Published on: November 28, 2025

ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ (CCPI) 2026

ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ (CCPI) 2026

ಸುದ್ದಿ – ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆದ COP30 ಸಮ್ಮೇಳನದ ನೇಪಥ್ಯದಲ್ಲಿ, ಪರಿಸರ ಚಿಂತಕರ ಚಾವಡಿಯಾದ (Think tank) ಜರ್ಮನ್‌ವಾಚ್ (Germanwatch), ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ (CCPI) 2026 ಅನ್ನು ಬಿಡುಗಡೆ ಮಾಡಿದೆ.

ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ 2026 ರ ಪ್ರಮುಖ ಅಂಶಗಳು:

  • ಉನ್ನತ ಶ್ರೇಣಿಗಳು: ಯಾವುದೇ ದೇಶವು “ಒಟ್ಟಾರೆ ಅತ್ಯುನ್ನತ” (Overall Very High) ರೇಟಿಂಗ್ ಪಡೆಯದ ಕಾರಣ ಮೊದಲ ಮೂರು ಸ್ಥಾನಗಳು ಖಾಲಿ ಇವೆ.
  • ಉತ್ತಮ ಸಾಧನೆಗೈದವರು: ಡೆನ್ಮಾರ್ಕ್ 4 ನೇ ಸ್ಥಾನದೊಂದಿಗೆ ಅತ್ಯುನ್ನತ ಶ್ರೇಣಿಯ ದೇಶವಾಗಿದೆ. ನಂತರದ ಸ್ಥಾನಗಳಲ್ಲಿ ಯುನೈಟೆಡ್ ಕಿಂಗ್‌ಡಮ್ (5 ನೇ) ಮತ್ತು ಮೊರಾಕೊ (6 ನೇ) ಇವೆ.
  • ಭಾರತದ ಶ್ರೇಣಿ: ಭಾರತವು 13 ಸ್ಥಾನ ಕುಸಿಯುವ ಮೂಲಕ 23 ನೇ ಸ್ಥಾನಕ್ಕೆ ತಲುಪಿದೆ ಮತ್ತು “ಮಧ್ಯಮ ಸಾಧಕ” (Medium Performer) ವರ್ಗಕ್ಕೆ ಸೇರಿದೆ. ಕಲ್ಲಿದ್ದಲು ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡುವ ಬಗ್ಗೆ (Coal Phase-out) ನಿರ್ದಿಷ್ಟ ಸಮಯದ ಮಿತಿಯಿಲ್ಲದಿರುವುದು ಮತ್ತು ಕಲ್ಲಿದ್ದಲು ಬ್ಲಾಕ್‌ಗಳ ಹರಾಜನ್ನು ಮುಂದುವರೆಸಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ.
  • ಕಳಪೆ ಸಾಧನೆಗೈದವರು: ಇರಾನ್ (66 ನೇ) ಮತ್ತು ಸೌದಿ ಅರೇಬಿಯಾ (67 ನೇ) ಅತಿ ಕಡಿಮೆ ಶ್ರೇಣಿಯ ದೇಶಗಳಾಗಿವೆ.
  • G20 ದೇಶಗಳ ಸಾಧನೆ: UK ಮಾತ್ರ G20 ಗುಂಪಿನಲ್ಲಿ ‘ಉನ್ನತ ಸಾಧನೆಗೈದ’ (High Performer) ಏಕೈಕ ದೇಶವಾಗಿದೆ. ಆದರೆ ರಷ್ಯಾ (64 ನೇ), ಅಮೆರಿಕ (65 ನೇ) ಮತ್ತು ಸೌದಿ ಅರೇಬಿಯಾ (67 ನೇ) ಈ ಗುಂಪಿನಲ್ಲಿ ಕಳಪೆ ಸಾಧನೆ ತೋರಿವೆ.

ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕದ (CCPI) ಬಗ್ಗೆ: ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕವು (CCPI) 63 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟದ (EU) ಹವಾಮಾನ ತಗ್ಗಿಸುವಿಕೆಯ (Climate Mitigation) ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ಸ್ವತಂತ್ರ ಮಾನಿಟರಿಂಗ್ ಸಾಧನವಾಗಿದೆ.

  • ಪ್ರಕಟಣೆ: ಇದನ್ನು 2005 ರಿಂದ ವಾರ್ಷಿಕವಾಗಿ ಜರ್ಮನ್‌ವಾಚ್ ಸಂಸ್ಥೆಯು, ನ್ಯೂಕ್ಲೈಮೇಟ್ ಇನ್‌ಸ್ಟಿಟ್ಯೂಟ್ ಮತ್ತು ಕ್ಲೈಮೇಟ್ ಆಕ್ಷನ್ ನೆಟ್‌ವರ್ಕ್ ಇಂಟರ್‌ನ್ಯಾಷನಲ್ ಸಹಯೋಗದೊಂದಿಗೆ ಪ್ರಕಟಿಸುತ್ತಿದೆ.
  • ಮೌಲ್ಯಮಾಪನ: ಈ ಸೂಚ್ಯಂಕವು ನಾಲ್ಕು ವರ್ಗಗಳಲ್ಲಿ ಗುಂಪು ಮಾಡಲಾದ 14 ಸೂಚಕಗಳ (Indicators) ಮೂಲಕ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತದೆ:
    1. ಹಸಿರುಮನೆ ಅನಿಲ (GHG) ಹೊರಸೂಸುವಿಕೆ (40%)
    2. ನವೀಕರಿಸಬಹುದಾದ ಇಂಧನ (20%)
    3. ಶಕ್ತಿಯ ಬಳಕೆ (20%)
    4. ಹವಾಮಾನ ನೀತಿ (20%)
  • ರೇಟಿಂಗ್‌ಗಳು: ದೇಶಗಳನ್ನು ವರ್ಗವಾರು ಮತ್ತು ಒಟ್ಟಾರೆಯಾಗಿ ಐದು ಕಾರ್ಯಕ್ಷಮತೆಯ ಹಂತಗಳಾಗಿ ವರ್ಗೀಕರಿಸಲಾಗಿದೆ: ಅತ್ಯಂತ ಹೆಚ್ಚು, ಹೆಚ್ಚು, ಮಧ್ಯಮ, ಕಡಿಮೆ ಮತ್ತು ಅತ್ಯಂತ ಕಡಿಮೆ.