1.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (MTP) ಕಾಯಿದೆ, 1971 ಅನ್ನು ಇಲ್ಲಿಯವರೆಗೆ ಒಮ್ಮೆ ಮಾತ್ರ ತಿದ್ದುಪಡಿ ಮಾಡಲಾಗಿದೆ.
2. ಕಾನೂನಿನ ಪ್ರಕಾರ, 20 ವಾರಗಳಿಂದ 24 ವಾರಗಳವರೆಗೆ ಗರ್ಭಪಾತಕ್ಕೆ, ಇಬ್ಬರು ನೋಂದಾಯಿತ ವೈದ್ಯಕೀಯ ವೈದ್ಯರ ಅಭಿಪ್ರಾಯದ ಅಗತ್ಯವಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A. 1 ಮಾತ್ರ.
B. 2 ಮಾತ್ರ.
C. 1 ಮತ್ತು 2 ಎರಡೂ ಸರಿ
D. ಮೇಲಿನ ಯಾವುದೂ ಅಲ್ಲ.
2. ‘ಪರಿಸರ ರಾಯಭಾರಿ’ ಗೌರವವನ್ನು ಯಾರಿಗೆ ನೀಡಲಾಯಿತು?
A. ಸುಧಾ ಮೂರ್ತಿ
B. ಸಾಲುಮರದ ತಿಮ್ಮಕ್ಕ
C. ಕಿರಣ ಮಜುಂದಾರ ಷಾ
D. ಮೇಲಿನ ಯಾರು ಅಲ್ಲ
3. ಕರ್ನಾಟಕ ರಾಜ್ಯದ ಮೊದಲ ಸುರಂಗ ಅಕ್ವೇರಿಯಂ ಎಲ್ಲಿ ಸ್ಥಾಪಿಸಲಾಗುತ್ತಿದೆ?
A. ಕಾರವಾರ
B. ಉಡುಪಿ
C. ಬೆಂಗಳೂರು
D. ಮಂಗಳೂರು
4. ಪೋಷಣಾ ಯೋಜನೆಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1. ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ I ರಿಂದ VIII ತರಗತಿಗಳ ಎಲ್ಲಾ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
2. ಯೋಜನೆಯು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿನ ಮಕ್ಕಳಿಗೆ ಮತ್ತು ರಕ್ತಹೀನತೆಯ ಹೆಚ್ಚಾಗಿ ಕಾಣಿಸಿಕೊಳ್ಳುವ ಮಕ್ಕಳಿಗೆ ಪೂರಕ ಪೋಷಣೆಗೆ ಅವಕಾಶವನ್ನು ಹೊಂದಿದೆ.
A. 1 ಮಾತ್ರ ಸರಿ
B. 2 ಮಾತ್ರ ಸರಿ
C. 1 ಮತ್ತು2ಎರಡೂ ಸರಿ
D. 1 ಮತ್ತು2 ಎರಡೂ ತಪ್ಪು
5. GST ಬಗ್ಗೆ ಕೆಳೆಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
1. GST ಅಡಿಯಲ್ಲಿ, ಪ್ರಸ್ತುತ 5 ದರ ಸ್ಲ್ಯಾಬ್ಗಳಿವೆ: ಶೇಕಡಾ 3, ಶೇಕಡಾ 5. ಶೇಕಡಾ 10, ಶೇಕಡಾ16 ಮತ್ತು ಶೇಕಡಾ 28
2. GSTಯು ಕ್ಯಾಸ್ಕೇಡಿಂಗ್ ಪರಿಣಾಮ ಅಥವಾ ತೆರಿಗೆ ಮೇಲಿನ ತೆರಿಗೆಯನ್ನು ತಪ್ಪಿಸುತ್ತದೆ ಇದು ಅಂತಿಮ ಗ್ರಾಹಕರ ಮೇಲೆ ತೆರಿಗೆ ಹೊರೆಯನ್ನು ಹೆಚ್ಚಿಸುತ್ತದೆ
A. 1 ಮಾತ್ರ ಸರಿ
B. 2 ಮಾತ್ರ ಸರಿ
C. 1 ಮತ್ತು2ಎರಡೂ ಸರಿ
D. 1 ಮತ್ತು 2 ಎರಡೂ ತಪ್ಪು
6. ವಿಶ್ವ ಅಥ್ಲೆಟಿಕ್ಸ್2022 : ಭಾರತ ತಂಡಕ್ಕೆ ಯಾರು ನಾಯಕರು?
A. ರೋಹಿತ್ ಯಾದವ
B. ಸಂದೀಪ ಕುಮಾರ
C. ನೀರಜ್ ಚೋಪ್ರಾ
D. ತಾಜಿಂದರ್ ಪಾಲ್ ಸಿಂಗ್ ತೂರ್
7. ಭಾರತದ ರಾಷ್ಟ್ರ ಧ್ವಜದ ಅಳತೆಯು ಯಾವ ಅನುಪಾತದಲ್ಲಿರಬೇಕು?
A. 1 : 3
B. 2 : 3
C. 1 : 2
D. 2 : 4
8. ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದ ಉತ್ತರ ಆಯ್ಕೆ ಮಾಡಿ
1. NSIL ಭಾರತ ಸರ್ಕಾರದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದೆ.
2. ಇದು DRDO ದ ವಾಣಿಜ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತದೆ.
A. 1 ಮಾತ್ರ ಸರಿ
B. 2 ಮಾತ್ರ ಸರಿ
C. 1 ಮತ್ತು 2 ಎರಡೂ ಸರಿ
D. 1 ಮತ್ತು 2 ಎರಡೂ ತಪ್ಪು
9. ಏನಿದು ಆಪದ್ ಮಿತ್ರ?
A. ವಿಪತ್ತು ನಿರ್ವಹಣೆ ತರಬೇತಿ
B. ಮಿಲಿಟರಿ ವ್ಯಾಯಾಮ
C. ಸೈನಿಕರಿಗೆ ನೀಡುವ ವಿಶೇಷ ತರಬೇತಿ
D. ಮೇಲಿನ ಯಾವುದು ಅಲ್ಲ
10. PSLV-C53 ಮಿಷನ್ನಲ್ಲಿ, ISRO ಯಾವ ದೇಶದ ಮೂರು ಉಪಗ್ರಹಗಳನ್ನು ಉಡಾವಣೆ ಮಾಡಿದೆ?
A. ನೇಪಾಳ
B. ಬಾಂಗ್ಲಾದೇಶ
C. ಸಿಂಗಾಪುರ
D. ನ್ಯೂಜಿಲೆಂಡ್