1.ಗ್ಯಾನಿಮೇಡಾ, ಯುರೋಪ ಮತ್ತು ಕ್ಯಾಲಿಸ್ಟೊ ಇವು ಯಾವ ಗ್ರಹದ ಉಪಗ್ರಹಗಳಾಗಿವೆ?
A) ಶುಕ್ರ
B) ಬುಧ
C) ಮಂಗಳ
D) ಗುರು
2.ಗುರು ಗ್ರಹದ ಚಂದ್ರಗಳ ಮೇಲ್ಮೈನಲ್ಲಿರುವ ಜೀವಿಗಳ ಕುರುಹು ಪತ್ತೆಗಾಗಿ ಯಾವ ಸ್ಪೇಸ್ ಏಜೆನ್ಸಿ ಜ್ಯೂಸ್ ಮಿಷನ್ ಅನ್ನು ಸಿದ್ದಪಡಿಸಿದೆ?
A) ಯುರೋಪಿಯನ್ ಸ್ಪೇಸ್ ಏಜೆನ್ಸಿ
B) ನಾಸಾ
C) ಇಸ್ರೋ
D) ಸ್ಪೇಸ್ ಎಕ್ಷ
3.ನ್ಯಾವಿಗೇಷನ್ (ಪಥದರ್ಶಕ) ಉಪಗ್ರಹ ‘ಎನ್ವಿಎಸ್–01’ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1.GPS ಗೆ ಸಮಾನವಾದ ದಿಕ್ಸೂಚಿ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಇಸ್ರೋದ ಸರಣಿ ಉಪಗ್ರಹಗಳ ಸಾಲಿನ ಮುಂದಿನ ತಲೆಮಾರಿನ ಉಪಗ್ರಹ ಇದಾಗಿದೆ
2.ಈ ಉಪಗ್ರಹ 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ.
A) 1 ಮಾತ್ರ ಸರಿ
B) 2 ಮಾತ್ರ ಸರಿ
C) 1 ಮತ್ತು 2 ಎರಡೂ ಸರಿ
D) 1 ಮತ್ತು 2 ಎರಡೂ ತಪ್ಪು
3.ನೂತನ ಸಂಸತ್ ಭವನದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಭವನವು ಕಮಲದ ಹೂವಿನ ವಿನ್ಯಾಸದಲ್ಲಿದೆ
2 ಲೋಕಸಭೆಯನ್ನು ರಾಷ್ಟ್ರೀಯ ಪಕ್ಷಿ ನವಿಲು ಥೀಮ್ನಲ್ಲಿ ನಿರ್ಮಿಸಲಾಗಿದ್ದು, 888 ಸ್ಥಾನಗಳ ವ್ಯವಸ್ಥೆ ಇದೆ.
3 ರಾಜ್ಯಸಭೆಯಲ್ಲಿ 388 ಆಸನ ವ್ಯವಸ್ಥೆ ಮಾಡಲಾಗಿದೆ
A) 2, 3
B) 1, 2
C) 1, 3
D) 1, 2, 3