Published on: April 3, 2026

2025-26 ರ ಆರ್ಥಿಕ ವರ್ಷದಲ್ಲಿ ದಾಖಲೆ ಮಟ್ಟ ತಲುಪಿದ ಭಾರತದ ರಕ್ಷಣಾ ರಫ್ತು

2025-26 ರ ಆರ್ಥಿಕ ವರ್ಷದಲ್ಲಿ ದಾಖಲೆ ಮಟ್ಟ ತಲುಪಿದ ಭಾರತದ ರಕ್ಷಣಾ ರಫ್ತು

ಸುದ್ದಿ – ಭಾರತದ ರಕ್ಷಣಾ ರಫ್ತು 2025-26 ರ ಹಣಕಾಸು ವರ್ಷದಲ್ಲಿ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 62.66% ರಷ್ಟು ಹೆಚ್ಚಾಗಿ, ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 38,424 ಕೋಟಿಯನ್ನು ತಲುಪಿದೆ.

  • 2028-29 ರ ವೇಳೆಗೆ ರಕ್ಷಣಾ ರಫ್ತಿನಲ್ಲಿ ₹ 50,000 ಕೋಟಿ ಮತ್ತು ದೇಶೀಯ ರಕ್ಷಣಾ ಉತ್ಪಾದನೆಯಲ್ಲಿ ₹ 3 ಲಕ್ಷ ಕೋಟಿ ಸಾಧಿಸುವ ಗುರಿಯನ್ನು ಭಾರತ ಹೊಂದಿದೆ.

ರಕ್ಷಣಾ ರಫ್ತಿನ ಪ್ರಮುಖ ಮುಖ್ಯಾಂಶಗಳು ( ಹಣಕಾಸು ವರ್ಷ 2025-26 )

  • ಬೆಳವಣಿಗೆಯ ಪ್ರವೃತ್ತಿ: ಐದು ವರ್ಷಗಳಲ್ಲಿ ರಫ್ತು ಮೌಲ್ಯವು ಬಹುತೇಕ ಮೂರು ಪಟ್ಟು ಹೆಚ್ಚಾಗಿದೆ ಮತ್ತು ಅಧಿಕೃತ ರಕ್ಷಣಾ ರಫ್ತುದಾರರ ಸಂಖ್ಯೆಯು 128 ರಿಂದ 145 ಕ್ಕೆ ಏರಿದೆ.
  • ವಲಯವಾರು ಪಾಲು: ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು ( DPSUs ) ಒಟ್ಟು ರಫ್ತಿನಲ್ಲಿ 54.84% ರಷ್ಟು ಕೊಡುಗೆ ನೀಡಿದ್ದು, 151% ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ. ಅದೇ ಸಮಯದಲ್ಲಿ ಖಾಸಗಿ ವಲಯದ ರಫ್ತು 14% ರಷ್ಟು ಹೆಚ್ಚಾಗಿದೆ.
  • ಜಾಗತಿಕ ವ್ಯಾಪ್ತಿ: ಅಮೆರಿಕ, ಫ್ರಾನ್ಸ್ ಮತ್ತು ಅರ್ಮೇನಿಯಾವನ್ನು ಪ್ರಮುಖ ಕೇಂದ್ರಗಳನ್ನಾಗಿಸಿಕೊಂಡು, ಭಾರತವು 80 ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಸಾಧನಗಳನ್ನು ರಫ್ತು ಮಾಡಿದೆ; ಫಿಲಿಪೈನ್ಸ್, ಇಂಡೋನೇಷ್ಯಾ, ಈಜಿಪ್ಟ್ ಮತ್ತು ಆಫ್ರಿಕನ್ ರಾಷ್ಟ್ರಗಳೊಂದಿಗೆ ಪಾಲುದಾರಿಕೆಗಳು ವಿಸ್ತರಿಸುತ್ತಿವೆ.
  • ರಫ್ತು ಬುಟ್ಟಿ: ಮೂಲಭೂತ ಉಪವ್ಯವಸ್ಥೆ ಘಟಕಗಳಿಂದ, ಹೆಚ್ಚಿನ ಮೌಲ್ಯದ, ಸಂಕೀರ್ಣ ವೇದಿಕೆಗಳಿಗೆ ( platforms ) ರಫ್ತು ಪರಿವರ್ತನೆಗೊಂಡಿದೆ.

ರಫ್ತು ಬೆಳವಣಿಗೆಯ ಪ್ರಮುಖ ಚಾಲಕರು

  • ನಿಯಂತ್ರಣ ಸುಧಾರಣೆ: ನವೀಕರಿಸಿದ ಆನ್‌ಲೈನ್ ಪೋರ್ಟಲ್ ಮತ್ತು ಸುವ್ಯವಸ್ಥಿತ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನದ ( SOP ) ಮೂಲಕ ರಫ್ತು ಅನುಮೋದನೆಗಳನ್ನು ಸರಳೀಕರಿಸಲಾಗಿದೆ.
  • ವೆಚ್ಚದ ಪ್ರಯೋಜನ: ಬ್ರಹ್ಮೋಸ್, ಪಿನಾಕ, ಮತ್ತು ಆಕಾಶ್ ನಂತಹ ಭಾರತೀಯ ವೇದಿಕೆಗಳು ಪಾಶ್ಚಿಮಾತ್ಯ ವ್ಯವಸ್ಥೆಗಳಿಗಿಂತ ಗಣನೀಯವಾಗಿ ಕಡಿಮೆ ವೆಚ್ಚದಲ್ಲಿ ಯುದ್ಧ-ಪರೀಕ್ಷಿತ ತಂತ್ರಜ್ಞಾನವನ್ನು ಸಂಯೋಜಿಸುತ್ತವೆ.
  • ಡಿಪಿಎಸ್‌ಯು ಕಾರ್ಪೊರೇಟೀಕರಣ ( DPSU Corporatisation ) : ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ ಅನ್ನು ( OFB ) ಏಳು ವಾಣಿಜ್ಯ ಘಟಕಗಳಾಗಿ ಪರಿವರ್ತಿಸಿರುವುದು ಸ್ಪಷ್ಟ ರಫ್ತು ಗುರಿಗಳನ್ನು ನಿಗದಿಪಡಿಸುತ್ತದೆ, ಇದು ಸಾರ್ವಜನಿಕ ವಲಯದ ರಕ್ಷಣಾ ಉದ್ಯಮಗಳನ್ನು ಸ್ಪರ್ಧಾತ್ಮಕ ರಫ್ತುದಾರರನ್ನಾಗಿ ಪರಿವರ್ತಿಸುತ್ತಿದೆ.

ಸರ್ಕಾರದ ಉಪಕ್ರಮಗಳು ಮತ್ತು ನೀತಿಗಳು

  • ಮುಕ್ತ ಸಾಮಾನ್ಯ ರಫ್ತು ಪರವಾನಗಿ ( OGEL ) : ಇದು ಸ್ನೇಹಪರ ರಾಷ್ಟ್ರಗಳಿಗೆ ನಿರ್ದಿಷ್ಟ ರಕ್ಷಣಾ ವಸ್ತುಗಳ ಪೂರ್ವ-ಅನುಮೋದಿತ ರಫ್ತಿಗೆ ವೈಯಕ್ತಿಕ ವಹಿವಾಟು ಅನುಮೋದನೆಗಳಿಲ್ಲದೆ ಅನುಮತಿಸುತ್ತದೆ.
  • ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳು ( DICs ) : ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿರುವ ಈ ಕಾರಿಡಾರ್‌ಗಳು ಸಿದ್ಧ ಮೂಲಸೌಕರ್ಯದೊಂದಿಗೆ ಸಮಗ್ರ ಉತ್ಪಾದನಾ ಸಮೂಹಗಳನ್ನು ಒದಗಿಸುತ್ತವೆ, ಇದು ಹೂಡಿಕೆಗಳನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸುತ್ತವೆ.
  • ಜಾಗತಿಕ ಬಂಡವಾಳವನ್ನು ಆಕರ್ಷಿಸಲು ಉದಾರೀಕೃತ ಮಾನದಂಡಗಳು, ಸ್ವಯಂಚಾಲಿತ ಮಾರ್ಗದ ಮೂಲಕ 74% ರಷ್ಟು ನೇರ ವಿದೇಶಿ ಹೂಡಿಕೆಗೆ ( FDI ) ಮತ್ತು ಸರ್ಕಾರದ ಅನುಮೋದನೆ ಮಾರ್ಗದ ಮೂಲಕ 100% ರಷ್ಟು ಹೂಡಿಕೆಗೆ ಅವಕಾಶ ನೀಡುತ್ತವೆ.
  • ರಕ್ಷಣಾ ಶ್ರೇಷ್ಠತೆಗಾಗಿ ನಾವೀನ್ಯತೆಗಳು ( iDEX ) : ರಫ್ತಿಗೆ ಸಿದ್ಧವಿರುವ ರಕ್ಷಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಅನುದಾನ ಮತ್ತು ಕಾವು ನೀಡುವಿಕೆಯೊಂದಿಗೆ ( incubation ) ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನು ( MSMEs ) ಇದು ಬೆಂಬಲಿಸುತ್ತದೆ.