01 ಮಾರ್ಚ್ 2022

01 ಮಾರ್ಚ್ 2022

1.ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ‘ಜಲಶಕ್ತಿ ಯೋಜನೆ’ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ .

೧. ಈ ಯೋಜನೆಯಡಿ  ರಾಷ್ಟ್ರೀಯ ಹೆದ್ದಾರಿಗಳಿಗೆ ಸಮೀಪವಿರುವ ಕೆರೆಗಳು ಮತ್ತು ನದಿಗಳಂತಹ ಎಲ್ಲಾ ನೀರಿನ ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ

೨. ಮಹಾರಾಷ್ಟ್ರದ ಗಡಿ ಭಾಗ ನಿಪ್ಪಾಣಿಯಿಂದ ಕಿತ್ತೂರುವರೆಗಿನ ಹೆದ್ದಾರಿಯಲ್ಲಿ ಮೊದಲಿಗೆ ಜಲಶಕ್ತಿ ಯೋಜನೆಯನ್ನು ರಾಜ್ಯದಲ್ಲಿ ಆರಂಭಿಸಲಾಗಿದೆ

ಯಾವ ಹೇಳಿಕೆಗಳು ಸರಿಯಿದೆ ?

A. ಮೊದಲನೇ ಹೇಳಿಕೆ

B. ಎರಡನೇ ಹೇಳಿಕೆ

C. ಎರಡೂ ಹೇಳಿಕೆಗಳು ಸರಿಯಿವೆ

D. ಎರಡೂ ಹೇಳಿಕೆಗಳು ತಪ್ಪಾಗಿವೆ

2. ಯಾವ ಸ್ಥಳದ ಮೊದಲ ಹೆಸರು ಪಂಪಾ ಆಗಿತ್ತು ?

A. ಹಂಪೆ

B. ಬಾದಾಮಿ

C. ಹಳೇಬೀಡು

D. ಬನವಾಸಿ

3. ಈ ಕೆಳಗಿನ ಜೋಡಿಗಳಲ್ಲಿ ಯಾವುದು ತಪ್ಪಾಗಿದೆ?

A. ಆಪರೇಷನ್ ಗಂಗಾ – ರಷ್ಯಾ

B. ಆಪರೇಷನ್ ರಾಹತ್ – ಯೆಮೆನ್‌

C. ಆಪರೇಷನ್ ಮೈತ್ರಿ -ನೇಪಾಳ

D. ‘ಆಪರೇಷನ್ ಹೋಮ್‌ಕಮಿಂಗ್’ – ಲಿಬಿಯಾ

4. ಉಕ್ರೇನ್ ಬಗ್ಗೆ ನೀಡಲಾಗಿರುವ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ

೧. ಉಕ್ರೇನ್ ಉತ್ತರಕ್ಕೆ ಬೆಲಾರಸ್‌ನೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ; ಮತ್ತು ಅಜೋವ್ ಸಮುದ್ರ ಮತ್ತು ಕಪ್ಪು ಸಮುದ್ರದ ಉದ್ದಕ್ಕೂ ಕರಾವಳಿಯನ್ನು ಹೊಂದಿದೆ.

೨.  ಉಕ್ರೇನ್ ರಾಷ್ಟ್ರದ ರಾಜಧಾನಿ ಮತ್ತು ದೊಡ್ಡ ನಗರ ಕೈವ್.

A. ಮೊದಲನೇ ಹೇಳಿಕೆ

B. ಎರಡನೇ ಹೇಳಿಕೆ

C. ಎರಡೂ ಹೇಳಿಕೆಗಳು ಸರಿಯಿವೆ

D. ಎರಡೂ ಹೇಳಿಕೆಗಳು ತಪ್ಪಾಗಿವೆ