆ ಉದ್ಯೋಗ ಒದಗಿಸುವ ಗುರಿ.
- ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚುವರಿ ಅನುದಾನ ರೂ. 780 ಕೋಟಿ. ಗ್ರಾಮ ಪಂಚಾಯಿತಿಗಳಿಗೆ ರೂ. 22 ಲಕ್ಷದಿಂದ ರೂ. 60 ಲಕ್ಷ.
- ಗ್ರಾಮದ ರಸ್ತೆಗಳು ಮತ್ತು ಕೃಷಿ ಭೂಮಿಯನ್ನು ಸಂಪರ್ಕಿಸುವ ಒಟ್ಟು 5,000 ಕಿಮೀ ರಸ್ತೆ ನಿರ್ಮಾಣಕ್ಕೆ ಅನುದಾನ.
- ನರೇಗಾ ಮತ್ತು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಅನುದಾನ ಹಂಚಿಕೆ.
- ಗ್ರಂಥಾಲಯಗಳಿಲ್ಲದ 330 ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ. ವಿಶೇಷ ಚೇತನ ಮಕ್ಕಳಿಗಾಗಿ 1,000 ಗ್ರಾಮೀಣ ಗ್ರಂಥಾಲಯಗಳ ಉನ್ನತೀಕರಣ.
ಪ್ರಾದೇಶಿಕ ಸಮತೋಲನ
- ಕಲ್ಯಾಣ ಕರ್ನಾಟಕದಲ್ಲಿ 5,000 ಕೋಟಿ ರೂ. ವೆಚ್ಚದ ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮ.
- ದತ್ತಾಂಶ ವಿಶ್ಲೇಷಣೆ ಮತ್ತು ಮುನ್ಸೂಚನೆಗಾಗಿ ಯೋಜನಾ ಇಲಾಖೆಯ ಅಡಿಯಲ್ಲಿ ಬಿಗ್ ಡಾಟಾ ಲೇಕ್ ಯೋಜನೆಯ ಅನುಷ್ಠಾನ.
ನಗರಗಳ ಸುಸ್ಥಿರ ಅಭಿವೃದ್ಧಿ
- ಕೇಂದ್ರ ಪ್ರಾಯೋಜಿತ ಅಮೃತ್ 2.0 ಯೋಜನೆಯಡಿ 185 ನಗರಗಳು ಮತ್ತು ಪಟ್ಟಣಗಳಲ್ಲಿ 7.21 ಲಕ್ಷ ಮನೆಗಳಿಗೆ ನಳ ಸಂಪರ್ಕಗಳನ್ನು ಒದಗಿಸಲು ಅನುದಾನ.
- “ಪೌರ ಆಸರೆ” ಯೋಜನೆಯಡಿ ಪೌರ ಕಾರ್ಮಿಕರಿಗೆ 5,000 ಮನೆಗಳ ನಿರ್ಮಾಣಕ್ಕೆ ರೂ.300 ಕೋಟಿ.
- ಸ್ಮಾರ್ಟ್ ಸಿಟಿ ಅಭಿಯಾನದಡಿ 143 ಕಾಮಗಾರಿ ಪೂರ್ಣಗೊಳಿಸಲು ಕ್ರಮ.
- ಮೈಸೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾವೇರಿ, ಕೋಲಾರ ಮತ್ತು ರಾಮನಗರದಲ್ಲಿ ಇಂಟಿಗ್ರೇಟೆಡ್ ಟೌನ್ಶಿಪ್ ನಿರ್ಮಾಣ.
ಇಂಧನ ಕ್ಷೇತ್ರದ ಮುನ್ನಡೆ
- ಸುಗಮ ವಿದ್ಯುತ್ ರವಾನೆ ಮತ್ತು ಪ್ರಸರಣಾ ಜಾಲದ ಬಲವರ್ಧನೆಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವ್ಯಾಪ್ತಿಯಲ್ಲಿ 3,000 ಕೋಟಿ ರೂ. ಹೂಡಿಕೆ.
- ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ನ ಜನರೇಷನ್ ಸ್ವಿಚ್ಯಾರ್ಡ್ ಉಪಕರಣಗಳು ಮತ್ತು ರಕ್ಷಣಾ ವ್ಯವಸ್ಥೆಗಳ ಆಧುನೀಕರಣ.
- ರೂ.7,394 ಕೋಟಿ ವೆಚ್ಚದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಪವರ್ ಪ್ಲಾಂಟ್ ಯೋಜನೆ ಅನುಷ್ಠಾನ. PPP ಅಡಿಯಲ್ಲಿ ಹೊಸ 1,000 MW ಪಂಪ್ಡ್ ಸ್ಟೋರೇಜ್ ಪ್ಲಾಂಟ್ ಸ್ಥಾಪನೆ.
- ಪಾವಗಡ ಸೋಲಾರ್ ಪಾರ್ಕ್ನಲ್ಲಿ ಬ್ಯಾಟರಿ ಸಂಗ್ರಹಣೆ ಸೌಲಭ್ಯದೊಂದಿಗೆ 2 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಲಾಂಟ್ ಸ್ಥಾಪನೆ.
ರಸ್ತೆ, ಹೆದ್ದಾರಿ ಅಭಿವೃದ್ಧಿ
- ರಾಜ್ಯ ಕೋರ್ ನೆಟ್ವರ್ಕ್ನಲ್ಲಿ 1,700 ಕಿಮೀ ಉದ್ದದ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ರೂ.2,000 ಕೋಟಿ.
- ಕೆ-ಶಿಪ್ 4 ರ ಅಡಿಯಲ್ಲಿ ರಾಜ್ಯ ಹೆದ್ದಾರಿಯ 2,943 ಕಿಮೀ ಉದ್ದದ ನಿರ್ಮಾಣವನ್ನು ಕೈಗೆತ್ತಿಕೊಳ್ಳಲು ಡಿಪಿಆರ್ ಸಿದ್ಧಪಡಿಸಲಾಗಿದೆ.
- ಪ್ರಮುಖ ಜಿಲ್ಲಾ ಕೇಂದ್ರ ಮತ್ತು ಸಂಪರ್ಕ ಗ್ರಾಮ ರಸ್ತೆಗಳಲ್ಲಿ ಸಂಪರ್ಕ ಕಲ್ಪಿಸಲು 5,000 ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ಧಿ.
- ಬೀದರ್-ಕಲಬುರಗಿ-ಬಳ್ಳಾರಿ ಚತುಷ್ಪಥ ರಸ್ತೆ ಅಭಿವೃದ್ಧಿಗೆ ಕ್ರಮ.
- ಕೊಡಗು ಜಿಲ್ಲೆಯ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್.
ಮೂಲಸೌಕರ್ಯ ಅಭಿವೃದ್ಧಿ
- ರಾಜ್ಯದ ರೈಲ್ವೆ ಯೋಜನೆಗಳಿಗೆ ಕೇಂದ್ರದ ಆಯವ್ಯಯದಲ್ಲಿ 7,561 ಕೋಟಿ ರೂ. ನಿಗದಿ, ವಿವಿಧ ಯೋಜನೆಗಳಿಗೆ ರಾಜ್ಯದ ಪಾಲಿನ 2,647 ಕೋಟಿ ರೂ. ಗಳಿಗೂ ಹೆಚ್ಚು ಅನುದಾನ ಹಂಚಿಕೆ.
- ದಾವಣಗೆರೆ ಮತ್ತು ಕೊಪ್ಪಳ ವಿಮಾನ ನಿಲ್ದಾಣಗಳ ಕಾಮಗಾರಿ ಆರಂಭಿಸಲು ಕ್ರಮ.
- “ಸಾಗರಮಾಲಾ” ಯೋಜನೆಯಡಿಯಲ್ಲಿ 12 ಸಣ್ಣ ಬಂದರುಗಳ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸುವುದು.
- ಉತ್ತರ ಕನ್ನಡ ಜಿಲ್ಲೆಯ ಕೇಣಿ ಮತ್ತು ಪವಿನಕುರ್ವೆಯಲ್ಲಿ ಡೀಪ್ ವಾಟರ್ ಎಲ್ಲಾ ಹವಾಮಾನ ಗ್ರೀನ್ ಫೀಲ್ಡ್ ಬಂದರುಗಳನ್ನು ಅಭಿವೃದ್ಧಿಪಡಿಸಲು ಕ್ರಮ.
- ಹಳೆ ಮಂಗಳೂರು ಬಂದರಿನಲ್ಲಿ ಹೆಚ್ಚುವರಿ ಶಿಪ್ಯಾರ್ಡ್ ಕಾರ್ಯಾಚರಣೆ ಆರಂಭಿಸಲು ಕ್ರಮ.
- ಪ್ರವಾಸೋದ್ಯಮವನ್ನು ಉತ್ತೇಜಿಸಲು ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಸಾಗರ ಅಭಿವೃದ್ಧಿಗೆ ಕ್ರಮ.
- ಗುರುಪುರ ಮತ್ತು ನೇತ್ರಾವತಿ ನದಿಗಳಲ್ಲಿ ನಾಡದೋಣಿಗಳ ಸೇವೆ ಮತ್ತು ಬಾಗಲಕೋಟೆ-ಕಂಕಣವಾಡಿ-ಕದಂಪುರ, ಕಲಬುರಗಿ-ಸನ್ನತಿ, ಶಿವಮೊಗ್ಗ-ಕೋಗರು-ಶಿಗ್ಲು, ಮಂಗಳೂರು-ಹಂಗಾರಕಟ್ಟೆ ಮತ್ತು ಮಂಗಳೂರು-ಕಾರವಾರ-ಗೋವಾ-ಮುಂಬಯಿ ಮೂಲಕ ಜಲಮಾರ್ಗಗಳಲ್ಲಿ ಲಘು ಸರಕು ಸಾಗಣೆ ದೋಣಿ ಸೇವೆಗಳನ್ನು ಅಭಿವೃದ್ಧಿಪಡಿಸಲು ಕ್ರಮಗಳು.
ಕೈಗಾರಿಕೆಗಳಿಗೆ ಉತ್ತೇಜನ
- ಬಹುರಾಷ್ಟ್ರೀಯ ಕಂಪನಿಗಳ ಕಾರ್ಯಾಚರಣೆಯ ಆರಂಭಿಕ ಪ್ರಾರಂಭಕ್ಕಾಗಿ ಬೆಂಗಳೂರಿನ ಸುತ್ತಲೂ ಪ್ಲಗ್ ಮತ್ತು ಪ್ಲೇ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪನೆ.
- ಉತ್ತರ ಕನ್ನಡದ ಕೊಡ್ಕಣಿ, ಬೆಳಗಾವಿಯ ಕಣಗಾಲ, ಚಾಮರಾಜನಗರದ ಬದನಗುಪ್ಪೆ, ಕಲಬುರಗಿಯ ಚಿತ್ತಾಪುರ, ತುಮಕೂರಿನ ಬೈರಗೊಂಡನಹಳ್ಳಿ-ಚಿಕ್ಕನಾಯಕನಹಳ್ಳಿ, ಬೀದರ್ನ ಹುಮನಾಬಾದ್, ರಾಯಚೂರು ಗ್ರಾಮಾಂತರ, ಚಿತ್ರದುರ್ಗ, ಮೊಳಕಾಲ್ಮೂರು,ವಿಜಯಪುರದ ಹೂವಿನಹಿಪ್ಪರಗಿಯಲ್ಲಿ ಹೊಸ ಕೈಗಾರಿಕಾ ವಸಾಹತು ಸ್ಥಾಪನೆ.
- ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಶೇ.4ರ ಬಡ್ಡಿ ದರದಲ್ಲಿ ಒದಗಿಸಲಾದ ಸಾಲದ ಮಿತಿ ರೂ.2 ಕೋಟಿಯಿಂದ ರೂ.5 ಕೋಟಿಗೆ ಏರಿಕೆಯಾಗಿದೆ.
- ಜಿಲ್ಲಾ ಸಮಗ್ರ ಗಣಿ ಬಾಧಿತ ಪರಿಸರದಡಿ 151 ಯೋಜನೆಗಳ ಅನುಷ್ಠಾನ
- ಬಳ್ಳಾರಿ, ಚಿತ್ರದುರ್ಗ, ವಿಜಯನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪುನಶ್ಚೇತನ ಅಭಿವೃದ್ಧಿ ಕಾರ್ಯಕ್ರಮ.
- ಕಲ್ಲು ಕ್ವಾರಿ ಗುತ್ತಿಗೆ ಮಂಜೂರಾತಿ ಸರಳೀಕರಣ. ಕಟ್ಟಡದ ಕಲ್ಲುಗಳ ಗಣಿಗಾರಿಕೆಯನ್ನು ಅವಲಂಬಿಸಿರುವ ಜನರಿಗೆ ಅನುಮತಿಗಳಲ್ಲಿ ವಿನಾಯಿತಿಗಳನ್ನು ಒದಗಿಸಲು ನಿಯಮಗಳ ಸಡಿಲಿಕೆ.
- ರಾಯಚೂರು, ಕಲಬುರಗಿ, ವಿಜಯಪುರ ಮತ್ತು ಚಿಕ್ಕಮಗಳೂರುಗಳಲ್ಲಿ ಮೆಗಾ ಟೆಕ್ಸ್ಟೈಲ್ ಪಾರ್ಕ್ಗಳನ್ನು ಮತ್ತು ರಾಜ್ಯದ 25 ಸ್ಥಳಗಳಲ್ಲಿ ಮಿನಿ ಟೆಕ್ಸ್ಟೈಲ್ ಪಾರ್ಕ್ಗಳನ್ನು ಸ್ಥಾಪಿಸುವುದು. 25 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ.
- ಮಂಡ್ಯದ ಮೈಶುಗರ್ ದಲ್ಲಿ ಎಥೆನಾಲ್ ಉತ್ಪಾದನಾ ಘಟಕ ಸ್ಥಾಪನೆ.
- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರೂ.30 ಕೋಟಿ ವೆಚ್ಚದಲ್ಲಿ ಸ್ಟಾರ್ಟ್ ಅಪ್ ಪಾರ್ಕ್ ಸ್ಥಾಪನೆ.
- ಬೆಂಗಳೂರಿನಲ್ಲಿ ಸಾಂಕ್ರಾಮಿಕ ಸನ್ನದ್ಧತೆ ಕೇಂದ್ರ ಸ್ಥಾಪನೆಗೆ ನೆರವು.
- ರಾಜ್ಯದ 6 ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಉನ್ನತೀಕರಣ.
- ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಸಮನ್ವಯಕ್ಕಾಗಿ ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನದ ಸ್ಥಾಪನೆ.
ವಲಯ 4- ಬೆಂಗಳೂರಿನ ಸಮಗ್ರ ಅಭಿವೃದ್ಧಿ
- ಸಂಚಾರ ದಟ್ಟಣೆ ತಗ್ಗಿಸಲು 75 ಜಂಕ್ಷನ್ಗಳ ಅಭಿವೃದ್ಧಿಗೆ 150 ಕೋಟಿ ರೂ.
- ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿವರೆಗೆ ಎಲಿವೇಟೆಡ್ ರಸ್ತೆ ನಿರ್ಮಾಣ ಮತ್ತು ಯಶವಂತಪುರ ರೈಲು ನಿಲ್ದಾಣದಿಂದ ಮತ್ತಿಕೆರೆವರೆಗೆ ಮತ್ತು ಬಿಇಎಲ್ ರಸ್ತೆವರೆಗೆ ಸಮಗ್ರ ಮೇಲ್ಸೇತುವೆ ನಿರ್ಮಾಣ. 120 ಕಿಮೀ ಆರ್ಟಿರಿಯಲ್ ರಸ್ತೆಯ ವೈಟ್ ಟ್ಯಾಪಿಂಗ್ ಮತ್ತು 300 ಕಿಮೀ ಆರ್ಟಿರಿಯಲ್-ಸಬ್ ಆರ್ಟಿರಿಯಲ್ ರಸ್ತೆಗಳ ಅಭಿವೃದ್ಧಿ.
- 110 ಗ್ರಾಮಗಳ ರಸ್ತೆಗಳ ಪುನರ್ ನಿರ್ಮಾಣಕ್ಕೆ 300 ಕೋಟಿ ರೂ.
- ಬೈಯಪ್ಪನಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ಮೆಟ್ರೊ ಟರ್ಮಿನಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ರಸ್ತೆ ಅಭಿವೃದ್ಧಿಗೆ 300 ಕೋಟಿ ರೂ.
- ಬೆಂಗಳೂರು ಮೆಟ್ರೊ ರೈಲು ಯೋಜನೆಯಡಿ 40.15 ಕಿಮೀ ಮಾರ್ಗದ ಕಾಮಗಾರಿಗೆ ಕ್ರಮ.
- ಸ್ಯಾಟಲೈಟ್ ಟೌನ್ ರಿಂಗ್ ರೋಡ್ ನಿರ್ಮಾಣಕ್ಕೆ ಶೇ.30ರಷ್ಟು ಭೂಸ್ವಾಧೀನವನ್ನು ರಾಜ್ಯ ಸರ್ಕಾರ ಭರಿಸಲಿದೆ.
- ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಅನುದಾನ.
- ಬೆಂಗಳೂರಿನಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ರೂ.3,000 ಕೋಟಿ ವಿಶ್ವಬ್ಯಾಂಕ್ ನೆರವಿನ ಯೋಜನೆಯ ಅನುಷ್ಠಾನ.
- ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತದ ಕಾಮಗಾರಿಗಳನ್ನು ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳಿಸಲು ಕ್ರಮ. 50 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ.
- 110 ಗ್ರಾಮಗಳಿಗೆ 2ನೇ ಹಂತದ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಬಿಡಬ್ಲ್ಯುಎಸ್ಎಸ್ಬಿಗೆ ನೆರವು.
- ನಗರದಲ್ಲಿ ಹೆಚ್ಚುವರಿ 400 ಎಂಎಲ್ಡಿ ಒಳಚರಂಡಿ ಸಂಸ್ಕರಣಾ ಸಾಮರ್ಥ್ಯ ನಿರ್ಮಿಸಲು ಕ್ರಮ.
- ಪ್ರತಿ ವಾರ್ಡ್ನಲ್ಲಿ ಆಧುನಿಕ ವಾಸನೆರಹಿತ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ.
- ಅಮೃತ ನಗರೋತ್ಥಾನದಡಿ ರೂ.180 ಕೋಟಿ ವೆಚ್ಚದ ಶಾಲಾಭಿವೃದ್ಧಿ ಯೋಜನೆಯ ಅನುಷ್ಠಾನ.
- ಬೃಹತ್ ತ್ಯಾಜ್ಯ ಉತ್ಪಾದಕರು ತಮ್ಮದೇ ಮಟ್ಟದಲ್ಲಿ ತ್ಯಾಜ್ಯವನ್ನು ಸಂಸ್ಕರಿಸಲು ಕಡ್ಡಾಯಗೊಳಿಸುವ ಕ್ರಮ.
- ಮಹಿಳೆಯರಿಗಾಗಿ 250 “ಶೀ ಟಾಯ್ಲೆಟ್“ಗಳ ನಿರ್ಮಾಣ.
- ಬೆಂಗಳೂರಿನ ಆರೋಗ್ಯ ಆಡಳಿತ ವ್ಯವಸ್ಥೆಯನ್ನು ಬೆಂಗಳೂರು ಆರೋಗ್ಯ ವ್ಯವಸ್ಥೆಗಳು ಎಂದು ಪುನರ್ ರಚನೆ.
- 3 ಹೈಟೆಕ್ ನರ್ಸರಿ ಸ್ಥಾಪನೆಗೆ ಕ್ರಮ.
- ಬಿಬಿಎಂಪಿ ಆಸ್ತಿಗಳ ಅತಿಕ್ರಮಣ ತಡೆಯಲು ಜಿಪಿಎಸ್ ಕಣ್ಗಾವಲು.
- ಸುರಕ್ಷಿತ ನಗರ ಯೋಜನೆ ಪೂರ್ಣಗೊಳಿಸಲು ಅನುದಾನ.
ವಲಯ 5- ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ
- ಬೆಂಗಳೂರಿನಲ್ಲಿ ಕನ್ನಡ ಮಾತೆ ಶ್ರೀ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮತ್ತು ಥೀಮ್ ಪಾರ್ಕ್ ಅಭಿವೃದ್ಧಿ.
- ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯಲಿದೆ.
- ರಾಜ್ಯದ ಗಡಿ ಭಾಗಗಳ ರಸ್ತೆಗಳ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮೂಲಕ ಅನುದಾನ.
- “ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ” ಕಾರ್ಯಕ್ರಮದಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಜನಪದ ಹಬ್ಬ ನಡೆಯಲಿದೆ.
- ಕನ್ನಡಿಗರ ಹಿತಾಸಕ್ತಿ ಕಾಪಾಡಲು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ ಅನುಷ್ಠಾನ.
ಯುವ ಸಬಲೀಕರಣಕ್ಕೆ ಆದ್ಯತೆ
- “ಬದುಕುವ ದಾರಿ” ಯೋಜನೆಯಡಿ ಶಾಲಾ ಶಿಕ್ಷಣದಿಂದ ಹೊರಗುಳಿದ ಯುವಕರಿಗೆ ಐಟಿಐಗಳಲ್ಲಿ ಮೂರು ತಿಂಗಳ ಅಲ್ಪಾವಧಿ ತರಬೇತಿಗಾಗಿ ರೂ.1,500 ವಿದ್ಯಾರ್ಥಿವೇತನ: 3 ತಿಂಗಳವರೆಗೆ ಅಪ್ರೆಂಟಿಸ್ಶಿಪ್ ಕಾರ್ಯಕ್ರಮದಡಿ ರೂ.1,500 ಸ್ಟೈಫಂಡ್.
- “ಯುವ ಸ್ನೇಹಿ” ಯೋಜನೆಯಡಿ ಮೂರು ವರ್ಷ ಕಳೆದರೂ ಉದ್ಯೋಗ ಸಿಗದ ಪದವೀಧರ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ರೂ.2,000 ಆರ್ಥಿಕ ನೆರವು.
- ರಾಜ್ಯದ ಜಿಲ್ಲೆಗಳು ಮತ್ತು ತಾಲೂಕುಗಳ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಅನುದಾನ.
- ಕರ್ನಾಟಕ ಒಲಿಂಪಿಕ್ ಕನಸು ಯೋಜನೆ ನಿಧಿ ಸ್ಥಾಪನೆಗೆ ರೂ.50 ಕೋಟಿ: ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಪ್ರಾಯೋಜಿಸಲು ಕ್ರಮ.
ಪ್ರವಾಸೋದ್ಯಮ
- ಅಂಜನಾದ್ರಿಬೆಟ್ಟ, ಚಾಮುಂಡಿಬೆಟ್ಟ, ಹಂಪಿ ಸ್ಮಾರಕಗಳ ಅಭಿವೃದ್ಧಿ ಮತ್ತು ಮೈಸೂರು ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ಶಾಶ್ವತ ಸೌಲಭ್ಯ ಅಭಿವೃದ್ಧಿ ಯೋಜನೆ ಅನುಷ್ಠಾನ.
- ಹಂಪಿ ವಿಜಯವಿಟ್ಟಲ ದೇವಸ್ಥಾನ, ವಿಜಯಪುರ ಗೋಲ್ ಗುಂಬಜ್, ಚಿಕ್ಕಬಳ್ಳಾಪುರ ಜಿಲ್ಲೆ ಭೋಗನಂದೀಶ್ವರ ದೇವಸ್ಥಾನ, ಬಾದಾಮಿ ಗುಹೆಗಳು, ಕಿತ್ತೂರು ಮತ್ತು ಬೀದರ್ ಕೋಟೆಗಳ ಅಭಿವೃದ್ಧಿಗೆ 60 ಕೋಟಿ ರೂ.
- ಮೈಸೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಟೇಟ್ ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿ ನಿರ್ಮಾಣ.
- ಹೊನ್ನಾವರದಲ್ಲಿ ಚೆನ್ನಬೈರದೇವಿ ಸ್ಮಾರಕ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು.
- ಸಂತ ಸೇವಾಲಾಲರ ಜನ್ಮಸ್ಥಳ ಸೂರಗೊಂಡನಹಳ್ಳಿ ಅಭಿವೃದ್ಧಿ:
- ಹೊದಿಗೆರೆಯಲ್ಲಿ ಶಹಾಜಿ ಮಹಾರಾಜರ ಸಮಾಧಿ ಅಭಿವೃದ್ಧಿಗೆ ರೂ.5 ಕೋಟಿ ಅನುದಾನ.
- ನಾಡಪ್ರಭು ಕೆಂಪೇಗೌಡ ಪ್ರವಾಸೋದ್ಯಮ ಸರ್ಕ್ಯೂಟ್, ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ.
- ಸಮಗ್ರ ಅಭಿವೃದ್ಧಿ ಸನ್ನತಿ-ಚಂದ್ರಲಾಂಬ ದೇವಸ್ಥಾನ, ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಮತ್ತು ಬನವಾಸಿ ಮಧುಕೇಶ್ವರ ದೇವಸ್ಥಾನ ಸಂಕೀರ್ಣ.
- ಮಳಖೇಡ್ ಕೋಟೆ ಸಂರಕ್ಷಣೆಗೆ ರೂ.20 ಕೋಟಿ ಅನುದಾನ. ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ
- ರಾಜ್ಯದ ಸಿರ್ಸಿಯಲ್ಲಿ ಮೊದಲ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ.
ವಲಯ 6- ಆಡಳಿತ ಸುಧಾರಣೆ ಹಾಗೂ ನಾಗರಿಕ ಸೇವೆಗಳು
- ಸರ್ಕಾರಿ ಭೂಮಿಯಲ್ಲಿ ತೋಟದ ಬೆಳೆ ಬೆಳೆಯುವವರಿಗೆ 25 ಎಕರೆ ಗರಿಷ್ಠ ಸೀಲಿಂಗ್ಗೆ 30 ವರ್ಷಗಳವರೆಗೆ ಭೂಮಿಯನ್ನು ಗುತ್ತಿಗೆ ನೀಡಲು ಭೂ ಕಂದಾಯ ಕಾಯ್ದೆಯಡಿ ನಿಯಮಗಳ ರಚನೆ.
- ಪ್ರಸಕ್ತ ವರ್ಷದಲ್ಲಿ 3,000 ಫೋಡಿಮುಕ್ತ ಗ್ರಾಮಗಳ ಗುರಿ.
- ಗ್ರಾಮ ಸಹಾಯಕರ ಹುದ್ದೆಗೆ ಜನಸೇವಕ ಎಂದು ಮರುನಾಮಕರಣ.. ಸರ್ಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿಯನ್ನುವಹಿಸಲಾಗಿದೆ. ಗ್ರಾಮ ಸಹಾಯಕರ ಮಾಸಿಕ ಗೌರವಧನ ರೂ.1,000 ಹೆಚ್ಚಳ.
- ದತ್ತಿ ಇಲಾಖೆಯ ಮೂಲಕ ದೇವಾಲಯಗಳು ಮತ್ತು ಮಠಗಳ ಜೀರ್ಣೋದ್ಧಾರಕ್ಕೆ ಅನುದಾನ.
- ದತ್ತಿ ಇಲಾಖೆಯ ದೇವಾಲಯಗಳ ಇನಾಂ ಜಮೀನುಗಳ ವರ್ಷಾಶನವನ್ನು 48,000 ರೂ.ಗಳಿಂದ 60,000 ರೂ.ಗಳಿಗೆ ಹೆಚ್ಚಳ.
- ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆ ಹಂತ-3 ಕ್ಕೆ ರೂ.150 ಕೋಟಿ.
- ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೆ-ಜಿಐಎಸ್ ತಂತ್ರಜ್ಞಾನದ ಮೂಲಕ ವೈಜ್ಞಾನಿಕ ಮಾರ್ಗದರ್ಶನ ಮೌಲ್ಯ ವ್ಯವಸ್ಥೆಯ ಅನುಷ್ಠಾನ.
- 3ನೇ ಹಂತದ ದತ್ತಾಂಶ ಕೇಂದ್ರ ಸ್ಥಾಪನೆ.
- ರಾಜ್ಯದ 2ನೇ ಹಂತದ ನಗರಗಳಲ್ಲಿ 100 ರಿಂದ 200 ಸಾಮರ್ಥ್ಯದ ಮಿನಿ ಥಿಯೇಟರ್ ನಿರ್ಮಾಣಕ್ಕೆ ಉತ್ತೇಜನ ನೀಡುವುದು.
- ಬೆಂಗಳೂರು ನಗರದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ವಿವಿಧ ಹಂತಗಳಲ್ಲಿ 2,000 ಹುದ್ದೆಗಳನ್ನು ಸೃಷ್ಟಿಸಲಾಗುವುದು.
- ಪೊಲೀಸ್ ಗೃಹ ಯೋಜನೆಯಡಿ 3,000 ಮನೆಗಳ ನಿರ್ಮಾಣ.
- ತುಮಕೂರು ಮತ್ತು ಶಿವಮೊಗ್ಗದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ನಿರ್ಮಾಣ.ಧಾರವಾಡದಲ್ಲಿರುವ ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯ.
- ಕೆ-ಸೇಫ್ 2 ಯೋಜನೆಯಡಿ ಭದ್ರತಾ ಸಲಕರಣೆಗಳು ಮತ್ತು ಇತರ ಸೌಲಭ್ಯಗಳಿಗಾಗಿ ರೂ.100 ಕೋಟಿ ಅನುದಾನ.
- ಗೃಹರಕ್ಷಕ ದಳದ ಗೌರವಧನ ದಿನಕ್ಕೆ 100 ರೂ ಹೆಚ್ಚಳ.
- ಸರ್ಕಾರಿ ವೆಬ್ಸೈಟ್ಗಳು, ಆನ್ಲೈನ್ ಸೇವೆಗಳು ಮತ್ತು ಡೇಟಾ ಸೆಂಟರ್ಗಳ ಭದ್ರತೆಗಾಗಿ ಸೈಬರ್ ಸೆಕ್ಯುರಿಟಿ ಆಪರೇಷನ್ ಸೆಂಟರ್ ಸ್ಥಾಪನೆ.
- ‘ಮುಖ್ಯ ಮಂತ್ರಿ ವಿಮಾ ಯೋಜನೆ’ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಲಾರಿ ಚಾಲಕರು ಮತ್ತು ಇಕಾಮರ್ಸ್ಗೆ ಡೆಲಿವರಿ ಸೇವೆ ನೀಡುತ್ತಿರುವವರಿಗೆ ರೂ.4 ಲಕ್ಷ ವಿಮಾ ಸೌಲಭ್ಯ. 16.50 ಲಕ್ಷ ಜನರಿಗೆ ಲಾಭ.
- 19 ಲಕ್ಷ ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ನಿಗಮಗಳಿಂದ 100 ಕೋಟಿ ರೂ. ವೆಚ್ಚದಲ್ಲಿ 1,000 ಹೊಸ ಕಾರ್ಯಾಚರಣೆಗೆ ಕ್ರಮ. 2 ಲಕ್ಷ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅನುಕೂಲ.
- ತುಮಕೂರು, ಹಾವೇರಿ, ಯಲಹಂಕ, ಕಸ್ತೂರಿನಗರ (ಬೆಂಗಳೂರು ಪೂರ್ವ), ಸಕಲೇಶಪುರ, ಕೆಜಿಎಫ್, ಚಿಂತಾಮಣಿ, ಸಾಗರ, ಗೋಕಾಕ್, ರಾಣೆಬೆನ್ನೂರು, ದಾಂಡೇಲಿ, ಸಿರ್ಸಿ ಮತ್ತು ಭಾಲ್ಕಿ ನಗರಗಳಲ್ಲಿ ಸ್ವಯಂಚಾಲಿತ ಚಾಲನಾ ಪರವಾನಗಿ ಪರೀಕ್ಷಾ ಟ್ರ್ಯಾಕ್ಗಳ ನಿರ್ಮಾಣಕ್ಕೆ ರೂ.85 ಕೋಟಿ.
- ಸರ್ಕಾರಿ ಕಚೇರಿಗಳು ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಉಪಕ್ರಮ
ತೆರಿಗೆ ಪ್ರಸ್ತಾವನೆಗಳು:
- ವೃತ್ತಿ ತೆರಿಗೆ ಅಧಿನಿಯಮ ಸರಳೀಕರಣ; ಕಡಿಮೆ ವರಮಾನ ಪಡೆಯುವ ನೌಕರರಿಗೆ ತೆರಿಗೆ ವಿನಾಯಿತಿ ಮಿತಿ ಮಾಸಿಕ 15,000 ರೂ. ಗಳಿಂದ 25,000 ರೂ. ಗಳಿಗೆ ಏರಿಕೆ,
- ಜಿ.ಎಸ್.ಟಿ. ಪೂರ್ವ ತೆರಿಗೆ ವಿವಾದ ಇತ್ಯರ್ಥಗೊಳಿಸಲು ಕರ ಸಮಾಧಾನ ಯೋಜನೆ.
2023-24ನೇ ಸಾಲಿಗೆ ವಿವಿಧ ಇಲಾಖೆಗಳಿಗೆ ನಿಗದಿ ಪಡಿಸಿದ ತೆರಿಗೆ ರಾಜಸ್ವ ಸಂಗ್ರಹ ಗುರಿ:
- ವಾಣಿಜ್ಯ ತೆರಿಗೆ ಇಲಾಖೆ-ಜಿಎಸ್ಟಿ ಪರಿಹಾರವನ್ನು ಹೊರತುಪಡಿಸಿ ರೂ.92,000 ಕೋಟಿ
- ನೋಂದಣಿ ಮತ್ತು ಮುದ್ರಾಂಕ – 19,000 ಕೋಟಿ ರೂ
- ಅಬಕಾರಿ ಇಲಾಖೆ – 35,000 ಕೋಟಿ ರೂ
- ಸಾರಿಗೆ ಇಲಾಖೆ – 10,500 ಕೋಟಿ ರೂ
- ಗಣಿ ಮತ್ತು ಭೂವಿಜ್ಞಾನ ಇಲಾಖೆ – 7,500 ಕೋಟಿ ರೂ