Published on: September 24, 2025
ಜಾಗತಿಕ ಹವಾಮಾನ-ಆರೋಗ್ಯ ಒಕ್ಕೂಟ (GCHA) ದ ಪಳೆಯುಳಿಕೆ ಇಂಧನ ವರದಿ
ಜಾಗತಿಕ ಹವಾಮಾನ-ಆರೋಗ್ಯ ಒಕ್ಕೂಟ (GCHA) ದ ಪಳೆಯುಳಿಕೆ ಇಂಧನ ವರದಿ
ವರದಿಯ ಶೀರ್ಷಿಕೆ: ‘ಜೀವನಾರಂಭದಿಂದ ಜೀವನಾಂತ್ಯದವರೆಗೆ: ಪಳೆಯುಳಿಕೆ ಇಂಧನಗಳ ಆರೋಗ್ಯದ ಹಾನಿ ಮತ್ತು ನ್ಯಾಯಸಮ್ಮತ ಪರಿವರ್ತನೆ ಅಗತ್ಯತೆ’ ಎಂದು ಉಲ್ಲೇಖಿಸುತ್ತದೆ. ಪಳೆಯುಳಿಕೆ ಇಂಧನಗಳು ಕೇವಲ ಪರಿಸರಕ್ಕೆ ಭೀಕರ ಅಪಾಯವಲ್ಲ, ಇದು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯೂ ಆಗಿದೆ.
ಪಳೆಯುಳಿಕೆ ಇಂಧನಗಳ ಆರೋಗ್ಯ ಪರಿಣಾಮಗಳು:
- ಪಳೆಯುಳಿಕೆ ಇಂಧನಗಳ ಮಾಲಿನ್ಯವು ಭ್ರೂಣದ ಬೆಳವಣಿಗೆಯಿಂದ ಹಿಡಿದು ವೃದ್ಧಾಪ್ಯದವರೆಗಿನ ಎಲ್ಲಾ ಜೀವನ ಹಂತಗಳ ಮೇಲೆ ಪರಿಣಾಮ ಬೀರುತ್ತದೆ, ಇದು ಆಸ್ತಮಾ, ಕ್ಯಾನ್ಸರ್, ಹೃದಯರಕ್ತನಾಳದ ಕಾಯಿಲೆಗಳು ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
- ಪಳೆಯುಳಿಕೆ ಇಂಧನಗಳ ಬಳಕೆಯ ಪ್ರತಿಯೊಂದು ಹಂತದಲ್ಲೂ – ಗಣಿಗಾರಿಕೆ, ಸಂಸ್ಕರಣೆ, ಸಾಗಣೆ, ದಹನ ಮತ್ತು ವಿಲೇವಾರಿ – ನಿರಂತರವಾಗಿ ವಿಷಕಾರಿ ಮಾಲಿನ್ಯಕಾರಕಗಳು ಬಿಡುಗಡೆಯಾಗುತ್ತವೆ, ಇದು ಪರಿಸರ ವ್ಯವಸ್ಥೆಗಳು ಮತ್ತು ಮಾನವನ ಆರೋಗ್ಯಕ್ಕೆ ಹಾನಿ ಮಾಡುತ್ತದೆ.
- ಗಣಿಗಾರಿಕೆಯು ಬೆಂಜೀನ್, ಭಾರ ಲೋಹಗಳು, ವಿಕಿರಣಶೀಲ ವಸ್ತುಗಳನ್ನು ಬಿಡುಗಡೆ ಮಾಡಿದರೆ, ಸಂಸ್ಕರಣೆ ಮತ್ತು ಶುದ್ಧೀಕರಣ ಪ್ರಕ್ರಿಯೆಗಳು ಟೊಲುಯಿನ್ (toluene) ಮತ್ತು ಆವಿಯಾಗುವ ಸಾವಯವ ಸಂಯುಕ್ತಗಳನ್ನು (Volatile Organic Compounds-VOCs) ಇತ್ಯಾದಿಗಳನ್ನು ಬಿಡುಗಡೆ ಮಾಡುತ್ತವೆ.
- ತ್ಯಜಿಸಿದ/ ಪರಿತ್ಯಕ್ತ ಗಣಿಗಳ ಸ್ಥಳಗಳಿಂದ ಉಂಟಾಗುವ ಉಳಿಕೆ ಮಾಲಿನ್ಯವು (Legacy pollution), ದೀರ್ಘಕಾಲೀನ ಆರೋಗ್ಯದ ಅಪಾಯಗಳಿಗೆ ಕಾರಣವಾಗುತ್ತದೆ. ಏಕೆಂದರೆ ಕೈಬಿಟ್ಟ ಸ್ಥಳಗಳಿಂದ ಉಂಟಾಗುವ ಉಳಿಕೆ ಮಾಲಿನ್ಯವು ದೀರ್ಘಕಾಲೀನ ಆರೋಗ್ಯ ಅಪಾಯಗಳಿಗೆ ಕಾರಣವಾಗುತ್ತದೆ. ಸೀಸ, ಪಾದರಸ, ಮತ್ತು PFAS (ಶಾಶ್ವತ ರಾಸಾಯನಿಕಗಳು) ನಂತಹ ರಾಸಾಯನಿಕಗಳು ಮಣ್ಣು, ನೀರು ಮತ್ತು ಆಹಾರ ಸರಪಳಿಯಲ್ಲಿ ದೀರ್ಘಕಾಲ ಉಳಿದುಕೊಳ್ಳುತ್ತವೆ ಮತ್ತು ಪ್ರತಿ ಹಂತದಲ್ಲೂ ಅವುಗಳ ಸಾಂದ್ರತೆಯು ಹೆಚ್ಚಾಗುತ್ತದೆ (ಜೈವಿಕ ಸಂವರ್ಧನೆ – biomagnification).
- ಮೂಲನಿವಾಸಿಗಳು ಮತ್ತು ಜನಾಂಗೀಯ ಅಲ್ಪಸಂಖ್ಯಾತರು ಸೇರಿದಂತೆ ಅಂಚಿನಲ್ಲಿರುವ ಗುಂಪುಗಳು ಗಣಿಗಳು ಮತ್ತು ಸಂಸ್ಕರಣಾ ಘಟಕಗಳ ಬಳಿ ವಾಸಿಸುವುದರಿಂದ ಅಸಮಾನ ಹೊರೆಯನ್ನು ಹೊರಬೇಕಾಗುತ್ತದೆ ಮತ್ತು ಆರೋಗ್ಯ ಸೇವೆಯಲ್ಲಿ ವ್ಯವಸ್ಥಿತ ಅಡೆತಡೆಗಳನ್ನು ಎದುರಿಸುತ್ತಾರೆ.
ನ್ಯಾಯಯುತ ಪರಿವರ್ತನೆಗಾಗಿ ನೀತಿ ಶಿಫಾರಸುಗಳು:
- ಹೊಸ ಪಳೆಯುಳಿಕೆ ಇಂಧನಗಳ ಅನ್ವೇಷಣೆ ಮತ್ತು ಅಭಿವೃದ್ಧಿಯನ್ನು ನಿಲ್ಲಿಸುವುದು, ಸಬ್ಸಿಡಿಗಳನ್ನು ಹಂತ ಹಂತವಾಗಿ ತೆಗೆದುಹಾಕುವುದು ಮತ್ತು ಉಳಿತಾಯವಾದ ಹಣವನ್ನು ಆರೋಗ್ಯ ಮತ್ತು ಶುದ್ಧ ಇಂಧನದ ಕಡೆಗೆ ನಿರ್ದೇಶಿಸುವುದು.
- ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸುವುದು, ನೈಜ-ಸಮಯದ ಮೇಲ್ವಿಚಾರಣೆ ಮತ್ತು ಉಳಿಕೆ ಮಾಲಿನ್ಯದ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು.
- “ಮಾಲಿನ್ಯಕಾರರೇ ಪಾವತಿಸುವ” ತತ್ವದ (“Polluter Pays” principle) ಮೂಲಕ ಆರೋಗ್ಯದ ಮೇಲಾಗುವ ವೆಚ್ಚಗಳನ್ನು ಮಾಲಿನ್ಯಕಾರರ ಮೇಲೆ ಹೊರಿಸುವುದು.
- ಜಾಗತಿಕ ಹಣಕಾಸು ಸಂಸ್ಥೆಗಳು ಮತ್ತು ಆರೋಗ್ಯ ವಲಯವನ್ನು ಹವಾಮಾನ ಮತ್ತು ಸಾರ್ವಜನಿಕ ಆರೋಗ್ಯ ಗುರಿಗಳೊಂದಿಗೆ ಹೊಂದಿಸುವುದು.
