03 ನವೆಂಬರ್ 2022

03 ನವೆಂಬರ್ 2022

1.ಡಿಜಿಟಲ್ ರೂಪಾಯಿಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1.  ಚಾಲ್ತಿಯಲ್ಲಿ ಇರುವ ಕರೆನ್ಸಿಗೆ ಪರ್ಯಾಯವೇ ವಿನಾ,  ಪೂರಕವಲ್ಲ
2.  ಇದರ ವರ್ಗಾವಣೆಗೆ ಬ್ಯಾಂಕ್ ಖಾತೆಯ ಅಗತ್ಯವಿಲ್ಲ
A.    1 ಮಾತ್ರ ಸರಿ
B.    2 ಮಾತ್ರ ಸರಿ
C.   1 ಮತ್ತು 2 ಎರಡೂ ಸರಿ
D.    1 ಮತ್ತು 2 ಎರಡೂ ತಪ್ಪು
2.ಗೂಗಲ್ ಗೆ ಭಾರತದ ಯಾವ  ಆಯೋಗವು 1337ಕೋಟಿ ರೂ.ಗಳ ದಂಡ ವಿಧಿಸಿದೆ?
A.    ನೀತಿ ಆಯೋಗ
B.    ಸಾರ್ವಜನಿಕ ಸೇವಾ ಆಯೋಗ
C.   ಸ್ಪರ್ಧಾತ್ಮಕ ಆಯೋಗ
D.    ಮೇಲಿನ ಯಾವುದು ಅಲ್ಲ
3.ಯಾವ ನಗರದ ಸ್ಮಾರ್ಟ್ ಸಿಟಿ ಲಿಮಿಟೆಡ್ಗೆ “ನಗರ ಸಾರಿಗೆಯಲ್ಲಿ ಶ್ರೇಷ್ಠತೆಯ ಪ್ರಶಸ್ತಿ” ಲಭಿಸಿದೆ?
A.   ಬೆಳಗಾವಿ
B.    ಶಿವಮೊಗ್ಗ
C.    ಚಿತ್ರದುರ್ಗ
D.    ದಾವಣಗೆರೆ
4. ಯಾವ ನಗರದ ಐತಿಹಾಸಿಕ ತಾಣಗಳನ್ನು ಬೆಳಕು ಮತ್ತು ಧ್ವನಿ ಕಾರ್ಯಕ್ರಮದ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ?
A.    ಹಂಪಿ
B.    ಮೈಸೂರು
C.    ಬೇಳೂರು ಹಳೇಬೀಡು
D.   ಐಹೊಳೆ ಪಟ್ಟದಕಲ್ಲು
5. ದೇಶದ ಮೊದಲ ಕಾಡುಕೋಣ ಸಫಾರಿ ಯಾವ ನಗರದಲ್ಲಿ ಪ್ರಾರಂಭವಾಗಿದೆ?
A.   ನಾಗರಹೊಳೆ ಮೈಸೂರು
B.    ಬನ್ನೇರಘಟ್ಟ ಬೆಂಗಳೂರು
C.    ದಾಂಡೇಲಿ ಉತ್ತರ ಕನ್ನಡ
D.   ತ್ಯಾವರೆಕೊಪ್ಪ ಶಿವಮೊಗ್ಗ
6.  ಇತ್ತೀಚಿಗೆ   ಯಾವ ದೇಶದ  ನಿರಾಶ್ರಿತರಿಗಾಗಿ ಭಾರತವು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ(UNRWA)ಗೆ 2.5 ಮಿಲಿಯನ್ ಡಾಲರ್ ನೆರವು ನೀಡಿದೆ?
A.   ಪಾಕಿಸ್ತಾನ
B.   ಪ್ಯಾಲೆಸ್ತೀನ್
C.   ಬಾಂಗ್ಲಾದೇಶ
D.   ನೇಪಾಳ