Published on: July 1, 2025
ವಿವಿಧ ಆಪ್ಗಳಲ್ಲಿ ಮೆಟ್ರೊ ಟಿಕೆಟ್
ವಿವಿಧ ಆಪ್ಗಳಲ್ಲಿ ಮೆಟ್ರೊ ಟಿಕೆಟ್
ಸುದ್ದಿಯಲ್ಲಿ ಏಕಿದೆ? ನಮ್ಮ ಮೆಟೊ ಪ್ರಯಾಣಿಕರಿಗೆ ಯಾವುದೇ ಆ್ಯಪ್ ನಲ್ಲಿ ಟಿಕೆಟ್ ಖರೀದಿಸಲು ಅನುಕೂಲವಾಗುವಂತೆ ಮಾಡಲು ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ನೊಂದಿಗೆ (ಒಎನ್ ಡಿಸಿ) ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (ಬಿಎಂಆರ್ ಸಿಎಲ್) ಸಂಯೋಜನೆ ನಡೆಸಲಿದೆ.
ಮುಖ್ಯಾಂಶಗಳು
- ಪ್ರಸ್ತುತ ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಪಾವತಿ ಮಾಡಿ ಟಿಕೆಟ್ ಖರೀದಿಸಲು. ಸ್ಮಾರ್ಟ್ ಕಾರ್ಡ್ ಮೂಲಕ ಸಂಚರಿಸಲು, ವಾಟ್ಸ್ ಆ್ಯಪ್ ಚಾಟ್ ಬಾಟ್ ಹಾಗೂ ಪೇಟಿಎಂನಲ್ಲಿ ಟಿಕೆಟ್ ಖರೀದಿ ಮಾಡಲು ಅವಕಾಶವಿದೆ.
- ಒಎನ್ಡಿಸಿ ಜೊತೆಗೆ ಸಂಯೋಜನೆಯ ಬಳಿಕ ಟುಮ್ಯಾಕೊ, ರೆಡ್ ಬಸ್, ಔಟ್ ಪಾಥ್, ಹೈವೇ ಡಿಲೈಟ್, ನಮ್ಮ ಯಾತ್ರಿ, ರಾಪಿ ರಾಪಿಡೊ ಸೇರಿದಂತೆ ಹತ್ತಕ್ಕೂ ಅಧಿಕ ಅಪ್ಲಿಕೇಶನ್ಗಳಲ್ಲಿ ಟಿಕೆಟ್ ಖರೀದಿಸಲು ಅವಕಾಶವಾಗಲಿದೆ.
ಉದ್ದೇಶ
ಈ ಯೋಜನೆಯು ಸಾರ್ವಜನಿಕ ಸಾರಿಗೆಗಳನ್ನು ಸಂಯೋಜಿಸುವ, ಪ್ರಯಾಣ ಸಂಪರ್ಕಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಪ್ರಯಾಣಿಕರು ಏಕೀಕೃತ ಡಿಜಿಟಲ್ ಪ್ಲಾಟ್ ಫಾರ್ಮ್ ಮೂಲಕ ಮೆಟ್ರೊ ಟಿಕೆಟ್ಗಳನ್ನು ಖರೀದಿಸಲು, ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಲು, ಬಸ್ ಪಾಸ್ಗಳನ್ನು ಪಡೆಯಲು ಸಾಧ್ಯವಾಗಲಿದೆ.
