Published on: July 17, 2025
ಜನಗಣತಿ ವಿಳಂಬ – ಒಂದು ಗಂಭೀರ ರಾಷ್ಟ್ರೀಯ ಸವಾಲು
ಜನಗಣತಿ ವಿಳಂಬ – ಒಂದು ಗಂಭೀರ ರಾಷ್ಟ್ರೀಯ ಸವಾಲು
ಸುದ್ದಿ ವಿಶೇಷ:
- ಭಾರತದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ನಡೆಯುವ ಜನಗಣತಿ ಪ್ರಕ್ರಿಯೆ 1872ರಲ್ಲಿ ಪ್ರಾರಂಭವಾಗಿ 1951ರಿಂದ ಸಕಾಲಿಕವಾಗಿ ನಡೆಯುತ್ತಲೇ ಬಂದಿದೆ.
- ಆದರೆ, 2021ರ ಜನಗಣತಿ COVID-19 ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದು, 2024ರ ನಂತರವೂ ಅದು ನಡೆಯುವ ಸಾಧ್ಯತೆ ಕಡಿಮೆ. ಇದು ಭಾರತದಲ್ಲಿಯೇ ಮೊದಲ ಬಾರಿಗೆ ಇಂತಹ ಅತೀ ದೀರ್ಘ ವಿಳಂಬವಾಗಿದೆ.
- ಜನಗಣತಿಯ ವಿಳಂಬವು ಕೇವಲ ಅಂಕಿಅಂಶಗಳ ತೊಂದರೆಯಾಗಿರದೇ, ಅದು ಭಾರತದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸಮತೋಲನಕ್ಕೆ ಭಾರೀ ಪರಿಣಾಮ ಬೀರುತ್ತಿದೆ ಎಂಬುದನ್ನು ವಿಶ್ಲೇಷಿಸಿದ್ದಾರೆ.
- ಜನಗಣತಿ ಇಲ್ಲದಿರುವುದು ಆಡಳಿತಾತ್ಮಕ ದೋಷಗಳು, ಅಭಿವೃದ್ಧಿ ಯೋಜನೆಗಳಲ್ಲಿ ಅಸಮತೋಲನ ಹಾಗೂ ಹಕ್ಕುಗಳ ಉಲ್ಲಂಘನೆಯಂತೆ ಗಂಭೀರ ಪರಿಣಾಮವಾಗಲಿದೆ.
ಮುಖ್ಯ ಅಂಶಗಳು:
- 2021ರ ಜನಗಣತಿ ವಿಳಂಬವಾಗಿದ್ದು, ಈವರೆಗೆ ದಿಕ್ಕುಸೂಚನೆಯೂ ಇಲ್ಲ.
- ಜನಪ್ರತಿನಿಧಿಗಳ ಪುನರ್ವಿಂಗಡಣೆಗೆ ಜನಗಣತಿ ಅಂಕಿಅಂಶ ಅಗತ್ಯ.
- ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (NFSA), ಶಿಕ್ಷಣ ಹಕ್ಕು, ಉಜ್ವಲಾ ಯೋಜನೆ ಮುಂತಾದ ಯೋಜನೆಗಳು ಜನಸಂಖ್ಯೆ ಆಧಾರಿತವಾಗಿವೆ.
- ದೇಶದ ಸುಮಾರು 75 ಕೋಟಿ ಜನರನ್ನು ನಿಖರವಾಗಿ ಗುರುತಿಸಲು ಜನಗಣತಿ ಅವಶ್ಯಕ.
ಸವಾಲುಗಳು ಮತ್ತು ಚಿಂತನೆಗಳು:
- ಧಾರ್ಮಿಕ, ಜಾತಿ ಮತ್ತು ಭಾಷಾ ಆಧಾರಿತ ಅಂಕಿಅಂಶಗಳ ಲಭ್ಯತೆ ಇಲ್ಲದಿರುವುದು ಸಾಮಾಜಿಕ ನ್ಯಾಯಕ್ಕೆ ಧಕ್ಕೆ.
- ಜಾತಿ ಜನಗಣತಿ ಬಗ್ಗೆ ನಿರ್ಧಾರವಿಲ್ಲ.
- ರಾಜ್ಯಗಳ ನಡುವಿನ GSDP ಹಾಗೂ ಅನುದಾನ ಹಂಚಿಕೆಯಲ್ಲಿ ಜನಗಣತಿ ಅಂಕಿಅಂಶಗಳ ಕೊರತೆ ಉಂಟುಮಾಡುತ್ತಿದೆ.
- ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಯೋಜನೆಗಳ ಗುರಿ ನಿಖರವಾಗಿಲ್ಲ.
ಪರಿಣಾಮ:
- ಶಿಕ್ಷಣ, ಆಹಾರ ಮತ್ತು ಆರೋಗ್ಯ ಯೋಜನೆಗಳು ಗೊಂದಲಕ್ಕೆ ಒಳಗಾಗಿವೆ.
- ಜನಪ್ರತಿನಿಧಿತ್ವದಲ್ಲಿ ಅಸಮತೋಲನ ಮುಂದುವರಿಯುತ್ತದೆ.
- ಸಮಾಜದ ಹಿಂದೆ ಬಿದ್ದ ಸಮುದಾಯಗಳಿಗೆ ನ್ಯಾಯ ದೊರೆಯದ ಸಾಧ್ಯತೆ ಹೆಚ್ಚಳ.
- ಸರ್ಕಾರದ ಮೇಲಿನ ನಂಬಿಕೆ ಕುಸಿಯುವ ಭೀತಿ.
ಪ್ರಮುಖ ಸುಧಾರಣೆಗಳು:
- ತಕ್ಷಣ ಜನಗಣತಿ ಪ್ರಕ್ರಿಯೆ ಆರಂಭಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು.
- ಡಿಜಿಟಲ್ ತಂತ್ರಜ್ಞಾನ ಬಳಸಿ ಜನಗಣತಿ ಪ್ರಕ್ರಿಯೆ ವೇಗಗೊಳಿಸಬೇಕು.
- ಜಾತಿ ಜನಗಣತಿ ಬಗ್ಗೆ ಸ್ಪಷ್ಟ ನಿಲುವು ತೆಗೆದು ಸಾರ್ವಜನಿಕರಿಗೆ ವಿವರ ನೀಡಬೇಕು. ಜನಗಣತಿ ಅಂಕಿಅಂಶಗಳು ಸಾರ್ವಜನಿಕ ಬಳಕೆಗೆ ಲಭ್ಯವಾಗುವಂತೆ ಪಾರದರ್ಶಕ ವ್ಯವಸ್ಥೆ ರೂಪಿಸಬೇಕು.
ತೀರ್ಮಾನ ಮತ್ತು ಮುಂದಿನ ದಾರಿ:
- ಜನಗಣತಿಯ ವಿಳಂಬವು ಭಾರತೀಯ ಆಡಳಿತ ವ್ಯವಸ್ಥೆಯ ಪರಿಪಕ್ವತೆಯ ಮೇಲೆ ಗಂಭೀರ ಪ್ರತಿಫಲ ಬೀರುತ್ತದೆ. ಸರ್ಕಾರವು ತಕ್ಷಣವೇ ಜನಗಣತಿ ಪ್ರಕ್ರಿಯೆಗೆ ಸ್ಪಷ್ಟ ಕಾಲಪಟ್ಟಿ ಪ್ರಕಟಿಸಬೇಕು.
- ಈ ಕಾರ್ಯಾಚರಣೆಯನ್ನು ಪಾರದರ್ಶಕವಾಗಿ, ತಂತ್ರಜ್ಞಾನ ಆಧಾರಿತವಾಗಿ ಮತ್ತು ಸಾರ್ವಜನಿಕ ಪಾಲ್ಗೊಳ್ಳಿಕೆಯಿಂದ ನಡೆಸಬೇಕು. ದತ್ತಾಂಶ ಅಧಾರಿತದ ಆಡಳಿತ ಮತ್ತು ಸಾಮಾಜಿಕ ನ್ಯಾಯ ಸಾದ್ಯವಾಗಬೇಕಾದರೆ, ಜನಗಣತಿಯ ಪ್ರಕ್ರಿಯೆ ನಿರಂತರವಾಗಿಯೇ ನಡೆಯಬೇಕು ಎಂಬುದು ಆವಶ್ಯಕವಾದ ಅಂಶವಾಗಿದೆ.
KPSC/KAS ಮುಖ್ಯ ಪರೀಕ್ಷೆಯ ಪ್ರಶ್ನೆ(GS – II) :
Q1 “ಜನಗಣತಿಯ ವಿಳಂಬವು ಭಾರತದ ಆಡಳಿತಾತ್ಮಕ ಸಮರ್ಥತೆ ಮತ್ತು ಸಾಮಾಜಿಕ ನ್ಯಾಯದ ಕಾರ್ಯಪ್ರವೃತ್ತಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿಶ್ಲೇಷಿಸಿ. ಮುಂದಿನ ಜನಗಣತಿಯನ್ನು ಸುಧಾರಿತವಾಗಿ ನಡೆಸಲು ನಿಮ್ಮ ಸಲಹೆಗಳನ್ನು ನೀಡಿ.”
ಕನ್ನಡ ಮಾಧ್ಯಮ ಕ್ಲಾಸುಗಳು, ಟೆಸ್ಟ್ ಬುಕ್ , ಟೆಸ್ಟ್ ಸಿರೀಸ್ ಮತ್ತು ಮೆಂಟಾರ್ಷಿಪ್ಗಾಗಿ – ನಮ್ಮನ್ನು ಸಂಪರ್ಕಿಸಿ: +91 6366-294954
