Published on: August 20, 2025

ಸಂವಿಧಾನ (130ನೇ ತಿದ್ದುಪಡಿ) ಮಸೂದೆ, 2025

ಸಂವಿಧಾನ (130ನೇ ತಿದ್ದುಪಡಿ) ಮಸೂದೆ, 2025

ಸುದ್ದಿ ಕೇಂದ್ರ ಸರ್ಕಾರವು ಸಂವಿಧಾನ (130ನೇ ತಿದ್ದುಪಡಿ) ಮಸೂದೆ, 2025 ಅನ್ನು ಮಂಡಿಸಿದೆ.

ಪ್ರಮುಖ ಅಂಶಗಳು

ಪ್ರಮುಖ ನಿಬಂಧನೆ ಸಂವಿಧಾನ (130ನೇ ತಿದ್ದುಪಡಿ) ಮಸೂದೆ, 2025 ಹೀಗೆ ಪ್ರಸ್ತಾಪಿಸುತ್ತದೆ:

  • ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸಚಿವರು ಸತತ 30 ದಿನಗಳ ಕಾಲ ಬಂಧನಕ್ಕೊಳಗಾಗಿ, ವಶದಲ್ಲಿದ್ದರೆ ಅವರು ತಮ್ಮ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ.
  • ಈ ನಿಯಮ ಕನಿಷ್ಠ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧಗಳಿಗೆ ಅನ್ವಯಿಸುತ್ತದೆ.
  • 31ನೇ ದಿನದಿಂದ ಪದಚ್ಯುತಿ ಜಾರಿಗೆ ಬರುತ್ತದೆ.

ಮರುನೇಮಕಾತಿ ಷರತ್ತು ಮಸೂದೆಯು ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಅಥವಾ ಸಚಿವರು ಬಿಡುಗಡೆಯಾದ ನಂತರ ಪುನಃ ನೇಮಕಗೊಳ್ಳಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ಸ್ಪಷ್ಟಪಡಿಸುತ್ತದೆ.

ತಿದ್ದುಪಡಿಯ ಹಿಂದಿನ ತರ್ಕ:

  • ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಸಚಿವರು ಸಾಂವಿಧಾನಿಕ ನೈತಿಕತೆ ಮತ್ತು ಉತ್ತಮ ಆಡಳಿತವನ್ನು ದುರ್ಬಲಗೊಳಿಸಬಹುದು.
  • ಸಾರ್ವಜನಿಕ ಪ್ರತಿನಿಧಿಗಳು ವಿಶ್ವಾಸ, ಸಮಗ್ರತೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕು.
  • ಉದ್ದೇಶ: ಸಚಿವರ ನಡತೆ ಮತ್ತು ವರ್ತನೆ ಸಂಶಯದ ಆಚೆಗಿದೆ ಎಂದು ಖಚಿತಪಡಿಸುವುದು.

ಸಂವಿಧಾನ ತಿದ್ದುಪಡಿಯ ವಿವರಗಳು:

  • ವಿಧಿ 75(5A) ಸೇರ್ಪಡೆ:
    • ಒಬ್ಬ ಸಚಿವ, ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಬಹುದಾದ ಆರೋಪಗಳ ಮೇಲೆ ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ, ಪ್ರಧಾನಮಂತ್ರಿಯವರ ಸಲಹೆಯ ಮೇರೆಗೆ ರಾಷ್ಟ್ರಪತಿಯವರು ಆ ಸಚಿವರಿನ್ನು ಹುದ್ದೆಯಿಂದ ತೆಗೆದುಹಾಕುತ್ತಾರೆ.
    • ಪ್ರಧಾನಮಂತ್ರಿಯವರು ಸಲಹೆ ನೀಡಲು ವಿಫಲರಾದರೆ, 31ನೇ ದಿನದ ನಂತರ ಆ ಸಚಿವರು ತಾನಾಗಿಯೇ ಹುದ್ದೆ ಕಳೆದುಕೊಳ್ಳುತ್ತಾರೆ.