1. ಚಿತ್ರನಟ ಬಿ.ಎಸ್. ದ್ವಾರಕೀಶ್, ಕಲಾವಿದ ಡಾ.ಟಿ. ಅನಿಲ್ ಕುಮಾರ್ ಮತ್ತು ಅಮೆರಿಕದ ಕನ್ನಡ ಕೂಟಗಳ ಸಂಘಟನೆ (ಅಕ್ಕ) ಅಧ್ಯಕ್ಷ ಅಮರನಾಥ್ ಗೌಡ ಅವರಿಗೆ ಯಾವ ವಿಶ್ವ ವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ ನೀಡಲು ನಿರ್ಧರಿಸಿದೆ
A. ಬೆಂಗಳೂರು ವಿಶ್ವವಿದ್ಯಾನಿಲಯ
B. ಮೈಸೂರು ವಿಶ್ವವಿದ್ಯಾನಿಲಯ
C. ಧಾರವಾಡ ವಿಶ್ವವಿದ್ಯಾನಿಲಯ
D. ಕರ್ನಾಟಕ ವಿಶ್ವವಿದ್ಯಾನಿಲಯ
2. ಯಾವ ನಟ ನ ಅನುಮತಿ ಇಲ್ಲದೇ ಅವರ ಧ್ವನಿ ಹಾಗೂ ಚಿತ್ರಗಳನ್ನು ಎಲ್ಲಿಯೂ ಬಳಕೆ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ?
A. ಅಜಯ್ ದೇವ್ಗನ್
B. ಅಮಿತಾಭ್ ಬಚ್ಚನ್
C. ಸನ್ನಿ ಡಿಯೋಲ್
D. ಅನುಪಮ್ ಖೇರ್
3. ವರ್ಚುವಲ್ ಜಸ್ಟೀಸ್ ಕ್ಲಾಕ್ ಬಗ್ಗೆ ನೀಡಲಾಗಿರುವ ಹೇಳಿಕೆಯನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಗಳನ್ನು ಆಯ್ಕೆ ಮಾಡಿ
1. ಇದು ನ್ಯಾಯಾಲಯದ ಮಟ್ಟದಲ್ಲಿ ದಿನ/ವಾರ/ತಿಂಗಳ ಆಧಾರದ ಮೇಲೆ ಸ್ಥಾಪಿಸಲಾದ ಪ್ರಕರಣಗಳು, ವಿಲೇವಾರಿ ಮಾಡಿದ ಪ್ರಕರಣಗಳು ಮತ್ತು ಪ್ರಕರಣಗಳ ಬಾಕಿಯ ವಿವರಗಳನ್ನು ನೀಡುತ್ತದೆ
2. ನ್ಯಾಯಾಲಯದ ಪ್ರಕರಣಗಳ ವಿಲೇವಾರಿಗಳ ಸ್ಥಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವ ಮೂಲಕ ನ್ಯಾಯಾಲಯಗಳ ಕಾರ್ಯನಿರ್ವಹಣೆಯನ್ನು ಜವಾಬ್ದಾರಿಯುತ ಮತ್ತು ಪಾರದರ್ಶಕವಾಗಿಸಲು ನೆರವಾಗುತ್ತದೆ.
A. 1 ಮಾತ್ರ ಸರಿಯಿದೆ
B. 2 ಮಾತ್ರ ಸರಿಯಿದೆ
C. ಎರಡು ಹೇಳಿಕೆಗಳು ಸರಿಯಿದೆ
D. ಎರಡೂ ಹೇಳಿಕೆಗಳು ತಪ್ಪಾಗಿವೆ