Published on: March 1, 2022
ಉಕ್ರೇನ್
ಉಕ್ರೇನ್
ಗಾತ್ರದಲ್ಲೂ, ಶಕ್ತಿಯಲ್ಲೂ ತನಗೆ ಸಮಬಲಕ್ಕಿಲ್ಲದ ಉಕ್ರೇನ್ ಮೇಲೆ ರಷ್ಯಾ ಮುಗಿಬಿದ್ದಿದೆ. ವೈದ್ಯಕೀಯ ಶಿಕ್ಷಣಕ್ಕೆ ಹೆಸರಾದ, ಆ ಭಾಗದ ಆಹಾರದ ಬುಟ್ಟಿ ಎಂದೇ ಖ್ಯಾತವಾದ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿರುವುದು ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಬರೆದಿದೆ ಎಂದು ವ್ಯಾಖ್ಯಾನಿಸಲಾಗಿದೆ.
ಉಕ್ರೇನ್ ಬಗ್ಗೆ
- ಕೇವಲ 4 ಮಿಲಿಯನ್ ಚದರ ಕಿ.ಮೀ. ವಿಸ್ತೀರ್ಣ ಹಾಗೂ 43.7 ಮಿಲಿಯನ್ ಜನಸಂಖ್ಯೆ ಹೊಂದಿರುವ, ಕಬ್ಬಿಣದ ಅದಿರು ಮತ್ತು ಕಲ್ಲಿದ್ದಲಿನಂತಹ ಪ್ರಾಕೃತಿಕ ಖನಿಜ ಸಂಪತ್ತು ಹೇರಳವಾಗಿರುವ ಉಕ್ರೇನ್ಗೆ ಮಹತ್ವ ವಿದೆ.
- ಸಣ್ಣದೆಂದರೆ, ತೀರಾ ಸಣ್ಣದೇನೂ ಅಲ್ಲ, ಏಕೆಂದರೆ, ವಿಸ್ತೀರ್ಣ ಹಾಗೂ 40 ಮಿಲಿಯನ್ಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶಗಳ ಪೈಕಿ ಅದು ಯುರೋಪಿನ ಎರಡನೇ ಅತಿ ದೊಡ್ಡ ದೇಶ. ಅಂದರೆ, ಪೋಲಂಡ್ಗಿಂತಲೂ ಹೆಚ್ಚು.
ಉಕ್ರೇನ್ ಸಾಧನೆ ಮತ್ತು ಸಮೃದ್ಧಿ ಈ ಕೆಳಗಿನ ಕ್ಷೇತ್ರಗಳಲ್ಲಿ ಉಲ್ಲೇಖನೀಯವಾಗಿದೆ:
- ನವೀಕರಿಸಬಹುದಾದ ಸಂಪನ್ಮೂಲಗಳ ನಿಕ್ಷೇಪಗಳಲ್ಲಿ ಯುರೇನಿಯಂ ಅದಿರಿನಲ್ಲಿ ಉಕ್ರೇನ್ ಯುರೋಪಿನಲ್ಲೇ ಮೊದಲ ಸ್ಥಾನದಲ್ಲಿದೆ.
- ಟೈಟಾನಿಯಂ ಅದಿರು ನಿಕ್ಷೇಪಗಳಲ್ಲಿ ಯುರೋಪಿನಲ್ಲಿ 2ನೇ ಹಾಗೂ ವಿಶ್ವದಲ್ಲಿ 10ನೇ ಸ್ಥಾನ.
- ಮ್ಯಾಂಗನೀಸ್ ಅದಿರು ನಿಕ್ಷೇಪಗಳಲ್ಲಿಯೂ (2.3 ಬಿಲಿಯನ್ ಟನ್ ಅಥವಾ ಜಗತ್ತಿನ ನಿಕ್ಷೇಪಗಳ 12% ಪ್ರಮಾಣ) ವಿಶ್ವದಲ್ಲಿ 2ನೇ ಸ್ಥಾನ.
- ಕಬ್ಬಿಣದ ಅದಿರು ನಿಕ್ಷೇಪಗಳಲ್ಲೂ ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ ( 30 ಬಿಲಿಯನ್ ಟನ್ಗಳು);
- ಪಾದರಸ ಅದಿರು ನಿಕ್ಷೇಪಗಳಲ್ಲಿ ಯುರೋಪ್ನಲ್ಲಿ 2ನೇ ಸ್ಥಾನ.
- ಶೇಲ್ ಗ್ಯಾನ್ ನಿಕ್ಷೇಪಗಳಲ್ಲಿ ಯುರೋಪ್ನಲ್ಲಿ 3ನೇ ಹಾಗೂ ಜಾಗತಿಕವಾಗಿ 13ನೇ ಸ್ಥಾನ (12 ಟ್ರಿಲಿಯನ್ ಘನ ಮೀಟರ್ಗಳು)
- ಜಗತ್ತಿನ ಒಟ್ಟು ನೈಸರ್ಗಿಕ ಸಂಪನ್ಮೂಲಗಳ ಪೈಕಿ 4ನೇ ಸ್ಥಾನದಲ್ಲಿದೆ;
- ಕಲ್ಲಿದ್ದಲು ನಿಕ್ಷೇಪಗಳಲ್ಲಿ (33.9 ಬಿಲಿಯನ್ ಟನ್ಗಳು) ಜಗತ್ತಿನಲ್ಲಿ 7ನೇ ಸ್ಥಾನದಲ್ಲಿದೆ
ಮುಖ್ಯವಾಗಿ, ಉಕ್ರೇನ್ ಕೃಷಿ ಪ್ರಧಾನವಾದ ದೇಶವಾಗಿದೆ:
- ಕೃಷಿಯೋಗ್ಯ ಭೂ ಪ್ರದೇಶದಲ್ಲಿ ಯುರೋಪ್ನಲ್ಲೇ 1ನೇ ಸ್ಥಾನದಲ್ಲಿದೆ
- ಫಲವತ್ತಾದ ಮಣ್ಣನ್ನು ಹೊಂದಿರುವ ದೇಶಗಳಲ್ಲಿ ಮೂರನೇ ಸ್ಥಾನದಲ್ಲಿದೆ (ವಿಶ್ವದ ಒಟ್ಟು ಕಪ್ಪು ಮಣ್ಣಿನ 25% ಉಕ್ರೇನ್ನಲ್ಲೇ ಇದೆ)
- ಸೂರ್ಯಕಾಂತಿ ಬೀಜ ಹಾಗೂ ಸೂರ್ಯಕಾಂತಿ ಎಣ್ಣೆಗಳ ರಫ್ತಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಭಾರತವೂ ಉಕ್ರೇನ್ನಿಂದ ಸೂರ್ಯಕಾಂತಿ ಎಣ್ಣೆಯನ್ನು ಅಧಿಕ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ
- ಬಾರ್ಲಿ ಉತ್ಪಾದನೆಯಲ್ಲಿ ವಿಶ್ವದಲ್ಲಿ 2ನೇ ಸ್ಥಾನ ಮತ್ತು ಬಾರ್ಲಿ ರಫ್ತುಗಳಲ್ಲಿ 4ನೇ ಸ್ಥಾನ
- ವಿಶ್ವದ 3ನೇ ಅತಿದೊಡ್ಡ ಜೋಳ ಉತ್ಪಾದಕ ಮತ್ತು 4ನೇ ಅತಿದೊಡ್ಡ ಜೋಳ ರಫ್ತುದಾರ ದೇಶವಾಗಿದೆ
- ಆಲೂಗಡ್ಡೆ ಉತ್ಪಾದನೆಯಲ್ಲೂ ವಿಶ್ವದಲ್ಲಿ ಉಕ್ರೇನ್ 4ನೇ ಸ್ಥಾನದಲ್ಲಿದೆ
- ಸಣ್ಣ ಗೋಧಿ (ರೈ) ಉತ್ಪಾದನೆಯ ಪ್ರಮಾಣದಲ್ಲಿ ವಿಶ್ವದಲ್ಲಿ 5ನೇ ಸ್ಥಾನವಿದೆ
- ಜೇನು ಉತ್ಪಾದನೆಯಲ್ಲಿ ವಿಶ್ವದಲ್ಲಿ 5ನೇ ಸ್ಥಾನ (75,000 ಟನ್)
- ಗೋಧಿ ರಫ್ತಿನಲ್ಲಿ ವಿಶ್ವದಲ್ಲಿ 8ನೇ ಸ್ಥಾನ
- ಕೋಳಿ ಮೊಟ್ಟೆಗಳ ಉತ್ಪಾದನೆಯಲ್ಲಿ ವಿಶ್ವದಲ್ಲಿ 9ನೇ ಸ್ಥಾನ
- ಚೀಸ್ ರಫ್ತಿನಲ್ಲಿ ವಿಶ್ವದಲ್ಲಿ 16ನೇ ಸ್ಥಾನ.
ಈ ಎಲ್ಲದರ ಮೂಲಕ ಉಕ್ರೇನ್ 600 ಮಿಲಿಯನ್ ಜನರ ಆಹಾರ ಅಗತ್ಯಗಳನ್ನು ಪೂರೈಸುತ್ತದೆ. ಕೈಗಾರಿಕೀಕರಣ ಹೊಂದಿದ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಉಕ್ರೇನ್ ಕೂಡ ಒಂದು.
- ಅಮೋನಿಯಾ ಉತ್ಪಾದನೆಯಲ್ಲಿ ಯುರೋಪ್ನಲ್ಲಿ 1ನೇ ಸ್ಥಾನ
- ಯುರೋಪ್ನ 2ನೇ ಮತ್ತು ವಿಶ್ವದ 4ನೇ ಅತಿ ದೊಡ್ಡ ನೈಸರ್ಗಿಕ ಅನಿಲ ಪೈಪ್ಲೈನ್ ವ್ಯವಸ್ಥೆಯನ್ನು ಉಕ್ರೇನ್ ಹೊಂದಿದೆ
- ಪರಮಾಣು ವಿದ್ಯುತ್ ಸ್ಥಾವರಗಳ ಸ್ಥಾಪಿತ ಸಾಮರ್ಥ್ಯದ ವಿಷಯದಲ್ಲಿ ಯುರೋಪ್ನ 3ನೇ ಅತಿದೊಡ್ಡ ಮತ್ತು ಪ್ರಪಂಚದಲ್ಲಿ 8ನೇ ಅತಿದೊಡ್ಡ ರಾಷ್ಟ್ರವಾಗಿದೆ
- ವಿಸ್ತಾರವಾದ (21,700 ಕಿ.ಮೀ.) ರೈಲು ಜಾಲವನ್ನೂ ಉಕ್ರೇನ್ ಹೊಂದಿದೆ. ಈ ಸೌಲಭ್ಯದಲ್ಲಿ ಯುರೋಪ್ನಲ್ಲಿ 3ನೇ ಹಾಗೂ ಪ್ರಪಂಚದಲ್ಲಿ 11ನೇ ಸ್ಥಾನದಲ್ಲಿದೆ
- ಲೊಕೇಟರ್ಗಳು ಮತ್ತು ಲೊಕೇಟಿಂಗ್ ಉಪಕರಣಗಳ ಉತ್ಪಾದನೆಯಲ್ಲಿ ವಿಶ್ವದಲ್ಲಿ 3ನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಫ್ರಾನ್ಸ್ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ
- ಅತಿದೊಡ್ಡ ಕಬ್ಬಿಣದ ರಫ್ತುದಾರ ದೇಶಗಳ ಪೈಕಿ ಉಕ್ರೇನ್ಗೆ ವಿಶ್ವದಲ್ಲಿ 3ನೇ ಸ್ಥಾನವಿದೆ.
- ಪರಮಾಣು ವಿದ್ಯುತ್ ಸ್ಥಾವರಗಳಿಗೆ ಟರ್ಬೈನ್ಗಳ ಪೂರೈಕೆಯಲ್ಲಿ ಅದು ವಿಶ್ವದಲ್ಲೇ 4ನೇ ಸ್ಥಾನದಲ್ಲಿದೆ
- ರಾಕೆಟ್ ಲಾಂಚರ್ಗಳ ತಯಾರಿಕೆಯಲ್ಲಿ ವಿಶ್ವದಲ್ಲೇ 4ನೇ ಸ್ಥಾನದಲ್ಲಿದೆ
- ಮಣ್ಣಿನ ರಫ್ತಿನಲ್ಲಿ ವಿಶ್ವದಲ್ಲಿ 4ನೇ ಸ್ಥಾನ
- ಟೈಟಾನಿಯಂ ರಫ್ತಿನಲ್ಲಿ ವಿಶ್ವದಲ್ಲಿ 4ನೇ ಸ್ಥಾನ
- ಅದಿರು ಮತ್ತು ಸಾಂದ್ರೀಕರಣದ ರಫ್ತಿನಲ್ಲಿ ವಿಶ್ವದಲ್ಲಿ 8ನೇ ಸ್ಥಾನ
- ರಕ್ಷಣಾ ಉದ್ಯಮ ಉತ್ಪನ್ನಗಳ ರಫ್ತಿನಲ್ಲಿ ವಿಶ್ವದಲ್ಲಿ 9ನೇ ಸ್ಥಾನ
- ಉಕ್ಕು ಉತ್ಪಾದಕ ರಾಷ್ಟ್ರಗಳ ಪೈಕಿ ವಿಶ್ವದಲ್ಲಿ 10ನೇ ಸ್ಥಾನ (32.4 ಮಿಲಿಯನ್ ಟನ್) ಉಕ್ರೇನ್ಗಿದೆ.
ಭಾರತ-ಉಕ್ರೇನ್ ಸಂಬಂಧಗಳು:
ರಾಜತಾಂತ್ರಿಕ ಸಂಬಂಧಗಳು:
- ಸೋವಿಯತ್ ಒಕ್ಕೂಟದ ವಿಭಜನೆಯ ನಂತರ, ಭಾರತ ಸರ್ಕಾರವು ಡಿಸೆಂಬರ್ 1991 ರಲ್ಲಿ ಉಕ್ರೇನ್ ಗಣರಾಜ್ಯವನ್ನು ಸಾರ್ವಭೌಮ ಸ್ವತಂತ್ರ ರಾಷ್ಟ್ರವೆಂದು ಗುರುತಿಸಿತು.
- ಕೈವ್ನಲ್ಲಿ ಭಾರತದ ರಾಯಭಾರ ಕಚೇರಿಯನ್ನು ಮೇ 1992 ರಲ್ಲಿ ಸ್ಥಾಪಿಸಲಾಯಿತು ಮತ್ತು ಉಕ್ರೇನ್ ತನ್ನ ರಾಯಭಾರ ಕಚೇರಿಯನ್ನು ಫೆಬ್ರವರಿ 1993 ರಲ್ಲಿ ನವದೆಹಲಿಯಲ್ಲಿ ತೆರೆಯಿತು.
- ಭಾರತ ಮತ್ತು ಉಕ್ರೇನ್ ಬೆಚ್ಚಗಿನ ಮತ್ತು ಸೌಹಾರ್ದ ಸಂಬಂಧವನ್ನು ಆನಂದಿಸುತ್ತವೆ ಮತ್ತು ಶಿಕ್ಷಣ, ಪರಸ್ಪರ ಕಾನೂನು ನೆರವು ಮತ್ತು ಬಾಹ್ಯಾಕಾಶ ಸಹಕಾರದಂತಹ ಕ್ಷೇತ್ರಗಳಲ್ಲಿ ಸಹಕರಿಸುತ್ತವೆ.
ರಕ್ಷಣಾ ಸಂಬಂಧಗಳು:
- ಉಕ್ರೇನ್ ತನ್ನ ಸ್ವಾತಂತ್ರ್ಯದ ನಂತರ ಭಾರತಕ್ಕೆ ಮಿಲಿಟರಿ ತಂತ್ರಜ್ಞಾನ ಮತ್ತು ಸಲಕರಣೆಗಳ ಮೂಲವಾಗಿದೆ.
- ಉಕ್ರೇನ್ ತನ್ನ SU-30MKI ಫೈಟರ್ಗಳಲ್ಲಿ IAF ಬಳಸುತ್ತಿರುವ R-27 ಗಾಳಿಯಿಂದ ಗಾಳಿ ಕ್ಷಿಪಣಿಗಳನ್ನು ತಯಾರಿಸುತ್ತದೆ.
- ಇದೀಗ ಭಾರತವೂ ಉಕ್ರೇನ್ಗೆ ತನ್ನ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದು, ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ವೃದ್ಧಿಸುತ್ತಿದೆ.
ವ್ಯಾಪಾರ:
- ಭಾರತವು ಏಷ್ಯಾ-ಪೆಸಿಫಿಕ್ನಲ್ಲಿ ಉಕ್ರೇನ್ನ ಅತಿದೊಡ್ಡ ರಫ್ತು ತಾಣವಾಗಿದೆ ಮತ್ತು ಒಟ್ಟಾರೆ ರಫ್ತು ತಾಣಗಳಲ್ಲಿ ಐದನೇ ದೊಡ್ಡದೇಶವಾಗಿದೆ.
- ಉಕ್ರೇನ್ಗೆ ಭಾರತೀಯ ಫಾರ್ಮಾಸ್ಯುಟಿಕಲ್ಸ್ ಹೆಚ್ಚಿನ ರಫ್ತುಗಳನ್ನು ಹೊಂದಿದೆ.
ಸಂಸ್ಕೃತಿ:
- 30 ಕ್ಕೂ ಹೆಚ್ಚು ಉಕ್ರೇನಿಯನ್ ಸಾಂಸ್ಕೃತಿಕ ಸಂಘಗಳು/ಗುಂಪುಗಳು ದೇಶದಾದ್ಯಂತ ಹರಡಿಕೊಂಡಿವೆ, ಭಾರತೀಯ ನೃತ್ಯಗಳನ್ನು ಉತ್ತೇಜಿಸಲು ತೊಡಗಿವೆ.
- ಉಕ್ರೇನ್ನಲ್ಲಿ ಮುಖ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು 18,000 ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಭಾರತೀಯ ವ್ಯಾಪಾರ ವೃತ್ತಿಪರರು ಮುಖ್ಯವಾಗಿ ಫಾರ್ಮಾಸ್ಯುಟಿಕಲ್ಸ್, ಐಟಿ, ಇಂಜಿನಿಯರಿಂಗ್, ಔಷಧ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ.
ITEC ನೆರವು/ಇತರ ತರಬೇತಿ ಕಾರ್ಯಕ್ರಮಗಳು
ಭಾರತವು ಉಕ್ರೇನ್ಗೆ ಈ ಕೆಳಗಿನ ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತದೆ:
- ITEC (ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ) ಕಾರ್ಯಕ್ರಮ, ಇದು ಭಾರತದಲ್ಲಿನ ವಿವಿಧ ಕೇಂದ್ರಗಳಲ್ಲಿ ತರಬೇತಿ ಅಥವಾ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳನ್ನು ನೀಡುತ್ತದೆ.
- ICCR (ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್) ವಿದ್ಯಾರ್ಥಿವೇತನ, ಇದು ಪ್ರಖ್ಯಾತ ಭಾರತೀಯ ಸಂಸ್ಥೆಗಳಲ್ಲಿ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡ ಉನ್ನತ ಮಟ್ಟದ ಶಿಕ್ಷಣಗಳನ್ನು ನೀಡುತ್ತದೆ.
- ಕೇಂದ್ರೀಯ ಹಿಂದಿ ಸಂಸ್ಥಾನ ಶಿಷ್ಯವೇತನ ಪ್ರೋಗ್ರಾಂ, ಇದು ಉನ್ನತ ಮಟ್ಟದ ಹಿಂದಿ ಭಾಷಾ ಕೋರ್ಸ್ಗಳನ್ನು ಮುಂದುವರಿಸಲು ವಿದೇಶಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ.