🅺

7 ಜುಲೈ 2026

ಬಹು ಆಯ್ಕೆ ಪ್ರಶ್ನೆಗಳು · 6 Questions
Practice Mode: Select your answers by clicking on the options below. When you're ready, click "SHOW ANSWERS" at the bottom of the page to check your results!
Question 1

1. ಭಾರತ–ಇಸ್ರೇಲ್ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ಇದು 1996ರ ಭಾರತ–ಇಸ್ರೇಲ್ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಬದಲಾಯಿಸುತ್ತದೆ. 
2.    ಸಾರ್ವಜನಿಕ ಆರೋಗ್ಯ, ಪರಿಸರ ಹಾಗೂ ಭದ್ರತೆಗಾಗಿ ಸರ್ಕಾರವು ನಿಯಂತ್ರಣ ಕೈಗೊಳ್ಳುವ ಅಧಿಕಾರವನ್ನು ಈ ಒಪ್ಪಂದವು ಸಂರಕ್ಷಿಸುತ್ತದೆ. 
3.    ಯುದ್ಧ ಅಥವಾ ನಾಗರಿಕ ಅಶಾಂತಿಯಿಂದ ಉಂಟಾಗುವ ನಷ್ಟಗಳಿಗೆ ಸಂಬಂಧಿಸಿದ ಪರಿಹಾರದಲ್ಲಿ ಹೂಡಿಕೆದಾರರಿಗೆ ತಾರತಮ್ಯಪೂರ್ಣ ವರ್ತನೆಗೆ ಅವಕಾಶ ನೀಡುತ್ತದೆ. 
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

  • A A. 1 ಮತ್ತು 2 ಮಾತ್ರ
  • B B. 2 ಮತ್ತು 3 ಮಾತ್ರ
  • C C. 1 ಮತ್ತು 3 ಮಾತ್ರ
  • D D. 1, 2 ಮತ್ತು 3
✓ Correct Answer: Option A
Explanation:
1. ಉತ್ತರ: A. 1 ಮತ್ತು 2 ಮಾತ್ರ
ವಿವರಣೆ: 3ನೇ ಹೇಳಿಕೆ ತಪ್ಪು. ಒಪ್ಪಂದವು ತಾರತಮ್ಯರಹಿತ ಪರಿಹಾರದ ತತ್ವವನ್ನು ಅನುಸರಿಸುತ್ತದೆ.
Question 2

2. ಆಧುನಿಕ ಸಮರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ಯುದ್ಧಭೂಮಿಯ ವಿವಿಧ ಮೂಲಗಳಿಂದ ದತ್ತಾಂಶವನ್ನು ಸಂಯೋಜಿಸಿ ತ್ವರಿತ ನಿರ್ಧಾರಕ್ಕೆ ನೆರವಾಗುತ್ತದೆ. 
2.    ಶತ್ರುಗಳ ಚಲನವಲನವನ್ನು ವಿಶ್ಲೇಷಿಸಿ ವಿಚಕ್ಷಣ ಸಾಮರ್ಥ್ಯವನ್ನು ವೃದ್ಧಿಸುತ್ತದೆ. 
3.    ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಮಾನವ ನಿರ್ಧಾರ ವ್ಯವಸ್ಥೆಯ ಅಗತ್ಯ ಸಂಪೂರ್ಣವಾಗಿ ಇಲ್ಲವಾಗುತ್ತದೆ. 
ಯಾವುದು ಸರಿಯಾಗಿದೆ?

  • A A. 1 ಮಾತ್ರ
  • B B. 2 ಮತ್ತು 3 ಮಾತ್ರ
  • C C. 1 ಮತ್ತು 2 ಮಾತ್ರ
  • D D. 1, 2 ಮತ್ತು 3
✓ Correct Answer: Option C
Explanation:
ಉತ್ತರ: C. 1 ಮತ್ತು 2 ಮಾತ್ರ
ವಿವರಣೆ: 3ನೇ ಹೇಳಿಕೆ ತಪ್ಪು. ಕೃತಕ ಬುದ್ಧಿಮತ್ತೆ ಮಾನವ ನಿರ್ಧಾರಕ್ಕೆ ಪೂರಕವಾಗಿದ್ದು, ಅದನ್ನು ಸಂಪೂರ್ಣವಾಗಿ ಬದಲಿಸುವುದಿಲ್ಲ.
Question 3

3. 'ಸಾಲ್ವ್' ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ಇದು ಗಗನ್‌ಯಾನ್ ಸಿಬ್ಬಂದಿ ಘಟಕದ ಧುಮುಕುಕೊಡೆ ವ್ಯವಸ್ಥೆಯನ್ನು ಪರೀಕ್ಷಿಸಲು ಅಭಿವೃದ್ಧಿಪಡಿಸಿದ ಉಪಕಕ್ಷೆಯ ಉಡಾವಣಾ ವ್ಯವಸ್ಥೆಯಾಗಿದೆ. 
2.    ಸಿಬ್ಬಂದಿ ಘಟಕವನ್ನು ಸುಮಾರು 10–17 ಕಿ.ಮೀ ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶ ಹೊಂದಿದೆ. 
3.    ಇದರ ಘನ ಮೋಟಾರ್ ಸಂಪೂರ್ಣವಾಗಿ ಹೊಸದಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದು, ಯಾವುದೇ ಹಿಂದಿನ ಉಡಾವಣಾ ವಾಹನದೊಂದಿಗೆ ಸಂಬಂಧ ಹೊಂದಿಲ್ಲ. 
ಯಾವುದು ಸರಿಯಾಗಿದೆ?

  • A A. 1 ಮತ್ತು 3 ಮಾತ್ರ
  • B B. 2 ಮತ್ತು 3 ಮಾತ್ರ
  • C C. 1, 2 ಮತ್ತು 3
  • D D. 1 ಮತ್ತು 2 ಮಾತ್ರ
✓ Correct Answer: Option D
Explanation:
ಉತ್ತರ: D. 1 ಮತ್ತು 2 ಮಾತ್ರ
ವಿವರಣೆ: 3ನೇ ಹೇಳಿಕೆ ತಪ್ಪು. ಇದರ ಘನ ಮೋಟಾರ್ ಧ್ರುವೀಯ ಉಪಗ್ರಹ ಉಡಾವಣಾ ವಾಹನದ ಸಹಾಯಕ ಮೋಟಾರ್‌ನ ಆಧಾರದ ಮೇಲೆ ರೂಪುಗೊಂಡಿದೆ.
Question 4

4. ಆನ್‌ಲೈನ್ ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ಮಕ್ಕಳ ಲೈಂಗಿಕ ನಿಂದನೆಗೆ ಸಂಬಂಧಿಸಿದ ಚಿತ್ರ ಅಥವಾ ದೃಶ್ಯಗಳನ್ನು ಸಂಗ್ರಹಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. 
2.    ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಇಂತಹ ವಿಷಯಗಳನ್ನು ಗುರುತಿಸಿ ತೆಗೆದುಹಾಕುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. 
3.    ಬಾಲನ್ಯಾಯ ಕಾಯ್ದೆಯ ಉದ್ದೇಶವು ಕೇವಲ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದಾಗಿದೆ. 
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

  • A A. 3 ಮಾತ್ರ
  • B B. 1 ಮತ್ತು 2 ಮಾತ್ರ
  • C C. 2 ಮತ್ತು 3 ಮಾತ್ರ
  • D D. 1, 2 ಮತ್ತು 3
✓ Correct Answer: Option B
Explanation:
ಉತ್ತರ: B. 1 ಮತ್ತು 2 ಮಾತ್ರ
ವಿವರಣೆ: 3ನೇ ಹೇಳಿಕೆ ತಪ್ಪು. ಬಾಲನ್ಯಾಯ ಕಾಯ್ದೆಯು ಮಕ್ಕಳ ಆರೈಕೆ, ರಕ್ಷಣೆ ಮತ್ತು ಪುನರ್ವಸತಿಗೂ ಒತ್ತು ನೀಡುತ್ತದೆ.
Question 5

5. ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ಅತ್ಯಂತ ಕಿರಿಯ ಕುಲಪತಿಯಾಗಿದ್ದರು. 
2.    ಅವರು ಸ್ವತಂತ್ರ ಭಾರತದ ಮೊದಲ ಹಣಕಾಸು ಸಚಿವರಾಗಿದ್ದರು. 
3.    ಅವರು 1951 ರಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿ ಅದರ ಮೊದಲ ಅಧ್ಯಕ್ಷರಾದರು. 
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

  • A A. 2 ಮತ್ತು 3 ಮಾತ್ರ
  • B B. 1 ಮತ್ತು 3 ಮಾತ್ರ
  • C C. 1 ಮತ್ತು 2 ಮಾತ್ರ
  • D D. 1, 2 ಮತ್ತು 3
✓ Correct Answer: Option B
Explanation:
5. ಉತ್ತರ: B. 1 ಮತ್ತು 3 ಮಾತ್ರ
ವಿವರಣೆ: 2ನೇ ಹೇಳಿಕೆ ತಪ್ಪು. ಅವರು ಕೈಗಾರಿಕೆ ಮತ್ತು ಪೂರೈಕೆ ಸಚಿವರಾಗಿದ್ದರು; ಹಣಕಾಸು ಸಚಿವರಾಗಿರಲಿಲ್ಲ.
Question 6

6. ಹಯಬುಸಾ2 ಕಾರ್ಯಾಚರಣೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ಇದು ಕ್ಷುದ್ರಗ್ರಹದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಮರಳಿಸಿದ ಕಾರ್ಯಾಚರಣೆಯಾಗಿದೆ. 
2.    ಇದು ಇಂಗಾಲಯುಕ್ತ ರಿಯುಗು ಕ್ಷುದ್ರಗ್ರಹವನ್ನು ಅನ್ವೇಷಿಸಿತು. 
3.    ಕ್ಷುದ್ರಗ್ರಹದ ಮೇಲ್ಮೈಯಲ್ಲಿ ಸಂಚರಿಸುವ ಸಾಧನಗಳನ್ನು ನಿಯೋಜಿಸಿದ ಮೊದಲ ಕಾರ್ಯಾಚರಣೆ ಇದಾಗಿದೆ. 
ಯಾವುದು ಸರಿಯಾಗಿದೆ?

  • A A. 1, 2 ಮತ್ತು 3
  • B B. 1 ಮತ್ತು 2 ಮಾತ್ರ
  • C C. 2 ಮತ್ತು 3 ಮಾತ್ರ
  • D D. 1 ಮತ್ತು 3 ಮಾತ್ರ
✓ Correct Answer: Option A
Explanation:
6.ಉತ್ತರ: A. 1, 2 ಮತ್ತು 3
ವಿವರಣೆ: ಮೂರು ಹೇಳಿಕೆಗಳೂ ಸರಿಯಾಗಿದ್ದು, ಕ್ಷುದ್ರಗ್ರಹ ಅಧ್ಯಯನದಲ್ಲಿ ಈ ಕಾರ್ಯಾಚರಣೆಯು ಹೊಸ ಮೈಲಿಗಲ್ಲು ನಿರ್ಮಿಸಿದೆ.

Click to toggle correct answers and explanations for all questions.