03 ಡಿಸೆಂಬರ್‌ 2025

03 ಡಿಸೆಂಬರ್‌ 2025

1. ಡಿಜಿಟಲ್ ಅರೆಸ್ಟ್ ಹಗರಣಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನಿರ್ದೇಶನಗಳ ಬಗ್ಗೆ ಪರಿಗಣಿಸಿ:
1. ಸಿಬಿಐಗೆ ತನಿಖೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ.
2. RBI ಯನ್ನು ಪ್ರಕರಣದಿಂದ ಹೊರಗಿಟ್ಟಿದೆ.
3. ರಾಜ್ಯಗಳು ಸೆಕ್ಷನ್ 6 ಅಡಿಯಲ್ಲಿ ಸಿಬಿಐಗೆ ಒಪ್ಪಿಗೆ ನೀಡಬೇಕಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1 ಮಾತ್ರ ಮಾತ್ರ

 

2. ಡಿಜಿಟಲ್ ಅರೆಸ್ಟ್ ಹಗರಣದ ಲಕ್ಷಣಗಳ ಕುರಿತು ಪರಿಗಣಿಸಿ:
1. ವಂಚಕರು ಅಧಿಕಾರಿಗಳಂತೆ ನಟಿಸುತ್ತಾರೆ.
2. ವಿಡಿಯೋ ಕರೆಗಳನ್ನು ಬಳಸುವುದಿಲ್ಲ.
3. ಸಂತ್ರಸ್ತರಿಂದ ಹಣ ಸುಲಿಗೆ ಮಾಡಲಾಗುತ್ತದೆ.
4. ಇದು ಆನ್‌ಲೈನ್ ಆಧಾರಿತ ವಂಚನೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A) 1, 2 ಮತ್ತು 3 ಮಾತ್ರ
B) 1, 3 ಮತ್ತು 4 ಮಾತ್ರ
C) 2 ಮತ್ತು 4 ಮಾತ್ರ
D) 1 ಮತ್ತು 4 ಮಾತ್ರ ಮಾತ್ರ

 

3. NSFI 2025–30 ಕುರಿತು ಪರಿಗಣಿಸಿ:
1. NSFI 2025–30 ಅನ್ನು ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ ಅನುಮೋದಿಸಿದೆ.
2. ಪಂಚ-ಜ್ಯೋತಿ ಗುರಿಗಳು ನಾಲ್ಕು ಮಾತ್ರ.
3. NSFI ಯಲ್ಲಿ 47 ಕ್ರಿಯಾ ಅಂಶಗಳನ್ನು ಒಳಗೊಂಡಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3

 

4. ಭಾರತದ ಆರ್ಥಿಕ ಸೇರ್ಪಡೆ ಉಪಕ್ರಮಗಳ ಬಗ್ಗೆ ಪರಿಗಣಿಸಿ:
1. RBI ಯ FI-Index 2025 ರಲ್ಲಿ 67 ಕ್ಕೆ ತಲುಪಿದೆ.
2. PMJDY ಯೋಜನೆಯಡಿ 50 ಕೋಟಿಗಿಂತ ಹೆಚ್ಚು ಬ್ಯಾಂಕ್ ಖಾತೆಗಳು ತೆರೆಯಲಾಗಿದೆ.
3. JAM ಟ್ರಿನಿಟಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಒದಗಿಸುತ್ತದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3

 

5. GLP-1 ಔಷಧಗಳ ಕುರಿತು ಪರಿಗಣಿಸಿ:
1. GLP-1 ಅಗೊನಿಸ್ಟ್‌ಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ.
2. WHO ಶಿಫಾರಸು ಮಾಡಿದ ಔಷಧಗಳಲ್ಲಿ ಸೆಮಾಗ್ಲುಟೈಡ್ ಸೇರಿಲ್ಲ.
3. GLP-1 ಔಷಧಗಳು ಹಸಿವು ಮತ್ತು ಆಹಾರಾಸಕ್ತಿಯನ್ನು ಕಡಿಮೆ ಮಾಡುತ್ತವೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3

 

6. ಬೊಜ್ಜು ಮತ್ತು ಅದರ ಸ್ಥಿತಿಗತಿಯ ಬಗ್ಗೆ ಪರಿಗಣಿಸಿ:
1. BMI ≥ 30 ಇದ್ದರೆ ಬೊಜ್ಜು ಎಂದು ವರ್ಗೀಕರಿಸಲಾಗುತ್ತದೆ.
2. ಬೊಜ್ಜು ಜಾಗತಿಕವಾಗಿ ಒಂದು ಬಿಲಿಯನ್‌ಗಿಂತ ಹೆಚ್ಚು ಜನರನ್ನು ಪ್ರಭಾವಿಸಿದೆ.
3. NFHS-5 ಪ್ರಕಾರ ಭಾರತದಲ್ಲಿ ಪುರುಷರ ಬೊಜ್ಜಿನ ಪ್ರಮಾಣ ಮಹಿಳೆಯರಿಗಿಂತ ಹೆಚ್ಚು.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3

 

7. ಸಂಸತ್ತಿನ ಪ್ರಸ್ತುತ ಕಾರ್ಯನಿರ್ವಹಣೆಯ ಬಗ್ಗೆ ಪರಿಗಣಿಸಿ:
1. 2025 ರ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಲೋಕಸಭೆಯಲ್ಲಿ 23% ಕ್ಕೆ ಇಳಿದಿದೆ.
2. ಮಸೂದೆಗಳನ್ನು ಸಮಿತಿಗಳಿಗೆ ಉಲ್ಲೇಖಿಸುವ ಪ್ರಮಾಣ ಇತಿಹಾಸದಲ್ಲಿ ಅತ್ಯಧಿಕ ಮಟ್ಟದಲ್ಲಿ 60% ಇದೆ.
3. 16 ಮತ್ತು 17ನೇ ಲೋಕಸಭೆಯಲ್ಲಿ ಕೇವಲ 20% ಮಸೂದೆಗಳನ್ನು ಮಾತ್ರ ಸಮಿತಿಗಳಿಗೆ ಕಳುಹಿಸಲಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3

 

8. ಸಂಸತ್ತಿನ ಪ್ರಸ್ತುತ ಕಾರ್ಯನಿರ್ವಹಣೆಯ ಬಗ್ಗೆ ಪರಿಗಣಿಸಿ:
1. 2025 ರ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಲೋಕಸಭೆಯಲ್ಲಿ 23% ಕ್ಕೆ ಇಳಿದಿದೆ.
2. ಮಸೂದೆಗಳನ್ನು ಸಮಿತಿಗಳಿಗೆ ಉಲ್ಲೇಖಿಸುವ ಪ್ರಮಾಣ ಇತಿಹಾಸದಲ್ಲಿ ಅತ್ಯಧಿಕ ಮಟ್ಟದಲ್ಲಿ 60% ಇದೆ.
3. 16 ಮತ್ತು 17ನೇ ಲೋಕಸಭೆಯಲ್ಲಿ ಕೇವಲ 20% ಮಸೂದೆಗಳನ್ನು ಮಾತ್ರ ಸಮಿತಿಗಳಿಗೆ ಕಳುಹಿಸಲಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3

 

9. ಸಂಸತ್ತಿನ ಅಧಿವೇಶನಗಳನ್ನು ಕರೆಯುವ ವಿಧಾನ ಕುರಿತು ಪರಿಗಣಿಸಿ:
1. ಸಂವಿಧಾನದ ವಿಧಿ 85 ಪ್ರಕಾರ ರಾಷ್ಟ್ರಪತಿಗೆ ಅಧಿವೇಶನ ಕರೆಯುವ ಅಧಿಕಾರವಿದೆ.
2. ಎರಡು ಅಧಿವೇಶನಗಳ ನಡುವೆ ಗರಿಷ್ಠ ಅಂತರ 6 ತಿಂಗಳಿಗಿಂತ ಕಡಿಮೆ ಇರಬೇಕು.
3. ಸಂಸತ್ತಿಗೆ ನಿಗದಿತ ವಾರ್ಷಿಕ ಕಲಾಪ ಕ್ಯಾಲೆಂಡರ್ ಸಂವಿಧಾನದಲ್ಲೇ ನಿಶ್ಚಿತವಾಗಿದೆ.
4. ಲೋಕಸಭೆ ಮತ್ತು ರಾಜ್ಯಸಭೆಯನ್ನು ಏಕಕಾಲದಲ್ಲಿ ಕರೆಯುವ ಅಗತ್ಯವಿಲ್ಲ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 4 ಮಾತ್ರ
D. 1, 2 ಮತ್ತು 4

 

10. APY ಯ ವೈಶಿಷ್ಟ್ಯಗಳ ಬಗ್ಗೆ ಪರಿಗಣಿಸಿ:
1. APY ಯನ್ನು PFRDA ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ನಿರ್ವಹಿಸುತ್ತದೆ.
2. ಯೋಜನೆ 18–50 ವರ್ಷದ ಎಲ್ಲ ನಾಗರಿಕರಿಗೆ ಲಭ್ಯ.
3. APY ಚಂದಾದಾರರು 60 ವರ್ಷ ವಯಸ್ಸಿನ ನಂತರ ನಿಗದಿತ ಪಿಂಚಣಿಯನ್ನು ಪಡೆಯುತ್ತಾರೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3

 

11. APY ಯ ಗುರಿಗಳು ಮತ್ತು ಸಾಧನೆಗಳ ಬಗ್ಗೆ ಪರಿಗಣಿಸಿ:
1. ಅಸಂಘಟಿತ ವಲಯಕ್ಕೆ ಸಾರ್ವತ್ರಿಕ ಸಾಮಾಜಿಕ ಭದ್ರತೆಯನ್ನು ಒದಗಿಸುವುದು APY ಯ ಪ್ರಾಥಮಿಕ ಗುರಿ.
2. 2025ರ ವೇಳೆಗೆ APY ಯಲ್ಲಿ 8 ಕೋಟಿ ಗಿಂತ ಹೆಚ್ಚು ನೋಂದಾವಣೆಗಳಿವೆ.
3. ಮಹಿಳೆಯರ ಪಾಲು ಯೊಜನೆಗೆ 30% ಕ್ಕಿಂತ ಕಡಿಮೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3

 

12. ಹಾರ್ನ್‌ಬಿಲ್ ಉತ್ಸವದ ಬಗ್ಗೆ ಪರಿಗಣಿಸಿ:
1. ಹಾರ್ನ್‌ಬಿಲ್ ಉತ್ಸವವನ್ನು ಮೊದಲ ಬಾರಿಗೆ 2000 ರಲ್ಲಿ ಪ್ರಾರಂಭಿಸಲಾಯಿತು.
2. ಇದನ್ನು ನಾಗಾಲ್ಯಾಂಡ್ ಸರ್ಕಾರವು ಕಿಸಾಮಾದ ನಾಗಾ ಹೆರಿಟೇಜ್ ವಿಲೇಜ್‌ನಲ್ಲಿ ಆಯೋಜಿಸುತ್ತದೆ.
3. ಹಾರ್ನ್‌ಬಿಲ್ ಪಕ್ಷಿ ನಾಗಾ ಸಂಸ್ಕೃತಿಯಲ್ಲಿ ಅಸ್ಮಿತೆಯ ಸಂಕೇತವಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3

 

13. ರಕ್ಷಿತ ಪ್ರದೇಶ ಪರವಾನಗಿ (PAP) ಮತ್ತು ನಾಗಾಲ್ಯಾಂಡ್ ವಿವಾದದ ಬಗ್ಗೆ ಪರಿಗಣಿಸಿ:
1. PAP ಮರು-ಜಾರಿಗೊಳಿಸುವಿಕೆ ಡಿಸೆಂಬರ್‌ನ ಹಾರ್ನ್‌ಬಿಲ್ ಉತ್ಸವದ ಸಮಯದಲ್ಲಿ ವಿದೇಶಿ ಪ್ರವಾಸೋದ್ಯಮವನ್ನು ಪರಿಣಾಮಗೊಳಿಸುತ್ತಿದೆ.
2. ಕೇಂದ್ರ ಸರ್ಕಾರವು PAP ನಿಯಮಗಳಲ್ಲಿ ಯಾವುದೇ ಸಡಿಲಿಕೆ ನೀಡಿಲ್ಲ.
3. PAP ನಿಯಮಗಳು ಮುಖ್ಯವಾಗಿ ವಿದೇಶಿಗರ ರಾಜ್ಯ ಪ್ರವೇಶಕ್ಕೆ ಅನ್ವಯವಾಗುವ ಭದ್ರತಾ ನಿಯಮಾವಳಿಗಳಾಗಿವೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3

 

14. ಜೈವಿಕ ಅಸ್ತ್ರಗಳ ಸಮಾವೇಶ (BWC) ಕುರಿತು ಪರಿಗಣಿಸಿ:
1. BWC 1975 ರಲ್ಲಿ ಜಾರಿಗೆ ಬಂತು.
2. BWC ಜಿನೀವಾ ಪ್ರೋಟೋಕಾಲ್ ಅನ್ನು ಸಂಪೂರ್ಣವಾಗಿ ಬದಲಿಸಿದೆ.
3. BWC ನಲ್ಲಿ 188 ಸದಸ್ಯ ರಾಷ್ಟ್ರಗಳಿವೆ.
4. BWC ಒಂದು ಸ್ವತಂತ್ರ ಪರಿಶೀಲನಾ ವ್ಯವಸ್ಥೆಯನ್ನು ಹೊಂದಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3

 

15. ಜೈವಿಕ ಭಯೋತ್ಪಾದನೆ ಹೆಚ್ಚುತ್ತಿರುವ ಕಾರಣಗಳ ಬಗ್ಗೆ ಪರಿಗಣಿಸಿ:
1. CRISPR ಕಿಟ್‌ಗಳು ಸುಲಭವಾಗಿ ಲಭ್ಯವಾಗುತ್ತಿರುವುದು ಅಪಾಯ ಹೆಚ್ಚಿಸುತ್ತದೆ.
2. ಬಹಳಷ್ಟು ಭಯೋತ್ಪಾದಕ ಸಂಘಟನೆಗಳು ಜೈವಿಕ ಏಜೆಂಟ್ ಪಡೆಯಲು ಪ್ರಯತ್ನಿಸುತ್ತಿವೆ.
3. ಜಾಗತಿಕ ಪ್ರಯೋಗಾಲಯಗಳ ಮೇಲ್ವಿಚಾರಣಾ ವ್ಯವಸ್ಥೆ ಶಕ್ತವಾಗಿದೆ.
4. ಸಂಶ್ಲೇಷಿತ ಜೀವಶಾಸ್ತ್ರದ ಮಾರುಕಟ್ಟೆ ವೇಗವಾಗಿ ವಿಸ್ತರಿಸುತ್ತಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 1, 2 ಮತ್ತು 4
C. 2 ಮತ್ತು 3 ಮಾತ್ರ
D. 1, 2 ಮತ್ತು 3