Published on: September 25, 2025

ಅಮೆರಿಕದ H-1B ವೀಸಾ ಶುಲ್ಕ ಏರಿಕೆ: ಭಾರತಕ್ಕಿರುವ ಅವಕಾಶಗಳು ಮತ್ತು ಸವಾಲುಗಳು

ಅಮೆರಿಕದ H-1B ವೀಸಾ ಶುಲ್ಕ ಏರಿಕೆ: ಭಾರತಕ್ಕಿರುವ ಅವಕಾಶಗಳು ಮತ್ತು ಸವಾಲುಗಳು

ಸುದ್ದಿ     ಅಮೆರಿಕ ಸಂಯುಕ್ತ ಸಂಸ್ಥಾನವು H-1B ವೀಸಾ ಶುಲ್ಕವನ್ನು $100,000 ಕ್ಕೆ ಹೆಚ್ಚಿಸಿರುವುದು, ಭಾರತವು ತನ್ನ ದೇಶೀಯ ನಾವೀನ್ಯತೆ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಗಮನಿಸಬೇಕಿಗಿದೆ.

ಭಾರತಕ್ಕಿರುವ ಅವಕಾಶಗಳು:

  • ಪ್ರತಿಭಾ ಪಲಾಯನವನ್ನು ಹಿಮ್ಮೆಟ್ಟಿಸುವುದು: ದೇಶದಲ್ಲಿರುವ STEM ಪದವೀಧರರು ಮತ್ತು ಯುವ ವೃತ್ತಿಪರರ ದೊಡ್ಡ ಸಮೂಹವು ಭಾರತದ ನಾವೀನ್ಯತೆ ಮತ್ತು ತಾಂತ್ರಿಕ ಬೆಳವಣಿಗೆಗೆ ಕೊಡುಗೆ ನೀಡಬಹುದು.
  • ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆ: ಭಾರತವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟ್-ಅಪ್ ಕೇಂದ್ರವಾಗಿ ಹೊರಹೊಮ್ಮಿದೆ. ಫಿನ್‌ಟೆಕ್, ಎಡ್-ಟೆಕ್, ಮತ್ತು ಹೆಲ್ತ್-ಟೆಕ್‌ ಕ್ಷೇತ್ರಗಳಲ್ಲಿ ಯೂನಿಕಾರ್ನ್‌ಗಳನ್ನು ರೂಪಿಸುವ ಮೂಲಕ ಈ ಶಕ್ತಿಯನ್ನು ಬಳಸಿಕೊಳ್ಳಬಹುದು.
  • ನೀತಿ ಬೆಂಬಲ: ಸ್ಟಾರ್ಟ್-ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಮತ್ತು ಅಟಲ್ ಇನ್ನೋವೇಶನ್ ಮಿಷನ್ ನಂತಹ ಸರ್ಕಾರದ ಉಪಕ್ರಮಗಳು ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ಸಕ್ರಿಯವಾಗಿ ಪ್ರೋತ್ಸಾಹಿಸುತ್ತವೆ.
  • ವೆಚ್ಚ ಮತ್ತು ಮಾರುಕಟ್ಟೆಯ ಅನುಕೂಲ: ಕಡಿಮೆ ನಿರ್ವಹಣಾ ವೆಚ್ಚ ಮತ್ತು ದೊಡ್ಡ ದೇಶೀಯ ಗ್ರಾಹಕ ಮಾರುಕಟ್ಟೆಯು ಪ್ರತಿಭೆ ಮತ್ತು ಹೂಡಿಕೆ ಎರಡನ್ನೂ ಆಕರ್ಷಿಸುತ್ತದೆ.
  • ಉದಯೋನ್ಮುಖ ತಂತ್ರಜ್ಞಾನಗಳು: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಹೂಡಿಕೆಯುಏಷ್ಯಾದ ಸಿಲಿಕಾನ್ ವ್ಯಾಲಿ” ಯನ್ನು ನಿರ್ಮಿಸಲು ಅವಕಾಶವನ್ನು ಒದಗಿಸುತ್ತದೆ

ಭಾರತದೆದುರಿಗಿರುವ ಸವಾಲುಗಳು:

  • ಸಂಶೋಧನೆ ಮತ್ತು ಕೌಶಲ್ಯ: ಸಂಶೋಧನೆಗೆ ಕಡಿಮೆ ವೆಚ್ಚ (ಜಿಡಿಪಿಯ 0.7%) ಮತ್ತು ಉನ್ನತ ಶಿಕ್ಷಣದಲ್ಲಿನ ಕೌಶಲ್ಯದ ಅಂತರಗಳು ಅತ್ಯಾಧುನಿಕ ನಾವೀನ್ಯತೆಯನ್ನು ಸೀಮಿತಗೊಳಿಸುತ್ತವೆ.
  • ಮೂಲಸೌಕರ್ಯ ಮತ್ತು ನಿಯಂತ್ರಣಗಳು: ಅಸಮರ್ಪಕ ಮೂಲಸೌಕರ್ಯ ಮತ್ತು ಸಂಕೀರ್ಣ ನಿಯಂತ್ರಕ ಚೌಕಟ್ಟುಗಳು ತಾಂತ್ರಿಕ ಪ್ರಗತಿಯನ್ನು ನಿಧಾನಗೊಳಿಸುತ್ತವೆ.
  • ಬೌದ್ಧಿಕ ಆಸ್ತಿ ಹಕ್ಕುಗಳು (IPR) ಮತ್ತು ವಾಣಿಜ್ಯೀಕರಣ: ದುರ್ಬಲ ಬೌದ್ಧಿಕ ಆಸ್ತಿ ಸಂರಕ್ಷಣೆ ಮತ್ತು ಸಂಶೋಧನೆಗಳನ್ನು ಜಾಗತಿಕ ಉತ್ಪನ್ನಗಳಾಗಿ ಪರಿವರ್ತಿಸುವಲ್ಲಿನ ಸೀಮಿತತೆ.
  • ಪ್ರಾದೇಶಿಕ ಸಹಕಾರ: ದಕ್ಷಿಣ ಏಷ್ಯಾದಲ್ಲಿನ ರಾಜಕೀಯ ಉದ್ವಿಗ್ನತೆ ಮತ್ತು ನಿಯಂತ್ರಕ ಭಿನ್ನತೆಗಳು ಸಹಯೋಗದ ತಾಂತ್ರಿಕ ಉಪಕ್ರಮಗಳಿಗೆ ಅಡ್ಡಿಯಾಗುತ್ತವೆ.

ತೀರ್ಮಾನ: ಭಾರತವು ಸಾಮರ್ಥ್ಯವನ್ನು ಹೊಂದಿದೆ ಮತ್ತು ಈಗ ತನ್ನ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಆರ್ಥಿಕ ವಾಸ್ತವಿಕತೆ ಮತ್ತು ತಾಂತ್ರಿಕ ನಾವೀನ್ಯತೆಯ ಮೇಲೆ ಗಮನಹರಿಸಬೇಕಿದೆ.