18 ಅಕ್ಟೋಬರ್ 2021

18 ಅಕ್ಟೋಬರ್ 2021

1. ರೇಷ್ಮೆ ಜಿಲ್ಲೆ ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ ?

A. ರಾಮನಗರ

B. ಮಂಡ್ಯ

C. ಚಿಕ್ಕಬಳ್ಳಾಪುರ

D. ಯಾವುದು ಅಲ್ಲ

2. ಭೂಕಂಪನದ ಬಗ್ಗೆ ಕೆಳಗೆ ನೀಡಿರುವ ಹೇಳಿಕೆಯನ್ನು ಗಮನಿಸಿ.ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ

1. ಸುಣ್ಣದಕಲ್ಲು ಹೆಚ್ಚು ಇರುವ ಸ್ಥಳದಲ್ಲಿ ಪದೇಪದೇ ಭೂಕಂಪನವಾಗುವುದು ಸಹಜ

2. ಜಲಾಶಯ, ಹೊಳೆ ಅಥವಾ ಅಣೆಕಟ್ಟೆಗಳಲ್ಲಿ ಜಲರಾಶಿ ವಿಪರೀತವಾದಾಗ ಅದರ ವ್ಯಾಪ್ತಿಯಲ್ಲಿ ಭೂಮಿ ನಡುಗುತ್ತದೆ

A. ಹೇಳಿಕೆ ಒಂದು ಸರಿಯಾಗಿದೆ

B. ಹೇಳಿಕೆ ಎರಡು ಸರಿಯಾಗಿದೆ

C. ಎರಡೂ ಹೇಳಿಕೆಗಳು ಸರಿಯಾಗಿವೆ

D. ಎರಡೂ ಹೇಳಿಕೆಗಳು ತಪ್ಪಾಗಿವೆ

3. ‘ಕೆಂಪು ದೀಪ ಹತ್ತಿದ ತಕ್ಷಣ ಎಂಜಿನ್ ಆಫ್ ಮಾಡಿ’ ಅಭಿಯಾನವನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಗಿದೆ?

A. ದೆಹಲಿ

B. ಕರ್ನಾಟಕ

C. ಉತ್ತರ ಪ್ರದೇಶ

D. ಮಧ್ಯ ಪ್ರದೇಶ

4. ದೇಶದಲ್ಲಿ ಸತತ ಎಷ್ಟು ದಿನ ಮಳೆಯಾಗದಿದ್ದರೆ ಅಥವಾ ಒಣ ಹವೆ ಇದ್ದರೆ ಆಗ ಮುಂಗಾರು ಅಂತ್ಯವಾಗಿದೆ ಎಂದು ಘೋಷಿಸಲಾಗುತ್ತದೆ?

A. ನಾಲ್ಕು

B. ಐದು

C. ಆರು

D. ಏಳು

5. ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆ ಯಾಗಿಲ್ಲ

A. ಕೆಂಪು ರಕ್ತ ಕಣಗಳು – ಆಮ್ಲಜನಕ ಪೂರೈಕೆ

B. ಬಿಳಿಯ ರಕ್ತ ಕಣಗಳು – ಸೋಂಕಿನ ವಿರುದ್ಧ ಹೋರಾಟ

C. ಪ್ಲೇಟ್ಲೆಟ್ಗಳು – ರಕ್ತ ಹೆಪ್ಪುಗಟ್ಟುವಿಕೆ

D. ರಕ್ತದ್ರವ (ಪ್ಲಾಸ್ಮಾ)- ರಕ್ತ ನಿಧಾನವಾಗಿ ಚಲಿಸುವಿಕೆ