ಕೆ–ರ‍್ಯಾಟ್
ಕೆ–ರ‍್ಯಾಟ್
ಸುದ್ದಿಯಲ್ಲಿ ಏಕಿದೆ? ವಿಪತ್ತು ಸಂದರ್ಭದಲ್ಲಿ ಸಾರ್ವಜನಿಕರ ಪ್ರಾಣ, ಆಸ್ತಿ ರಕ್ಷಣೆಗಾಗಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೋಲಾರದಲ್ಲಿ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪಡೆ ಕೆ–ರ‍್ಯಾಟ್ (ಕೋಲಾರ ರ‍್ಯಾಪಿಡ್ ಟಾಸ್ಕ್ ಫೋರ್ಸ್) ಸಜ್ಜುಗೊಳಿಸಲಾಗಿದೆ.
ಮುಖ್ಯಾಂಶಗಳು
- ಜಿಲ್ಲೆಯಲ್ಲಿ ಯಾವುದೇ ರೀತಿಯ ಅನಾಹುತ, ವಿಪತ್ತು ಸಂಭವಿಸಿದಾಗ ತ್ವರಿತಗತಿಯ ರಕ್ಷಣೆಗೆ ಕಾರ್ಯಪಡೆ ಇರಲಿದೆ. ವಿಪತ್ತು ತಡೆ, ನಿರ್ವಹಣೆ, ಉಪಶಮನಕ್ಕೆ ಸದಾ ಸನ್ನದ್ಧವಾಗಿರಬೇಕೆಂಬ ಉದ್ದೇಶದಿಂದ ಜಿಲ್ಲಾಧಿಕಾರಿ ಅವರು ಈ ವಿನೂತನ ಕ್ರಮಕ್ಕೆ ಮುಂದಾಗಿದ್ದಾರೆ.
- ಕೋಲಾರ ಜಿಲ್ಲೆಯಲ್ಲಿ ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಪತ್ತು ಎದುರಾಗುವ ಸಾಧ್ಯತೆ ಇರುತ್ತದೆ. ಒಮ್ಮೊಮ್ಮೆ ಬರಗಾಲ, ಮಳೆ ಹೆಚ್ಚಾಗಿ ಪ್ರವಾಹ, ಕೈಗಾರಿಕಾ ಅನಾಹುತ, ಅಗ್ನಿ ಅವಘಡ, ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್ ಕಾರಿಡಾರ್ ಇರುವ ಕಾರಣ ವಾಹನ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಇವೆಲ್ಲದರ ನಿರ್ವಹಣೆಗೆ ಕೆ-ಲ್ಯಾಟ್ ಸಹಕಾರಿಯಾಗುವ ನಿರೀಕ್ಷೆ ಇದೆ.
ಉದ್ದೇಶ:
ಪ್ರವಾಹ, ಭೂಕಂಪ, ಬರಗಾಲ, ಅಗ್ನಿ ಅವಘಡ, ಕೈಗಾರಿಕೆ ಹಾಗೂ ರಸ್ತೆ ಅಪಘಾತಗಳು, ಕಾಲ್ತುಳಿತ ಸೇರಿದಂತೆ ಇತರೆ ಭೌಗೋಳಿಕ ಅನಾಹುತಗಳು ಸಂಭವಿಸಿದಾಗ ಕೇಂದ್ರೀಯ ಹಾಗೂ ರಾಜ್ಯಮಟ್ಟದ ವಿಪತ್ತು ನಿರ್ವಹಣೆ ತಂಡಕ್ಕೆ ಕಾಯದೇ ಕೆ–ರ‍್ಯಾಟ್ ಪಡೆಯು ರಕ್ಷಣಾ ಕಾರ್ಯ ಕೈಗೊಳ್ಳಲಿದೆ. ವಿಪತ್ತು ಸಂದರ್ಭದಲ್ಲಿ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಕೆ-ರಾಟ್ ಪಡೆ ಮಾಡಲಿದೆ.
3 ಹಂತಗಳಲ್ಲಿ ಕೆಲಸ
ವಿಪತ್ತು ಪೂರ್ವ ಜನರಿಗೆ ಮನ್ಸೂಚನೆ ನೀಡುವುದು
ಅನಾಹುತ ಸ್ಥಳದಿಂದ ಜನರನ್ನು ಸ್ಥಳಾಂತರಿಸುವುದು
ಪುನರ್ವಸತಿ, ಪರಿಹಾರ ಕೆಲಸಗಳಿಗೆ ನೆರವು
ಪಡೆಯಲ್ಲಿಯಾರಿರುತ್ತಾರೆ?:
ಪಡೆಯಲ್ಲಿ ತರಬೇತಿ ಪಡೆದ 300 ಪರಿಣಿತ ಸದಸ್ಯರು ಇರಲಿದ್ದಾರೆ. ಎನ್.ಎಸ್.ಎಸ್. ಸೌಟ್ಸ್ ಗೈಡ್ಸ್, ಎನ್‌ಜಿಒಗಳು, ಗೃಹ ರಕ್ಷಕ ದಳ, ನೆಹರು ಯುವ ಕೇಂದ್ರ, ರೆಡ್ ಕ್ರಾಸ್ , ಸೇರಿದಂತೆ ನಾನಾ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಇರುತ್ತಾರೆ.
ತರಬೇತಿ: ಪ್ರಥಮ ಚಿಕಿತ್ಸೆ ನೀಡುವ ರೀತಿ, ಅಗ್ನಿ ನಂದಿಸುವ ವಿಧಾನ, ಶೋಧ ಕಾರ್ಯದ ವೈಖರಿ ಸೇರಿದಂತೆ ಕಾರ್ಯಪಡೆಯಲ್ಲಿರುವ ಸ್ವಯಂಸೇವಕರಿಗೆ ವರ್ಷವಿಡೀ ವಿವಿಧ ರೀತಿಯ ನೀಡಲಾಗುತ್ತದೆ. ವಿಪತ್ತು ಪೂರ್ವ ತಯಾರಿ, ವಿಪತ್ತು ಸಂಭವಿಸಿದಾಗ ನಿಭಾಯಿಸುವ ರೀತಿ, ವಿಪತ್ತು ಸಂಭವಿಸಿದ ನಂತರ ಏನು ಮಾಡಬೇಕು ಎಂಬುದನ್ನು ಕಲಿಸಲಾಗುತ್ತದೆ.
