1.ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾವು ಮಂಗಳ ಗ್ರಹಕ್ಕೆ ಕಳುಹಿಸಿದ್ದ ಮಾರ್ಸ್ ಆಪರ್ಚುನಿಟಿ ರೋವರ್ನ ಪೂರ್ಣ ಪ್ರಮಾಣದ ಪ್ರತಿಕೃತಿಯನ್ನು ಎಲ್ಲಿ ಅನಾವರಣಗೊಳಿಸಲಾಯಿತು?
A) ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ
B) ಇಸ್ರೋ ಬೆಂಗಳೂರು
C) ಸತೀಶ ಧವನ ಸ್ಪೇಸ್ ಸೆಂಟರ್ ಆಂಧ್ರ ಪ್ರದೇಶ
D) ಜವಾಹರಲಾಲ ಪ್ಲಾನಿಟೋರಿಯಂ ಬೆಂಗಳೂರು
2.ಮಂಗಳ ಗ್ರಹದಲ್ಲಿ ನೀರಿನ ಕುರುಹಿದೆಯೇ ಎಂಬುದನ್ನು ಪತ್ತೆ ಹಚ್ಚಲು ಕಳುಹಿಸಿದ್ದ ಮಾರ್ಸ್ ಆಪರ್ಚುನಿಟಿ ರೋವರ್ ಕಾರ್ಯಾಚರಣೆ ಯಾವ ದೇಶದ್ದಾಗಿದೆ?
A) ಯುರೋಪ್
B) ರಷ್ಯಾ
C) ಅಮೇರಿಕ
D) ಭಾರತ
3.ಜಗತ್ತಿನ ಪ್ರಥಮ 3ಡಿ ಮುದ್ರಿತ ಹಿಂದು ದೇವಾಲಯವನ್ನು ಎಲ್ಲಿ ನಿರ್ಮಿಸಲಾಗುತ್ತಿದೆ?
A) ಆಂಧ್ರ ಪ್ರದೇಶ
B) ತಮಿಳ ನಾಡು
C) ಕರ್ನಾಟಕ
D) ತೆಲಂಗಾಣ
4.ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1.ಹವಾ ನಿಯಂತ್ರಿತ ಬಸ್ಗಳು ಮತ್ತು ಐಷಾರಾಮಿ ಬಸ್ಗಳನ್ನು ಹೊರತುಪಡಿಸಿ ಎಲ್ಲ ಕೆಎಸ್ಆರ್ಟಿಸಿ ಬಸಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು.
2.ಉಚಿತ ಬಸ್ ಪ್ರಯಣದ ಸವಲತ್ತನ್ನು ತೃತೀಯ ಲಿಂಗಿಗಳಿಗೂ ಒದಗಿಸಲಾಗಿದೆ.
3.ಬಿ ಎಮ್ ಟಿ ಸಿ ಹೊರತುಪಡಿಸಿ ಉಳಿದ ಬಸ್ಗಳಲ್ಲಿ ಕೆಎಸ್ಆರ್ಟಿಸಿ ಶೇ . 50 ರಷ್ಟು ಸೀಟುಗಳನ್ನು ಪುರುಷರಿಗೆ ಮೀಸಲಿರಿಸಲಾಗುವುದು
A) 1, 2
B) 2, 3
C) 1, 3
D) 1, 2, 3