11 ಸೆಪ್ಟೆಂಬರ್ 2023

11 ಸೆಪ್ಟೆಂಬರ್ 2023

1.‘ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕ ವಿಮಾ ಯೋಜನೆ’ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಗಿಗ್ ಉದ್ಯೋಗಿಗಳಿಗೆ 2 ಲಕ್ಷ ರೂ. ಜೀವ ವಿಮೆ ಹಾಗೂ 2 ಲಕ್ಷ ರೂ. ಅಪಘಾತ ವಿಮೆ ಸೇರಿದಂತೆ 4 ಲಕ್ಷ ರೂ. ವಿಮೆ ದೊರೆಯಲಿದೆ.
2 ಯಾವುದೇ ವಯೋಮಿತಿಯ ಗಿಗ್ ಉದ್ಯೋಗಿಗಗಳು ಯೋಜನೆಗೆ ಅರ್ಹರಾಗಿರುತ್ತಾರೆ
A) 1 ಮಾತ್ರ ಸರಿ
B) 2 ಮಾತ್ರ ಸರಿ
C) ಮೇಲಿನ ಎರಡೂ ಸರಿ
D) ಮೇಲಿನ ಎರಡೂ ತಪ್ಪು
2. ಕರ್ನಾಟಕ ರಾಜ್ಯ ಸರ್ಕಾರ ರೋಗ ಕಣ್ಗಾವಲು ಡ್ಯಾಶ್ಬೋರ್ಡ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಕೆಳಗಿನ ಯಾವ ರೋಗವನ್ನು ತಡೆಗಟ್ಟಲು ಅಭಿವೃದ್ಧಿಪಡಿಸಿದೆ?
A) ಮಲೇರಿಯಾ
B) ಡೆಂಗ್ಯೂ
C) ಎಚ್ ಏನ್
D) ಕೊರೋನಾ
3. ಕರ್ನಾಟಕ ಸರ್ಕಾರದ ʻನನ್ನ ಮೈತ್ರಿʼಯೋಜನೆಗೆ ರಾಯಭಾರಿ ಯಾರು?
A) ಸಪ್ತಮಿ ಗೌಡ
B) ಶ್ರೀನಿಧಿ
C) ರಚಿತಾ ರಾಮ
D) ರಶ್ಮಿಕಾ ಮಂದಣ್ಣ
4. ʻನನ್ನ ಮೈತ್ರಿʼಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A) ರಾಜ್ಯದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪಕಿನ್ ಒದಗಿಸುವ ಯೋಜನೆ
B) ರಾಜ್ಯದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಋತುಸ್ರಾವ ಕಪ್ ವಿತರಿಸುವ ಯೋಜನೆ
C) ರಾಜ್ಯದ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿನಿಯರಿಗೆ ಇದು ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಯೋಜನೆ
D) ಮೇಲಿನ ಯಾವುದು ಅಲ್ಲ