Published on: September 11, 2025
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಯ ಐದು ವರ್ಷಗಳು
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಯ ಐದು ವರ್ಷಗಳು
ಸುದ್ದಿ – ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ, ಮೀನುಗಾರಿಕೆ ಇಲಾಖೆಯು ಈ ಯೋಜನೆಯನ್ನು ಸೆಪ್ಟೆಂಬರ್ 2020-21 ರಿಂದ 2024-25ರ ಅವಧಿಗೆ ಪ್ರಾರಂಭಿಸಿತು.ಈ ಯೋಜನೆಯನ್ನು ಈಗ 2025-26ರ ವರೆಗೆ ವಿಸ್ತರಿಸಲಾಗಿದೆ. ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ (NFDB) ಯು PMMSY ಅಡಿಯಲ್ಲಿ ತರಬೇತಿ, ಜಾಗೃತಿ ಮತ್ತು ಸಾಮರ್ಥ್ಯ-ನಿರ್ಮಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನೋಡಲ್ ಸಂಸ್ಥೆಯಾಗಿದೆ. PMMSY ಯೋಜನೆಯು ಕೇಂದ್ರ ವಲಯದ ಘಟಕಗಳು ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಘಟಕಗಳನ್ನು ಒಳಗೊಂಡಿರುವ ಒಂದು ಸಮಗ್ರ ಯೋಜನೆಯಾಗಿ ಜಾರಿಗೆ ಬರಲಿದೆ.
ಪ್ರಮುಖ ಸಾಧನೆಗಳು:
- ದೇಶವು ವಿಶ್ವದ ಎರಡನೇ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ, ಇದು ಜಾಗತಿಕ ಮೀನು ಉತ್ಪಾದನೆಯಲ್ಲಿ ಸುಮಾರು 8% ರಷ್ಟು ಕೊಡುಗೆ ನೀಡುತ್ತದೆ.
- ಈ ಯೋಜನೆಯು 58 ಲಕ್ಷ ಜೀವನೋಪಾಯಗಳನ್ನು ಸೃಷ್ಟಿಸಿದೆ ಮತ್ತು 99,018 ಮಹಿಳೆಯರಿಗೆ ಸಬಲೀಕರಣವನ್ನು ನೀಡಿದೆ.
ಕಾರ್ಯತಂತ್ರದ ಉಪಕ್ರಮಗಳು:
- ಮೀನುಗಾರಿಕೆ ವಲಯದಲ್ಲಿ ಮಹಿಳೆಯರಿಗೆ ಸಬಲೀಕರಣ: ಮಹಿಳಾ-ಆಧಾರಿತ ಯೋಜನೆಗಳಿಗೆ 60% ವರೆಗೆ ಆರ್ಥಿಕ ನೆರವು ನೀಡುತ್ತದೆ ಮತ್ತು ಹವಾಮಾನ-ನಿರೋಧಕ ಕರಾವಳಿ ಗ್ರಾಮಗಳನ್ನು ಬೆಂಬಲಿಸುತ್ತದೆ.
- ತಂತ್ರಜ್ಞಾನ ಅಳವಡಿಕೆ: ಸುಸ್ಥಿರವಾಗಿ ಉತ್ಪಾದಕತೆಯನ್ನು ಹೆಚ್ಚಿಸಲು ಬಯೋಫ್ಲಾಕ್ ಮತ್ತು ಮರುಬಳಕೆಯ ಜಲಕೃಷಿ ವ್ಯವಸ್ಥೆ (Recirculatory Aquaculture System – RAS) ಘಟಕಗಳನ್ನು ವಿಸ್ತರಿಸಿದೆ.
- ಔಪಚಾರಿಕತೆ ಮತ್ತು ಡಿಜಿಟಲೀಕರಣ: ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ ಯೋಜನೆ (ಪಿಎಂ-ಎಂಕೆಯೆಸ್‌ಎಸ್‌ವೈ), ಇದು PMMSY ಯ ಉಪ-ಯೋಜನೆಯಾಗಿದೆ, ಮತ್ತು ರಾಷ್ಟ್ರೀಯ ಮೀನುಗಾರಿಕೆ ಡಿಜಿಟಲ್ ವೇದಿಕೆ (ಎನ್‌ಎಫ್‌ಡಿಪಿ) ಗಳು ಈ ವಲಯವನ್ನು ಔಪಚಾರಿಕಗೊಳಿಸುತ್ತವೆ ಮತ್ತು ಸೌಲಭ್ಯಗಳಿಗೆ ಏಕ-ಗವಾಕ್ಷಿ ಪ್ರವೇಶವನ್ನು ನೀಡುತ್ತವೆ.
- ಹವಾಮಾನ ನಿರೋಧಕ ಕರಾವಳಿ ಮೀನುಗಾರರ ಗ್ರಾಮಗಳು (Climate Resilient Coastal Fishermen Villages – CRCFV): 100 ಸಿಆರ್‌ಸಿಎಫ್‌ವಿಗಳ ಅಭಿವೃದ್ಧಿಯು ಕರಾವಳಿ ಸಮುದಾಯಗಳಲ್ಲಿ ಹವಾಮಾನ ನಿರೋಧಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
