🅺

1 ಜೂನ್ 2026

ಬಹು ಆಯ್ಕೆ ಪ್ರಶ್ನೆಗಳು · 9 Questions
Practice Mode: Select your answers by clicking on the options below. When you're ready, click "SHOW ANSWERS" at the bottom of the page to check your results!
Question 1

1. ಭಾರತದ ಅರೆವಾಹಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    2030ರ ವೇಳೆಗೆ ದೇಶವು ಶೇಕಡಾ 15-25ರಷ್ಟು ಚಿಪ್ ಸ್ವಾವಲಂಬನೆಯನ್ನು ಸಾಧಿಸುವ ಗುರಿ ಹೊಂದಿದೆ. 
2.    ರಾಷ್ಟ್ರೀಯ ಕಾರ್ಯತಂತ್ರವು ಕೇವಲ ಅತ್ಯಾಧುನಿಕ ಸೂಕ್ಷ್ಮ ಗಾತ್ರದ ಉತ್ಪಾದನಾ ಘಟಕಗಳ ಮೇಲಷ್ಟೇ ಗಮನಹರಿಸುತ್ತದೆ. 
3.    ಸುಧಾರಿತ ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ವಿಶ್ವದ ಅಗ್ರ ಮೂರು ತಾಣಗಳಲ್ಲಿ ಒಂದಾಗುವ ಗುರಿಯನ್ನು ಭಾರತ ಹೊಂದಿದೆ. 
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?




  • A A. 1 ಮತ್ತು 3 ಮಾತ್ರ
  • B B. 2 ಮತ್ತು 3 ಮಾತ್ರ
  • C C. 1 ಮತ್ತು 2 ಮಾತ್ರ
  • D D. 1, 2 ಮತ್ತು 3
✓ Correct Answer: Option A
Explanation:
1. ಉತ್ತರ: A ಮಾತ್ರ
Question 2

2. ಭಾರತ–ಸಿಂಗಾಪುರ ಸಂಬಂಧಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ಭಾರತೀಯ ಭೂಪ್ರದೇಶದಲ್ಲಿ ವರ್ಷಪೂರ್ತಿ ಸೈನಿಕ ತರಬೇತಿ ನಡೆಸಲು ಅನುಮತಿ ಪಡೆದಿರುವ ಏಕೈಕ ದೇಶ ಸಿಂಗಾಪುರವಾಗಿದೆ. 
2.    ಸಿಂಗಾಪುರ–ಭಾರತ ಕಡಲ ಸಮರಾಭ್ಯಾಸವು ಯಾವುದೇ ವಿದೇಶಿ ರಾಷ್ಟ್ರದೊಂದಿಗೆ ಭಾರತದ ಅತ್ಯಂತ ದೀರ್ಘಾವಧಿಯ ನಿರಂತರ ನೌಕಾ ಸಮರಾಭ್ಯಾಸವಾಗಿದೆ. 
3.    ಸಿಂಗಾಪುರವು ಭಾರತದಲ್ಲಿ ವಿದೇಶಿ ನೇರ ಹೂಡಿಕೆಯ ಅತಿದೊಡ್ಡ ಮೂಲವಲ್ಲ. 
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?




  • A A. 1 ಮಾತ್ರ
  • B B. 1 ಮತ್ತು 2 ಮಾತ್ರ
  • C C. 2 ಮತ್ತು 3 ಮಾತ್ರ
  • D D. 1, 2 ಮತ್ತು 3
✓ Correct Answer: Option B
Explanation:
2. ಉತ್ತರ: B ಮಾತ್ರ
Question 3

3. ಸಮರ್ಥನೆ (A): ಮಾನವ ಕಳ್ಳಸಾಗಣೆಯು ಸಂವಿಧಾನದ ವಿಧಿ 23ರ ಅಡಿಯಲ್ಲಿ ಸಾಂವಿಧಾನಿಕ ಘನತೆಯ ಮೇಲಿನ ನೇರ ದಾಳಿಯಾಗಿದೆ.
ಕಾರಣ (R): ವ್ಯಕ್ತಿಯ ಪುನರ್ವಸತಿಯ ಹಕ್ಕು ಸಂವಿಧಾನದ ವಿಧಿ 21ರಿಂದ ಉಗಮಿಸುತ್ತದೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ:




  • A A. A ಮತ್ತು R ಎರಡೂ ಸರಿಯಾಗಿವೆ ಹಾಗೂ R, Aಗೆ ಸರಿಯಾದ ವಿವರಣೆಯಾಗಿದೆ.
  • B B. A ಮತ್ತು R ಎರಡೂ ಸರಿಯಾಗಿವೆ, ಆದರೆ R, Aಗೆ ಸರಿಯಾದ ವಿವರಣೆಯಾಗಿಲ್ಲ.
  • C C. A ಸರಿಯಾಗಿದೆ, ಆದರೆ R ಸರಿಯಿಲ್ಲ.
  • D D. A ಸರಿಯಿಲ್ಲ, ಆದರೆ R ಸರಿಯಾಗಿದೆ.
✓ Correct Answer: Option B
Explanation:
3. ಉತ್ತರ: B ಮಾತ್ರ
Question 4

4. ಭಾರತ–ನಾರ್ಡಿಕ್ ಸಹಕಾರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ನಾರ್ಡಿಕ್ ರಾಷ್ಟ್ರಗಳ ಗುಂಪಿನಲ್ಲಿ ಐದು ದೇಶಗಳಿವೆ. 
2.    ಮೂರನೇ ಶೃಂಗಸಭೆಯಲ್ಲಿ ಹಸಿರು ತಂತ್ರಜ್ಞಾನ ಮತ್ತು ನಾವೀನ್ಯತೆ ಕಾರ್ಯತಂತ್ರದ ಪಾಲುದಾರಿಕೆಗೆ ಬಾಂಧವ್ಯವನ್ನು ಉನ್ನತೀಕರಿಸಲಾಯಿತು. 
3.    ಯುರೋಪಿಯನ್ ಮುಕ್ತ ವ್ಯಾಪಾರ ಸಂಘದಲ್ಲಿ ಸ್ವೀಡನ್ ಸದಸ್ಯ ರಾಷ್ಟ್ರವಾಗಿದೆ. 
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?




  • A A. 1 ಮಾತ್ರ
  • B B. 2 ಮತ್ತು 3 ಮಾತ್ರ
  • C C. 1 ಮತ್ತು 2 ಮಾತ್ರ
  • D D. 1, 2 ಮತ್ತು 3
✓ Correct Answer: Option C
Explanation:
4. ಉತ್ತರ: C ಮಾತ್ರ
Question 5

5. ಕ್ವೀನ್ ಅನಾನಸ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ಕ್ವೀನ್ ಅನಾನಸ್‌ಗೆ ಭೌಗೋಳಿಕ ಸೂಚ್ಯಂಕ ಮಾನ್ಯತೆ 2015ರಲ್ಲಿ ದೊರೆಯಿತು. 
2.    ಈ ತಳಿಯು ಸಾಮಾನ್ಯ ವಾಣಿಜ್ಯ ಅನಾನಸ್‌ಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿದೆ. 
3.    ಇದನ್ನು ಮುಖ್ಯವಾಗಿ ಸಾಂಪ್ರದಾಯಿಕ ಕೀಟನಾಶಕ-ಮುಕ್ತ ಸಾವಯವ ಕೃಷಿ ಪದ್ಧತಿಗಳ ಮೂಲಕ ಬೆಳೆಯಲಾಗುತ್ತದೆ. 
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?




  • A A. 1 ಮತ್ತು 2 ಮಾತ್ರ
  • B B. 2 ಮತ್ತು 3 ಮಾತ್ರ
  • C C. 1 ಮತ್ತು 3 ಮಾತ್ರ
  • D D. 1, 2 ಮತ್ತು 3
✓ Correct Answer: Option C
Explanation:
5. ಉತ್ತರ: C ಮಾತ್ರ
Question 6

6. ಸಮರ್ಥನೆ (A): ಚಿರಾಗ್ ಕೇಂದ್ರವು ಭಾರತೀಯ ರೈಲ್ವೆಯ ಮಾನವ ಸಂಪನ್ಮೂಲ ನಿರ್ವಹಣೆಯನ್ನು ಆಧುನೀಕರಿಸಲು ಸ್ಥಾಪಿಸಲಾಗಿದೆ.
ಕಾರಣ (R): ಈ ಕೇಂದ್ರವು ದತ್ತಾಂಶ ವಿಶ್ಲೇಷಣೆ, ಕಾರ್ಯಪಡೆ ಯೋಜನೆ ಮತ್ತು ಮುನ್ಸೂಚನಾ ವಿಶ್ಲೇಷಣೆಗೆ ಕೃತಕ ಬುದ್ಧಿಮತ್ತೆ ಆಧಾರಿತ ಸಾಧನಗಳನ್ನು ಬಳಸುತ್ತದೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ:


  • A A. A ಮತ್ತು R ಎರಡೂ ಸರಿಯಾಗಿವೆ ಹಾಗೂ R, Aಗೆ ಸರಿಯಾದ ವಿವರಣೆಯಾಗಿದೆ.
  • B B. A ಮತ್ತು R ಎರಡೂ ಸರಿಯಾಗಿವೆ, ಆದರೆ R, Aಗೆ ಸರಿಯಾದ ವಿವರಣೆಯಾಗಿಲ್ಲ.
  • C C. A ಸರಿಯಾಗಿದೆ, ಆದರೆ R ಸರಿಯಿಲ್ಲ.
  • D D. A ಸರಿಯಿಲ್ಲ, ಆದರೆ R ಸರಿಯಾಗಿದೆ.
✓ Correct Answer: Option A
Explanation:
6. ಉತ್ತರ: A ಮಾತ್ರ
Question 7

7. ಪ್ರಧಾನ ಮಂತ್ರಿ ಆವಾಸ್ ಯೋಜನೆ–ಗ್ರಾಮೀಣ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ಈ ಯೋಜನೆಯನ್ನು 2016ರಲ್ಲಿ ಹಿಂದಿನ ಇಂದಿರಾ ಆವಾಸ್ ಯೋಜನೆಯನ್ನು ಮರುರೂಪಿಸುವ ಮೂಲಕ ಆರಂಭಿಸಲಾಯಿತು. 
2.    ಫಲಾನುಭವಿಗಳ ಗುರುತಿಸುವಿಕೆಗೆ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ–2011ರ ಮಾಹಿತಿಯನ್ನು ಬಳಸಲಾಗುತ್ತದೆ. 
3.    ಬಯಲು ಪ್ರದೇಶಗಳ ಮನೆಗಳಿಗೆ ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಹಂಚಿಕೆ ಅನುಪಾತ 90:10 ಆಗಿದೆ. 
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?




  • A A. 1 ಮಾತ್ರ
  • B B. 2 ಮತ್ತು 3 ಮಾತ್ರ
  • C C. 1 ಮತ್ತು 3 ಮಾತ್ರ
  • D D. 1 ಮತ್ತು 2 ಮಾತ್ರ
✓ Correct Answer: Option D
Explanation:
7. ಉತ್ತರ: D ಮಾತ್ರ
Question 8

8. ಭಾರತದ ಫಲವತ್ತತೆ ದರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ಬದಲಿ ಮಟ್ಟದ ಫಲವತ್ತತೆ ದರವು 2.1 ಎಂದು ಪರಿಗಣಿಸಲಾಗಿದೆ. 
2.    2024ರಲ್ಲಿ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳು 2.1ಕ್ಕಿಂತ ಹೆಚ್ಚಿನ ಫಲವತ್ತತೆ ದರವನ್ನು ದಾಖಲಿಸಿವೆ. 
3.    ಫಲವತ್ತತೆ ದರ ಕುಸಿತವು ದೀರ್ಘಾವಧಿಯಲ್ಲಿ ವೃದ್ಧ ಜನಸಂಖ್ಯೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. 
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?




  • A A. 1 ಮತ್ತು 2 ಮಾತ್ರ
  • B B. 2 ಮತ್ತು 3 ಮಾತ್ರ
  • C C. 1 ಮತ್ತು 3 ಮಾತ್ರ
  • D D. 1, 2 ಮತ್ತು 3
✓ Correct Answer: Option A
Explanation:
8. ಉತ್ತರ: A ಮಾತ್ರ
Question 9

9. ಭಾರತದಲ್ಲಿ ಫಲವತ್ತತೆ ದರದ ಕುಸಿತ ಮತ್ತು ಅದರ ಪರಿಣಾಮಗಳ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ಕಡಿಮೆ ಫಲವತ್ತತೆ ದರವು ದೀರ್ಘಾವಧಿಯಲ್ಲಿ ಕಾರ್ಮಿಕ ಮಾರುಕಟ್ಟೆಗೆ ಪ್ರವೇಶಿಸುವವರ ಸಂಖ್ಯೆಯನ್ನು ಕಡಿಮೆ ಮಾಡಬಹುದು. 
2.    ಕಡಿಮೆ ಫಲವತ್ತತೆ ದರವು ವೃದ್ಧಾಪ್ಯ ಸಂಬಂಧಿತ ಸಾಮಾಜಿಕ ಭದ್ರತಾ ವೆಚ್ಚಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ. 
3.    ಕಡಿಮೆ ಫಲವತ್ತತೆ ದರವು ಎಲ್ಲ ರಾಜ್ಯಗಳಲ್ಲಿಯೂ ಸಮಾನ ಜನಸಂಖ್ಯಾ ರಚನೆಯನ್ನು ಖಚಿತಪಡಿಸುತ್ತದೆ. 
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?




  • A A. 3 ಮಾತ್ರ
  • B B. 1 ಮತ್ತು 2 ಮಾತ್ರ
  • C C. 2 ಮತ್ತು 3 ಮಾತ್ರ
  • D D. 1, 2 ಮತ್ತು 3
✓ Correct Answer: Option B
Explanation:
9. ಉತ್ತರ: B ಮಾತ್ರ

Click to toggle correct answers and explanations for all questions.