Published on: September 25, 2025

ಮೊರಾಕೊದಲ್ಲಿ ಮೊದಲ ವಿದೇಶಿ ಘಟಕ ಸ್ಥಾಪನೆ ಮತ್ತು ‘WhAP’ ಯುದ್ಧವಾಹನ ಉತ್ಪಾದನೆ

ಮೊರಾಕೊದಲ್ಲಿ ಮೊದಲ ವಿದೇಶಿ ಘಟಕ ಸ್ಥಾಪನೆ ಮತ್ತು ‘WhAP’ ಯುದ್ಧವಾಹನ ಉತ್ಪಾದನೆ

ಸುದ್ದಿ –  ಇತ್ತೀಚೆಗೆ, ರಕ್ಷಣಾ ಸಚಿವರು ಮೊರಾಕೊದಲ್ಲಿ ಭಾರತದ ಮೊದಲ ವಿದೇಶಿ ರಕ್ಷಣಾ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ಈ ಯೋಜನೆಯು ಭಾರತದ ರಕ್ಷಣಾ ಉತ್ಪಾದನಾ ವಲಯಕ್ಕೆ ಒಂದು ಮಹತ್ವದ ಹೆಜ್ಜೆಯಾಗಿದೆ.

  • ಈ ಘಟಕವು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಮತ್ತು DRDO ಜಂಟಿಯಾಗಿ ವಿನ್ಯಾಸಗೊಳಿಸಿದ, ಸ್ವದೇಶಿ ನಿರ್ಮಿತ ಚಕ್ರಸಜ್ಜಿತ ಕವಚಿತ ತಂತ್ರಜ್ಞಾನ Wheeled Armoured Platform (WhAP) 8×8 ಅನ್ನು ಉತ್ಪಾದಿಸಲಿದೆ.

ಚಕ್ರಸಜ್ಜಿತ ಕವಚಿತ ತಂತ್ರಜ್ಞಾನ (Wheeled Armoured Platform ) ಕುರಿತು:

  •  ಭಾರತದ ಮೊದಲ ಉಭಯಚರ ಕಾಲಾಳುಪಡೆ ಯುದ್ಧ ವಾಹನ (Amphibious Infantry Combat Vehicle – Wheeled).
  •  ಉತ್ತಮ ಬದುಕುಳಿಯುವಿಕೆ, ಎಲ್ಲಾ ಭೂಪ್ರದೇಶಗಳಲ್ಲಿನ ಕಾರ್ಯಕ್ಷಮತೆ ಮತ್ತು ಹೆಚ್ಚಿದ ಮಾರಕ ಸಾಮರ್ಥ್ಯಕ್ಕಾಗಿ ವಿನ್ಯಾಸಗೊಳಿಸಲಾಗಿದೆ.
  • ಇದರಲ್ಲಿ ಬಳಸಿದ ಪ್ರಮುಖ ತಂತ್ರಜ್ಞಾನಗಳು: ಸ್ವಯಂಚಾಲಿತ ಪ್ರಸರಣ, ತೇಲುವಿಕೆ ಮತ್ತು ನೂಕುಬಲದೊಂದಿಗೆ ಸಂಯೋಜಿತ ವಿದ್ಯುತ್ ಪ್ಯಾಕ್ (Integrated power pack with automatic transmission, floatation and propulsion).