11 ಜೂನ್ 2022
11 ಜೂನ್ 2022
1. ಯೂನಿಕಾರ್ನ್ ಕುರಿತು ಕೆಳಗೆ ನೀಡಲಾಗಿರುವ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆಮಾಡಿ
೧. ಜಾಗತಿಕ ಮಟ್ಟದಲ್ಲಿ ಪ್ರತಿ 10 ಯೂನಿಕಾರ್ನ್ ಸಂಸ್ಥೆಗಳಲ್ಲಿ ಒಂದು ಭಾರತದ್ದಾಗಿರುತ್ತದೆ
೨. ಯುನಿಕಾರ್ನ್ ಎಂಬುದು ಯಾವುದೇ ಖಾಸಗಿ ಒಡೆತನದ ಸಂಸ್ಥೆಯಾಗಿದ್ದು ಅದು $1 ಶತಕೋಟಿಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.
A. ಮೊದಲನೇ ಹೇಳಿಕೆ ಸರಿಯಿದೆ
B. ಎರಡನೇ ಹೇಳಿಕೆ ತಪ್ಪಾಗಿದೆ
C. ಎರಡೂ ಹೇಳಿಕೆಗಳು ಸರಿಯಿದೆ
D. ಎರಡೂ ಹೇಳಿಕೆಗಳು ತಪ್ಪಾಗಿವೆ
2. ರೂಪಾಯಿ ಅಪಮೌಲ್ಯದ ಪರಿಣಾಮಗಳ ಕುರಿತು ನೀಡಿರುವ ಹೇಳಿಕೆಗಳಲ್ಲಿ ಸರಿಯಾಗಿರುವುದನ್ನು ಆಯ್ಕೆಮಾಡಿ
A. ರಫ್ತುದಾರರಿಗೆ ಲಾಭ
B. ಆಮದುದಾರರು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ
C. ವಿದೇಶಿ ಕರೆನ್ಸಿ ವಿನಿಮಯ ದುಬಾರಿಯಾಗಲಿದೆ
D. ಮೇಲಿನ ಎಲ್ಲವು
3. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚಿಗೆ ಮಹಾತ್ಮಾ ಗಾಂಧಿ ಸೇತುವಿನ ಸೂಪರ್ ಸ್ಟ್ರಕ್ಚರ್ ಬದಲಿಯನ್ನು ಉದ್ಘಾಟಿಸಿದರು.ಇದು ಯಾವ ರಾಜ್ಯದಲ್ಲಿದೆ ?
A. ಉತ್ತರ ಪ್ರದೇಶ
B. ಬಿಹಾರ
C. ಮಧ್ಯ ಪ್ರದೇಶ
D. ರಾಜಸ್ಥಾನ
4. ಭಾರತದಲ್ಲಿ ‘ಗುಲಾಮಿ ವಂಶಾಡಳಿತ’ ಸ್ಥಾಪಿಸಿದ ದೊರೆ ಯಾರು ?
A. ಕುತುಬುದ್ದೀನ್ ಐಬಕ್
B. ಇಲ್ತುಮಿಶ್
C. ರಝಿಯಾ ಸುಲ್ತಾನ
D. ಯಾರು ಅಲ್ಲ
5. ಪ್ರಾಣಿಗಳಿಗೆ ನೀಡಬಹುದಾದ, ಕೋವಿಡ್ 19 ಲಸಿಕೆ ‘ಅನೊಕೊವ್ಯಾಕ್ಸ್’ ಅನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?
A. ಐಐಎಸ್ಸಿ
B. ಐಸಿಎಆರ್-ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಇಕ್ವೈನ್ಸ್ (ಎನ್ಆರ್ಸಿ)
C. ಐಸಿಎಆರ್- ದೆಹಲಿ
D. ಮೇಲಿನ ಯಾವುದು ಅಲ್ಲ