14 – 19 ನವೆಂಬರ್ 2025

14 – 19 ನವೆಂಬರ್ 2025

1. ನಾಸಾದ ESCAPADE ಮಿಷನ್ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ESCAPADE ಮಿಷನ್ ಮಂಗಳನ ಹೈಬ್ರಿಡ್ ಮ್ಯಾಗ್ನೆಟೋಸ್ಪಿಯರ್ ಮತ್ತು ಸೌರ ಮಾರುತ–ವಾತಾವರಣ ಪರಸ್ಪರ ಕ್ರಿಯೆಯನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾಗಿದೆ.
2. ಈ ಮಿಷನ್ SIMPLEx ಕಾರ್ಯಕ್ರಮದ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ‘ಬ್ಲೂ’ ಮತ್ತು ‘ಗೋಲ್ಡ್’ ಎಂಬ ಎರಡು ಸಮಾನ ಉಪಗ್ರಹಗಳನ್ನು ಒಳಗೊಂಡಿದೆ.
3. ESCAPADE ಮಿಷನ್‌ನ್ನು ನಾಸಾದ ಫಾಲ್ಕನ್-9 ರಾಕೆಟ್ ಮೂಲಕ ಮಂಗಳನತ್ತ ನೇರವಾಗಿ ಉಡಾವಣೆ ಮಾಡಲಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
2. ಟೈಫಾಯ್ಡ್ ಕಾಂಜುಗೇಟ್ ಲಸಿಕೆ (TCV) ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. TCV ಏಕ-ಡೋಸ್ ಲಸಿಕೆಯಾಗಿದ್ದು, WHO ಅನುಸಾರ ಆರು ತಿಂಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ನೀಡಲು ಅನುಮೋದಿಸಲಾಗಿದೆ.
2. ಭಾರತದಲ್ಲಿ NTAGI 2022 ರಲ್ಲೇ UIP ಅಡಿಯಲ್ಲಿ TCV ಸೇರಿಕೆಗೆ ಶಿಫಾರಸು ಮಾಡಿದೆ.
3. TCV ಲಸಿಕೆ ಈಗಾಗಲೇ ಭಾರತದ सार्वತ್ರಿಕ ಲಸಿಕಾ ಕಾರ್ಯಕ್ರಮ (UIP) ನಲ್ಲಿ ಅಳವಡಿಸಲಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
3. ಪ್ರಾದೇಶಿಕ ಸೇನೆ (Territorial Army – TA) ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. TA “ನಾಗರಿಕ ಸೈನಿಕ” ತತ್ವದ ಮೇಲೆ ಕಾರ್ಯನಿರ್ವಹಿಸುವ ಅರೆಕಾಲಿಕ ಸ್ವಯಂಸೇವಕ ಪಡೆ.
2. TA 1948 ರ ಟೆರಿಟೋರಿಯಲ್ ಆರ್ಮಿ ಕಾಯಿದೆಯಡಿ ರಚಿಸಲ್ಪಟ್ಟಿದ್ದು, 1949 ರಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.
3. TA ಗೆ ಸೇರ್ಪಡೆಯಾಗಲು ಕನಿಷ್ಠ ವಯಸ್ಸು 21 ವರ್ಷವಾಗಿರಬೇಕು.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
4. ‘ಗರುಡ 25’ ಅಭ್ಯಾಸ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ‘ಗರುಡ 25’ ಭಾರತ–ಫ್ರಾನ್ಸ್ ದ್ವಿಪಕ್ಷೀಯ ವಾಯು ಸಮರಾಭ್ಯಾಸದ ಎಂಟನೇ ಆವೃತ್ತಿಯಾಗಿದೆ.
2. ಈ ಅಭ್ಯಾಸದಲ್ಲಿ ಭಾರತವು ಕೇವಲ ಸಾರಿಗೆ ವಿಮಾನಗಳನ್ನು ಮಾತ್ರ ನಿಯೋಜಿಸಿದೆ.
3. ಅಭ್ಯಾಸದ ಪ್ರಮುಖ ಉದ್ದೇಶವು ಎರಡು ವಾಯುಪಡೆಗಳ ಪರಸ್ಪರ ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
5. SC ಮೀಸಲಾತಿಯಲ್ಲಿ ‘ಕೆನೆಪದರ’ ತತ್ವದ ಕುರಿತಾಗಿ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಜರ್ನೈಲ್ ಸಿಂಗ್ (2018) ತೀರ್ಪು SC/ST ಮುಂಬಡ್ತಿಗಳಲ್ಲಿ ‘ಕೆನೆಪದರ’ ಹೊರಗಿಡುವಿಕೆಯನ್ನು ಅನುಮತಿಸಿದೆ.
2. ಇ.ವಿ. ಚಿನ್ನಯ್ಯ (2004) ತೀರ್ಪು SCಗಳಿಗೆ ಉಪ-ವರ್ಗೀಕರಣ ಮಾಡಲು ರಾಜ್ಯಗಳಿಗೆ ಅನುಮತಿ ನೀಡಿತು.
3. ವಿಧಿ 46 SC/ST ಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸ್ತಿಯನ್ನು ಉತ್ತೇಜಿಸಲು ರಾಜ್ಯಕ್ಕೆ ನಿರ್ದೇಶಿಸುತ್ತದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 3 ಮಾತ್ರ
B. 1 ಮತ್ತು 2 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
6. ಭಾರತದಲ್ಲಿನ ‘ಸುಪ್ತ ಹಸಿವು’ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. NFHS-5 ಪ್ರಕಾರ, ಭಾರತದಲ್ಲಿ 6–59 ತಿಂಗಳ ಮಕ್ಕಳು ಸುಮಾರು 67% ರಷ್ಟು ರಕ್ತಹೀನತೆಯಿಂದ ಬಳಲುತ್ತಾರೆ.
2. ‘ಸುಪ್ತ ಹಸಿವು’ ಎಂದರೆ ಕ್ಯಾಲೋರಿಗಳ ಕೊರತೆಯಿಂದ ಉಂಟಾಗುವ ಅಪೌಷ್ಟಿಕತೆ.
3. POSHAN 2.0 ಮತ್ತು AMB ಯೋಜನೆಗಳು ಸೂಕ್ಷ್ಮ ಪೋಷಕಾಂಶ ಕೊರತೆಯನ್ನು ತಗ್ಗಿಸಲು ಸರ್ಕಾರದ ಪ್ರಮುಖ ಕಾರ್ಯಕ್ರಮಗಳಾಗಿವೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
7. ಭಾರತದಲ್ಲಿನ ವಿಚಾರಣಾಧೀನ ಕೈದಿಗಳ ಸ್ಥಿತಿ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. NCRB (2023) ಪ್ರಕಾರ, ಭಾರತದ ಕೈದಿಗಳಲ್ಲಿ ಸುಮಾರು 70% ಮಂದಿ ವಿಚಾರಣಾಧೀನ ಕೈದಿಗಳಾಗಿದ್ದಾರೆ.
2. NALSA–UNDP (2023) ಪ್ರಕಾರ, ವಿಚಾರಣಾಧೀನ ಕೈದಿಗಳಲ್ಲಿ 60% ಕ್ಕಿಂತ ಹೆಚ್ಚು ಮಂದಿ ಉಚಿತ ಕಾನೂನು ನೆರವಿನ ಹಕ್ಕಿನ ಬಗ್ಗೆ ತಿಳಿದಿಲ್ಲ.
3. India Justice Report (2022) ಪ್ರಕಾರ, ಸುಮಾರು 25% ವಿಚಾರಣಾಧೀನ ಕೈದಿಗಳು ಜಾಮೀನು ಬಾಂಡ್‌ಗಳ ವೆಚ್ಚವನ್ನು ಭರಿಸಲಾಗದೆ ಜೈಲಿನಲ್ಲೇ ಉಳಿದಿದ್ದಾರೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
8. ವಶಪಡಿಸಿಕೊಂಡ ಸ್ಫೋಟಕಗಳ ನಿರ್ವಹಣೆ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ವಶಪಡಿಸಿಕೊಂಡ ಸ್ಫೋಟಕಗಳನ್ನು ನಿರ್ವಹಿಸಲು ಮಾತ್ರ ಅಧಿಕೃತ EOD ತಜ್ಞರಿಗೆ ಅನುಮತಿಯಿದೆ.
2. ವಶಪಡಿಸಿಕೊಂಡ ಸ್ಫೋಟಕಗಳ ವಿಧಿವಿಜ್ಞಾನ ವಿಶ್ಲೇಷಣೆಯನ್ನು 48 ಗಂಟೆಗಳೊಳಗೆ ಕಳುಹಿಸುವುದು ಕಡ್ಡಾಯವಾಗಿದೆ.
3. ಸ್ಫೋಟಕಗಳನ್ನು ನಾಶಪಡಿಸಲು ನ್ಯಾಯಾಲಯದ ಅನುಮೋದನೆ ಅಗತ್ಯ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
9. ರಾಷ್ಟ್ರೀಯ ಏಕ ಆರೋಗ್ಯ ಮಿಷನ್ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಈ ಮಿಷನ್‌ನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (MoHFW) ನೇತೃತ್ವವಹಿಸುತ್ತದೆ.
2. ICMR ಮಿಷನ್‌ನ ಪ್ರಮುಖ ಅನುಷ್ಠಾನ ಸಂಸ್ಥೆಯಾಗಿದೆ.
3. ಏಕ ಆರೋಗ್ಯ ವಿಧಾನವು ಮಾನವ, ಪ್ರಾಣಿ ಮತ್ತು ಪರಿಸರ ಆರೋಗ್ಯವನ್ನು ಸಮಗ್ರವಾಗಿ ಒಗ್ಗೂಡಿಸುವ ಬಹು-ವಲಯ ತಂತ್ರವಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
10. CBSEಯ AI–CT ಕರಡು ಪಠ್ಯಕ್ರಮ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. AI ಮತ್ತು ಗಣಕೀಕೃತ ಚಿಂತನೆ (CT) ಪಠ್ಯಕ್ರಮವನ್ನು 2026–27 ರಲ್ಲಿ 3–6 ನೇ ತರಗತಿಗಳಿಗೆ ಪ್ರಾರಂಭಿಸಲಾಗುತ್ತದೆ.
2. ಈ ಪಠ್ಯಕ್ರಮಕ್ಕೆ ಸಂಬಂಧಿಸಿದ ಶಿಕ್ಷಕರ ತರಬೇತಿಯನ್ನು NISHTHA ಅಡಿಯಲ್ಲಿ ನೀಡಲಾಗುತ್ತದೆ.
3. 11–12 ನೇ ತರಗತಿಗಳಲ್ಲಿ AI ಮತ್ತು ಯಂತ್ರ ಕಲಿಕೆ ಮಾಡ್ಯೂಲ್‌ಗಳನ್ನು ಕಡ್ಡಾಯ ವಿಷಯಗಳಾಗಿ ನೀಡಲಾಗುತ್ತದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
11. ಭಾರತ–ಕ್ಯೂಬಾ ಸಹಕಾರ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಭಾರತ ಮತ್ತು ಕ್ಯೂಬಾ ಪರಸ್ಪರ ಕಾನೂನು ನೆರವಿನ ಒಪ್ಪಂದಕ್ಕೆ ಸಹಿ ಹಾಕಿವೆ.
2. ಭಾರತ–ಕ್ಯೂಬಾ ಸಂಭಂದಗಳು 1991 ರ ನಂತರ ಮಾತ್ರ ಅಧಿಕೃತವಾಗಿ ಆರಂಭವಾಗಿವೆ.
3. ಕ್ಯೂಬಾ ಅಂತರಾಷ್ಟ್ರೀಯ ಸೌರ ಒಕ್ಕೂಟ (ISA) ಯ ಸದಸ್ಯ ದೇಶವಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
12. ವೆನೇಡಿಯಂ ರೆಡಾಕ್ಸ್ ಫ್ಲೋ ಬ್ಯಾಟರಿ (VRFB) ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. VRFB ಯಲ್ಲಿ ಶಕ್ತಿ ಸಂಗ್ರಹಣೆ ವೆನೇಡಿಯಂ ಅಯಾನಗಳ ವಿವಿಧ ಆಕ್ಸಿಡೀಕರಣ ಸ್ಥಿತಿಗಳ ಆಧಾರದಲ್ಲಿದೆ.
2. VRFB ಗಳು ಸ್ಥಾಯಿ ಗ್ರಿಡ್ ಸಂಗ್ರಹಣೆಗೆ Li-ion ಬ್ಯಾಟರಿಗಳಿಗಿಂತ ಕಡಿಮೆ ಸುರಕ್ಷಿತವಾಗಿವೆ.
3. NTPC ನ NETRA ಕೇಂದ್ರದಲ್ಲಿ ಸ್ಥಾಪಿಸಲಾದ VRFB ವ್ಯವಸ್ಥೆಯ ಸಾಮರ್ಥ್ಯ 3 MWh.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
13. ಹವಾಮಾನ ಅಪಾಯ ಸೂಚ್ಯಂಕ (CRI) 2025 ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. CRI 2025 ಪ್ರಕಾರ, 1995–2024 ರಲ್ಲಿ ಭಾರತವು ಹವಾಮಾನ ವಿಪತ್ತುಗಳಿಂದ ಅತಿ ಹೆಚ್ಚು ಸಂತ್ರಸ್ತ ರಾಷ್ಟ್ರಗಳಲ್ಲಿ 9ನೇ ಸ್ಥಾನದಲ್ಲಿದೆ.
2. 30 ವರ್ಷಗಳಲ್ಲಿ ಭಾರತದಲ್ಲಿ ತೀವ್ರ ಹವಾಮಾನ ಘಟನಗಳಿಂದ USD 170 ಬಿಲಿಯನ್ ನಷ್ಟ ಸಂಭವಿಸಿದೆ.
3. Germanwatch ಯನ್ನು 2005ರಲ್ಲಿ ನವದೆಹಲಿಯಲ್ಲಿ ಸ್ಥಾಪಿಸಲಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
14. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ (NGHM) ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. NGHM ಅನ್ನು 2023 ರಲ್ಲಿ ₹19,744 ಕೋಟಿಯ ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ.
2. ಜೀವರಾಶಿ ಮತ್ತು ತ್ಯಾಜ್ಯ ಆಧಾರಿತ ಹಸಿರು ಹೈಡ್ರೋಜನ್ ಪೈಲಟ್ ಯೋಜನೆಗಳಿಗೆ ₹100 ಕೋಟಿ ‘Call for Proposals’ ಅನ್ನು BIRAC ಅನುಷ್ಠಾನಗೊಳಿಸುತ್ತದೆ.
3. SIGHT ಕಾರ್ಯಕ್ರಮ ಅಡಿಯಲ್ಲಿ ವಾರ್ಷಿಕ 5,000 MW ಎಲೆಕ್ಟ್ರೋಲೈಸರ್ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
15. UNESCO ನರ-ತಂತ್ರಜ್ಞಾನ ನೈತಿಕ ಚೌಕಟ್ಟು ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. UNESCO ಚೌಕಟ್ಟು ‘ನರ-ಹಕ್ಕುಗಳು’ ಎಂಬ ಪರಿಕಲ್ಪನೆಯನ್ನು ಗುರುತಿಸುತ್ತದೆ.
2. ನರ-ತಂತ್ರಜ್ಞಾನವನ್ನು ರಾಜಕೀಯ ಪ್ರಭಾವಕ್ಕಾಗಿ ಬಳಸುವುದನ್ನು ಅನುಮತಿಸುತ್ತದೆ.
3. ಈ ಚೌಕಟ್ಟು 2025 ನವೆಂಬರ್ 12ರಿಂದ ಜಾರಿಗೆ ಬರುತ್ತದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
16. ಭಾರತ–ಕೆನಡಾ MDTI ಸಂವಾದ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. MDTI ಸಂವಾದದ ಗುರಿ ಭಾರತ–ಕೆನಡಾ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಪುನಶ್ಚೇತನಗೊಳಿಸುವುದಾಗಿದೆ.
2. ಕೆನಡಾದಲ್ಲಿರುವ ಭಾರತೀಯ ವಲಸೆ ಸಮುದಾಯವು 1 ದಶಲಕ್ಷಕ್ಕಿಂತ ಕಡಿಮೆ ಸಂಖ್ಯೆಯಾಗಿದೆ.
3. 2023ರಲ್ಲಿ ಭಾರತ–ಕೆನಡಾ ದ್ವಿಪಕ್ಷೀಯ ವ್ಯಾಪಾರ USD 18 ಬಿಲಿಯನ್‌ಗಿಂತ ಹೆಚ್ಚು ಮೌಲ್ಯ ದಾಖಲಿಸಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
17. ಭಾರತ–ಆಫ್ರಿಕಾ ಸಂಬಂಧಗಳ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. AfCFTA ಆಫ್ರಿಕಾ ಖಂಡವನ್ನು ಏಕ ಮಾರುಕಟ್ಟೆಯಾಗಿ ರೂಪಿಸುವ ಮೂಲಕ ಭಾರತೀಯ ಹೂಡಿಕೆಗಳಿಗೆ ಹೆಚ್ಚಿನ ಪ್ರವೇಶ ಒದಗಿಸುತ್ತದೆ.
2. ಭಾರತವು ಆಫ್ರಿಕಾದ ಮೊದಲ ಅತಿದೊಡ್ಡ ವ್ಯಾಪಾರ ಪಾಲುದಾರವಾಗಿದೆ.
3. ಶಿಕ್ಷಣ ಮತ್ತು DPI ಉಪಕ್ರಮಗಳು ಭಾರತ–ಆಫ್ರಿಕಾ ಮೃದು ರಾಜತಾಂತ್ರಿಕತೆಯ ಪ್ರಮುಖ ಭಾಗಗಳಾಗಿವೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
18. ಭಾರತ–ನೇಪಾಳ ಸಂಚಾರ ಒಪ್ಪಂದ ತಿದ್ದುಪಡಿ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಸಂಚಾರ ಒಪ್ಪಂದವು ನೇಪಾಳಕ್ಕೆ ಅಂತರಾಷ್ಟ್ರೀಯ ವ್ಯಾಪಾರಕ್ಕಾಗಿ ಭಾರತೀಯ ಬಂದರುಗಳನ್ನು ಬಳಸಲು ಅವಕಾಶ ನೀಡುತ್ತದೆ.
2. ಜೋಗ್ಬನಿ–ಬಿರಾಟ್‌ನಗರ ರೈಲು ಸಂಪರ್ಕವು ಕಂಟೈನರ್ ಮತ್ತು ಬೃಹತ್ ಸರಕು ಸಾರಿಗೆಗೆ ಮಾರ್ಗ ತೆರೆಯುತ್ತದೆ.
3. ಭಾರತ ನೇಪಾಳದಿಂದ 20,000 MW ವಿದ್ಯುತ್ ಆಮದು ಮಾಡಲು ಬದ್ಧವಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
19. ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. 106ನೇ ಸಾಂವಿಧಾನಿಕ ತಿದ್ದುಪಡಿ ಕಾಯಿದೆ ಜಾರಿಗೆ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಪೂರ್ಣಗೊಳ್ಳಬೇಕು.
2. ವಿಧಿ 15(3) ರಾಜ್ಯಕ್ಕೆ ಮಹಿಳೆಯರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡುವ ಅಧಿಕಾರ ನೀಡುತ್ತದೆ.
3. ಕಾನೂನು ಜಾರಿಗೆ ಕೇಂದ್ರ ಸರ್ಕಾರವು ನಿಶ್ಚಿತ ಕಾಲಮಿತಿಯನ್ನು ಈಗಾಗಲೇ ಘೋಷಿಸಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
20. ರೈಸಿನ್ ಮತ್ತು ANFO ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ರೈಸಿನ್ ಪ್ರೋಟೀನ್ ಸಂಶ್ಲೇಷಣೆಯನ್ನು ತಡೆದು ಜೀವಕೋಶಗಳನ್ನು ಕೊಲ್ಲುವ ಅತ್ಯಂತ ವಿಷಕಾರಿ ಜೈವಿಕ ಏಜೆಂಟ್.
2. ANFO ಅನ್ನು 94% ರಂಧ್ರಯುಕ್ತ ಅಮೋನಿಯಂ ನೈಟ್ರೇಟ್ ಹಾಗೂ 6% ಇಂಧನ ತೈಲದಿಂದ ತಯಾರಿಸಲಾಗುತ್ತದೆ.
3. ಅಮೋನಿಯಂ ನೈಟ್ರೇಟ್ ನಿಯಮಗಳು 2012 ಅಡಿಯಲ್ಲಿ 30% ಕ್ಕಿಂತ ಹೆಚ್ಚು ಅಮೋನಿಯಂ ನೈಟ್ರೇಟ್ ಇರುವ ಮಿಶ್ರಣವನ್ನು ಸ್ಫೋಟಕವಾಗಿ ವ್ಯಾಖ್ಯಾನಿಸಲಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
21. WHO TB ವರದಿ 2025 ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಭಾರತದಲ್ಲಿ TB ಪ್ರಕರಣಗಳ ಪ್ರಮಾಣವು 2015–2024 ಅವಧಿಯಲ್ಲಿ ಪ್ರತಿ ಲಕ್ಷಕ್ಕೆ 237 ರಿಂದ 187 ಕ್ಕೆ ಇಳಿಕೆಯಾಗಿದೆ.
2. “ಕಾಣೆಯಾದ ಪ್ರಕರಣಗಳು” 2015 ರ 15 ಲಕ್ಷದಿಂದ 2024 ರಲ್ಲಿ 5 ಲಕ್ಷಕ್ಕೆ ಇಳಿದಿವೆ.
3. ಟಿಬಿ ಮುಕ್ತ ಭಾರತ ಅಭಿಯಾನವು 90% ಚಿಕಿತ್ಸಾ ಯಶಸ್ಸಿನ ಪ್ರಮಾಣವನ್ನು ಸಾಧಿಸಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
22. ಹೆಪಟೈಟಿಸ್ A ಮತ್ತು UIP ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಹೆಪಟೈಟಿಸ್ A ವೈರಸ್ ಒಂದು ಹೊದಿಕೆ-ರಹಿತ RNA ವೈರಸ್ ಆಗಿದೆ.
2. ನಗರ ಪ್ರದೇಶಗಳಲ್ಲಿ ಹೆಪಟೈಟಿಸ್ A ಗೆ ನೈಸರ್ಗಿಕ ರೋಗನಿರೋಧಕ ಶಕ್ತಿ ಇತ್ತೀಚೆಗೆ 90% ಕ್ಕಿಂತ ಹೆಚ್ಚಾಗಿದೆ.
3. ಏಕ-ಡೋಸ್ ಹೆಪಟೈಟಿಸ್ A ಲಸಿಕೆ 15–20 ವರ್ಷಗಳ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
23. G7 FMM 2025 ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. 2025 ರಲ್ಲಿ G7 ಅಧ್ಯಕ್ಷ ಸ್ಥಾನವನ್ನು ಕೆನಡಾ ವಹಿಸಿಕೊಂಡಿತ್ತು.
2. G7 ಒಂದು ಔಪಚಾರಿಕ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು ಶಾಶ್ವತ ಕಾರ್ಯಾಲಯ ಹೊಂದಿದೆ.
3. ಭಾರತವು ಈ ಸಭೆಯಲ್ಲಿ ಇಂಧನ ಭದ್ರತೆ ಮತ್ತು ನಿರ್ಣಾಯಕ ಖನಿಜಗಳ ವಿಷಯಾಧಾರಿತ ಔಟ್ರೀಚ್ ಅಧಿವೇಶನದಲ್ಲಿ ಭಾಗವಹಿಸಿತು.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 3 ಮಾತ್ರ
B. 1 ಮತ್ತು 2 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
24. ಸ್ಮಾರ್ಟ್ ಹೆದ್ದಾರಿ ಉಪಕ್ರಮಗಳ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. MLFF ಟೋಲಿಂಗ್ ವ್ಯವಸ್ಥೆಯಲ್ಲಿ ವಾಹನಗಳು ಚಲನೆಯಲ್ಲಿರುವಾಗಲೇ ಟೋಲ್ ಸಂಗ್ರಹಣೆ ಸಾಧ್ಯವಾಗುತ್ತದೆ.
2. OFC ಕಾರಿಡಾರ್ ಪ್ರಾಯೋಗಿಕ ಯೋಜನೆ 1,000 ಕಿ.ಮೀ ಹೆದ್ದಾರಿಗಳಲ್ಲಿ ಅಳವಡಿಸಲಾಗುತ್ತಿದೆ.
3. RajmargYatra ಅಪ್ಲಿಕೇಶನ್ ಬಳಕೆದಾರರಿಗೆ ಹೆದ್ದಾರಿ ಸುರಕ್ಷತಾ ಕಾಳಜಿಗಳನ್ನು ನೇರವಾಗಿ ವರದಿ ಮಾಡಲು ಅನುಮತಿಸುತ್ತದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
25. ‘ದೃಷ್ಟಿ’ (DRISHTI) ವ್ಯವಸ್ಥೆಯ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ‘ದೃಷ್ಟಿ’ ವ್ಯವಸ್ಥೆಯು AI ಆಧಾರಿತ ಕ್ಯಾಮೆರಾಗಳು ಮತ್ತು ಸಂವೇದಕಗಳ ಮೂಲಕ ನೈಜ-ಸಮಯದ ಮೇಲ್ವಿಚಾರಣೆ ಒದಗಿಸುತ್ತದೆ.
2. ಈ ವ್ಯವಸ್ಥೆಯನ್ನು ದಕ್ಷಿಣ ಪಶ್ಚಿಮ ರೈಲ್ವೆ ಮತ್ತು IISc ಬೆಂಗಳೂರಿನ ಜಂಟಿ ಸಹಕಾರದಿಂದ ಅಭಿವೃದ್ಧಿಪಡಿಸಲಾಗಿದೆ.
3. ಸ್ವಯಂಚಾಲಿತ ಎಚ್ಚರಿಕೆ ವ್ಯವಸ್ಥೆಯು ತಿರುಚಿದ ಅಥವಾ ತೆರೆದ ವ್ಯಾಗನ್ ಬಾಗಿಲುಗಳನ್ನು ಪತ್ತೆ ಮಾಡಿದಾಗ ನಿರ್ವಾಹಕರಿಗೆ ಸಂದೇಶ ಕಳುಹಿಸುತ್ತದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
26. ಭಾರತದ CO₂ ಹೊರಸೂಸುವಿಕೆ ಮಂದಗತಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. 2025 ರಲ್ಲಿ ಭಾರತದ ಪಳೆಯುಳಿಕೆ-ಇಂಧನ CO₂ ಹೊರಸೂಸುವಿಕೆಯ ಬೆಳವಣಿಗೆ 2024 ರಿಗಿಂತ ನಿಧಾನವಾಗಿದೆ.
2. 2025 ರಲ್ಲಿ ವಿದ್ಯುತ್ ವಲಯದ CO₂ ಹೊರಸೂಸುವಿಕೆ ಮೊದಲ ಬಾರಿಗೆ ಕುಸಿತವನ್ನು ತೋರಿಸಿದೆ.
3. CO₂ ಹೊರಸೂಸುವಿಕೆ ಬೆಳವಣಿಗೆ 2025 ರಲ್ಲಿ US ಗಿಂತ ಭಾರತದಲ್ಲಿ ಹೆಚ್ಚು ಹೆಚ್ಚಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
27. ಭಾರತ–ಬೋಟ್ಸ್ವಾನ ಚಿರತೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. “ಪ್ರಾಜೆಕ್ಟ್ ಚೀತಾ”ವು ಭಾರತದಲ್ಲಿ ಚಿರತೆಗಳನ್ನು ಪುನಃ ಪರಿಚಯಿಸುವ ಅಂತರ-ಖಂಡೀಯ ಸ್ಥಳಾಂತರ ಯೋಜನೆ.
2. ಬೋಟ್ಸ್ವಾನದಿಂದ ಸ್ಥಳಾಂತರವಾಗುವ ಚಿರತೆಗಳನ್ನು ಸಂಪರ್ಕತಡೆಗೆ ಮೋಕೊಲೋಡಿ ಪ್ರಕೃತಿ ಮೀಸಲು ಪ್ರದೇಶದಲ್ಲಿ ಇರಿಸಲಾಗುತ್ತದೆ.
3. ಬೋಟ್ಸ್ವಾನವು ಭಾರತೀಯ ಮಹಾಸಾಗರಕ್ಕೆ ನೇರ ಪ್ರವೇಶ ಹೊಂದಿರುವ ಕರಾವಳಿ ರಾಷ್ಟ್ರವಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
28. ಅರುಣಾಚಲ ಪ್ರದೇಶದಲ್ಲಿ ಕಂಡುಬಂದ Crassicaulis middletonii ಕುರಿತ ಹೇಳಿಕೆಗಳನ್ನು ಪರಿಗಣಿಸಿರಿ:
1. Crassicaulis middletonii ಭಾರತದಲ್ಲಿ ದಾಖಲಾದ Crassicaulis ಕುಲದ ಮೊದಲ ಪ್ರಭೇದವಾಗಿದೆ.
2. ಈ ಸಸ್ಯವು 2,500 ಮೀಟರ್‌ಗಿಂತ ಮೇಲಿನ ಅಲ್ಪೈನ್ ಹುಲ್ಲುಗಾವಲು ಪ್ರದೇಶಗಳಲ್ಲಿ ಬೆಳೆಯುತ್ತದೆ.
3. ಈ ಸಂಶೋಧನೆ ಪೂರ್ವ ಹಿಮಾಲಯವನ್ನು ಭಾರತೀಯ–ಆಗ್ನೇಯ ಏಷ್ಯಾದ ಜೈವಿಕ ಸೇತುವೆಯಾಗಿ ಗುರುತಿಸುತ್ತದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
29. WFP 2025 ವರದಿ ಮತ್ತು ಅದರ ಕಂಡುಹಿಡಿಕೆಗಳ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ:
1. ಜಾಗತಿಕ ತಾಪಮಾನದಲ್ಲಿ +1°C ಏರಿಕೆಯಾದರೆ, ಆಹಾರ ಅಭದ್ರತೆ ಹೊಂದಿರುವ ಜನಸಂಖ್ಯೆಯಲ್ಲಿ ಸುಮಾರು 28% ಹೆಚ್ಚಳವಾಗುತ್ತದೆ.
2. ಈ ವಿಶ್ಲೇಷಣೆಯ ಪ್ರಕಾರ, ಪಶ್ಚಿಮ ಆಫ್ರಿಕಾ ತಾಪಮಾನ ಸಂವೇದನೆಗೆ ಪೂರ್ವ ಆಫ್ರಿಕಾವಿಗಿಂತ ಎರಡು ಪಟ್ಟು ಹೆಚ್ಚು ಸ್ಪಂದನಶೀಲವಾಗಿದೆ.
3. WFP ಗೆ 2020 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿದ್ದು, ಆಹಾರವನ್ನು ಯುದ್ಧದ ಅಸ್ತ್ರವಾಗಿ ಬಳಸುವುದನ್ನು ತಡೆಯುವ ಪಾತ್ರಕ್ಕಾಗಿ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
30. ನುಣುಚರ್ಮದ ನೀರುನಾಯಿ ಮತ್ತು ಇಂದ್ರಾವತಿ ಹುಲಿ ಸಂರಕ್ಷಿತ ಪ್ರದೇಶ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ನುಣುಚರ್ಮದ ನೀರುನಾಯಿ IUCN ಪಟ್ಟಿಯಲ್ಲಿ “ಸಂಕಟಗ್ರಸ್ತ” (Endangered) ಪ್ರಭೇದವಾಗಿ ವರ್ಗೀಕರಿಸಲಾಗಿದೆ.
2. ಈ ಪ್ರಭೇದವು ಅರೆ-ಜಲವಾಸಿ (semi-aquatic) ಆಗಿದ್ದು, ಸಿಹಿನೀರಿನ ಜೌಗು ಹಾಗೂ ನದಿಗಳಲ್ಲಿ ವಾಸಿಸುತ್ತದೆ.
3. ಇಂದ್ರಾವತಿ ಹುಲಿ ಸಂರಕ್ಷಿತ ಪ್ರದೇಶವು ಕಾಡು ಏಷ್ಯನ್ ಎಮ್ಮೆ ಸಂತತಿಯ ಪ್ರಮುಖ ವಾಸಸ್ಥಾನಗಳಲ್ಲಿ ಒಂದಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
31. ಬಿರ್ಸಾ ಮುಂಡಾ ಮತ್ತು ಮುಂಡಾ ದಂಗೆ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಬಿರ್ಸಾ ಮುಂಡಾ ಅವರು ‘ಬಿರ್ಸೈತ್’ ಪಂಥದ ಮೂಲಕ ಏಕದೇವೋಪಾಸನೆಯನ್ನು ಬೋಧಿಸಿದರು.
2. ಮುಂಡಾ ದಂಗೆಯ ಪ್ರಮುಖ ಕಾರಣಗಳಲ್ಲಿ ಜಮೀನ್ದಾರಿ ಪದ್ಧತಿಯ ಪರಿಚಯವೂ ಒಂದಾಗಿತ್ತು.
3. ಛೋಟಾನಾಗ್ಪುರ ಹಿಡುವಳಿ ಕಾಯಿದೆ (1908) ಬುಡಕಟ್ಟು ಭೂಮಿಯನ್ನು ಬುಡಕಟ್ಟೇತರರಿಗೆ ವರ್ಗಾಯಿಸುವುದನ್ನು ಅನುಮತಿಸಿತು.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
32. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ದೀರ್ಘಕಾಲದ ಒತ್ತಡ ಕಾರ್ಟಿಸೋಲ್ ಹೆಚ್ಚಳಕ್ಕೆ ಕಾರಣವಾಗಿ ಗ್ಲೂಕೋಸ್ ಚಯಾಪಚಯವನ್ನು ಅಡ್ಡಿಪಡಿಸುತ್ತದೆ.
2. ರಾತ್ರಿ ಶಿಫ್ಟ್‌ ಕೆಲಸ ಸಿರ್ಕಾಡಿಯನ್ ರಿದಮ್‌ನ್ನು ಅಸ್ತವ್ಯಸ್ತಗೊಳಿಸಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
3. Fit India ಅಭಿಯಾನವು ಕೇವಲ ಕ್ರೀಡೆ ಮತ್ತು ಅಥ್ಲೀಟ್‌ಗಳಿಗಾಗಿ ಮಾತ್ರ ರೂಪಿಸಲಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
33. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಭಾರತದಲ್ಲಿನ ಹಳೆಯ ತ್ಯಾಜ್ಯದ ಸುಮಾರು 80% ತ್ಯಾಜ್ಯವು 202 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ 214 ಅತಿ ಹೆಚ್ಚು-ಪರಿಣಾಮ ಬೀರುವ ತಾಣಗಳಲ್ಲಿ ಕೇಂದ್ರೀಕೃತವಾಗಿದೆ.
2. MoHUA DRAP ಕಾರ್ಯಕ್ರಮದ ಮುಖ್ಯ ಗುರಿಗಳಲ್ಲಿ ಒಂದು ಎಂದರೆ 2028 ರೊಳಗೆ ಭಾರತವನ್ನು ‘ಶೂನ್ಯ ತ್ಯಾಜ್ಯತಾಣ’ ರಾಷ್ಟ್ರವನ್ನಾಗಿಸುವುದು.
3. DRAP ಕಾರ್ಯಕ್ರಮದಡಿ ಕೇಂದ್ರವು ಹಳೆಯ ತ್ಯಾಜ್ಯ ಪುನಶ್ಚೇತನಕ್ಕೆ ಪ್ರತಿ ಟನ್‌ಗೆ ₹550 ಆರ್ಥಿಕ ನೆರವನ್ನು ಒದಗಿಸುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
34. ಕೆಳಗಿನವುಗಳಲ್ಲಿ ಯಾವುದು DRAP (Dumpsite Remediation Acceleration Program) ಯ ಸರಿಯಾದ ವೈಶಿಷ್ಟ್ಯ/ಉದ್ದೇಶ?
1. ತ್ಯಾಜ್ಯದ ಜೈವಿಕ-ಗಣಿಗಾರಿಕೆ ಮತ್ತು ಜೈವಿಕ-ಪರಿಹಾರ ಮೂಲಕ ವೇಗವರ್ಧಿತ ಪುನಶ್ಚೇತನ
2. HUDCO ಮೂಲಕ PPP-ಆಧಾರಿತ ಹೂಡಿಕೆಗಾಗಿ ‘ಅರ್ಬನ್ ಇನ್ವೆಸ್ಟ್ ವಿಂಡೋ’ ಪ್ರಾರಂಭ
3. ನಗರ ಅರಣ್ಯ ಮತ್ತು ಸೌರ ಪಾರ್ಕ್‌ಗಳಿಗಾಗಿ MoEFCC 2022 ಮಾರ್ಗಸೂಚಿಗಳ ಪ್ರಕಾರ ಮರುಪಡೆಯಲಾದ ಭೂಮಿಯ ವೈಜ್ಞಾನಿಕ ಮರುಬಳಕೆ
ಸರಿಯಾದ ಆಯ್ಕೆಯನ್ನು ಗುರುತಿಸಿ:
A. 1 ಮಾತ್ರ
B. 1 ಮತ್ತು 2 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
35. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಶಿಕ್ಷಿತ ವೃತ್ತಿಪರರ ಭಯೋತ್ಪಾದನೆ ಸಾಮಾನ್ಯವಾಗಿ ಆನ್‌ಲೈನ್ ಸಿದ್ಧಾಂತ-ಚಾಲಿತ ಮೂಲಭೂತವಾದೀಕರಣದಿಂದ ಪ್ರೇರಿತವಾಗಿರುತ್ತದೆ.
2. ಸಾಂಪ್ರದಾಯಿಕ ಭಯೋತ್ಪಾದನೆಯಲ್ಲಿ ಹಣಕಾಸು ಮುಖ್ಯವಾಗಿ ಹವಾಲಾ, ಸುಲಿಗೆ ಅಥವಾ ಬಾಹ್ಯ ದೇಣಿಗೆಗಳಂತಹ ಕಾನೂನುಬಾಹಿರ ಮೂಲಗಳಿಂದ ಬರುತ್ತದೆ.
3. ಶಿಕ್ಷಿತ ವೃತ್ತಿಪರರು ಸಾಮಾನ್ಯವಾಗಿ “ತಿಳಿದಿರುವ ಜಾಲಗಳು” ಮೂಲಕ ಕಾರ್ಯನಿರ್ವಹಿಸುವುದರಿಂದ ಅವರ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವುದು ಸುಲಭ.
ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
36. ಕೆಳಗಿನವುಗಳಲ್ಲಿ ಯಾವುದು “ಶಿಕ್ಷಿತ ವೃತ್ತಿಪರರ ಭಯೋತ್ಪಾದನೆಯ ಪ್ರಮುಖ ಚಾಲಕ” ಅನ್ನು ಸರಿಯಾಗಿ ಪ್ರತಿನಿಧಿಸುತ್ತದೆ?
1. ಗೌರವಾನ್ವಿತತೆಯ ಮುಸುಕು, ಅಂದರೆ ವೃತ್ತಿಪರ ಸ್ಥಾನಮಾನದಿಂದ ಸಮಾಜದಲ್ಲಿ ಸಂಶಯ ಕಡಿಮೆ.
2. ನಗರ ಅನಾಮಧೇಯತೆ, ಇದು ವಿವೇಚನಾಯುಕ್ತ ಚಲನವಲನಗಳನ್ನು ಸುಲಭಗೊಳಿಸುತ್ತದೆ.
3. ಸಾಂಪ್ರದಾಯಿಕ ಆರ್ಥಿಕ ದುರ್ಬಲತೆಗಳು ಅವರನ್ನು ಭಯೋತ್ಪಾದನೆಗೆ ತಳ್ಳುವ ಪ್ರಮುಖ ಕಾರಣ.
ಸರಿಯಾದ ಆಯ್ಕೆಯನ್ನು ಗುರುತಿಸಿ:
A. 1 ಮಾತ್ರ
B. 1 ಮತ್ತು 2 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
37. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಭಾರತೀಯ ಪತ್ರಿಕಾ ಮಂಡಳಿ (PCI)ಯನ್ನು 1966ರಲ್ಲಿ ಸ್ಥಾಪಿಸಲಾಯಿತು ಮತ್ತು 1979ರಲ್ಲಿ ಹೊಸ ಶಾಸನದ ಅಡಿಯಲ್ಲಿ ಮರುರಚಿಸಲಾಯಿತು.
2. ‘ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ (PRP) ಕಾಯಿದೆ, 2023’ ಆನ್‌ಲೈನ್ ಪ್ರಕಟಣೆಗಳಿಗೂ ಮೊದಲ ಬಾರಿಗೆ ನೋಂದಣಿ ಪ್ರಕ್ರಿಯೆಯನ್ನು ಪರಿಚಯಿಸಿದೆ.
3. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2025 ನಲ್ಲಿ ಭಾರತವು 2024ರಿಗಿಂತ 10 ಸ್ಥಾನಗಳ ಸುಧಾರಣೆ ಕಂಡಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
38. ಭಾರತದ ಮಾಧ್ಯಮ ನಿಯಂತ್ರಣ ಚೌಕಟ್ಟಿನ ಸಂಬಂಧ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?
1. PCI ತನ್ನ ಸೆಕ್ಷನ್ 14 ಅಡಿಯಲ್ಲಿ ಪತ್ರಿಕಾ ನೈತಿಕ ಉಲ್ಲಂಘನೆಗಳಿಗೆ ಖಂಡನೆ/ಎಚ್ಚರಿಕೆ ನೀಡುವ ಅಧಿಕಾರವನ್ನು ಹೊಂದಿದೆ.
2. IT ನಿಯಮಗಳು 2021 ಡಿಜಿಟಲ್ ಸುದ್ದಿ ಮತ್ತು OTT ಪ್ಲಾಟ್‌ಫಾರ್ಮ್‌ಗಳಿಗೆ ನೈತಿಕ ಸಂಹಿತೆಯನ್ನು ಜಾರಿಗೊಳಿಸುತ್ತವೆ.
3. ಕೇಬಲ್ ಟಿವಿ ನೆಟ್‌ವರ್ಕ್ಸ್ ಕಾಯಿದೆ, 1995 ಮುದ್ರಣ ಮಾಧ್ಯಮದ ನೈತಿಕ ಮಾನದಂಡಗಳನ್ನು ಜಾರಿಗೊಳಿಸುತ್ತದೆ.
ಸರಿಯಾದ ಆಯ್ಕೆಯನ್ನು ಗುರುತಿಸಿ:
A. 1 ಮತ್ತು 3 ಮಾತ್ರ
B. 2 ಮಾತ್ರ
C. 1 ಮತ್ತು 2 ಮಾತ್ರ
D. 1, 2 ಮತ್ತು 3
39. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. NSS ಅನ್ನು 1950ರಲ್ಲಿ ಭಾರತದ ರಾಷ್ಟ್ರೀಯ ಆದಾಯ ಅಂದಾಜುಗಳಲ್ಲಿ ಇದ್ದ ಅಂತರವನ್ನು ನಿಟ್ಟುಗೊಳಿಸಲು ಪ್ರಾರಂಭಿಸಲಾಯಿತು.
2. NSSO ಯನ್ನು 1970ರಲ್ಲಿ ಸ್ಥಾಪಿಸಲಾಯಿತು ಮತ್ತು ಇದೀಗ NSO ಯಲ್ಲಿ ವಿಲೀನಗೊಳಿಸಲಾಗಿದೆ.
3. NSS ರ ‘ಥಿಕ್ ರೌಂಡ್ಸ್’ (Thick Rounds) ಸಾಮಾನ್ಯವಾಗಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಸಲಾಗುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
A. 1 ಮತ್ತು 3 ಮಾತ್ರ
B. 1 ಮತ್ತು 2 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
40. ಕೆಳಗಿನವುಗಳಲ್ಲಿ ಯಾವುದು NSS / NSO ಅಡಿಯಲ್ಲಿ ನಡೆಸುವ ಪ್ರಮುಖ ಸಮೀಕ್ಷೆಯಾಗಿ ಸರಿಯಾಗಿದೆ?
1. PLFS (Periodic Labour Force Survey) – ಉದ್ಯೋಗ ಮತ್ತು ನಿರುದ್ಯೋಗ ಕುರಿತ ಪ್ರಮುಖ ರಾಷ್ಟ್ರೀಯ ದತ್ತಾಂಶ
2. ASI (Annual Survey of Industries) – ಸಂಘಟಿತ ಉತ್ಪಾದನಾ ವಲಯದ ಉತ್ಪಾದನೆ ಮತ್ತು ಉದ್ಯೋಗದ ಟ್ರ್ಯಾಕಿಂಗ್
3. NSS ಜಿಲ್ಲಾಮಟ್ಟದ ವಾರ್ಷಿಕ ಬಡತನ ಸಮೀಕ್ಷೆ – ದೇಶದ ಏಕೈಕ ಜಿಲ್ಲಾಮಟ್ಟದ ಬಡತನ ಅಂದಾಜು ಮೂಲ
ಸರಿಯಾದ ಆಯ್ಕೆಯನ್ನು ಗುರುತಿಸಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3