Published on: July 1, 2025

ಬಾನು ಮುಷ್ತಾಕ್

ಬಾನು ಮುಷ್ತಾಕ್

ಸುದ್ದಿಯಲ್ಲಿ ಏಕಿದೆ? ಬಳ್ಳಾರಿಯಲ್ಲಿ 2025ರ ಡಿಸೆಂಬರ್‌ನಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಲೇಖಕಿ, ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಸ ಆಯ್ಕೆ ಮಾಡಿದೆ.

ಮುಖ್ಯಾಂಶಗಳು

  • ದೀಪಾ ಭಾಸ್ತಿಗೆ ವಿಶೇಷ ಗೌರವ: ‘ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಪುಸ್ತಕವನ್ನು ಇಂಗ್ಲಿಷ್‌ಗೆ ಅನುವಾದ ಮಾಡಿ. ಅವರ ಸಾಹಿತ್ಯವನ್ನು ಜಗತ್ತಿಗೆ ತಿಳಿಸಿದ ಅನುವಾದಕಿ ದೀಪಾ ಭಾಸ್ತಿ ಅವರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷವಾಗಿ ಗೌರವಿಸಲಾಗುವುದು.
  • ಮಹಿಳೆಗೆ ಐದನೇ ಬಾರಿಗೆ ಅವಕಾಶ: ಈ ವರೆಗೆ ನಡೆದಿರುವ 87 ಸಮ್ಮೇಳನಗಳಲ್ಲಿ ನಾಲ್ಕು ಬಾರಿ ಮಾತ್ರ ಮಹಿಳೆಯರಿಗೆ

ಅವಕಾಶ ಸಿಕ್ಕಿದ್ದು ವಿವರ ಇಂತಿದೆ:

  • 1974ರಲ್ಲಿ ಮಂಡ್ಯದಲ್ಲಿ ನಡೆದಿದ್ದ 48ನೇ ಸಾಹಿತ್ಯ ಸಮ್ಮೇಳನದಲ್ಲಿ ಜಯದೇವಿ ತಾಯಿ ಲಿಗಾಡೆ.
  • 2000 ಇಸವಿಯಲ್ಲಿ ಬಾಗಲಕೋಟೆಯಲ್ಲಿ ನಡೆದಿದ್ದ 68ನೇ ಸಮ್ಮೇಳನದಲ್ಲಿ ಶಾಂತಾದೇವಿ ಮಾಳವಾಡ,
  • 2003ರಲ್ಲಿ ಮೂಡುಬಿದಿರೆಯಲ್ಲಿ ನಡೆದಿದ್ದ 71ನೇ ಸಮ್ಮೇಳನದಲ್ಲಿ ಕಮಲಾ ಹಂಪನಾ.
  • 2010ರಲ್ಲಿ ಗದಗದಲ್ಲಿ ನಡೆದಿದ್ದ 76ನೇ ಸಮ್ಮೇಳನದಲ್ಲಿ ಗೀತಾ ನಾಗಭೂಷಣ.

ಬಾನು ಮುಷ್ತಾಕ್

ಕರ್ನಾಟಕದ ಒಬ್ಬ ಭಾರತೀಯ ಕನ್ನಡ ಭಾಷೆಯ ಬರಹಗಾರ್ತಿ, ಕಾರ್ಯಕರ್ತೆ ಮತ್ತು ವಕೀಲೆ.

ಜನನ: ಏಪ್ರಿಲ್ 3, 1948 ಹಾಸನ

ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯ ಇಂಗ್ಲಿಷ್ ಅನುವಾದಿತ ಹಾರ್ಟ್ ಲ್ಯಾಂಪ್‌ಗೆ (Heart Lamp) ಪ್ರಶಸ್ತಿ ಸಿಕ್ಕಿತ್ತು. ಈ ಮೂಲಕ ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ವಿಶೇಷ. ಬೂಕರ್ ಪ್ರಶಸ್ತಿ 50 ಸಾವಿರ ಪೌಂಡ್‌ (ಅಂದಾಜು 57.28 ಲಕ್ಷ ರೂ.) ಒಳಗೊಂಡಿತ್ತು. ಇದೇ ಅನುವಾದಿತ ಕೃತಿಗೆ ‘ಪೆನ್ ಟ್ರಾನ್ಸ್‌ಲೇಟ್ಸ್’ ಪ್ರಶಸ್ತಿಯೂ ಸಿಕ್ಕಿತ್ತು.

990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕನ್ನು ಆಧಾರಿಸಿ ಈ ಕತೆಯನ್ನು ಬರೆಯಲಾಗಿತ್ತು.