Published on: July 1, 2025
ಚುಟುಕು ಸಮಾಚಾರ : 1st ಜುಲೈ 2025
ಚುಟುಕು ಸಮಾಚಾರ : 1st ಜುಲೈ 2025
- ಕಪ್ಪತಗುಡ್ಡ: ₹18 ಕೋಟಿ ಸಮಗ್ರ ಯೋಜನೆ : ‘ಒಂದು ಜಿಲ್ಲೆ ಒಂದು ತಾಣ’ ಪರಿಕಲ್ಪನೆ ಆಡಿ ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ ಉತ್ತೇಜನಕ್ಕೆ ಗದಗ ಅರಣ್ಯ ಇಲಾಖೆ ₹26 ಕೋಟಿ ಮೊತ್ತದ ಸಮಗ್ರ ಯೋಜನೆ ಸಿದ್ಧಪಡಿಸಿದೆ. 2024-25 ರ ಬಜೆಟ್ನಲ್ಲಿ ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಕೆಲ ರಾಜ್ಯಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ‘ಒಂದು ಜಿಲ್ಲೆ ಒಂದು ತಾಣ’ (ಒನ್ ಡಿಸ್ಟ್ರಿಕ್ಟ್ ಒನ್ ಡೆಸ್ಟಿನೇಷನ್) ಪರಿಕಲ್ಪನೆ ಯಶಸ್ವಿಯಾಗಿದೆ. ಗದಗ ಜಿಲ್ಲೆಯ ಕಪ್ಪತಗುಡ್ಡ ಗದಗ ತಾಲ್ಲೂಕಿನ ಬಿಂಕದ ಕಟ್ಟಿಯಿಂದ ಮುಂಡರಗಿ ತಾಲ್ಲೂಕಿನ ತುಂಗಭದ್ರಾ ನದಿ ಹಾದು ಹೋಗುವ ಸಿಂಗಟಾಲೂರಿನವರೆಗೆ ವ್ಯಾಪಿಸಿದೆ.
- ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ ಮತ್ತು ಇಕೋಬೀಚ್ ಒಳಗೊಂಡ ಕಡಲತೀರ ಪ್ರದೇಶವನ್ನು, ರಾಜ್ಯದಲ್ಲಿಯೇ ಮೊದಲ ಕಡಲ ವನ್ಯಜೀವಿಧಾಮವಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಕಡಲ ವನ್ಯಜೀವಿಧಾಮ ಘೋಷಣೆಯಿಂದ ಸಮುದ್ರ ಜೀವಿಗಳಿಗೆ ಹೆಚ್ಚಿನ ರಕ್ಷಣೆ ಸಿಗಲಿದೆ.
- ಗೋವಾ ಶಿಪ್ಯಾರ್ಡ್ ಲಿಮಿಟೆಡ್ (GSL) ನಿರ್ಮಿಸಿದ ಎಂಟು ಹಡಗುಗಳ ಸರಣಿಯ ಮೊದಲ ವೇಗದ ಗಸ್ತು ಹಡಗು( (FPV) ‘ಅದಮ್ಯ’ವನ್ನು ಭಾರತೀಯ ಕೋಸ್ಟ್ ಗಾರ್ಡ್ (ICG) ಸೇರ್ಪಡೆಗೊಳಿಸಿದೆ. ಇದು 08 FPV ಯೋಜನೆಯಡಿಯಲ್ಲಿ ನಿರ್ಮಾಣವಾದ ಮೊದಲ ಹಡಗು ಮತ್ತು ಇದು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಹೊಂದಿದೆ
- ಬಿಬಿಎಂಪಿಯ ಇ-ಖಾತಾ ವ್ಯವಸ್ಥೆಗೆ 2024-25ನೇ ಸಾಲಿನಲ್ಲಿ ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿ ಸಂದಿದೆ. 2024ರ ಅ.10ಕ್ಕೆ ಇ-ಖಾತಾ ನೀಡುವ ಬೃಹತ್ ಕಾರ್ಯ ಆರಂಭವಾಗಿತ್ತು. 2025ರ ಜೂನ್ 27ರವರೆಗೆ ಶೇ 25.5ರಷ್ಟು ಖಾತಾದಾರರು ಇ-ಖಾತಾ ಪಡೆದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 25 ಲಕ್ಷ ಸ್ವತ್ತುಗಳ ಪೈಕಿ 5.34 ಲಕ್ಷ ಸ್ವತ್ತುಗಳಿಗೆ ಇ-ಖಾತಾ ಪೂರ್ಣಗೊಂಡಿದೆ.
- ಬಳ್ಳಾರಿಯಲ್ಲಿ 2025ರ ಡಿಸೆಂಬರ್ನಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಲೇಖಕಿ, ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಸ ಆಯ್ಕೆ ಮಾಡಿದೆ.
- ನಮ್ಮ ಮೆಟೊ ಪ್ರಯಾಣಿಕರಿಗೆ ಯಾವುದೇ ಆ್ಯಪ್ ನಲ್ಲಿ ಟಿಕೆಟ್ ಖರೀದಿಸಲು ಅನುಕೂಲವಾಗುವಂತೆ ಮಾಡಲು ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ನೊಂದಿಗೆ (ಒಎನ್ ಡಿಸಿ) ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (ಬಿಎಂಆರ್ ಸಿಎಲ್) ಸಂಯೋಜನೆ ನಡೆಸಲಿದೆ. ಒಎನ್ಡಿಸಿ ಜೊತೆಗೆ ಸಂಯೋಜನೆಯ ಬಳಿಕ ಟುಮ್ಯಾಕೊ, ರೆಡ್ ಬಸ್, ಔಟ್ ಪಾಥ್, ಹೈವೇ ಡಿಲೈಟ್, ನಮ್ಮ ಯಾತ್ರಿ, ರಾಪಿ ರಾಪಿಡೊ ಸೇರಿದಂತೆ ಹತ್ತಕ್ಕೂ ಅಧಿಕ ಅಪ್ಲಿಕೇಶನ್ಗಳಲ್ಲಿ ಟಿಕೆಟ್ ಖರೀದಿಸಲು ಅವಕಾಶವಾಗಲಿದೆ.
- ಕೇಂದ್ರ ಗೃಹ ಸಚಿವರು ತೆಲಂಗಾಣದ ನಿಜಾಮಾಬಾದ್ನಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿಯ ಪ್ರಧಾನ ಕಚೇರಿಯನ್ನು ಉದ್ಘಾಟಿಸಿದರು, ಇದು ಅರಿಶಿನ ರೈತರ 40 ವರ್ಷಗಳ ಹಳೆಯ ಬೇಡಿಕೆಯನ್ನು ಈಡೇರಿಸಿತು. ಉತ್ಪಾದನೆಯಿಂದ ರಫ್ತಿನವರೆಗೆ ಅರಿಶಿನ ವಲಯವನ್ನು ಉತ್ತೇಜಿಸಲು, ನಿಯಂತ್ರಿಸಲು ಮತ್ತು ಬೆಂಬಲಿಸಲು ಭಾರತ ಸರ್ಕಾರವು ಸ್ಥಾಪಿಸಿದ ವಿಶೇಷ ಶಾಸನಬದ್ಧ ಸಂಸ್ಥೆಯಾಗಿದೆ. ಪ್ರಧಾನ ಕಚೇರಿ: ನಿಜಾಮಾಬಾದ್, ತೆಲಂಗಾಣ – “ಭಾರತದ ಅರಿಶಿನ ರಾಜಧಾನಿ” ಎಂದು ಕರೆಯಲ್ಪಡುವ ಪ್ರಮುಖ ಅರಿಶಿನ ಉತ್ಪಾದಕ ಪ್ರದೇಶ.
