Published on: July 4, 2025

ತಾಲಿಬಾನ್ ಆಡಳಿತ ಮಾನ್ಯ

ತಾಲಿಬಾನ್ ಆಡಳಿತ ಮಾನ್ಯ

ಸುದ್ದಿಯಲ್ಲಿ ಏಕಿದೆ? ಮಾಸ್ಕೊದಲ್ಲಿ ತನ್ನ ರಾಯಭಾರಿಯನ್ನು ನೇಮಿಸಲು ಅಫ್ಘಾನಿಸ್ತಾನಕ್ಕೆ ಒಪ್ಪಿಗೆ ನೀಡಿರುವ ರಷ್ಯಾ, ತಾಲಿಬಾನ್ ಆಡಳಿತವನ್ನು ಮಾನ್ಯ ಮಾಡಿದ ಮೊದಲ ರಾಷ್ಟ್ರ ಎನಿಸಿದೆ.

ಹಿನ್ನೆಲೆ

  • 20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಬೀಡುಬಿಟ್ಟಿದ್ದ ಯುಎಸ್ ಸೇನಾ ಪಡೆಗಳು 2021ರ ಆಗಸ್ಟ್‌ನಲ್ಲಿ ಹೊರನಡೆದ ಬಳಿಕ ತಾಲಿಬಾನ್‌ ಅಧಿಕಾರ ಚುಕ್ಕಾಣಿ ಹಿಡಿದಿದೆ. ಅಂದಿನಿಂದ ಈ ಗುಂಪು ದೇಶವನ್ನು ನಿಯಂತ್ರಿಸುತ್ತಿದ್ದರೂ, ಹೆಚ್ಚಿನ ಅಂತರರಾಷ್ಟ್ರೀಯ ಸಮುದಾಯವು ಮಾನವ ಹಕ್ಕುಗಳು, ಮಹಿಳಾ ಶಿಕ್ಷಣ ಮತ್ತು ರಾಜಕೀಯ ಒಳಗೊಳ್ಳುವಿಕೆಯ ಬಗ್ಗೆ ಕಳವಳಗಳನ್ನು ಉಲ್ಲೇಖಿಸಿ ಔಪಚಾರಿಕ ಮಾನ್ಯತೆಯನ್ನು ತಡೆಹಿಡಿದಿದೆ. ಆಗಿನಿಂದ ಬೇರಾವ ರಾಷ್ಟ್ರವೂ ತಾಲಿಬಾನ್ ಸರ್ಕಾರವನ್ನು ಮಾನ್ಯ ಮಾಡಿಲ್ಲ.

ಮುಖ್ಯಾಂಶಗಳು

  • ಆದರೆ, ಚೀನಾ, ಯುಎಇ, ಉಜೈಕಿಸ್ತಾನ ಹಾಗೂ ಪಾಕಿಸ್ತಾನ ದೇಶಗಳು ಅಫ್ಘಾನಿಸ್ತಾನದಲ್ಲಿ ರಾಯಭಾರಿಯನ್ನು ಹೊಂದಿವೆ. ಇದು, ಸರ್ಕಾರವನ್ನು ಮಾನ್ಯತೆ ಮಾಡುವತ್ತ ಇರಿಸಿರುವ ಪ್ರಮುಖ ಹೆಜ್ಜೆ ಎನ್ನಲಾಗಿದೆ.
  • ರಷ್ಯಾ ತನ್ನ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಪಟ್ಟಿಯಿಂದ ತಾಲಿಬಾನ್ ಅನ್ನು ತೆಗೆದುಹಾಕಿದ ನಂತರ ತೆಗೆದುಕೊಂಡ ಈ ನಿರ್ಧಾರವು, ಅಫ್ಘಾನಿಸ್ತಾನದ ಬಗ್ಗೆ ಮಾಸ್ಕೋದ ಧೋರಣೆಯಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ ಮತ್ತು ಇತರ ರಾಷ್ಟ್ರಗಳು ಇದನ್ನು ಅನುಸರಿಸುವಂತೆ ಪ್ರಭಾವ ಬೀರಬಹುದು.

ಪ್ರಯೋಜನಗಳು

  • ರಷ್ಯಾ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಉತ್ತಮ ಅವಕಾಶಗಳಿವೆ. ಭದ್ರತೆ, ಭಯೋತ್ಪಾದನೆ ನಿಗ್ರಹ ಹಾಗೂ ಮಾದಕ ವಸ್ತು ಕಳ್ಳಸಾಗಣೆಯನ್ನು ಹತ್ತಿಕ್ಕಲು ಕಾಬೂಲ್‌ಗೆ ಬೆಂಬಲ ನೀಡುವುದನ್ನು ಮುಂದುವರಿಸಲಿದ್ದೇವೆ. ಇಂಧನ, ಸಾರಿಗೆ, ಕೃಷಿ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾಕಷ್ಟು ವಾಣಿಜ್ಯ ಹಾಗೂ ಆರ್ಥಿಕ ಅವಕಾಶಗಳಿವೆ ಎಂದು ಉಲ್ಲೇಖಿಸಿದೆ.
  • ‘ಇಸ್ಲಾಮಿಕ್‌ ಎಮಿರೇಟ್ ಆಫ್ ಅಫ್ಘಾನಿಸ್ತಾನಕ್ಕೆ ಅಧಿಕೃತ ಮಾನ್ಯತೆ ನೀಡುವ ಕ್ರಮವು ಉಭಯ ದೇಶಗಳ ನಡುವೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ವೃದ್ಧಿಯನ್ನು ಉತ್ತೇಜಿಸಲಿದೆ.