7 ಆಗಸ್ಟ್ 2023

7 ಆಗಸ್ಟ್ 2023

1. ಇ-ಸಂಜೀವಿನಿ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಗಳನ್ನು ಆಯ್ಕೆ ಮಾಡಿ
1 ಇ-ಸಂಜೀವಿನಿ (AB-HWC) ವೈದ್ಯರಿಂದ ವೈದ್ಯರಿಗೆ ಟೆಲಿ ಸಮಾಲೋಚನೆ ನಡೆಸುವುದನ್ನು ಸುಲಭಗೊಳಿಸಲು ಉಚಿತ, ಬ್ರೌಸರ್ ಆಧಾರಿತ ಆ್ಯಪ್ ಆಗಿದೆ.
2 ಇ- ಸಂಜೀವಿನಿ (OPD) ರೋಗಿಯಿಂದ ವೈದ್ಯರಿಗೆ ಟೆಲಿ ಸಮಾಲೋಚನೆ ನಡೆಸುವುದನ್ನು ಸುಲಭಗೊಳಿಸಲು ಉಚಿತ, ಬ್ರೌಸರ್ ಆಧಾರಿತ ಆ್ಯಪ್ ಆಗಿದೆ.
A) 1 ಮಾತ್ರ ಸರಿ
B) 2 ಮಾತ್ರ ಸರಿ
C) 1 ಮತ್ತು 2 ಎರಡೂ ಸರಿ
D) 1 ಮತ್ತು 2 ಎರಡೂ ತಪ್ಪು
2. PM SHRI ಶಾಲೆಗಳ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
A) PM SHRI ಶಾಲೆಗಳು ಕೇಂದ್ರ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸ್ಥಳೀಯ ಸಂಸ್ಥೆಗಳು ನಡೆಸುತ್ತಿರುವ ಅಸ್ತಿತ್ವದಲ್ಲಿರುವ ಶಾಲೆಗಳ ಅಪ್ಗ್ರೇಡ್ ಆಗಿರುತ್ತವೆ.
B) PM SHRI ಶಾಲೆಗಳು ಕೇಂದ್ರ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ನಡೆಸುತ್ತಿರುವ ಅಸ್ತಿತ್ವದಲ್ಲಿರುವ ಶಾಲೆಗಳ ಅಪ್ಗ್ರೇಡ್ ಆಗಿರುತ್ತವೆ.
C) PM SHRI ಶಾಲೆಗಳು ಕೇಂದ್ರ ಸರ್ಕಾರ ನಡೆಸುತ್ತಿರುವ ಅಸ್ತಿತ್ವದಲ್ಲಿರುವ ಶಾಲೆಗಳ ಅಪ್ಗ್ರೇಡ್ ಆಗಿರುತ್ತವೆ.
D) PM SHRI ಶಾಲೆಗಳು ಕೇಂದ್ರ ಮತ್ತು ಕೇಂದ್ರಾಡಳಿತ ಪ್ರದೇಶಗಳು ನಡೆಸುತ್ತಿರುವ ಅಸ್ತಿತ್ವದಲ್ಲಿರುವ ಶಾಲೆಗಳ ಅಪ್ಗ್ರೇಡ್ ಆಗಿರುತ್ತವೆ.
3. ರಾಷ್ಟ್ರೀಯ ಕೈಮಗ್ಗ ದಿನ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 1905, ಆಗಸ್ಟ್ 7 ರಂದು ನಡೆದ ಸ್ವದೇಶಿ ಆಂದೋಲನದ ಗೌರವಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ 2 2023 ರ ಥೀಮ್: “ಸುಸ್ಥಿರ ಫ್ಯಾಷನ್ಗಾಗಿ ಕೈಮಗ್ಗ”.
3 ಮೊದಲ ಬಾರಿಗೆ ಈ ದಿನವನ್ನು ಆಗಸ್ಟ್ 7, 2016 ರಂದು ಆಚರಿಸಲಾಯಿತು.
A) 1 ಮತ್ತು 2
B) 1 ಮತ್ತು 3
C) 2 ಮತ್ತು 3
D) 1, 2 ಮತ್ತು 3