18 ಏಪ್ರಿಲ್ 2022
18 ಏಪ್ರಿಲ್ 2022
1.ಭೋಗ್ ಪ್ರಮಾಣಪತ್ರಕ್ಕೆ ಆಯ್ಕೆಯಾದ ರಾಜ್ಯದ ದೇವಾಲಯಗಳು ಯಾವುವು?
A. ಕೊಲ್ಲೂರು ದೇವಸ್ಥಾನ
B. ಕುಕ್ಕೆ ಶ್ರೀ ಸುಬ್ರಹ್ಮಣ್ಯ,
C. ಮಾರಿಕಾಂಬಾ ದೇವಸ್ಥಾನ, ಶಿರಸಿ
D. ಮೇಲಿನ ಎಲ್ಲವು
2. ಯಾರ ಜನ್ಮದಿನವನ್ನು ಕರ್ನಾಟಕದಲ್ಲಿ ಭಾವೈಕ್ಯ ದಿನವನ್ನಾಗಿ ಆಚರಿಸಲಾಗುವುದು?
A. ಶಿವಕುಮಾರ ಸ್ವಾಮೀಜಿ
B. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ
C. ಬಾಲಗಂಗಾಧರನಾಥ ಸ್ವಾಮೀಜಿ
D. ವಿಶ್ವೇಶ ತೀರ್ಥ ಸ್ವಾಮೀಜಿ
3. ವಿಶ್ವ ಬ್ಯಾಂಕ್ ನೀತಿ ಸಂಶೋಧನೆಯ ಪ್ರಾಥಮಿಕ ವರದಿ ಕುರಿತು ನೀಡಿರುವ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದುದನ್ನು ಆಯ್ಕೆ ಮಾಡಿ
೧. ವರದಿ ಪ್ರಕಾರ ಭಾರತದ ಕಡು ಬಡತನ ಪ್ರಮಾಣವು 2011ರಲ್ಲಿ ಇದ್ದುದಕ್ಕಿಂತ 2019ರಲ್ಲಿ ಶೇ 12.3ರಷ್ಟು ಕಡಿಮೆಯಾಗಿದೆ
೨. ನಗರ ಭಾರತಕ್ಕೆ ಹೋಲಿಸಿದರೆ ಗ್ರಾಮೀಣ ಭಾಗಗಳಲ್ಲಿ ಬಡತನ ಇಳಿಕೆ ಅಧಿಕ ಪ್ರಮಾಣದಲ್ಲಿ ಆಗಿದೆ.
A. ಮೊದಲನೇ ಹೇಳಿಕೆ ಸರಿಯಿದೆ
B. ಎರಡನೇ ಹೇಳಿಕೆ ತಪ್ಪಾಗಿದೆ
C. ಎರಡೂ ಹೇಳಿಕೆಗಳು ಸರಿಯಿವೆ
D. ಎರಡೂ ಹೇಳಿಕೆಗಳು ತಪ್ಪಾಗಿವೆ
4. ಭಗವಾನ್ ಹನುಮಂತ ಚಾರ್ ಧಾಮ್ ಯಾತ್ರೆಯ ಅಂಗವಾಗಿ ದೇಶದ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಪ್ರತಿಮೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕೆಳಗಿನ ಜೋಡಿಗಳಲ್ಲಿ ಯಾವುದು ಹೊಂದಿಕೆ ಆಗಿಲ್ಲ
A. ಉತ್ತರ – ಹಿಮಾಚಲ್ ಪ್ರದೇಶ
B. ದಕ್ಷಿಣ – ಕರ್ನಾಟಕ
C. ಪೂರ್ವ -ಪಶ್ಚಿಮ ಬಂಗಾಳ
D. ಪಶ್ಚಿಮ – ಗುಜರಾತ್
5. 2020 ರಲ್ಲಿ ಜಾಗತಿಕ ಗೋಧಿ ಉತ್ಪಾದನೆಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A. ಮೊದಲನೇ ಸ್ಥಾನ
B. ಎರಡನೇ ಸ್ಥಾನ
C. ಮೂರನೇ ಸ್ಥಾನ
D. ನಾಲ್ಕನೇ ಸ್ಥಾನ