Published on: July 10, 2025
ಜನಗಣತಿ: ಜನರಿಂದಲೇ ದತ್ತಾಂಶಕ್ಕೆ ಪೋರ್ಟಲ್
ಜನಗಣತಿ: ಜನರಿಂದಲೇ ದತ್ತಾಂಶಕ್ಕೆ ಪೋರ್ಟಲ್
- ‘ಕೇಂದ್ರ ಸರ್ಕಾರ ನಡೆಸಲಿರುವ ಜನಗಣತಿಗೆ ನಾಗಕರಿಕರು ಸ್ವಯಂ ದತ್ತಾಂಶ ದಾಖಲಿಸುವ ಸೌಕರ್ಯ ಒದಗಿಸುವಂತಹ ವೆಬ್ ಪೋರ್ಟಲ್ ಸಿದ್ಧಗೊಳ್ಳುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
• ದೇಶದಲ್ಲಿಯೇ ಮೊದಲ ಬಾರಿಗೆ ಡಿಜಿಟಲ್ ಗಣತಿ ನಡೆಯಲಿದ್ದು, ಗಣತಿದಾರರು ನಾಗರಿಕರ ಮಾಹಿತಿಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ದಾಖಲಿಸಲಿದ್ದಾರೆ. ಮನೆಗಳ ಪಟ್ಟಿ ಹಾಗೂ ಮನೆಗಳ ಗಣತಿ (ಎಚ್‌ಎಲ್‌ಒ) ಮತ್ತು ಜನಗಣತಿಯ (ಪಿಇ) ಸಂದರ್ಭ ದಲ್ಲಿಯೂ ಇಂತಹುದೇ ಅವಕಾಶ ನಾಗರಿಕರಿಗೆ ಸಿಗಲಿದೆ.
• ‘ಡಿಜಿಟಲ್ ಗಣತಿಯು ಪರಿವರ್ತನೆಯ ಹೆಜ್ಜೆಯಾಗಿದೆ. ದತ್ತಾಂಶಗಳನ್ನು ಸಂಗ್ರಹಿಸಿ, ಎಲೆಕ್ಟ್ರಾನಿಕ್ ಮಾದರಿಯಲ್ಲಿ ಕೇಂದ್ರೀಕೃತ ಸರ್ವರ್‌ಗೆ ವರ್ಗಾಯಿಸಲಾಗುತ್ತದೆ. ಇದರಿಂದ ಗಣತಿ ದತ್ತಾಂಶಗಳನ್ನು ಕಡಿಮೆ ಅವಧಿಯಲ್ಲಿ ಕ್ರೋಡೀಕರಿಸಲು ಸಾಧ್ಯವಾಗಲಿದೆ’.
•ದತ್ತಾಂಶ ಸಂಗ್ರಹ, ವರ್ಗಾವಣೆ ಹಾಗೂ ಶೇಖರಣೆ ವೇಳೆ ಅತ್ಯಂತ ಕಟ್ಟುನಿಟ್ಟಾಗಿ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗುವುದು. -
ಜನರಿಂದಲೇ ದತ್ತಾಂಶಕ್ಕೆ ಪೋರ್ಟಲ್
ಮುಖ್ಯಾಂಶಗಳು
- ಪ್ರತಿ ಗ್ರಾಮ ಹಾಗೂ ಪಟ್ಟಣವನ್ನು ಏಕರೂಪದ ಎಣಿಕೆ ಬ್ಲಾಕ್‌ಗಳಾಗಿ ವಿಂಗಡಿಸಲಾಗುತ್ತದೆ. ಇದರಿಂದ ಗಣತಿದಾರರು ಗಣತಿ ಬಿಟ್ಟು ಹೋಗುವ ಹಾಗೂ ಗಣತಿ ಪುನರಾವರ್ತನೆ ತಪ್ಪಿಸಬಹುದಾಗಿದೆ ಮೃತ್ಯುಂಜಯ್ ಕುಮಾರ್ ನಾರಾಯಣ್, ರಿಜಿಸ್ಟಾರ್ ಜನರಲ್, ಗಣತಿ ಆಯುಕ್ತರು ಹೇಳಿದ್ದಾರೆ.
• ಈ ಹಿಂದೆ ಗಣತಿ ಪ್ರಕ್ರಿಯೆ ನಡೆದ ಎರಡರಿಂದ ಮೂರು ವರ್ಷಗಳ ಬಳಿಕ ದತ್ತಾಂಶಗಳನ್ನು ಸಾರ್ವಜನಿಕರ ಮುಂದೆ ಇಡಲಾಗುತ್ತಿತ್ತು. ಡಿಜಿಟಲ್ ದತ್ತಾಂಶ ಸಂಗ್ರಹದಿಂದ ಕೆಲವೇ ತಿಂಗಳಲ್ಲಿ ಜನರಿಗೆ ಮಾಹಿತಿ ದೊರಕಲಿದೆ.
• ಮನೆಗಳ ಗಣತಿ ಪ್ರಕ್ರಿಯೆಯು 2026ರ ಏಪ್ರಿಲ್ 1 ರಿಂದ ಆರಂಭ ಗೊಳ್ಳಲಿದ್ದು, 2027 ರ ಫೆಬ್ರುವರಿ 1 ರಿಂದ ನಡೆಯುವ ಎರಡನೇ ಹಂತದಲ್ಲಿ ಜನಗಣತಿ ಪ್ರಕ್ರಿಯೆಯೂ ನಡೆಯಲಿದೆ. ಈ ವೇಳೆ ಜಾತಿವಾರು ಗಣತಿ ಪ್ರಕ್ರಿಯೆಯೂ ನಡೆಯಲಿದೆ.
• ‘ನಿಯಾಮವಳಿಗಳ ಪ್ರಕಾರ, ಗಡುವು ಗೊತ್ತುಪಡಿಸಿದ ದಿನದಿಂದ ಮೂರು ತಿಂಗಳ ಒಳಗಾಗಿ ಗಣತಿ ಪ್ರಕ್ರಿಯೆ ಮುಗಿಯಲಿದೆ. ಜಿಲ್ಲೆ, ಉಪ ವಿಭಾಗ, ತಾಲ್ಲೂಕು ಹಾಗೂ ಪೊಲೀಸ್ ಠಾಣಾ ವ್ಯಾಪ್ತಿವಾರು ವಿಭಜಿಸಿ ಗಣತಿ ಪ್ರಕ್ರಿಯೆ ನಡೆಸಲಾಗುತ್ತದೆ. 2026ರ ಏಪ್ರಿಲ್ 1 ರಿಂದ ಮನೆಗಳ ಪಟ್ಟಿ ಮಾಡುವ ಕೆಲಸ ಆರಂಭಗೊಳ್ಳಲಿದ್ದು, ಮೇಲ್ವಿಚಾರಕರು, ಗಣತಿದಾರರ ಕೆಲಸಗಳ ಹಂಚಿಕೆ ಪ್ರಕ್ರಿಯೆ ನಡೆಯಲಿದೆ’ ಎಂದು ಭಾರತದ ರಿಜಿಸ್ಟಾರ್ ಜನರಲ್, ಗಣತಿ ಆಯುಕ್ತರಾದ ಮೃತ್ಯುಂಜಯ್ ಕುಮಾರ್ ನಾರಾಯಣ್ ತಿಳಿಸಿದ್ದಾರೆ.
