9 ಜೂನ್ 2023

9 ಜೂನ್ 2023

1.ಇತ್ತೀಚಿಗೆ ಅರಬ್ಬೀ ಸಮುದ್ರಕ್ಕೆ ಅಪ್ಪಳಿಸಿದ  ಚಂಡಮಾರುತಕ್ಕೆ ಬಿಪರ್ ಜಾಯ್ ಎಂಬ  ಹೆಸರನ್ನು ಯಾವ ದೇಶ ನೀಡಿದೆ?
A) ನೇಪಾಳ
B) ಶ್ರೀಲಂಕಾ
C) ಬಾಂಗ್ಲಾದೇಶ
D) ಮಯನ್ಮಾರ್
2 ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1.ಬ್ಯಾಲಿಸ್ಟಿಕ್ ಕ್ಷಿಪಣಿಗಳು ತಮ್ಮ ಯುದ್ಧಗಳ ಉದ್ದಕ್ಕೂ ಸಬ ಸೋನಿಕ್ ವೇಗದಲ್ಲಿ ಜೆಟ್-ಇಂಜಿನ್ ಚಾಲಿತವಾಗಿರುತ್ತವೆ, ಆದರೆ ಕ್ರೂಸ್ ಕ್ಷಿಪಣಿಗಳು ಹಾರಾಟದ ಆರಂಭಿಕ ಹಂತದಲ್ಲಿ ಮಾತ್ರ ರಾಕೆಟ್-ಇಂಜಿನ್  ಚಾಲಿತವಾಗಿರುತ್ತವೆ.
2.ಅಗ್ನಿ-v ಮಧ್ಯಮ-ಶ್ರೇಣಿಯ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ, ಆದರೆ ಬ್ರಹ್ಮೋಸ್ ಘನ ಇಂಧನ ಖಂಡಾಂತರ ಕ್ಷಿಪಣಿಯಾಗಿದೆ.
ಕೋಡ್‌ಗಳು
A) 1 ಮಾತ್ರ
B) 2 ಮಾತ್ರ
C) 1 ಮತ್ತು 2 ಎರಡೂ
D) 1 ಅಥವಾ 2 ಅಲ್ಲ
3.ವರುಣಾಸ್ತ್ರ ಎಂದರೇನು?
A) ಟಾರ್ಪೆಡೋ
B) ನವೀನ ಮಳೆನೀರು ಕೊಯ್ಲು ತಂತ್ರ
C) ಭೂಮಿಯಿಂದ ಬಾನಿಗೆ ತಲುಪುವ ಕ್ಷಿಪಣಿಯಾಗಿದೆ
D) ಕೃತಕ ಮಳೆಯನ್ನು ಉಂಟುಮಾಡಲು ರೂಪಿಸಲಾದ ಯಾಂತ್ರಿಕ ವ್ಯವಸ್ಥೆ
4.ವರುಣಾಸ್ತ್ರ ಕ್ಷಿಪಣಿಯನ್ನು ಉಲ್ಲೇಖಿಸಿ, ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
A) ಇದು ಕ್ರೂಸ್ ಕ್ಷಿಪಣಿಯಾಗಿದ್ದು, ಶಸ್ತ್ರಸಜ್ಜಿತ ಟ್ಯಾಂಕ್‌ಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.
B) ಇದು ವಾಯುಗಾಮಿ ಬೆದರಿಕೆಗಳನ್ನು ರಕ್ಷಿಸಲು ಸಬ್ಸಾನಿಕ್ ಬಾನಿನಿಂದ ಬಾನಿಗೆ ತಲುಪುವ ಕ್ಷಿಪಣಿಯಾಗಿದೆ.
C) ಇದು ಜಲಾಂತರ್ಗಾಮಿ ನೌಕೆಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿರುವ ಜಲಾಂತರ್ಗಾಮಿ ವಿರೋಧಿ ಟಾರ್ಪಿಡೊ ಆಗಿದೆ.
D) ಇದು ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಶತ್ರುಗಳ ಬಂಕರ್‌ಗಳ ಮೇಲೆ ನಿಖರವಾದ ದಾಳಿಗೆ ಬಳಸಲಾಗುತ್ತದೆ.