Published on: September 9, 2025
ಹಿಮಾಲಯದಲ್ಲಿ ವಿರಳ ʼಪಲ್ಲಾಸ್ ಕ್ಯಾಟ್’ ಪತ್ತೆ: ಪ್ರಮುಖ ವನ್ಯಜೀವಿ ದಾಖಲೆ
ಹಿಮಾಲಯದಲ್ಲಿ ವಿರಳ ʼಪಲ್ಲಾಸ್ ಕ್ಯಾಟ್’ ಪತ್ತೆ: ಪ್ರಮುಖ ವನ್ಯಜೀವಿ ದಾಖಲೆ
ಸುದ್ದಿ – ಅರುಣಾಚಲ ಪ್ರದೇಶದ ಹಿಮಾವೃತ ಪ್ರದೇಶದಲ್ಲಿ ಅಳವಡಿಸಲಾದ ಕ್ಯಾಮೆರಾಗಳಲ್ಲಿ ವಿರಳ ಜಾತಿಯ ʼಪಲ್ಲಾಸ್ ಕ್ಯಾಟ್’ (Pallas’s Cat) ಎಂಬ ಕಾಡುಬೆಕ್ಕಿನ ಚಿತ್ರಗಳು ಇದೇ ಮೊದಲ ಬಾರಿಗೆ ಸೆರೆಯಾಗಿವೆ. ಈ ಆವಿಷ್ಕಾರವು ಹಿಮಾಲಯದ ಪರಿಸರ ವ್ಯವಸ್ಥೆಯಲ್ಲಿ 4,200 ಮೀಟರ್‌ಗಳಿಗಿಂತ ಹೆಚ್ಚಿನ ಎತ್ತರದಲ್ಲಿ 6 ವಿವಿಧ ಜಾತಿಯ ಕಾಡುಬೆಕ್ಕುಗಳ ಅಸ್ತಿತ್ವವನ್ನು ದೃಢಪಡಿಸಿದ್ದು, ಇದು ದೇಶದ ವನ್ಯಜೀವಿ ದಾಖಲೆಗಳಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಪ್ರಮುಖ ಪರೀಕ್ಷಾ ಅಂಶಗಳು:
ಪತ್ತೆಯಾದ ಸ್ಥಳ: ಅರುಣಾಚಲ ಪ್ರದೇಶದ ಹಿಮಾಲಯ ಶ್ರೇಣಿ, 4,200 ಮೀಟರ್‌ಗಿಂತ ಹೆಚ್ಚಿನ ಎತ್ತರದಲ್ಲಿ.
- ವನ್ಯಜೀವಿ: ಪಲ್ಲಾಸ್ ಕ್ಯಾಟ್’ (ವಿಜ್ಞಾನದ ಹೆಸರು: Otocolobus manul). ಇದುವರೆಗೆ ಹಿಮಾಲಯದಲ್ಲಿ ಒಟ್ಟು 6 ಜಾತಿಯ ಕಾಡುಬೆಕ್ಕುಗಳು ಪತ್ತೆಯಾಗಿವೆ.
- ಸಂಶೋಧನೆ ನಡೆಸಿದ ಸಂಸ್ಥೆ: ವಿಶ್ವ ವನ್ಯಜೀವಿ ಸಂಸ್ಥೆ (WWF)ಯ ಭಾರತ ಘಟಕವು ಈ ಸಮೀಕ್ಷೆಯನ್ನು ನಡೆಸಿದೆ.
- ನಡೆಸಿದ ಸಮೀಕ್ಷೆ: ರಾಜ್ಯ ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಯೋಗದೊಂದಿಗೆ “ಟ್ರಾನ್ಸ್–ಹಿಮಾಲಯದ ಪರ್ವತಪ್ರದೇಶಗಳ ಪುನರುಜ್ಜೀವನ — ಮಾನವ–ಪ್ರಕೃತಿ ಸಹಜೀವನದ ದಿಟ್ಟ ಸಮುದಾಯ–ಆಧಾರಿತ ಪರಿಕಲ್ಪನೆ” ಯೋಜನೆಯಡಿ ಸಮೀಕ್ಷೆ ನಡೆಸಲಾಗಿದೆ.
- ಕ್ಯಾಮೆರಾ ಅಳವಡಿಕೆ: ಸೆಪ್ಟೆಂಬರ್ 2024ರಲ್ಲಿ ಹಿಮಾಲಯದ 2,000 ಚದರ ಕಿ.ಮೀ ವಿಸ್ತೀರ್ಣದಲ್ಲಿ, 83 ಕಡೆಗಳಲ್ಲಿ 136 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
- ಇದುವರೆಗೆ ಪತ್ತೆಯಾದ ಇತರ ಕಾಡುಬೆಕ್ಕುಗಳು:
- ಸ್ನೋ ಲೆಪರ್ಡ್ (Snow Leopard)
- ಕ್ಲೌಡೆಡ್ ಲೆಪರ್ಡ್ (Clouded Leopard)
- ಲೆಪರ್ಡ್ ಕ್ಯಾಟ್ (Leopard Cat)
- ಕಾಮನ್ ಲೆಪರ್ಡ್ (Common Leopard)
- ಮಾರ್ಬಲ್ಡ್ ಕ್ಯಾಟ್ (Marbled Cat)
- ಪ್ಲಾಸ್ ಕ್ಯಾಟ್ (Pallas’s Cat) – ಹೊಸ ಸೇರ್ಪಡೆಯಾಗಿದೆ.
ಮಹತ್ವ:
- ಅಪರೂಪದ ದಾಖಲೆ: ಸಮುದ್ರ ಮಟ್ಟದಿಂದ 4,000 ಮೀಟರ್‌ಗಿಂತ ಹೆಚ್ಚಿನ ಎತ್ತರದಲ್ಲಿ ವನ್ಯಜೀವಿಗಳ ಅಸ್ತಿತ್ವದ ಈ ದಾಖಲೆಯು ದೇಶಕ್ಕೆ ಮಹತ್ವದ ಸಂಶೋಧನೆಯಾಗಿದೆ. ಈ ಎತ್ತರದಲ್ಲಿನ ಪರಿಸರ ವ್ಯವಸ್ಥೆ ಮತ್ತು ಜೀವಿಗಳ ಕುರಿತು ಹೆಚ್ಚಿನ ಅಧ್ಯಯನಗಳಿಗೆ ದಾರಿ ಮಾಡಿಕೊಡುತ್ತದೆ.
- ಜೀವವೈವಿಧ್ಯದ ಸಂರಕ್ಷಣೆ: ಪಲ್ಲಾಸ್ ಕ್ಯಾಟ್’ನ ಪತ್ತೆಯು ಈ ಪ್ರದೇಶದಲ್ಲಿ ಸೂಕ್ತ ಆವಾಸಸ್ಥಾನವಿದೆ ಎಂಬುದನ್ನು ಸೂಚಿಸುತ್ತದೆ. ಇದು ಆ ಪ್ರದೇಶದ ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ಸಂರಕ್ಷಣಾ ಅಗತ್ಯಗಳ ಬಗ್ಗೆ ಹೆಚ್ಚಿನ ಒಳನೋಟ ನೀಡುತ್ತದೆ.
- ಸಮುದಾಯದ ಪಾತ್ರ: ಸ್ಥಳೀಯರ ಸಹಕಾರ ಮತ್ತು ಸಮುದಾಯದ ನೇತೃತ್ವದಲ್ಲಿ ನಡೆದ ಈ ಸಮೀಕ್ಷೆಯು ವನ್ಯಜೀವಿ ಸಂರಕ್ಷಣೆಯಲ್ಲಿ ಸ್ಥಳೀಯ ಸಮುದಾಯಗಳ ಮಹತ್ವದ ಪಾತ್ರವನ್ನು ಎತ್ತಿ ತೋರಿಸುತ್ತದೆ.
- ಸಂಶೋಧನಾ ಅವಕಾಶ: ಈ ಹೊಸ ಮಾಹಿತಿ ಭವಿಷ್ಯದ ವನ್ಯಜೀವಿ ಸಂರಕ್ಷಣಾ ನೀತಿಗಳು ಮತ್ತು ಯೋಜನೆಗಳನ್ನು ರೂಪಿಸಲು ನಿರ್ಣಾಯಕವಾಗಿದ್ದು, ಹಿಮಾಲಯದ ಪರಿಸರದಲ್ಲಿ ವಾಸಿಸುವ ಪ್ರಾಣಿಗಳ ಬಗ್ಗೆ ಹೊಸ ಅಧ್ಯಯನಗಳಿಗೆ ವೇದಿಕೆ ಒದಗಿಸುತ್ತದೆ.
