Published on: November 4, 2025

ಕಲ್ಲಿದ್ದಲು ವಲಯದಲ್ಲಿ ಡಿಜಿಟಲ್ ಆಡಳಿತ: KOYLA SHAKTI & CLAMP ಪೋರ್ಟಲ್

ಕಲ್ಲಿದ್ದಲು ವಲಯದಲ್ಲಿ ಡಿಜಿಟಲ್ ಆಡಳಿತ: KOYLA SHAKTI & CLAMP ಪೋರ್ಟಲ್

ಸುದ್ದಿ ಕಲ್ಲಿದ್ದಲು ಸಚಿವಾಲಯವು ಪಾರದರ್ಶಕ ಡಿಜಿಟಲ್ ಆಡಳಿತವನ್ನು ಉತ್ತೇಜಿಸಲು ‘KOYLA SHAKTI’ ಡ್ಯಾಶ್‌ಬೋರ್ಡ್ ಮತ್ತು ಕಲ್ಲಿದ್ದಲು ಭೂಸ್ವಾಧೀನ, ನಿರ್ವಹಣೆ, ಮತ್ತು ಪಾವತಿ CLAMP ಪೋರ್ಟಲ್ ಗಳಿಗೆ ಚಾಲನೆ ನೀಡಿದೆ.

‘KOYLA SHAKTI’ ಡ್ಯಾಶ್‌ಬೋರ್ಡ್:

  • ‘KOYLA SHAKTI’ ಅಥವಾ ಸ್ಮಾರ್ಟ್ ಕೋಲ್ ಅನಲಿಟಿಕ್ಸ್ ಡ್ಯಾಶ್‌ಬೋರ್ಡ್ (SCAD) (Smart Coal Analytics Dashboard) ಒಂದು ಏಕೀಕೃತ ಡಿಜಿಟಲ್ ವೇದಿಕೆಯಾಗಿದ್ದು, ಇದು ಸಂಪೂರ್ಣ ಕಲ್ಲಿದ್ದಲು ಮೌಲ್ಯ ಸರಪಳಿಯನ್ನು (coal value chain) ಗಣಿಯಿಂದ ಮಾರುಕಟ್ಟೆವರೆಗೆ ಒಂದೇ ಅಂತರ್ವರ್ತನದಲ್ಲಿ ಸಂಯೋಜಿಸುತ್ತದೆ.
  • ಪ್ರಮುಖ ವೈಶಿಷ್ಟ್ಯ: ಇದು ಕಲ್ಲಿದ್ದಲು ಉತ್ಪಾದನೆ, ಸಾಗಾಣಿಕೆ (logistics), ರವಾನೆ, ಮತ್ತು ಬಳಕೆಯ ದತ್ತಾಂಶವನ್ನು ಕ್ರೋಢೀಕರಿಸುತ್ತದೆ, ಇದರಿಂದಾಗಿ ಪಾಲುದಾರರ ನಡುವೆ ನೈಜ-ಸಮಯದ ಸಮನ್ವಯವನ್ನು ಸಾಧ್ಯವಾಗಿಸುತ್ತದೆ.
  • ದೃಷ್ಟಿಕೋನ: ಈ ಡ್ಯಾಶ್‌ಬೋರ್ಡ್ ‘ಆತ್ಮನಿರ್ಭರ ಭಾರತ’ ಮತ್ತು ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ (Minimum Government, Maximum Governance) ತತ್ವಗಳಿಗೆ ಅನುಗುಣವಾಗಿ ಪಾರದರ್ಶಕತೆ, ದಕ್ಷತೆ, ಮತ್ತು ನಾವೀನ್ಯತೆಯನ್ನು ಹೆಚ್ಚಿಸುತ್ತದೆ.

‘CLAMP’ ಪೋರ್ಟಲ್:

  • ಈ ಪೋರ್ಟಲ್ ಕಲ್ಲಿದ್ದಲು ವಲಯದಲ್ಲಿನ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆಗಳನ್ನು  ಸುಗಮಗೊಳಿಸಲು ಇರುವ ಒಂದು ಏಕೀಕೃತ ಡಿಜಿಟಲ್ ಪರಿಹಾರವಾಗಿದೆ.
  • ಪ್ರಮುಖ ವೈಶಿಷ್ಟ್ಯ: ಇದು ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುತ್ತದೆ, ಕೇಂದ್ರೀಕೃತ, ಪಾರದರ್ಶಕ ದಾಖಲೆಗಳನ್ನು ಇರಿಸುತ್ತದೆ, ನ್ಯಾಯಯುತ ಮತ್ತು ಸಕಾಲಿಕ ಪಾವತಿಗಳನ್ನು ಖಚಿತಪಡಿಸುತ್ತದೆ ಮತ್ತು ವಿಳಂಬವನ್ನು ಕಡಿಮೆ ಮಾಡುತ್ತದೆ.
  • ಸಾಂಸ್ಥಿಕ ದಕ್ಷತೆ: ಈ ಪೋರ್ಟಲ್ ಕಲ್ಲಿದ್ದಲು ಸಾರ್ವಜನಿಕ ವಲಯದ ಉದ್ದಿಮೆ (PSUs) ಗಳಾದ್ಯಂತ ಭೂ ನಿರ್ವಹಣೆಯಲ್ಲಿ ಅಂತರ-ಕಾರ್ಯಾಚರಣೆಯನ್ನು (interoperability) ಸುಧಾರಿಸುತ್ತದೆ.