Published on: July 17, 2025

ಪ್ರಧಾನಮಂತ್ರಿ ಧನ್-ಧಾನ್ಯ ಯೋಜನೆ: ಕೃಷಿ ಕ್ಷೇತ್ರಕ್ಕೆ ₹24 ಸಾವಿರ ಕೋಟಿ ಉತ್ತೇಜನ

ಪ್ರಧಾನಮಂತ್ರಿ ಧನ್-ಧಾನ್ಯ ಯೋಜನೆ: ಕೃಷಿ ಕ್ಷೇತ್ರಕ್ಕೆ ₹24 ಸಾವಿರ ಕೋಟಿ ಉತ್ತೇಜನ

ಸುದ್ದಿ ವಿಶೇಷ:

  • ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೇಂದ್ರ ಸಚಿವ ಸಂಪುಟವು ‘ಪ್ರಧಾನಮಂತ್ರಿ ಧನ್-ಧಾನ್ಯ ಯೋಜನೆ‘ಗೆ ಅನುಮೋದನೆ ನೀಡಿದೆ.
  • ಆರು ವರ್ಷಗಳ ಅವಧಿಯ ಈ ಯೋಜನೆ ದೇಶದ 100 ಜಿಲ್ಲೆಗಳಲ್ಲಿ ಜಾರಿಯಾಗಲಿದ್ದು, ವಾರ್ಷಿಕ ₹24 ಸಾವಿರ ಕೋಟಿ ವೆಚ್ಚದೊಂದಿಗೆ 1.7 ಕೋಟಿ ರೈತರಿಗೆ ಪ್ರಯೋಜನವಾಗಲಿದೆ.
  • 2025-26ರ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಈ ಯೋಜನೆಯು ಕೃಷಿ ಉತ್ಪಾದಕತೆ ಹೆಚ್ಚಳ, ಬೆಳೆ ವೈವಿಧ್ಯತೆ, ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆ, ಸ್ಥಳೀಯ ಸಂಗ್ರಹಣೆ ವೃದ್ಧಿ, ನೀರಾವರಿ ಸುಧಾರಣೆ ಮತ್ತು ಸಾಲದ ಲಭ್ಯತೆಯನ್ನು ಸುಗಮಗೊಳಿಸುವ ಗುರಿ ಹೊಂದಿದೆ.
  • ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುವುದು.

ಪ್ರಮುಖ ಗುರಿಗಳು:

  • ಕೃಷಿ ಉತ್ಪಾದಕತೆ ಹೆಚ್ಚಳ.
  • ಬೆಳೆಗಳಲ್ಲಿ ವೈವಿಧ್ಯತೆ.
  • ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆ.
  • ಪಂಚಾಯಿತಿ ಮತ್ತು ಬ್ಲಾಕ್ ಮಟ್ಟದಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಣೆ ಹೆಚ್ಚಳ.
  • ನೀರಾವರಿ ಸೌಲಭ್ಯಗಳ ಸುಧಾರಣೆ. ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲದ ಲಭ್ಯತೆಯನ್ನು ಸುಗಮಗೊಳಿಸುವುದು.

ಅನುಷ್ಠಾನ ಮತ್ತು ಮೇಲ್ವಿಚಾರಣೆ:
ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಮಿತಿಗಳ ರಚನೆ.
ಜಿಲ್ಲಾ ಸಮಿತಿ:
ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಯೋಜನೆಗೆ ಅಂತಿಮ ರೂಪ ನೀಡುತ್ತದೆ; ಪ್ರಗತಿಪರ ರೈತರು ಇದರ ಸದಸ್ಯರಾಗಿರುತ್ತಾರೆ.