Published on: September 11, 2025

ಭಾರತದ ಮೊದಲ ಬಂದರು-ಆಧಾರಿತ ಹಸಿರು ಹೈಡ್ರೋಜನ್ ಪೈಲಟ್ ಯೋಜನೆಗೆ ಚಾಲನೆ

ಭಾರತದ ಮೊದಲ ಬಂದರು-ಆಧಾರಿತ ಹಸಿರು ಹೈಡ್ರೋಜನ್ ಪೈಲಟ್ ಯೋಜನೆಗೆ ಚಾಲನೆ

ಸುದ್ದಿ –  ಕೇಂದ್ರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರು ತಮಿಳುನಾಡಿನ ವಿ.ಒ. ಚಿದಂಬರನಾರ್ ಬಂದರಿನಲ್ಲಿ ಭಾರತದ ಮೊದಲ ಬಂದರು-ಆಧಾರಿತ ಹಸಿರು ಹೈಡ್ರೋಜನ್ ಪೈಲಟ್ ಯೋಜನೆಗೆ ಚಾಲನೆ ನೀಡಿದರು.

ಯೋಜನೆಯ ವಿವರಗಳು:

    • ವೆಚ್ಚ ಮತ್ತು ಸಾಮರ್ಥ್ಯ: 3.87 ಕೋಟಿ ರೂ. ವೆಚ್ಚದ ಈ ಯೋಜನೆಯು 10 ಸಾಮಾನ್ಯ ಘನ ಮೀಟರ್/ಗಂಟೆ (Normal Cubic Meters/Hour – NCMH) ಸಾಮರ್ಥ್ಯ ಹೊಂದಿದೆ.
    • ಬಳಕೆ: ಇದು ಬಂದರು ಕಾಲೋನಿಯ ಬೀದಿ ದೀಪಗಳು ಮತ್ತು ವಿದ್ಯುತ್ ವಾಹನಗಳ ಚಾರ್ಜಿಂಗ್‌ಗೆ ವಿದ್ಯುತ್ ಪೂರೈಸಲಿದೆ.
  • ವಿ.ಒ.ಸಿ. ಬಂದರಿನ ಹೊಸ ಮೈಲಿಗಲ್ಲು: ವಿ.ಒ.ಸಿ. ಬಂದರು ಹಸಿರು ಹೈಡ್ರೋಜನ್ ಉತ್ಪಾದಿಸುವ ಭಾರತದ ಮೊದಲ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
  • ಹಸಿರು ಮೆಥನಾಲ್ ಬಂಕರಿಂಗ್: 35.34 ಕೋಟಿ ರೂ. ವೆಚ್ಚದ ಹಸಿರು ಮೆಥನಾಲ್ ಬಂಕರಿಂಗ್ ಮತ್ತು ಇಂಧನ ತುಂಬುವ ಸೌಲಭ್ಯಕ್ಕೂ ಅಡಿಪಾಯ ಹಾಕಲಾಯಿತು. ಇದು ಕಾಂಡ್ಲಾ-ಟುಟಿಕೋರಿನ್ ಕರಾವಳಿ ಹಸಿರು ಹಡಗು ಸಾಗಣೆ ಕಾರಿಡಾರ್‌ಗೆ ಹೊಂದಿಕೆಯಾಗಲಿದೆ.
  • ಸೌರ ವಿದ್ಯುತ್ ಸ್ಥಾವರ: ಹೆಚ್ಚುವರಿಯಾಗಿ, 400 kW ರೂಫ್‌ಟಾಪ್ ಸೌರ ವಿದ್ಯುತ್ ಸ್ಥಾವರವನ್ನು ಪ್ರಾರಂಭಿಸಲಾಯಿತು. ಇದರಿಂದ ಬಂದರಿನ ಒಟ್ಟು ಸೌರಶಕ್ತಿ ಸಾಮರ್ಥ್ಯ 1.04 MW ಗೆ ಏರಿದ್ದು, ಇದು ಭಾರತೀಯ ಬಂದರುಗಳಲ್ಲಿ ಅತಿ ಹೆಚ್ಚು.
  • ಇತರ ಮೂಲಸೌಕರ್ಯ ಯೋಜನೆಗಳು:
    • ಹೊಸ ಲಿಂಕ್ ಕನ್ವೇಯರ್: 24.5 ಕೋಟಿ ರೂ. ವೆಚ್ಚದ ಇದು ಸರಕು ನಿರ್ವಹಣಾ ದಕ್ಷತೆಯನ್ನು 0.72 MMTPA ವರೆಗೆ ಹೆಚ್ಚಿಸುತ್ತದೆ.
    • ಹೊಸ ಯೋಜನೆಗಳಿಗೆ ಅಡಿಪಾಯ: 6 MW ಗಾಳಿ ವಿದ್ಯುತ್ ಕೇಂದ್ರ, 90 ಕೋಟಿ ರೂ. ವೆಚ್ಚದ ಬಹು-ಸರಕು ಬರ್ತ್, 3.37 ಕಿ.ಮೀ ನಾಲ್ಕು ಪಥದ ರಸ್ತೆ ಮತ್ತು ತಮಿಳುನಾಡು ಕಡಲ ಪರಂಪರೆ ವಸ್ತುಸಂಗ್ರಹಾಲಯಕ್ಕೂ ಅಡಿಪಾಯ ಹಾಕಲಾಯಿತು.