Published on: September 20, 2025

ವಿಶ್ವ ಹವಾಮಾನ ಸಂಸ್ಥೆಯಿಂದ (WMO) ‘ಜಾಗತಿಕ ಜಲ ಸಂಪನ್ಮೂಲಗಳ ಸ್ಥಿತಿ 2024’ ವರದಿ ಬಿಡುಗಡೆ

ವಿಶ್ವ ಹವಾಮಾನ ಸಂಸ್ಥೆಯಿಂದ (WMO) ‘ಜಾಗತಿಕ ಜಲ ಸಂಪನ್ಮೂಲಗಳ ಸ್ಥಿತಿ 2024’ ವರದಿ ಬಿಡುಗಡೆ

ಸುದ್ದಿ –  ಈ ವರದಿಯು ಜಲಚಕ್ರವು ಹೆಚ್ಚುತ್ತಿರುವ ಅಸ್ಥಿರತೆ ಮತ್ತು ಅತಿರೇಕವನ್ನು ತೋರಿಸುತ್ತಿದ್ದು,, ಪ್ರವಾಹ ಮತ್ತು ಬರಗಾಲದ ನಡುವೆ ತೀವ್ರ ಏರಿಳಿತಗೊಳ್ಳುತ್ತಿದೆ ಎಂಬುದನ್ನು ಸೂಚಿಸುತ್ತದೆ.

ವರದಿಯ ಪ್ರಮುಖಾಂಶಗಳು:
ಹಿಮನದಿ ಕರಗುವಿಕೆ:

  • ಜಗತ್ತಿನ ಎಲ್ಲ ಹಿಮನದಿ ಪ್ರದೇಶಗಳು ನಿರಂತರವಾಗಿ ಮೂರನೇ ವರ್ಷವೂ ಕರಗುವಿಕೆಯಿಂದ ನಷ್ಟವನ್ನು ದಾಖಲಿಸಿವೆ.
  • ಅನೇಕ ಸಣ್ಣ ಹಿಮನದಿ ಪ್ರದೇಶಗಳು ಈಗಾಗಲೇ ಅಥವಾ ಶೀಘ್ರದಲ್ಲೇ “ಶೃಂಗ ಜಲ ಬಿಂದು (Peak Water Point)” ತಲುಪುತ್ತಿವೆ – ಅಂದರೆ ಒಂದು ಹಿಮನದಿಯ ಕರಗುವಿಕೆ ವಾರ್ಷಿಕ ಗರಿಷ್ಠ ಹರಿವನ್ನು ತಲುಪಿ, ನಂತರ ಹಿಮನದಿಯ ಕುಗ್ಗುವಿಕೆಯಿಂದ ಹರಿವು ಕಡಿಮೆಯಾಗುವುದು.

ಅಸ್ಥಿರ ಜಲಚಕ್ರ (Erratic Water Cycle):

  • ಜಾಗತಿಕ ನದಿ ಜಲಾನಯನ ಪ್ರದೇಶದ ಮೂರನೇ ಎರಡರಷ್ಟು ಭಾಗದಲ್ಲಿ ಅತಿಯಾಗಿ ಹೆಚ್ಚು ನೀರು  ಅಥವಾ ಕಡಿಮೆ ನೀರು ಕಂಡುಬರುತ್ತಿದೆ.
  • ಇದರ ಪರಿಣಾಮವಾಗಿ ಅತಿರೇಕ ಘಟನೆಗಳು ಹೆಚ್ಚಾಗುತ್ತಿವೆ – ಆಫ್ರಿಕಾದ ಉಷ್ಣವಲಯದ ವಲಯದಲ್ಲಿ ಅಸಾಮಾನ್ಯ ಭಾರೀ ಮಳೆ, ಯುರೋಪ್ ಮತ್ತು ಏಷ್ಯಾದಲ್ಲಿ ವ್ಯಾಪಕ ಪ್ರವಾಹ, ಅಮೆಜಾನ್ ಜಲಾನಯನ ಪ್ರದೇಶದಲ್ಲಿ ಬರಗಾಲ ಇತ್ಯಾದಿ.

ಜಲ ಚಕ್ರ(Water Cycle): ಜಲ ಚಕ್ರವು ಭೂಮಿ ಮತ್ತು ವಾಯುಮಂಡಲದೊಳಗಿನ ನೀರಿನ ನಿರಂತರ ಚಲನೆಯನ್ನು ವಿವರಿಸುತ್ತದೆ ಮತ್ತು ಜಲ ಸಂಗ್ರಹಗಳು (pools) ಮತ್ತು ಹರಿವುಗಳನ್ನು (fluxes) ಒಳಗೊಂಡಿರುತ್ತದೆ.

  • ಜಲ ಸಂಗ್ರಹ (Pool): ನೀರು ಸಂಗ್ರಹವಾಗಿರುವ ಸರೋವರ, ಹಿಮನದಿ, ವಾಯುಮಂಡಲ ಇತ್ಯಾದಿ ಹಲವು ರೂಪಗಳು ಮತ್ತು ಸ್ಥಳಗಳನ್ನು ಸೂಚಿಸುತ್ತದೆ.
  • ಹರಿವುಗಳು (Fluxes): ನೀರು ಈ ಸಂಗ್ರಹಗಳ ನಡುವೆ ಚಲಿಸುವ ಮಾರ್ಗಗಳು, ಇದರಲ್ಲಿ ಆವೋಯನ (Evaporation) ಅಥವಾ ಘನೀಕರಣ (Condensation) ಮುಂತಾದ ಸ್ಥಿತಿಭೇದ ಬದಲಾವಣೆಗಳು ಒಳಗೊಂಡಿವೆ.

ಹವಾಮಾನ ಬದಲಾವಣೆಯ ಪರಿಣಾಮ:

  • ಜಾಗತಿಕ ತಾಪಮಾನ ಏರಿಕೆಯಿಂದ ಜಲಚಕ್ರ ತೀವ್ರಗೊಳ್ಳುತ್ತಿದೆ, ಏಕೆಂದರೆ ಇದು ಆವೋಯನದ ಪಾತ್ರವನ್ನು ಹೆಚ್ಚಿಸುತ್ತದೆ.
  • ಇದರ ಪರಿಣಾಮವಾಗಿ ವಾಯುಮಂಡಲದಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗುತ್ತದೆ, ಇದರಿಂದ ಬರ, ಭಾರೀ ಮಳೆ, ಚಂಡಮಾರುತಗಳಂತಹ ಅತಿರೇಕ ಹವಾಮಾನ ಘಟನೆಗಳು ಹೆಚ್ಚುತ್ತವೆ.
  • ಇದು ಹಿಮನದಿಗಳ ಕರಗುವಿಕೆ ಮತ್ತು ಸಮುದ್ರಜಲದ ವಿಸ್ತರಣೆಯಿಂದ ಸಮುದ್ರ ಮಟ್ಟ ಏರಿಕೆ ಉಂಟುಮಾಡಿ, ಕರಾವಳಿ ಪ್ರದೇಶಗಳಲ್ಲಿ ಪ್ರವಾಹವನ್ನು ಸೃಷ್ಟಿಸುತ್ತದೆ.