04 ಅಕ್ಟೋಬರ್ 2021

04 ಅಕ್ಟೋಬರ್ 2021

1. ಬಿಳಿ ಘೇಂಡಾಮೃಗ ಮತ್ತು ಆಫ್ರಿಕನ್ ಚಿರತೆಗಳೊಂದಿಗೆ ಗೊರಿಲ್ಲಾಗಳು ಮತ್ತು ಒರಾಂಗುಟನ್ಗಳನ್ನು ಹೊಂದಿರುವ ಭಾರತದ ಏಕೈಕ ಮೃಗಾಲಯ ಎಂಬ ಅಪರೂಪದ ಹೆಗ್ಗಳಿಕೆಗೆ ಯಾವ ಮೃಗಾಲಯ ಪಾತ್ರವಾಗಿದೆ?

A. ಮೈಸೂರು ಮೃಗಾಲಯ

B. ಕಾಜಿರಂಗ ಮೃಗಾಲಯ

C. ಜಿಂಕಾರ್ಬೆಟ್ಟ್ ರಾಷ್ಟೀಯ ಮೃಗಾಲಯ

D. ಬನ್ನೇರುಘಟ್ಟ ಮೃಗಾಲಯ

2. ಜಲ್ ಜೀವನ್ ಮಿಷನ್ ಯಾವ ವರ್ಷದೊಳಗೆ ದೇಶದ ಪ್ರತಿ ಹಳ್ಳಿಗೂ ನಿರಂತರ ಶುದ್ಧ ಕುಡಿಯುವ ನೀರು ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದೆ ?

A. 2022

B. 2023

C. 2024

D. 2025

3. ಭೌಗೋಳಿಕ ಸೂಚಿ ದೊರೆತಿರುವ ’ ಕೋಲಂ ಅಕ್ಕಿ‘ಯನ್ನು ವಾಡ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ವಾಡ ಪ್ರದೇಶ ಯಾವ ರಾಜ್ಯದಲ್ಲಿದೆ ?

A. ತಮಿಳು ನಾಡು

B. ಮಹಾರಾಷ್ಟ್ರ

C. ಕರ್ನಾಟಕ

D. ಆಂಧ್ರಪ್ರದೇಶ

4. ‘ಎನ್ಎವಿ–ಇಕ್ಯಾಷ್’ ಕಾರ್ಡ್ಅನ್ನು ಯಾವ ಬ್ಯಾಂಕ್ ಬಿಡುಗಡೆಗೊಳಿಸಿದೆ ?

A. ಎಸ್ ಬಿ ಐ

B. ಕರ್ನಾಟಕ ಬ್ಯಾಂಕ್

C. ಇಂಡಿಯನ್ ಬ್ಯಾಂಕ್

D. ಯೂನಿಯನ್ ಬ್ಯಾಂಕ್

5. ಕ್ರಿಪ್ಟೋಕರೆನ್ಸಿಗಳಿಗೆ ಕಾನೂನುಬದ್ಧ ಮಾನ್ಯತೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಗೆ ಪಡೆದಿರುವ ದೇಶ ಯಾವುದು ?

A. ಎಲ್ ಸಾಲ್ವಡಾರ್

B. ಆಸ್ಟ್ರಿಯಾ

C. ವೆನೆಜುವೆಲಾ

D. ಜರ್ಮನಿ