Published on: March 23, 2026

ಗ್ರಾಹಕ ನ್ಯಾಯ ವರದಿ 2026: ರಾಜ್ಯಗಳ ಕಾರ್ಯಕ್ಷಮತೆ ಮೌಲ್ಯಮಾಪನ

ಗ್ರಾಹಕ ನ್ಯಾಯ ವರದಿ 2026: ರಾಜ್ಯಗಳ ಕಾರ್ಯಕ್ಷಮತೆ ಮೌಲ್ಯಮಾಪನ

ಸುದ್ದಿ – ‘ಇಂಡಿಯಾ ಜಸ್ಟೀಸ್ ರಿಪೋರ್ಟ್’ ಸಿದ್ಧಪಡಿಸಿದ ದೇಶದ ಪ್ರಥಮ ‘ಗ್ರಾಹಕ ನ್ಯಾಯ 2026’ ಸಮೀಕ್ಷೆಯಲ್ಲಿ, ಗ್ರಾಹಕ ಸಂರಕ್ಷಣಾ ಕಾಯಿದೆ-2019 ರ ಅಡಿಯಲ್ಲಿ ರಾಜ್ಯಗಳ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲಾಗಿದೆ.

ಪ್ರಮುಖ ಶೋಧನೆಗಳು ಮತ್ತು ಶ್ರೇಯಾಂಕ:

  • ರಾಜ್ಯಗಳ ಶ್ರೇಯಾಂಕ: 1. ಆಂಧ್ರಪ್ರದೇಶ, 2. ಮಧ್ಯಪ್ರದೇಶ, 3. ರಾಜಸ್ಥಾನ, ಮತ್ತು 4. ಕರ್ನಾಟಕ.
  • ಮೌಲ್ಯಮಾಪನದ ಮಾನದಂಡಗಳು: ಬಜೆಟ್ ಹಂಚಿಕೆ, ಡಿಜಿಟಲ್ ಮೂಲಸೌಕರ್ಯ, ನ್ಯಾಯಾಧೀಶರು ಮತ್ತು ಸಿಬ್ಬಂದಿ ನೇಮಕಾತಿ, ಹಾಗೂ ದೂರುಗಳ ವಿಲೇವಾರಿ ವೇಗ.
  • ಕರ್ನಾಟಕದ ಸಾಧನೆ: ತಾಂತ್ರಿಕ ಬಳಕೆ ಮತ್ತು ಇ-ಫೈಲಿಂಗ್ (E-filing) ವ್ಯವಸ್ಥೆಯಲ್ಲಿ ಪ್ರಗತಿ ಸಾಧಿಸಿದ್ದು, ನಗರ ಪ್ರದೇಶದ ಪ್ರಕರಣಗಳ ವಿಲೇವಾರಿಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ.
  • ನ್ಯಾಯಾಂಗದ ಕಳವಳ: ಆಯೋಗಗಳಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳು ಖಾಲಿ ಇರುವುದು ತ್ವರಿತ ನ್ಯಾಯದಾನಕ್ಕೆ ಅಡ್ಡಿಯಾಗಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಉಲ್ಲೇಖಿಸಿದ್ದಾರೆ.