11 ಸೆಪ್ಟೆಂಬರ್‌ 2025

11 ಸೆಪ್ಟೆಂಬರ್‌ 2025

1. ‘ಮರುಸಿಂಚನ ಯೋಜನೆ’ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಈ ಯೋಜನೆಯು ರಾಜ್ಯದ ಎಲ್ಲಾ 35 ಶೈಕ್ಷಣಿಕ ಜಿಲ್ಲೆಗಳಿಗೆ ಏಕಕಾಲದಲ್ಲಿ ವಿಸ್ತರಿಸಲ್ಪಟ್ಟಿದೆ.
2. ಯೋಜನೆಯಡಿ ಕಲಿಕೆಯಲ್ಲಿ ಹಿಂದುಳಿದ 6ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಅವಧಿಯಲ್ಲೇ ಪರಿಹಾರ ಬೋಧನೆ ನೀಡಲಾಗುತ್ತದೆ.
3. ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ (DSERT) ಈ ಯೋಜನೆಯ ಅಭ್ಯಾಸ ಪುಸ್ತಕಗಳನ್ನು ಸಿದ್ಧಪಡಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
ಎ) 1 ಮತ್ತು 2 ಮಾತ್ರ
ಬಿ) 2 ಮತ್ತು 3 ಮಾತ್ರ
ಸಿ) 1 ಮತ್ತು 3 ಮಾತ್ರ
ಡಿ) 1, 2 ಮತ್ತು 3
2. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಭಾರತದಲ್ಲಿ ಕೊನೆಯದಾಗಿ SIR ಅನ್ನು 2011ರಲ್ಲಿ ನಡೆಸಲಾಗಿತ್ತು.
2. ಆಧಾರ್ ಕಾರ್ಡ್ ಅನ್ನು ಮತದಾರರ ಗುರುತಿಗೆ ಗೊತ್ತುಪಡಿಸಿದ 12ನೇ ದಾಖಲೆಯಾಗಿ ಪರಿಗಣಿಸಲು ಚುನಾವಣಾ ಆಯೋಗವು ಸೂಚಿಸಿದೆ.
3. ಹೊರರಾಜ್ಯಗಳಲ್ಲಿ ನೆಲೆಸಿರುವವರಿಗಾಗಿ ಪರಿಚಯಿಸಲಾಗುವ ‘ಘೋಷಣಾ ಅರ್ಜಿ’ಯು ಭಾರತದಲ್ಲಿ 1987ರ ಜುಲೈ 1 ಮತ್ತು 2004ರ ಡಿಸೆಂಬರ್ 2ರ ಮಧ್ಯೆ ಜನಿಸಿದವರಿಗೆ ಮಾತ್ರ ಅನ್ವಯಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
ಎ) 1 ಮತ್ತು 2 ಮಾತ್ರ
ಬಿ) 2 ಮತ್ತು 3 ಮಾತ್ರ
ಸಿ) 1 ಮತ್ತು 3 ಮಾತ್ರ
ಡಿ) 1, 2 ಮತ್ತು 3
3. ಜಿಎಸ್‌ಟಿ ದರ ಕಡಿತ ಮತ್ತು ಆರ್ಥಿಕ ಉತ್ತೇಜನ ಕ್ರಮಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಿಸಿ:
1. 2025ರ ಬಜೆಟ್‌ನಲ್ಲಿ ₹12.75 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಇದು ವೇತನದಾರರಿಗೆ ಮಾತ್ರ ಅನ್ವಯಿಸುತ್ತದೆ.
2. ಆರ್‌ಬಿಐನ ಹಣಕಾಸು ನೀತಿ ಸಮಿತಿಯು (MPC) ರೆಪೊ ದರವನ್ನು ಒಟ್ಟು ಶೇ 1ರಷ್ಟು ತಗ್ಗಿಸಿದೆ.
3. ಜಿಎಸ್‌ಟಿ ದರ ಕಡಿತದಿಂದ ಆಟೊಮೊಬೈಲ್, ಎಫ್‌ಎಂಸಿಜಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ವಲಯಗಳು ಪ್ರಮುಖವಾಗಿ ಲಾಭ ಪಡೆಯುವ ನಿರೀಕ್ಷೆಯಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
ಎ) 1 ಮತ್ತು 2 ಮಾತ್ರ
ಬಿ) 1 ಮತ್ತು 3 ಮಾತ್ರ
ಸಿ) 2 ಮತ್ತು 3 ಮಾತ್ರ
ಡಿ) 1, 2 ಮತ್ತು 3
4. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಈ ಯೋಜನೆಯನ್ನು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ, ಮೀನುಗಾರಿಕೆ ಇಲಾಖೆಯು 2020-21 ರಿಂದ 2024-25ರ ಅವಧಿಗೆ ಪ್ರಾರಂಭಿಸಿದೆ.
2. ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ (NFDB) ಯು PMMSY ಅಡಿಯಲ್ಲಿ ತರಬೇತಿ ಮತ್ತು ಸಾಮರ್ಥ್ಯ-ನಿರ್ಮಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನೋಡಲ್ ಸಂಸ್ಥೆಯಾಗಿದೆ.
3. ಈ ಯೋಜನೆಯು ಭಾರತವನ್ನು ವಿಶ್ವದ ಮೊದಲ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವನ್ನಾಗಿ ಮಾಡಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
ಎ) 1 ಮತ್ತು 2 ಮಾತ್ರ
ಬಿ) 2 ಮತ್ತು 3 ಮಾತ್ರ
ಸಿ) 1 ಮತ್ತು 3 ಮಾತ್ರ
ಡಿ) 1, 2 ಮತ್ತು 3
5. ಪ್ರಶ್ನೆ: ಅಟ್ಲಾಂಟಿಕ್ ಸಾಗರದ ಅಡಿಯಲ್ಲಿ ಪತ್ತೆಯಾಗಿರುವ ಕಡಲಾಚೆಯ ಸಿಹಿನೀರಿನ ಜಲಾನಯನ ಪ್ರದೇಶಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಈ ಜಲಾನಯನ ಪ್ರದೇಶಗಳು ಭೂಮಿಯ ಮೇಲಿನ ಒಟ್ಟು ಸಿಹಿನೀರಿನ ಅಂತರ್ಜಲದ ಸುಮಾರು 5% ರಷ್ಟನ್ನು ಹೊಂದಿವೆ.
2. ಹಿಮಯುಗದ ಕಲ್ಪನೆಯು (Ice Age Hypothesis) ಇವುಗಳ ರಚನೆಗೆ ಒಂದು ಪ್ರಮುಖ ಸಿದ್ಧಾಂತವಾಗಿದೆ.
3. ವಿಶ್ವಸಂಸ್ಥೆಯ 2023ರ ವರದಿಯ ಪ್ರಕಾರ, ಜಾಗತಿಕ ಸಿಹಿನೀರಿನ ಬೇಡಿಕೆಯು 2030ರ ವೇಳೆಗೆ ಪೂರೈಕೆಯನ್ನು 40% ರಷ್ಟು ಮೀರಿಸುವ ನಿರೀಕ್ಷೆಯಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
ಎ) 1 ಮತ್ತು 2 ಮಾತ್ರ
ಬಿ) 2 ಮತ್ತು 3 ಮಾತ್ರ
ಸಿ) 1 ಮತ್ತು 3 ಮಾತ್ರ
ಡಿ) 1, 2 ಮತ್ತು 3
6. ಭಾರತ-ಮಾರಿಷಸ್ ಪಾಲುದಾರಿಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. 2000ನೇ ಇಸವಿಯಿಂದ ಭಾರತದ ಒಟ್ಟು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಯ ಸುಮಾರು 25% ನಷ್ಟು ಮಾರಿಷಸ್‌ನಿಂದ ಬಂದಿದೆ.
2. ಮಾರಿಷಸ್‌ನ ಜನಸಂಖ್ಯೆಯ ಸುಮಾರು 70% ಭಾರತೀಯ ಮೂಲದವರಾಗಿದ್ದು, ಗಿರ್ಮಿಟಿಯಾಗಳು 1729ರಲ್ಲಿ ಬ್ರಿಟನ್‌ನಿಂದ ಮಾರಿಷಸ್‌ಗೆ ಕರೆತರಲ್ಪಟ್ಟರು.
3. ಮಾರಿಷಸ್‌ನ ಪಶ್ಚಿಮ ಹಿಂದೂ ಮಹಾಸಾಗರದಲ್ಲಿನ ಸ್ಥಳವು ಭಾರತದ ಕಡಲ ಭದ್ರತೆಗೆ ಕಾರ್ಯತಂತ್ರವಾಗಿ ನಿರ್ಣಾಯಕವಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
ಎ) 1 ಮತ್ತು 2 ಮಾತ್ರ
ಬಿ) 2 ಮತ್ತು 3 ಮಾತ್ರ
ಸಿ) 1 ಮತ್ತು 3 ಮಾತ್ರ
ಡಿ) 1, 2 ಮತ್ತು 3
7. ಭಾರತದಲ್ಲಿನ ಸಾಕ್ಷರತಾ ಸಾಧನೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಶೇ 99.3 ಸಾಕ್ಷರತೆ ಸಾಧಿಸಿರುವ ಹಿಮಾಚಲ ಪ್ರದೇಶವು ಭಾರತದಲ್ಲಿ ಮೂರನೇ ಸಂಪೂರ್ಣ ಸಾಕ್ಷರ ರಾಜ್ಯವಾಗಿದೆ.
2. ಮಿಜೋರಾಂ ದೇಶದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯ ಎಂದು ಘೋಷಿಸಿಕೊಂಡಿದೆ, ನಂತರ ಗೋವಾ ಮತ್ತು ತ್ರಿಪುರ.
3. ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಡಾಖ್ (97% ಸಾಕ್ಷರತೆ) ಮೊದಲ ಸಂಪೂರ್ಣ ಸಾಕ್ಷರ ಪ್ರದೇಶವಾಗಿ ಹೊರಹೊಮ್ಮಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
ಎ) 1 ಮತ್ತು 2 ಮಾತ್ರ
ಬಿ) 2 ಮತ್ತು 3 ಮಾತ್ರ
ಸಿ) 1 ಮತ್ತು 3 ಮಾತ್ರ
ಡಿ) 1, 2 ಮತ್ತು 3
8. ಭಾರತದ ಮೊದಲ ಬಂದರು-ಆಧಾರಿತ ಹಸಿರು ಹೈಡ್ರೋಜನ್ ಪೈಲಟ್ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಈ ಯೋಜನೆಗೆ ಕೇಂದ್ರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರು ಮುಂಬೈನ ಜವಾಹರಲಾಲ್ ನೆಹರು ಬಂದರಿನಲ್ಲಿ ಚಾಲನೆ ನೀಡಿದರು.
2. ವಿ.ಒ. ಚಿದಂಬರನಾರ್ ಬಂದರು ಹಸಿರು ಹೈಡ್ರೋಜನ್ ಉತ್ಪಾದಿಸುವ ಭಾರತದ ಮೊದಲ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
3. ಈ ಬಂದರಿನಲ್ಲಿ 400 kW ರೂಫ್‌ಟಾಪ್ ಸೌರ ವಿದ್ಯುತ್ ಸ್ಥಾವರವನ್ನು ಪ್ರಾರಂಭಿಸಲಾಗಿದ್ದು, ಇದು ಭಾರತೀಯ ಬಂದರುಗಳಲ್ಲಿ ಅತಿ ಹೆಚ್ಚು ಸೌರಶಕ್ತಿ ಸಾಮರ್ಥ್ಯವನ್ನು ಹೊಂದಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
ಎ) 1 ಮತ್ತು 2 ಮಾತ್ರ
ಬಿ) 2 ಮತ್ತು 3 ಮಾತ್ರ
ಸಿ) 1 ಮತ್ತು 3 ಮಾತ್ರ
ಡಿ) 1, 2 ಮತ್ತು 3
9. SSLV ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಸಣ್ಣ ಉಪಗ್ರಹಗಳ ಉಡಾವಣೆಗೆ ಅಗತ್ಯವಿರುವ SSLV ತಂತ್ರಜ್ಞಾನವನ್ನು ಖಾಸಗಿ ವಲಯಕ್ಕೆ ವರ್ಗಾಯಿಸುವ ಒಪ್ಪಂದಕ್ಕೆ ISRO ಮತ್ತು HAL ಸಹಿ ಹಾಕಿವೆ.
2. ಈ ತಂತ್ರಜ್ಞಾನ ವರ್ಗಾವಣೆ ಪ್ರಕ್ರಿಯೆಯನ್ನು ಒಪ್ಪಂದಕ್ಕೆ ಸಹಿ ಮಾಡಿದ ದಿನದಿಂದ 12 ತಿಂಗಳುಗಳ ಒಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
3. ಈ ಸಹಯೋಗವು ಭಾರತದ ಬಾಹ್ಯಾಕಾಶ ವಲಯವನ್ನು ಉದಾರೀಕರಣಗೊಳಿಸುವ ಮತ್ತು ಖಾಸಗಿ ಉದ್ಯಮಗಳನ್ನು ಉತ್ತೇಜಿಸುವ ಸರ್ಕಾರದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
ಎ) 1 ಮತ್ತು 2 ಮಾತ್ರ
ಬಿ) 2 ಮತ್ತು 3 ಮಾತ್ರ
ಸಿ) 1 ಮತ್ತು 3 ಮಾತ್ರ
ಡಿ) 1, 2 ಮತ್ತು 3