Published on: August 25, 2025

ಆದಾಯ ತೆರಿಗೆ ಮಸೂದೆ, 2025 – ಹೊಸ ತೆರಿಗೆ ವ್ಯವಸ್ಥೆಗೆ ರಾಷ್ಟ್ರಪತಿಗಳ ಅನುಮೋದನೆ

ಆದಾಯ ತೆರಿಗೆ ಮಸೂದೆ, 2025 – ಹೊಸ ತೆರಿಗೆ ವ್ಯವಸ್ಥೆಗೆ ರಾಷ್ಟ್ರಪತಿಗಳ ಅನುಮೋದನೆ

ಸುದ್ದಿ –  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆದಾಯ ತೆರಿಗೆ ಕಾಯಿದೆ (I-T Act), 2025 ಕ್ಕೆ ಅನುಮೋದನೆ ನೀಡಿದ್ದಾರೆ. ಈ ಹೊಸ ಕಾಯಿದೆಯು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ, 1961ರ ಕಾಯಿದೆಯ ಬದಲಿಗೆ ನೂತನ ತೆರಿಗೆ ವ್ಯವಸ್ಥೆಯನ್ನು ತರುತ್ತದೆ. ಇದರಲ್ಲಿ ಕಲಂಗಳು, ಅಧ್ಯಾಯಗಳು ಮತ್ತು ಪದಗಳ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ಸರಳೀಕರಣ ಮಾಡಲಾಗಿದ್ದು, ತೆರಿಗೆ ವರ್ಷವನ್ನು ಅನುಸರಿಸುವುದು ಪ್ರಮುಖ ಬದಲಾವಣೆಯಾಗಿದೆ.

ಪರೀಕ್ಷಾ ಸುಳಿವುಗಳು:

  • ಯಾವುದು: ಆದಾಯ ತೆರಿಗೆ ಕಾಯಿದೆ, 2025 ಕ್ಕೆ ಅನುಮೋದನೆ.
  • ಅನುಮೋದನೆ ನೀಡಿದವರು: ರಾಷ್ಟ್ರಪತಿ ದ್ರೌಪದಿ ಮುರ್ಮು.
  • ಜಾರಿಗೆ ಬರುವ ದಿನಾಂಕ: ಏಪ್ರಿಲ್ 01, 2026.
  • ಯಾವುದರ ಬದಲಿಗೆ: ಆದಾಯ ತೆರಿಗೆ ಕಾಯಿದೆ, 1961 ರ ಬದಲಿಗೆ.

ಪ್ರಮುಖ ರಚನಾತ್ಮಕ ಬದಲಾವಣೆಗಳು:

  • ಕಲಂಗಳು (Sections): 819 ರಿಂದ 536 ಕ್ಕೆ ಇಳಿಕೆ.
  • ಅಧ್ಯಾಯಗಳು: 47 ರಿಂದ 23 ಕ್ಕೆ ಇಳಿಕೆ.
  • ಪ್ರಮುಖ ಬದಲಾವಣೆ: ತೆರಿಗೆ ವರ್ಷವನ್ನು ಅನುಸರಿಸುವುದು.

ಆದಾಯ ತೆರಿಗೆ ಕಾಯಿದೆ, 2025: ಪ್ರಮುಖ ಅಂಶಗಳು:

  • ಹೊಸ ಸೇರ್ಪಡೆ: ಮೊದಲ ಬಾರಿಗೆ, ಕಾಯಿದೆಯು ಸ್ಪಷ್ಟತೆ ಮತ್ತು ಸುಲಭ ಉಲ್ಲೇಖಕ್ಕಾಗಿ 39 ಹೊಸ ಕೋಷ್ಟಕಗಳು ಮತ್ತು 40 ಹೊಸ ಸೂತ್ರಗಳನ್ನು ಪರಿಚಯಿಸಿದೆ.
  • ಪ್ರಮುಖ ಬದಲಾವಣೆ: ಗೊಂದಲಗಳನ್ನು ತಪ್ಪಿಸಲು ಮೌಲ್ಯಮಾಪನ ವರ್ಷ (ಆಸೆಸ್ಮೆಂಟ್ ಇಯರ್) ಮತ್ತು ಆರ್ಥಿಕ ವರ್ಷ (FY) ಗಳನ್ನು ಟ್ಯಾಕ್ಸ್ ಇಯರ್’ ಎಂದು ಮರುನಾಮಕರಣ ಮಾಡಲಾಗಿದೆ.

 ಪ್ರಮುಖ ನಿಬಂಧನೆಗಳು:

  • ತೆರಿಗೆ ಸ್ಲ್ಯಾಬ್‌ಗಳು: ಅಸ್ತಿತ್ವದಲ್ಲಿರುವ ತೆರಿಗೆ ಸ್ಲ್ಯಾಬ್‌ಗಳನ್ನು ಉಳಿಸಿಕೊಂಡಿದೆ (ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ), ಆದರೆ ಅವುಗಳನ್ನು ಹೆಚ್ಚು ತಾರ್ಕಿಕವಾಗಿ ರಚಿಸಲಾಗಿದೆ.
  • ಮೂಲಭೂತ ವಿನಾಯಿತಿ ಮಿತಿ: ಮಧ್ಯಮ ಆದಾಯದ ತೆರಿಗೆದಾರರಿಗಾಗಿ ವಾರ್ಷಿಕ ₹12 ಲಕ್ಷ ಮೂಲಭೂತ ವಿನಾಯಿತಿ ಮಿತಿಯನ್ನು ಪರಿಚಯಿಸಲಾಗಿದೆ.
  • ಪಾರದರ್ಶಕ ಮೌಲ್ಯಮಾಪನ: ಮಾನವ ಸಂವಾದವನ್ನು ಕಡಿಮೆ ಮಾಡಲು ಫೇಸ್‌ಲೆಸ್, ಡಿಜಿಟಲ್ಫಸ್ಟ್ ಅಸೆಸ್‌ಮೆಂಟ್‌’ (FDFA) ಗಳನ್ನು ಜಾರಿಗೊಳಿಸಲಾಗಿದೆ.

ಭಾರತದಲ್ಲಿ ಆದಾಯ ತೆರಿಗೆ ಕುರಿತು:

  • ಉಗಮ: ಆದಾಯ ತೆರಿಗೆಯನ್ನು ಭಾರತದಲ್ಲಿ ಮೊದಲ ಬಾರಿಗೆ 1860 ರಲ್ಲಿ ಸರ್ ಜೇಮ್ಸ್ ವಿಲ್ಸನ್ ಅವರು ಪರಿಚಯಿಸಿದರು.
  • ಸಾಂವಿಧಾನಿಕ ಆಧಾರ: ಭಾರತದ ಸಂವಿಧಾನದ ಏಳನೇ ಅನುಸೂಚಿಯು ಕೇಂದ್ರೀಯ ಪಟ್ಟಿಯ 82ನೇ ವಿಭಾಗವು ಆದಾಯ ತೆರಿಗೆಗೆ ಸಂಬಂಧಿಸಿದೆ.
  • ಆಡಳಿತ ಪ್ರಾಧಿಕಾರ: ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಇದರ ಆಡಳಿತ ಪ್ರಾಧಿಕಾರವಾಗಿದೆ.