ಕ್ಷಿಪಣಿಗಳು
ಕ್ಷಿಪಣಿಗಳು
ಸುದ್ದಿಯಲ್ಲಿ ಏಕಿದೆ? ಭಾರತೀಯ ರಕ್ಷಣಾ ಪಡೆಗಳು ಇತ್ತೀಚಿಗೆ DRDO ದೇಶೀಯವಾಗಿ ಅಭಿವೃದ್ಧಿಪಡಿಸಿದ ಟಾರ್ಪೆಡೋ ವರುಣಾಸ್ತ್ರ ಮತ್ತು ಅಗ್ನಿ 1 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿತು.
ಪರಿಚಯ
- ರಕ್ಷಣಾ ಕ್ಷೇತ್ರದ ಸಂಶೋಧನೆಯೂ ಮುಖ್ಯವಾಗಿ ಕ್ಷಿಪಣಿ ಅಭಿವೃದ್ಧಿಯ ಕಾರ್ಯವನ್ನು ಮುಖ್ಯ ಧ್ಯೇಯವಾಗಿ ಹೊಂದಿರುತ್ತದೆ. 1958 ರಲ್ಲಿ ಸ್ಥಾಪಿತವಾದ ಡಿಆರ್ಡಿಓ ಭಾರತದಲ್ಲಿ ರಕ್ಷಣಾ ಸಂಶೋಧನಾ ವ್ಯವಸ್ಥೆಯ ಕೇಂದ್ರ ಸಂಸ್ಥೆಯಾಗಿದ್ದು ಇದು ಡಾ. ಅಬ್ದುಲ್ ಕಲಾಂ ನೇತೃತ್ವದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿತು. ಇವರು ತಮ್ಮ ಸೇವೆಯ ಕಾಲಾವಧಿಯಲ್ಲಿ ಸಂಶೋಧನಾ ಆಧಾರಿತ ರಕ್ಷಣಾ ಸಂಸ್ಥೆಗಳನ್ನು ಒಗ್ಗೂಡಿಸಿದರು. ಹಾಗಾಗಿ ಕಲಾಂರವರನ್ನು ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಎಂದು ಕರೆಯುತ್ತಾರೆ.
- 1983 ರಲ್ಲಿ ಡಿಆರ್ಡಿಓ ಸಮಗ್ರ ನಿರ್ದೇಶಿತ ಕ್ಷಿಪಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಇದರಡಿಯಲ್ಲಿ 5 ವಿವಿಧ ರೀತಿಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದೆ. ಅವುಗಳೆಂದರೆ ಪೃಥ್ವಿ ಅಗ್ನಿ ತ್ರಿಶೂಲ ಆಕಾಶ ಮತ್ತು ನಾಗ.
- ಒರಿಸ್ಸಾ ಬಳಿಯ ಚಂಡಿಪುರದ ಮಧ್ಯಂತರ ವ್ಯಾಪ್ತಿಯ ಪರೀಕ್ಷಾ ಸೌಲಭ್ಯ ಕೇಂದ್ರದಿಂದ ಪರೀಕ್ಷಿಸಲಾಗುತ್ತದೆ. ಸ್ವದೇಶಿ ಕ್ಷಿಪಣಿ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ರಾಷ್ಟ್ರಗಳೆಂದರೆ ರಷ್ಯಾ ಯುಎಸ್ಎ ಫ್ರಾನ್ಸ್ ಚೈನಾ ಇಸ್ರೇಲ್, ಭಾರತವು ಈ ತಂತ್ರಜ್ಞಾನ ಹೊಂದುವುದರಲ್ಲಿ ಆರನೇ ರಾಷ್ಟ್ರವಾಗಿದೆ.
ಕ್ಷಿಪಣಿ ಎಂದರೇನು ?
- ಕ್ಷಿಪಣಿ ಮಿಲಿಟರಿ ಪರಿಭಾಷೆಯಲ್ಲಿ, ಕ್ಷಿಪಣಿಯು ಮಾರ್ಗದರ್ಶಿ ವಾಯುಗಾಮಿ ವ್ಯಾಪ್ತಿಯ ಆಯುಧವಾಗಿದ್ದು, ಸಾಮಾನ್ಯವಾಗಿ ಜೆಟ್ ಇಂಜಿನ್ ಅಥವಾ ರಾಕೆಟ್ ಮೋಟರ್ ಮೂಲಕ ಸ್ವಯಂ ಚಾಲಿತ ಹಾರಾಟದ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಕ್ಷಿಪಣಿಗಳನ್ನು ಮಾರ್ಗದರ್ಶಿ ಕ್ಷಿಪಣಿಗಳು ಅಥವಾ ಮಾರ್ಗದರ್ಶಿ ರಾಕೆಟ್ಗಳು ಎಂದೂ ಕರೆಯುತ್ತಾರೆ.
- ಕ್ಷಿಪಣಿಗಳು ಐದು ಸಿಸ್ಟಮ್ ಘಟಕಗಳನ್ನು ಹೊಂದಿವೆ: ಗುರಿ, ಮಾರ್ಗದರ್ಶನ ವ್ಯವಸ್ಥೆ, ವಿಮಾನ ವ್ಯವಸ್ಥೆ, ಎಂಜಿನ್ ಮತ್ತು ಸಿಡಿತಲೆ.
ಕ್ಷಿಪಣಿಗಳನ್ನು ನಾಲ್ಕು ವಿಧಗಳಲ್ಲಿ ವರ್ಗಿಕರಿಸಬಹುದು
- ಶಬ್ದದ ವೇಗದ ಆಧಾರಿತ ಕ್ಷಿಪಣಿಗಳು
- ವ್ಯಾಪ್ತಿ ಆಧಾರಿತ ಕ್ಷಿಪಣಿಗಳು
- ಕ್ಷಿಪಣಿಗಳನ್ನು ಉಡಾಯಿಸುವ ತಾಣ ಹಾಗೂ ತಲುಪುವ ತಾಣ ಆಧಾರದ ಮೇಲೆ
- ಕ್ಷಿಪಣಿಗಳು ಚಲಿಸುವ ಪತದ ಆಧಾರದ ಮೇಲೆ ಅಥವಾ ಇಂಜಿನ್ ಆಧಾರಿತ
1) ಶಬ್ದದ ವೇಗದ ಆಧಾರಿತ ಕ್ಷಿಪಣಿಗಳು
- A ಸಬ್ ಸೋನಿಕ್ : ಶಬ್ದದ ವೇಗಕ್ಕಿಂತ ಕಡಿಮೆ (೦.8 ಮ್ಯಾಕ್) ವೇಗವನ್ನು ಹೊಂದಿರುವ ಕ್ಷಿಪಣಿಗಳಾಗಿವೆ. ಉದಾ: ಅಮೇರಿಕನ್ ಟೊಮಾಹಾಕ್ ಕ್ರೂಸ್ ಕ್ಷಿಪಣಿ, USAನ ಹಾರ್ಪೂನ್ ಮತ್ತು ಫ್ರಾನ್ಸ್ನ ಎಕ್ಸೋಸೆಟ್.
- B ಸೂಪರ್ ಸೋನಿಕ್ : ಶಬ್ದದ ವೇಗಕ್ಕಿಂತ ಹೆಚ್ಚು ( 1 – 5 ಮ್ಯಾಕ್) ವೇಗವನ್ನು ಹೊಂದಿರುವ ಕ್ಷಿಪಣಿಗಳಾಗಿವೆ
ಉದಾ: ಬ್ರಹ್ಮೋಸ್
- C ಹೈಪರ್ ಸೋನಿಕ್ : ಶಬ್ದದ ವೇಗಕ್ಕಿಂತ ಹೆಚ್ಚು ( 5 ಮ್ಯಾಕ್ ಕ್ಕಿಂತ ಹೆಚ್ಚು ) ವೇಗವನ್ನು ಹೊಂದಿರುವ ಕ್ಷಿಪಣಿಗಳಾಗಿವೆ
ಉದಾ: ಅಗ್ನಿ V (ವೇಗ 24 ಮ್ಯಾಕ್)
2) ವ್ಯಾಪ್ತಿ ಆಧಾರಿತ ಕ್ಷಿಪಣಿಗಳು
- ಯುದ್ಧತಂತ್ರದ ಕ್ಷಿಪಣಿಗಳು: 150 ಕಿ.ಮೀ – 300 ಕಿ.ಮೀ ದೂರದ ವ್ಯಾಪ್ತಿಯನ್ನು ಒಳಗೊಂಡಿದೆ. ಉದಾಹರಣೆಗೆ: ಪೃಥ್ವಿ I
- ಅಲ್ಪ ವ್ಯಾಪ್ತಿಯ ಕ್ಷಿಪಣಿಗಳು : 300 ಕಿ.ಮೀ- 1000 ಕಿಲೋಮೀಟರ್ ದೂರದ ವ್ಯಾಪ್ತಿಯನ್ನು ಒಳಗೊಂಡಿದ್ದು ಇವುಗಳನ್ನು ಯುದ್ಧದಲ್ಲಿ ಸಿಡಿಮದ್ದುಗಳನ್ನು ಸಿಡಿಸಲು ಉಪಯೋಗಿಸಲಾಗುತ್ತದೆ. ಇವುಗಳನ್ನು ಮುಖ್ಯವಾಗಿ ಯುದ್ಧ ಸಿಡಿ ತಲೆಗಳನ್ನು ಚಿಮ್ಮಿಸಲು ಬಳಸಲಾಗುತ್ತದೆ. ಉದಾಹರಣೆಗೆ ಅಗ್ನಿ I
- ಮಧ್ಯಂತರ ವ್ಯಾಪ್ತಿಯ ಕ್ಷಿಪಣಿಗಳು: ಇವುಗಳು 1000 ಕಿ.ಮೀ – 3500 ಕಿಲೋಮೀಟರ್ ಒಳಗಿನ ದೂರದ ವ್ಯಾಪ್ತಿಯನ್ನು ಒಳಗೊಂಡಿದೆ. ಉದಾಹರಣೆಗೆ ಅಗ್ನಿ II, (ಸಮಗ್ರ ಗುರಿ ನಿರ್ದೇಶಿತ ಮಧ್ಯಂತರ ಕ್ಷಿಪಣಿಗಳು). ಇವುಗಳನ್ನು ಅಣ್ವಸ್ತ್ರ ಸಿಡಿತಲೆಗಳನ್ನು ಚಿಮ್ಮಿಸಲು ಬಳಸುತ್ತಾರೆ.
- ಮಧ್ಯಂತರ ವ್ಯಾಪ್ತಿಯ ಬ್ಯಾಲೆಸ್ಟಿಕ್ ಕ್ಷಿಪಣಿ (IRBM): 3550 ಕಿ.ಮೀ – 5500 ಕಿಲೋಮೀಟರ್ ಒಳಗಿನ ದೂರದ ವ್ಯಾಪ್ತಿಯನ್ನು ಒಳಗೊಂಡಿದೆ. ಉದಾಹರಣೆಗೆ: ಅಗ್ನಿ III, IV
- ದೀರ್ಘ ವ್ಯಾಪ್ತಿಯ ಕ್ಷಿಪಣಿಗಳು: ಇವು 5,500 ಕಿಲೋಮೀಟರ್ಗಿಂತ ಮೇಲಿನ ದೂರವನ್ನು ಕ್ರಮಿಸುವ ಕ್ಷಿಪಣಿಗಳಾಗಿವೆ. ಖಂಡಾಂತರ ಬ್ಯಾಲೆಸ್ಟಿಕ್ ಕ್ಷಿಪಣಿ (ICBM). ಏಕೆಂದರೆ ಇವುಗಳು ದೇಶದ ಎಲ್ಲೆಗಳನ್ನು ದಾಟುವ ಸಾಮರ್ಥ್ಯವನ್ನು ಒಳಗೊಂಡಿರುತ್ತವೆ. ಇವುಗಳನ್ನು ಮುಖ್ಯವಾಗಿ ಅಣ್ವಸ್ತ್ರ ಸಿಡಿತಲೆಗಳನ್ನು ಚಿಮ್ಮಿಸುವುದಕ್ಕೆ ಬಳಸುತ್ತಾರೆ . ಉದಾಹರಣೆಗೆ ಅಗ್ನಿ V, VI
ಖಂಡಾಂತರ ಕ್ಷಿಪಣಿಗಳಲ್ಲಿ ಎರಡು ವಿಧ
- ಕ್ಷಿಪಣಿ ಮಿತಿಯೊಳಗಿನ ವ್ಯಾಪ್ತಿಯ ಖಂಡಾಂತರ ಕ್ಷಿಪಣಿ :LRICBM
ಇವುಗಳು 5000 ರಿಂದ 8000 ಕಿಲೋಮೀಟರ್ ವ್ಯಾಪ್ತಿಯವರೆಗೂ ದಾಟುವ ಸಾಮರ್ಥ್ಯವನ್ನು ಹೊಂದಿರುತ್ತವೆ.
- ಪೂರ್ಣ ವ್ಯಾಪ್ತಿಯ ಖಂಡಾಂತರ ಕ್ಷಿಪಣಿ :FRICBM
ಇವು 8,000 ರಿಂದ 12 ಸಾವಿರ ಕಿಲೋಮೀಟರ್ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.
3) ಕ್ಷಿಪಣಿಗಳನ್ನು ಉಡಾಯಿಸುವ ತಾಣ ಹಾಗೂ ತಲುಪುವ ತಾಣ ಆಧಾರದ ಮೇಲೆ
A . ಭೂಮಿಯಿಂದ ಭೂಮಿಗೆ
- ಈ ಕ್ಷಿಪಣಿಗಳನ್ನು ಭೂಮಿಯಿಂದ ಉಡಾವಣೆ ಮಾಡಿದಾಗ ಭೂಮಿಯ ಮತ್ತೊಂದು ಭಾಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರುತ್ತವೆ . ಉದಾಹರಣೆಗೆ ಅಗ್ನಿ, ಪೃಥ್ವಿ
- ಭೂಮಿಯಿಂದ ಬಾನಿಗೆ
- ಇವು ಭೂಮಿಯಿಂದ ಬಾನಿಗೆ ಚಿಮ್ಮುವ ಕ್ಷಿಪಣಿಗಳು ಉದಾಹರಣೆಗೆ ತ್ರಿಶೂಲ, ಆಕಾಶ
- ಬಾನಿನಿಂದ ಬಾನಿಗೆ
- ಇವು ಬಾನಿನಿಂದ ಬಾನಿಗೆ ಚಿಮ್ಮುವ ಕ್ಷಿಪಣಿಗಳು ಉದಾಹರಣೆಗೆ ಅಸ್ತ್ರ
4) ಕ್ಷಿಪಣಿಗಳು ಚಲಿಸುವ ಪತದ ಆಧಾರದ ಮೇಲೆ ಅಥವಾ ಇಂಜಿನ್ ಆಧಾರಿತ
- ಬ್ಯಾಲಿಸ್ಟಿಕ್ ಕ್ಷಿಪಣಿಗಳು (ರಾಕೆಟ್ ಇಂಜಿನ್ ಗಳನ್ನು ಹೊಂದಿರುತ್ತವೆ)
- ಬ್ಯಾಲೆಸ್ಟಿಕ್ ಎಂದರೆ ಪ್ರಕ್ಷೇಪಗಳ ರೀತಿಯಲ್ಲಿ ಚಲಿಸುವ ಕ್ಷಿಪಣಿಗಳು ಇವು ತಮ್ಮದೇ ಆದ ಚೋಧನ ವ್ಯವಸ್ಥೆಯಿಂದ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ಮತ್ತೆ ಭೂಮಿಯ ವಾತಾವರಣ ವನ್ನು ಮರು ಪ್ರವೇಶಿಸಿ ಭೂಮಿಯನ್ನು ಅಪ್ಪಳಿಸುವ ಕ್ಷಿಪಣಿಗಳು. ಈ ಕ್ಷಿಪಣಿಗಳು ವೇಗವಾಗಿ ಭೂಮಿಯ ವಾತಾವರಣವನ್ನು ಮರು ಪ್ರವೇಶಿಸುವಾಗ ವಾತಾವರಣದೊಂದಿಗೆ ಘರ್ಷಣೆ ಉಂಟಾಗಿ ಶತ್ರುಗಳ ಕ್ಷಿಪಣಿಗಳನ್ನು ನಾಶ ಮಾಡಲು ಸಾಧ್ಯ. ಕ್ಷಿಪಣಿಗಳು ಭೂಮಿಯ ಕಡೆ ಮರು ಪ್ರವೇಶಿಸುವಾಗ ಗುರುತ್ವಾಕರ್ಷಣಕ್ಕೆ ಒಳಗಾಗುವ ಸಾಧ್ಯತೆಯನ್ನು ತಪ್ಪಿಸಿ ಅವುಗಳು ತನ್ನ ನಿರ್ದಿಷ್ಟ ಗುರಿಗಳನ್ನು ತಲುಪುವಂತೆ ಮಾಡಲು ಗ್ಲೋಬಲ್ ಪೊಜಿಷನ್ ಸಿಸ್ಟಮ್ ಗಳನ್ನು ಅಳವಡಿಸಲಾಗುತ್ತದೆ.
- ಉದಾಹರಣೆಗೆ ಅಗ್ನಿ II ಪೃಥ್ವಿ I, II ಒಟ್ಟಾರೆಯಾಗಿ ಬ್ಯಾಲೆಸ್ಟಿಕ್ ಕ್ಷಿಪಣಿಯು ಉಪಗ್ರಹಗಳ ಕಕ್ಷೆಗಳು ಕೆಳಗಿನ ಹಾರುವ ಹಾದಿಯನ್ನು ಹೊಂದಿದ್ದು ಅದು ಸಿಡಿತಲೆಯನ್ನು ಮುನ್ಸೂಚಿತ ಗುರಿಗೆ ತಲುಪಿಸುತ್ತದೆ. ಅಲ್ಲದೆ ಅದರ ಹಾದಿಯೂ ಮುಂಚೆ ನಿಗದಿಪಡಿಸಲಾಗಿರುತ್ತದೆ.
- ಪ್ರಪಂಚದ ಮೊದಲನೆಯ ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು ನಾಜಿ ಜರ್ಮನಿಯು 1930 ಮತ್ತು 1940 ರಲ್ಲಿ ಬಳಸಿದರು. ಬ್ಯಾಲೆಸ್ಟಿಕ್ ಕ್ಷಿಪಣಿಗಳನ್ನು ಭೂಮಿಯಿಂದ ಬಾನಿನಿಂದ ಸಮುದ್ರದಿಂದ ಜಲಾಂತರ್ಗಾಮಿ ಇಂದ ಹಾಗೂ ಚಲಿಸುವ ವಾಹನಗಳ ಮೂಲಕ ಉಡಾಯಿಸಬಹುದು.
- ಕ್ರೂಸ್ ಕ್ಷಿಪಣಿಗಳು (ಜೆಟ್ ಇಂಜಿನ್ ಗಳನ್ನು ಹೊಂದಿರುತ್ತವೆ)
- ಈ ಕ್ಷಿಪಣಿಗಳು ಚಿಮ್ಮಿದಾಗ ಮೊದಲು ಕೆಳಹಂತದಲ್ಲಿ ಭೂಮಿಯ ಮೇಲ್ಮೈಗೆ ಅಥವಾ ಸಮುದ್ರದ ಮೇಲ್ಮೈಗೆ ಸಮಾಂತರವಾಗಿ ಶಬ್ದದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸುತ್ತಾ ಗುರಿಯನ್ನು ಸಮೀಪಿಸುತ್ತಿದ್ದಂತೆ ಇದರ ವೇಗವು ಶಬ್ದದ ವೇಗಕ್ಕಿಂತ ಹೆಚ್ಚಾಗಿ ತಮ್ಮ ಗುರಿಗಳನ್ನು ತಲುಪುತ್ತವೆ. ಈ ರೀತಿಯ ಚಲನೆಯಿಂದಾಗಿ ಶತ್ರುಗಳ ರೆಡಾರ್ಗಳು ಇವುಗಳನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿಗಳು ಸಮುದ್ರದೊಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು(Sea Skimming Profile) ಹೊಂದಿರುತ್ತವೆ. ಉದಾಹರಣೆಗೆ : ಬ್ರಹ್ಮೋಸ್
ರಾಕೆಟ್ ಇಂಜಿನ್ ಮತ್ತು ಜೆಟ್ ಇಂಜಿನ್ ಗಳ ನಡುವಿನ ವ್ಯತ್ಯಾಸ
ರಾಕೆಟ್ ಇಂಜಿನ್
- ಘನ ಇಂಧನವನ್ನು ಹೊಂದಿರುತ್ತವೆ
- ಹೊರಗಿನ ಆಮ್ಲಜನಕವನ್ನು ಬಳಸುವುದಿಲ್ಲ
- ವೇಗವಾಗಿ ಚಲಿಸುತ್ತವೆ
- ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ ಬಳಸಲಾಗುತ್ತದೆ
ಉದಾ:ಅಗ್ನಿ 6 (10,000 +kms)
ಜೆಟ್ ಇಂಜಿನ್
- ದ್ರವ ಇಂಧನವನ್ನು ಹೊಂದಿರುತ್ತವೆ
- ಹೊರಗಿನ ಆಮ್ಲಜನಕವನ್ನು ಬಳಸಲಾಗುತ್ತದೆ
- ರಾಕೆಟ್ ಇಂಜಿನಗೆ ಹೋಲಿಸಿದರೆ ವೇಗ ಕಡಿಮೆ
- ಕ್ರೂಸ್ ಕ್ಷಿಪಣಿಗಲ್ಲಿ ಬಳಸಲಾಗುತ್ತದೆ
ಉದಾ : ಬ್ರಹ್ಮೋಸ್(300 to 500kms)