Published on: August 25, 2025

ಸಂಯೋಜಿತ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಯ (IADWS) ಯಶಸ್ವಿ ಪರೀಕ್ಷೆ

ಸಂಯೋಜಿತ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಯ (IADWS) ಯಶಸ್ವಿ ಪರೀಕ್ಷೆ

ಸುದ್ದಿ –  ಭಾರತೀಯ ವಾಯುಪಡೆಯು ಮೊದಲ ಬಾರಿಗೆ ಒಡಿಶಾದ ಚಾಂದಿಪುರದ ಪರೀಕ್ಷಾ ವಲಯದಲ್ಲಿ ಸಂಯೋಜಿತ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆ (IADWS) ಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಿದ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದ್ದು, ಭಾರತದ ಪ್ರಾದೇಶಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸಿದೆ.

ಪ್ರಮುಖ ಅಂಶಗಳು ಮತ್ತು ವೈಶಿಷ್ಟ್ಯಗಳು:

  • ಪರೀಕ್ಷೆಯ ಸ್ಥಳ: ಒಡಿಶಾದ ಕರಾವಳಿಯ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯ.
  • ಅಭಿವೃದ್ಧಿಪಡಿಸಿದ ಸಂಸ್ಥೆ: DRDO + ಸಶಸ್ತ್ರ ಪಡೆಗಳು
  • ಹಿನ್ನೆಲೆ: “ಆಪರೇಷನ್ ಸಿಂಧೂರ” ಬಳಿಕ 3 ತಿಂಗಳೊಳಗೆ ಪರೀಕ್ಷೆ

ಭಾಗವಹಿಸಿದ ಶಸ್ತ್ರಾಸ್ತ್ರಗಳು:

    • QRSAM (Quick Reaction Surface to Air Missile) – ಕಡಿಮೆ ಅಂತರದ ಗುರಿ ತಡೆ, ನೆಲದಿಂದ ಆಗಸಕ್ಕೆ ಚಿಮ್ಮಿ ಗುರಿಯನ್ನು ನಾಶಪಡಿಸುವ ಕ್ಷಿಪಣಿಗಳು.
    • ವಿಶಾರ್ಡ್-ಡಿ ವೈ (Visard-DY): ಕಡಿಮೆ ವ್ಯಾಪ್ತಿಯ ವಾಯುಪ್ರದೇಶದ ಗುರಿಗಳನ್ನು ನಾಶಪಡಿಸುವ ರಕ್ಷಣಾ ವ್ಯವಸ್ಥೆ.
    • DEW (Directed Energy Weapons) – ಲೇಸರ್ ಆಧಾರಿತ ಉನ್ನತ ಶಸ್ತ್ರಾಸ್ತ್ರಗಳು

ಪ್ರಾಮುಖ್ಯತೆ:

  • ನಿಯಂತ್ರಣ: ಈ ಎಲ್ಲಾ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು DRDO ಅಭಿವೃದ್ಧಿಪಡಿಸಿದ ಕೇಂದ್ರೀಕೃತ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದ ಮೂಲಕ ನಿಯಂತ್ರಿಸಲಾಗುತ್ತದೆ.
  • ಪರೀಕ್ಷಾ ಯಶಸ್ಸು: ಪರೀಕ್ಷೆಯ ಸಮಯದಲ್ಲಿ, ಈ ವ್ಯವಸ್ಥೆಯು ಅತಿ ವೇಗವಾಗಿ ಚಲಿಸುತ್ತಿದ್ದ ಎರಡು ಡ್ರೋನ್‌ಗಳು (UAV) ಮತ್ತು ಮಲ್ಟಿಕಾಪ್ಟರ್ ಡ್ರೋನ್ ಸೇರಿದಂತೆ ಮೂರು ವಿಭಿನ್ನ ಗುರಿಗಳನ್ನು ಅತ್ಯಂತ ನಿಖರವಾಗಿ ಹೊಡೆದುರುಳಿಸಿತು.
  • ಯಾವುದೇ ದೋಷಗಳಿರಲಿಲ್ಲ: ಈ ರಕ್ಷಣಾ ವ್ಯವಸ್ಥೆಯ ಎಲ್ಲಾ ಭಾಗಗಳು ಯಾವುದೇ ದೋಷಗಳಿಲ್ಲದೆ ಕಾರ್ಯನಿರ್ವಹಿಸಿವೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮಹತ್ವ:

  • ಈ ಯಶಸ್ವಿ ಪರೀಕ್ಷೆಯು ಭಾರತದ ವಾಯುಪ್ರದೇಶ ರಕ್ಷಣಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ.
  • ಇದು ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನವನ್ನು ಅವಲಂಬಿಸಿರುವುದರಿಂದ, ರಕ್ಷಣಾ ಕ್ಷೇತ್ರದಲ್ಲಿ ಭಾರತದ ಆತ್ಮನಿರ್ಭರತೆಯನ್ನು ಪ್ರದರ್ಶಿಸುತ್ತದೆ.
  • ಪ್ರಾದೇಶಿಕ ಭದ್ರತೆಯ ದೃಷ್ಟಿಯಿಂದ ಇದು ದೇಶದ ರಕ್ಷಣಾ ಸಾಮರ್ಥ್ಯಕ್ಕೆ ಒಂದು ಮಹತ್ವದ ಸೇರ್ಪಡೆಯಾಗಿದೆ.
  • ಮುಂದಿನ ದಿನಗಳಲ್ಲಿ ಡ್ರೋನ್ ದಾಳಿ, ಯುದ್ಧವಿಮಾನ ದಾಳಿ, ಕ್ಷಿಪಣಿ ದಾಳಿಗಳಿಗೆ ತ್ವರಿತ ಪ್ರತಿಕ್ರಿಯೆ ನೀಡಲು ಸಾಮರ್ಥ್ಯ.

ಪರೀಕ್ಷಾ ಸುಳಿವುಗಳು:

  • ವ್ಯವಸ್ಥೆಯ ಹೆಸರು: IADWS – Integrated Air Defence Weapon System
  • ಅಭಿವೃದ್ಧಿಪಡಿಸಿದವರು: DRDO
  • ಪರೀಕ್ಷಾ ಸ್ಥಳ: ಚಾಂದಿಪುರ, ಒಡಿಶಾ
  • ಒಳಗೊಂಡಿರುವ ವ್ಯವಸ್ಥೆಗಳು: QRSAM, Vishwarya, DEW
  • ಸಾಮರ್ಥ್ಯ: ಬಹು ಗುರಿಗಳನ್ನು ಏಕಕಾಲದಲ್ಲಿ ತಡೆಯುವ ಶಕ್ತಿ